Asianet Suvarna News Asianet Suvarna News

Migraine Problem: ನಿಮಗೆ ಮೈಗ್ರೇನ್ ಯಾವಾಗ ಬರುತ್ತೆ?

ಮೈಗ್ರೇನ್ ಹೆಸರು ಕೇಳಿದರೇ ಹಲವರಿಗೆ ಬೇಸರವಾಗಬಹುದು. ಅಷ್ಟೊಂದು ಕಾಡಿಸುವ ತಲೆನೋವು ಅದು. ಆದರೆ, ಮೈಗ್ರೇನ್ ಹೇಗೋ ಬರುತ್ತದೆ, ಹಾಗೆಯೇ ಹೋಗುತ್ತದೆ ಎಂದು ಬಿಟ್ಟುಬಿಡುವಂತಿಲ್ಲ. ಯಾವ ಸನ್ನಿವೇಶದಲ್ಲಿ ನಿಮಗೆ ಮೈಗ್ರೇನ್ ಬರುತ್ತದೆ ಎನ್ನುವುದನ್ನು ಗಮನಿಸಿ. ಕಾರಣಗಳನ್ನು ಗುರುತಿಸಿಕೊಂಡರೆ ಮೈಗ್ರೇನ್ ಅನ್ನು ಅಲ್ಪಮಟ್ಟಿಗೆ ದೂರವಿಡಲು ಸಾಧ್ಯ.

Know the reasons for migraine
Author
Bangalore, First Published May 11, 2022, 5:52 PM IST

ಮೈಗ್ರೇನ್ (Migraine) ಅನುಭವಿಸುವವರನ್ನು ಕೇಳಿ, “ಬೇರೆ ಯಾವುದೇ ತೊಂದರೆಯಾದರೂ ಸರಿ, ಇದೊಂದು ಬೇಡ’ ಎಂದು ಬೇಸರಿಸಿಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಕಿರಿಕಿರಿ, ನೋವು ನೀಡುವ ಸಮಸ್ಯೆ ಮೈಗ್ರೇನ್. ಮೈಗ್ರೇನ್ ಬಂದಾಗ ಅನೇಕರು ಅದೊಂದು ಸಹಜವೆಂಬಂತೆ ಸ್ವೀಕರಿಸಿ, ನಿಭಾಯಿಸಲು ಯತ್ನಿಸುತ್ತಾರೆ. ಆದರೆ, ಮೈಗ್ರೇನ್ ಗೆ ಕಾರಣಗಳು (Reasons) ಹಲವಾರು. ಕಾರಣ ಗುರುತಿಸಿಕೊಂಡರೆ ಮೈಗ್ರೇನ್ ಬಾರದಂತೆಯೂ ಎಚ್ಚರಿಕೆ ವಹಿಸಬಹುದು. 

•    ನೀವೇನು ತಿನ್ನುತ್ತೀರಿ? (Eating Habit)
ಮೈಗ್ರೇನ್ ಗೆ ಕಾರಣವಾಗುವ ಬಹುಮುಖ್ಯ ಅಂಶಗಳಲ್ಲಿ ಆಹಾರ ಪ್ರಮುಖ. ಮನೆಯಲ್ಲಿ ಮಾಡಿದ ಆಹಾರವನ್ನು ಖುಷಿಯಾಗಿ ತಿನ್ನಿ. ಜಂಕ್ ಫುಡ್ (Junk Food)ನಿಂದ, ಸಂಸ್ಕರಿತ ಆಹಾರದಿಂದ (Processed Food) ದೂರವಿರಿ. ಆಹಾರ ಹಿತಮಿತವಾಗಿರಲಿ. ಪೌಷ್ಟಿಕ ಆಹಾರ ಸೇವಿಸಿ. ಕೆಫೀನ್, ಬ್ರೆಡ್, ಬನ್, ಸೋಯಾ, ಆಲೂ ಚಿಪ್ಸ್ ಮುಂತಾದವುಗಳಿಂದ ದೂರವಿರಿ.

