ಮನುಷ್ಯ ಗುಣ ಲಕ್ಷಣಗಳು ಅವರವರ ಜನ್ಮ ನಕ್ಷತ್ರಕ್ಕೆ ಅನುಗುಣವಾಗಿರುತ್ತೆ. ಪ್ರತಿಯೊಂದೂ ಜೀವನದ ನಡೆ ನುಡಿಗಳು ಜಾತಕದಲ್ಲಿರುವಂತೆ ನಡೆದು ಹೋಗುತ್ತದೆ ಎಂಬುವುದು ಜ್ಯೋತಿಷ್ಯ ಶಾಸ್ತ್ರದ ನಂಬಿಕೆ. ಅಷ್ಟಕ್ಕೂ ಈ ರಾಶಿ ನಕ್ಷತ್ರದಲ್ಲಿ ಹುಟ್ಟಿದವರು ಲೈಂಗಿಕ ಜೀವನ ಹೇಗಿರುತ್ತೆ? 

ವೃಶ್ಚಿಕ ರಾಶಿ
ಇವರು ಚಾಣಾಕ್ಷತನದಿಂದ ಪರಿಸ್ಥಿತಿ ನಿಭಾಯಿಸುವವರು. ಎಂಥಾ ರಿಸ್ಕ್ ಇದ್ರೂ ಅದನ್ನು ಜಾಣ್ಮೆಯಿಂದ ಪರಿಹರಿಸಿ ಮುಂದುವರಿಯುವುದರಲ್ಲಿ ಪಂಟರು. ಸೆಕ್ಸ್ ವಿಷಯಕ್ಕೆ ಬಂದರೂ ಅಷ್ಟೇ. ಸಂಗಾತಿಯನ್ನು ಓಲೈಸಲೆಂದು ಸುಳ್ಳು ಹೇಳೋರಲ್ಲ. ಸಂಗಾತಿಗೆ ಬದ್ಧರಾಗಿರುವವರು. ಮೇಲ್ನೋಟಕ್ಕೆ ಸಂಕೋಚದವರಂತೆ ಕಾಣುತ್ತಾರಾದರೂ ಒಮ್ಮೆ ಸೆಕ್ಸ್ ಗೆ ಇಳಿದ ಮೇಲೆ ವಿಜೃಂಭಿಸಿಬಿಡುತ್ತಾರೆ. ಬೇರೆಲ್ಲ ಈ ವಿಷಯಕ್ಕೆ ತುಸು ಹಿಂಜರಿಕೆ ಇದ್ದರೂ ಲೈಂಗಿಕತೆ ವಿಷಯದಲ್ಲಿ ಹಿಂಜರಿಕೆ ಇಲ್ಲ. ಯಾವ ರಿಸ್ಕ್ ಗೂ ಸಿದ್ಧರಿರುತ್ತಾರೆ. ಈ ವಾರದಲ್ಲಿ ಇವರ ಸೆಕ್ಸ್ ಲೈಫ್ ಸಾಹಸಮಯವಾಗಿರುತ್ತೆ. ಹಾಗಂತ ಪರಿಸ್ಥಿತಿ ಪೂರಕವಾಗಿಲ್ಲದಿದ್ದರೆ ಅದಕ್ಕೂ ಅಡ್ಜೆಸ್ಟ್ ಆಗುವವರು.

