Asianet Suvarna News Asianet Suvarna News

ಜಿಮ್‌ಗೆ ಹೋಗುವ ಮುನ್ನ ಎಚ್ಚರ, ಹೆಚ್ಚು ಕಡಿಮೆಯಾದರೆ ಹಾರ್ಟ್ ಅಟ್ಯಾಕ್ ಆಗೋದು ಗ್ಯಾರಂಟಿ!

ಜಿಮ್ಮಿಗೆ ಹೋದ್ರೆ ಹೃದಯಾಘಾತವಾಗುತ್ತೆ ಎಂಬ ತಪ್ಪು ಕಲ್ಪನೆ ಜನರಲ್ಲಿ ಮೂಡಿದೆ. ಇದಕ್ಕೆ ಅನೇಕ ಕಾರಣವೂ ಇದೆ. ