ಮುಂಜಾನೆಯ ಸೂರ್ಯೋದಯ ಆಗುವ ಮೊದಲಿನ ಒಂದೂವರೆ ಗಂಟೆಯ ಅವಧಿಯನ್ನು ಬ್ರಾಹ್ಮಿ ಮುಹೂರ್ತ ಅಂತಾರೆ. ಬ್ರಾಹ್ಮ ಅಂದರೆ ಜ್ಞಾನ. ಮುಹೂರ್ತ ಅಂದ್ರೆ ಕಾಲ. ಇದು ಜ್ಞಾನವನ್ನು ಸಂಪಾದಿಸಲು ಪ್ರಶಸ್ತವಾದ ಕಾಲ ಎಂಬ ಅರಿವಿನಿಂದ ನಮ್ಮ ಹಿರಿಯರು ಇದನ್ನು ಬ್ರಾಹ್ಮಿ ಮುಹೂರ್ತ ಎಂದು ಕರೆದರು.

ನೀವಿನ್ನೂ ಮುಂಜಾನೆಯ ಸಕ್ಕರೆ ನಿದ್ದೆಯಲ್ಲಿ ಇರುವ ಹೊತ್ತಿಗೆ, ನಿಮ್ಮ ಅಜ್ಜನೋ ಅಜ್ಜಿಯೋ ಎದ್ದು ಒಂದು ರೌಂಡ್ ವಾಕಿಂಗ್ ಮುಗಿಸಿ ತರಕಾರಿ ವ್ಯಾಪಾರ ಮಾಡಿಕೊಂಡು ಬಂದಿರಬಹುದು. ನೀವು ನಿದ್ರೆ ಮುಗಿಸಿ ಅಯ್ಯೋ ಇಷ್ಡೊಂದು ಟೈಮ್ ವ್ಯರ್ಥ ಮಾಡಿದ್ನಲ್ಲಾ ಅಂತ ಗಿಲ್ಟ್ ಪಟ್ಟುಕೊಂಡು ಏಳ್ತಿರಬೇಕಾದ್ರೆ, ಮುಂಜಾನೆ ಬೇಗ ಎದ್ದಿದ್ದರೂ ಮಂಕಾಗದೆ ಶುಭ್ರವಾಗಿ ಕಳಕಳೆಯಾಗಿ ಬೆಳಗ್ತಿರೋ ಅವರ ಮುಖ ನೋಡಿ ತಬ್ಬಿಬ್ಬಾಗಿದೀರಲ್ಲವೇ. ಇದು ಬ್ರಾಹ್ಮಿ ಮುಹೂರ್ತದ ಪರಿ. ಮುಂಜಾನೆಯ ಸೂರ್ಯೋದಯ ಆಗುವ ಮೊದಲಿನ ಒಂದೂವರೆ ಗಂಟೆಯ ಅವಧಿಯನ್ನು ಬ್ರಾಹ್ಮಿ ಮುಹೂರ್ತ ಅಂತಾರೆ. ಬ್ರಾಹ್ಮ ಅಂದರೆ ಜ್ಞಾನ. ಮುಹೂರ್ತ ಅಂದ್ರೆ ಕಾಲ. ಇದು ಜ್ಞಾನವನ್ನು ಸಂಪಾದಿಸಲು ಪ್ರಶಸ್ತವಾದ ಕಾಲ ಎಂಬ ಅರಿವಿನಿಂದ ನಮ್ಮ ಹಿರಿಯರು ಇದನ್ನು ಬ್ರಾಹ್ಮಿ ಮುಹೂರ್ತ ಎಂದು ಕರೆದರು.

ಬ್ರಾಹ್ಮಿ ಮುಹೂರ್ತ ಹೀಗಿರುತ್ತದೆ

ಬ್ರಾಹ್ಮಿ ಮುಹೂರ್ತದಲ್ಲಿ ಹಕ್ಕಿಗಳು ಆಗಷ್ಟೇ ಎದ್ದು ಸೂರ್ಯನನ್ನು ಸ್ವಾಗತಿಸುತ್ತ ಚಿಲಿಪಿಲಿಗುಟ್ಟುತ್ತಿರುತ್ತವೆ. ಹಿತವಾದ ತಂಗಾಳಿ ಬೀಸುತ್ತ, ಮರದ ಎಲೆಗಳನ್ನು ಅಲುಗಾಡಿಸುತ್ತ ಇರುತ್ತದೆ. ಈ ಸಂದರ್ಭದಲ್ಲಿ ವಾತಾವರಣದಲ್ಲಿರುವ ಆಮ್ಲಜನಕ ಶುದ್ಧವಾಗಿರುತ್ತದೆ. ಸೂರ್ಯನು ಇನ್ನೂ ಮೂಡಿಲ್ಲದಿರುವುದರಿಂದ ಗಾಳಿಯು ಬಿಸಿಯಾಗಿರುವುದಿಲ್ಲ. ಈ ಶುದ್ಧವಾದ ಆಮ್ಲಜನಕವನ್ನು ಉಸಿರಾಡುವುದರಿಂದ ಹಲವು ಲಾಭ. ಹೀಗಾಗಿಯೇ ಪಕ್ಷಿಗಳು, ಪ್ರಾಣಿಗಳು ಹೊತ್ತಿಗೂ ಮುಂಚೆ ಎದ್ದುಬಿಡುವುದು.

ಈ ರಾಶಿಯವರು ಸೆಕ್ಸ್‌ಗಾಗಿ ಎಂಥ ರಿಸ್ಕ್‌ಗೂ ರೆಡಿ ಇರ್ತಾರೆ!

- ಶುದ್ಧ ಆಮ್ಲಜನಕವನ್ನು ಸೇವಿಸುವುದರಿಂದ ನಮ್ಮ ರಕ್ತನಾಳಗಳ ಪರಿಚಲನೆ ಸಹಜವಾಗಿ ಸರಾಗವಾಗಿ ಆಗುತ್ತದೆ. ಹೃದಯದ ಸಮಸ್ಯೆಗಳು ಬಾಧಿಸುವುದಿಲ್ಲ. ಶ್ವಾಸಕೋಶಕ್ಕೂ ಕೆಲಸ ತುಸು ಹಗುರವಾಗುತ್ತದೆ. ಹೃದಯ ಹಾಗೂ ಶ್ವಾಸಕೋಶಗಳು ಸಮರ್ಪಕ ಗತಿಯಲ್ಲಿರುವುದೆಂದರೆ ಒಳ್ಳೆಯ ಆರೋಗ್ಯವಿರುವುದೆಂದೇ ಅರ್ಥ.

- ಮೆದುಳಿಗೆ ಒಳ್ಳೆಯ ಆಮ್ಲಜನಕ ಪೂರೈಕೆ ಆಗುವುದರಿಂದ, ಚಿಂತನೆಯು ಚೆನ್ನಾಗಿರುತ್ತದೆ. ಹೀಗಾಗಿಯೇ ಮಕ್ಕಳು ಬೇಗನೆ ಎದ್ದು ಓದಿಕೊಳ್ಳಬೇಕು ಎಂದು ನಮ್ಮ ಹಿರಿಯರು ಹೇಳುತ್ತಿದ್ದುದು. ಮೆದುಳಿನ ಕೋಶಗಳು ಸಕ್ರಿಯವಾಗಿರುವುದರಿಂದ, ನೆನಪಿನ ಶಕ್ತಿ ಚುರುಕಾಗಿರುತ್ತದೆ.

- ದೇಹಕ್ಕೆ ಅಗತ್ಯವಾದ ಆಮ್ಲಜನಕ ಸರಿಯಾಗಿ ಸಿಗುತ್ತದೆ. ದೇಹದ ಎಲ್ಲ ಅಂಗಾಂಶಗಳು ಶುದ್ಧ ಆಮ್ಲಜನಕದ ಪೂರೈಕೆಯಿಂದ ಲವಲವಿಕೆ ಪಡೆದುಕೊಳ್ಳುತ್ತವೆ.

- ಇಡೀ ದಿನಕ್ಕೆ ಅಗತ್ಯವಾದ ಚೈತನ್ಯ ಬೆಳಗಿನ ಈ ಹೊತ್ತಿನಿಂದ ನಮಗೆ ಲಭ್ಯವಾಗುತ್ತದೆ. ಇಡೀ ವಿಶ್ವವು ತನ್ನ ಚೈತನ್ಯವನ್ನು ನಿಕ್ಷೇಪಿಸಲು ಕೇಂದ್ರವನ್ನು ಈ ವೇಳೆಯಲ್ಲಿ ಹುಡುಕುತ್ತಿರುತ್ತದೆ.

ದಿನಾ ಶುಂಠಿ ನೀರು ಕುಡಿದ್ರೆ ಎಷ್ಟೆಲ್ಲ ಲಾಭಗಳಿವೆ ಗೊತ್ತಾ?

ಬ್ರಾಹ್ಮಿ ಮುಹೂರ್ತದಲ್ಲಿ ಏನು ಮಾಡಬೇಕು?