•    ಸಾಕಷ್ಟು ನೀರು (Water) ಕುಡಿಯಿರಿ
ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯದಿರುವುದು ಸಹ ಮೈಗ್ರೇನ್ ಗೆ ಕಾರಣವಾಗಬಹುದು. ದೇಹ ಡಿಹೈಡ್ರೇಷನ್ ಆಗಿದ್ದಾಗ ಸಾಮಾನ್ಯವಾಗಿ ತಲೆನೋವು ಬರುತ್ತದೆ. ಮೈಗ್ರೇನ್ ಸಮಸ್ಯೆ ಉಳ್ಳವರು ದಿನಕ್ಕೆ 2.7ರಿಂದ 3.7 ಲೀಟರ್ ನೀರನ್ನು ಕುಡಿಯಲೇಬೇಕು.

•    ಒತ್ತಡದ (Stress) ಬಗ್ಗೆ ಗಮನವಿರಲಿ
ಮೈಗ್ರೇನ್ ಬರಲು ಇನ್ನೊಂದು ಅತಿ ಸಾಮಾನ್ಯ ಕಾರಣ ಒತ್ತಡ. ನಿರಂತರವಾಗಿ ಒತ್ತಡ  ಹಾಗೂ ಆತಂಕದಿಂದ ಮೈಗ್ರೇನ್ ಉಂಟಾಗುತ್ತದೆ. ಔಷಧದಿಂದ ಆ ಕ್ಷಣಕ್ಕೆ ವಾಸಿಯಾಗಬಹುದಾದರೂ ನಿಮ್ಮ ಮಾನಸಿಕ ಆರೋಗ್ಯವನ್ನೂ ಕಾಪಾಡಿಕೊಳ್ಳುವುದು ಅಗತ್ಯ.

•    ಅಗತ್ಯ ಪೂರಕ ಆಹಾರ (Supplement) ಸೇವಿಸಿ
ಮೇಲೆ ಹೇಳಿದಂತೆ ಆಹಾರಕ್ಕೂ ಮೈಗ್ರೇನ್ ಗೂ ಅತಿ ಹತ್ತಿರದ ನಂಟು. ಮೈಗ್ರೇನ್ ಕಡಿಮೆ ಮಾಡಿಕೊಳ್ಳಲು ಡಯೆಟ್ ಅನುಸರಿಸುವುದು ಅಗತ್ಯ. ವಿಟಮಿನ್ ಬಿ2, ಮ್ಯಾಗ್ನೀಸಿಯಂ, ಮೆಲಟೋನಿನ್ ಇತ್ಯಾದಿ ಅಂಶಗಳಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಇವುಗಳಿಂದ ಮೈಗ್ರೇನ್ ಕಡಿಮೆಯಾಗುತ್ತವೆ.

•    ನಿದ್ರೆಗೆ ಸಮಯ (Sleep Time) ನಿಗದಿ ಮಾಡಿಕೊಳ್ಳಿ
ನಿದ್ರಾಹೀನತೆ ಮೈಗ್ರೇನ್ ಗೆ ಕಾರಣಗಳಲ್ಲೊಂದು. ಹೀಗಾಗಿ, ದಿನವೂ ನಿದ್ರಿಸುವ ಸಮಯದ ಕ್ಯಾಲೆಂಡರ್ ಇರಲಿ. ಎಲ್ಲೋ ಒಮ್ಮೊಮ್ಮೆ ಇದರಲ್ಲಿ ವ್ಯತ್ಯಾಸವಾದರೆ ಪರವಾಗಿಲ್ಲ. ಆದರೆ, ನಿಗದಿತ ನಿದ್ರಾ ವೇಳಾಪಟ್ಟಿ ರೂಢಿಸಿಕೊಂಡರೆ ಮೈಗ್ರೇನ್ ಕಡಿಮೆ ಮಾಡಿಕೊಳ್ಳಬಹುದು.

•    ಇತರ ಅಂಶ ಗುರುತಿಸಿಕೊಳ್ಳಿ
ಮೈಗ್ರೇನ್ ಉಂಟಾಗಲು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನತೆ ಇರುತ್ತದೆ. ಆದರೂ ಕೆಲವು ಅಂಶಗಳು ಎಲ್ಲರಿಗೂ ಒಂದೇ ರೀತಿಯಾಗಿರುತ್ತವೆ. ಉದಾಹರಣೆಗೆ, ರಾತ್ರಿಯ ಸಮಯದಲ್ಲಿ ಎದುರಿನಿಂದ ಬೀಳುವ ವಾಹನಗಳ ಲೈಟ್ ನಿಂದ ಕೆಲವರಿಗೆ ಮೈಗ್ರೇನ್ ಬರುತ್ತದೆ. ಇಂತಹ ಕಾರಣಗಳನ್ನು ಗುರುತಿಸಿಕೊಳ್ಳಿ.