ಮಿಥುನ

ಈ ರಾಶಿಯವರದ್ದು ತುಸು ಚಂಚಲ ಮನಸ್ಸು, ಸದಾ ಇನ್ನೊಬ್ಬರ ಬಗ್ಗೆ ಸಂಶಯದ ಕಣ್ಣು. ಪರಿಸ್ಥಿತಿಯನ್ನು ನಿಭಾಯಿಸುವ ಜಾಣ್ಮೆ ಇದ್ದರೂ ಕೆಲವೊಮ್ಮೆ ಜನರ ಕೆಂಗಣ್ಣಿಗೆ ತುತ್ತಾಗುತ್ತಾರೆ. ಮನ ಸುಖರಾಯರು. ಸಂಗಾತಿಗೆ ಇಚ್ಛೆ ಇಲ್ಲದಿದ್ದರೆ ಮನ ಪರಿವರ್ತನೆ ಮಾಡಿ ಅವರ ಜೊತೆಗೆ ಸೆಕ್ಸ್ ಗಿಳಿಯುವಷ್ಟು ಚಾಣಾಕ್ಷತೆ ಇದೆ. ಪೂರ್ವಾಗ್ರಹವಿಲ್ಲದೇ ಸೆಕ್ಸ್ ನಲ್ಲಿ ತೊಡಗುತ್ತಾರೆ. ಹಾಗಾಗಿ ಇವರ ಲೈಂಗಿಕ ಬದುಕು ಚೆನ್ನಾಗಿರುತ್ತದೆ. ಹಾಗಂತ ಈಗ ಸಂಗಾತಿಯ ಜೊತೆಗೆ ಕ್ಷುಲ್ಲಕ ವಿಷಯಕ್ಕೆ ಜಗಳವಾಡಬೇಡಿ. ನಿಮ್ಮ ಮನಸ್ಸು ಹಾಳಾಗಿದ್ದಾಗ ಅದನ್ನು ಪತ್ನಿ ಅಥವಾ ಪ್ರೇಯಸಿ ಮೇಲೆ ಹಾಕಬೇಡಿ. ಪರಿಸ್ಥಿತಿ ಸ್ವಲ್ಪ ಸೂಕ್ಷ್ಮವಾಗಿದೆ. ಹಾಗಾಗಿ ತುಸು ಜಾಗೃತೆಯಿಂದ ಮುಂದುವರಿಯಿರಿ.

 

ಸಂಗಾತಿ ಶರ್ಟ್ ಮೂಸಿದ್ರೆ ಬರುತ್ತೆ ಸೊಂಪಾದ ನಿದ್ರೆ

 

ಮೇಷ

ಸಾಮಾನ್ಯವಾಗಿ ಈ ರಾಶಿಯವರು ಪವರ್ ಇರುವವರು. ಎಂಥಾ ಪರಿಸ್ಥಿತಿಯಲ್ಲೂ ಮುಂದಾಳತ್ವ ವಹಿಸುವ ಮನಸ್ಥಿತಿ ಇವರದು. ಈ ತಿಂಗಳ ಮಧ್ಯಭಾಗದಲ್ಲಿ ನಿಮ್ಮ ಪ್ರಣಯ ಬದುಕು ಸ್ವಲ್ಪ ಒದ್ದಾಟ ಅನುಭವಿಸಿರಬಹುದು. ಆದರೆ ಈ ವಾರವಿಡೀ ರೊಮ್ಯಾಂಟಿಕ್ ಮೂಡ್ ನಲ್ಲಿರುತ್ತೀರ. ಆಕಸ್ಮಿಕವಾಗಿ ಪ್ರೇಮ. ಕಾಮ ಘಟಿಸಬಹುದು. ಯಾವ ರಿಸ್ಕ್‌ಗೂ ಅಂಜದ, ಅಳುಕದ ನೀವು ಈ ಪರಿಸ್ಥಿತಿಯಲ್ಲೂ ಅದೇ ಧೈರ್ಯದಿಂದ ಮುಂದುವರಿಯುತ್ತೀರಿ. ಹಾಗಂತ ಅತಿಯಾದ ಹುಂಬತನ ಬೇಡ. ಯಾವುದೇ ಆದರೂ ಅತಿಯಾದ ವಿಷವಾಗಬಹುದು. ಒಂದು ಮಿತಿಯನ್ನಿಟ್ಟೇ ಮುಂದುವರಿಯಿರಿ. ನಿಮ್ಮ ಬಗ್ಗೆ ನೀವು ಸಂಗಾತಿಯೆದುರು ಅತಿಯಾಗಿ ಕೊಚ್ಚಿಕೊಳ್ಳೋದು ಮಾಡಬೇಡಿ. ಇದು ಅವರಿಗೆ ಕಿರಿಕಿರಿ ಅನಿಸಬಹುದು. ನಿಮ್ಮ ಸೆಕ್ಸ್ ಲೈಫ್ ಮೇಲೂ ಪರಿಣಾಮ ಬೀರಬಹುದು.