- ಧ್ಯಾನ ಮಾಡುವುದು ಒಳ್ಳೆಯದು. ಧ್ಯಾನಕ್ಕೆ ಅಗತ್ಯವಾದ ಏಕಾಗ್ರತೆ ಸಿದ್ಧಿಸುತ್ತದೆ. ಲೋಕ ಇನ್ನೂ ಎದ್ದಿರುವುದಿಲ್ಲ ಆದ್ದರಿಂದ ತೊಂದರೆ ಕೊಡುವ ಸದ್ದುಗಳೂ ಇರುವುದಿಲ್ಲ. ಧ್ಯಾನದಲ್ಲಿ ತಲ್ಲೀನತೆ ಸಾಧ್ಯವಾಗುತ್ತದೆ.

- ಓದಿಕೊಳ್ಳುವುದು, ಅಧ್ಯಯನ ಮಾಡುವುದು. ವೇದಾಭ್ಯಾಸ ಮಾಡುವವರು ಇದೇ ಹೊತ್ತಿನಲ್ಲಿ ಎಚ್ಚರವಾಗಿ ಓದಿಕೊಳ್ಳುತ್ತಿದ್ದರು. ಗ್ರಂಥಗಳಿಲ್ಲದ ಕಾಲದಲ್ಲಿ ಕೇಳುವ ಮೂಲಕ ಇಡೀ ವೇದಗಳನ್ನು ನೆನಪಿನ ಮೂಲ ಪೀಳಿಗೆಯಿಂಧ ಪೀಳಿಗೆಗೆ ಸಾಗಿಸಲು ಸಾಧ್ಯವಾದದ್ದು ಬ್ರಾಹ್ಮಿ ಮುಹೂರ್ತದ ಅಧ್ಯಯನ, ಪಠನದಿಂದ.

ನೀವು ಹುಟ್ಟಿದ ವಾರಕ್ಕೂ ನಿಮ್ಮ ಬದುಕಿಗೂ ಸಂಬಂಧ ಇದ್ಯಾ?

- ವಾಕಿಂಗ್‌ ಮಾಡಬಹುದು. ಈ ಸಂದರ್ಭದಲ್ಲಿ ಇಡೀ ಜಗತ್ತು ಮಲಗಿರುವುದರಿಂದ ನಿಮಗೆ ಯಾವ ತೊಂದರೆಯೂ ಬಾಧಿಸುವುದಿಲ್ಲ. ಪರಿಸರದ ಸೌಂದರ್ಯವನ್ನು ಆಸ್ವಾದಿಸಲು, ಆರೋಗ್ಯಪೂರ್ಣ ಗಾಳಿಯನ್ನು ಉಸಿರಾಡಲು ಸಾಧ್ಯವಾಗುತ್ತದೆ.

ಸೈಲೆಂಟ್‌ ಹಾರ್ಟ್ ಅಟ್ಯಾಕ್‌ ಬಗ್ಗೆ ನಿಮಗೆ ಗೊತ್ತಾ?

ಏನು ಮಾಡಬಾರದು?

- ಬ್ರಾಹ್ಮಿ ಮುಹೂರ್ತದಲ್ಲಿ ಊಟ ಮಾಡುವುದು, ಆಹಾರ ಸೇವನೆ ನಿಷಿದ್ಧ. ಆ ಹೊತ್ತಿನಲ್ಲಿ ಆಹಾರವನ್ನು ಸ್ವೀಕರಿಸಲು ಜೀರ್ಣಾಂಗವ್ಯೂಹ ಸಿದ್ಧವಿರುವುದಿಲ್ಲ.

- ಕಠಿಣ ದೇಹದಂಡನೆ ಸಲ್ಲದು. ಈ ಹೊತ್ತಿನಲ್ಲಿ ಲಘುವಾದ ವಾಕಿಂಗ್, ಯೋಗ ಇತ್ಯಾದಿ ಓಕೆ. ಆದರೆ ಕಠಿಣವಾದ ವ್ಯಾಯಾಮ ಅನಾರೋಗ್ಯಕರ.

ಯಾರು ಏಳಬಹುದು?

ಆರೋಗ್ಯವಂತರಾಗಿರುವವರೆಲ್ಲರೂ ಈ ಸಂದರ್ಭದಲ್ಲಿ ಏಳಬಹುದು. ಇದಕ್ಕೆ ವಯಸ್ಸಿನ ಮಿತಿಯಿಲ್ಲ.

ಯಾರು ಏಳಬಾರದು?

- ಗರ್ಭಿಣಿಯರು, ಬಾಣಂತಿಯರು.

- ನವಜಾತ ಶಿಶುಗಳು

- ಅನಾರೋಗ್ಯದಿಂದ ಪೀಡಿತರಾದವರು.

- ಈ ಮೊದಲು ಎದ್ದು ಅಬ್ಯಾಸವಿಲ್ಲದವರು ದಿಡೀರ್‌ ಆಗಿ ಏಳಬಾರದು.