•    ಕೆಫೀನ್ (Caffeine) ದೂರವಿಡಿ
ಬಹಳಷ್ಟು ಜನರಿಗೆ ಮೈಗ್ರೇನ್ ಬರಲು ಸಾಮಾನ್ಯ ಕಾರಣವೆಂದರೆ ಕಾಫಿ. ಕಾಫಿಯಿಂದ ಏಕಾಏಕಿ ಹುಮ್ಮಸ್ಸು ಮೂಡುತ್ತದೆ. ಹಾಗೆಯೇ ಇದು ದೇಹವನ್ನು ಡಿಹೈಡ್ರೇಟ್ ಮಾಡುತ್ತದೆ. ನಿಧಾನವಾಗಿ ಕೆಫೀನ್ ಕಡಿಮೆ ಮಾಡುವ ಮೂಲಕ ಮೈಗ್ರೇನ್ ಕಡಿಮೆ ಮಾಡಿಕೊಳ್ಳಬಹುದು. 

ಇದನ್ನೂ ಓದಿ: Health Tips : ಆರೋಗ್ಯಕ್ಕೆ ಒಳ್ಳೆದು ಅಂತಾ ಅತಿಯಾಗಿ ದಾಳಿಂಬೆ ತಿನ್ಬೇಡಿ

•    ಆಲ್ಕೋಹಾಲ್ (Alcohol) ಬೇಡ

ದೇಹವನ್ನು ಡಿಹೈಡ್ರೇಟ್ ಮಾಡುವ ಬಹುಮುಖ್ಯ ಕಾರಣಗಳಲ್ಲೊಂದು  ಆಲ್ಕೋಹಾಲ್. ಹಾಗೆಯೇ ಇದು ಮೈಗ್ರೇನ್ ಗೂ ಪ್ರಮುಖ ಕಾರಣ ಎಂದೆನಿಸಿದೆ. ಆಲ್ಕೋಹಾಲ್ ಸೇವನೆಯನ್ನು ಸಂಪೂರ್ಣವಾಗಿ ಬಿಡಲು ಸಾಧ್ಯವಾಗದಿದ್ದರೂ ಪ್ರಮಾಣ ಕಡಿಮೆ ಮಾಡುವುದರಿಂದ ಎಷ್ಟೋ ಲಾಭವಿದೆ.

ಇದನ್ನೂ ಓದಿ: New Study : ಎಸ್ಪ್ರೆಸೊ ಕಾಫಿ ಪ್ರಿಯರಿಗೆ ಶಾಕಿಂಗ್…! ಮಹಿಳೆಯರಿಗಿಂತ ಪುರುಷರಿಗೆ

•    ಅತಿಯಾಗಿ ವ್ಯಾಯಾಮ (Exercise) ಮಾಡ್ತೀರಾ?
ದೇಹಕ್ಕೆ ಸ್ವಲ್ಪವೂ ವ್ಯಾಯಾಮ ಇಲ್ಲದಿದ್ದರೆ ಹಲವಾರು ತೊಂದರೆಗಳು ಕಾಣಿಸಿಕೊಳ್ಳುವುದು ಸಹಜ. ಆದರೆ, ವರ್ಕೌಟ್ ಅತಿಯಾದರೂ ಮೈಗ್ರೇನ್ ಬಹಳ ಸುಲಭವಾಗಿ ಕಾಣಿಸಿಕೊಳ್ಳಬಹುದು. ಅತಿಯಾದ ವ್ಯಾಯಾಮದಿಂದ ದೇಹ ಡಿಹೈಡ್ರೇಟ್ ಆಗುತ್ತದೆ. ಹೀಗಾಗಿ, ಯಾವ ವ್ಯಾಯಾಮದಿಂದ ನಿಮಗೆ ತೊಂದರೆಯಾಗುತ್ತಿರಬಹುದು ಎಂದು ನೋಡಿಕೊಳ್ಳಿ. 

Follow Us:
Download App:
  • android
  • ios