 

28ರ ಯುವತಿಗೆ ವಿಚಿತ್ರ ಕಾಯಿಲೆ, 130ಕ್ಕೂ ಅಧಿಕ ಪುರುಷರೊಂದಿಗೆ ಸೆಕ್ಸ್

 

ಧನುಸ್ಸು

ಈ ರಾಶಿಯವರು ಯಾವುದನ್ನೇ ಆಗಲಿ ಪರೀಕ್ಷಿಸಿ, ಮನದಟ್ಟು ಮಾಡಿಕೊಂಡೇ ಮುಂದುವರಿಯುವವರು. ಇವರನ್ನು ಯಾಮಾರಿಸುವುದು ಕಷ್ಟ. ತಮಗೆ, ಕುಟುಂಬಕ್ಕೆ ಲಾಭವಿದೆ ಅಂದರೆ ಎಂಥಾ ರಿಸ್ಕ್ ಗೂ ರೆಡಿ ಇರುತ್ತಾರೆ. ಸೆಕ್ಸ್ ವಿಷಯದಲ್ಲೂ ಅಷ್ಟೇ.. ಕದ್ದುಮುಚ್ಚಿ ಸೆಕ್ಸ್ ಮಾಡಬೇಕಾದ ಟೈಮ್ ನಲ್ಲೂ ಸಹನೆ ಕಳೆದುಕೊಳ್ಳೋದಿಲ್ಲ. ಆದರೆ ಪರಿಸ್ಥಿತಿಯನ್ನು ಎನ್ ಜಾಯ್ ಮಾಡೋದು ಕಡಿಮೆ. ದೂರೋದು ಹೆಚ್ಚು. ಇದರಿಂದ ಇವರಲ್ಲಿ ಪಾಸಿಟಿವಿ ತುಸು ಕಡಿಮೆ ಇರುತ್ತೆ. ಇದು ಲೈಂಗಿಕತೆ ಮೇಲೂ ಪರಿಣಾಮ ಬೀರಬಹುದು. ಮುಕ್ತವಾಗಿ ಸೆಕ್ಸ್ ನಲ್ಲಿ ತೊಡಗೋದಕ್ಕೂ ಸಾಧ್ಯವಾಗದಿರಬಹುದು. ಎಲ್ಲರಿಗೂ ಕಷ್ಟಗಳು ಬಂದೇ ಬರುತ್ತವೆ, ಇರೋ ಕ್ಷಣವನ್ನು ಎನ್ ಜಾಯ್ ಮಾಡೋದು ಕಲಿಯಿರಿ. ಎಷ್ಟೇ ರಿಸ್ಕ್ ತಗೊಂಡು ಸೆಕ್ಸ್ ಗೆ ಮುಂದಾದರೂ ಅದರಲ್ಲಿ ಎನ್ ಜಾಯ್ ಮೆಂಟ್‌ ಅನ್ನೇ ಕಾಣದಿದ್ದರೆ ಏನು ಮಾಡಿ ಏನು ಪ್ರಯೋಜನ ಹೇಳಿ.

 

ಫೀಲ್ ಫ್ರೀ : ನನ್ನ ಪತ್ನಿಗೆ ಆ ಫೀಲೇ ಬರೋದಿಲ್ಲ, ಏನ್ಮಾಡಲಿ?

 

ಮೀನ

ನಿಮಗೆ ಸಾಂಪ್ರದಾಯಿಕತೆಯಲ್ಲೇ ಆಸಕ್ತಿ ಹೆಚ್ಚು. ಸೆಕ್ಸ್ ವಿಷಯದಲ್ಲೂ ಹಾಗೆ. ಸೆಕ್ಸ್‌ಗಾಗಿ ಅಲ್ಲದಿದ್ದರೂ ಸಂಗಾತಿಗಾಗಿ ರಿಸ್ಕ್ ತೆಗೆದುಕೊಳ್ಳುತ್ತೀರಿ. ಫೆಬ್ರವರಿ ತಿಂಗಳ ಕೊನೆ ನಿಮ್ಮ ಬದುಕಿನಲ್ಲಿ ತಂಗಾಳಿಯಂತೆ ಬರುತ್ತದೆ. ಓಡಾಟ ಹೆಚ್ಚಿದ್ದರೂ, ಸಂಗಾತಿಗೆ ಸಾಕಷ್ಟು ಟೈಮ್ ಕೊಡೋದಕ್ಕೆ ಸಾಧ್ಯ ಆಗದಿದ್ದರೂ ನಿಮ್ಮ ಪ್ರಣಯ ಜೀವನ ಖುಷಿಯಿಂದಲೇ ಕೂಡಿರುತ್ತದೆ.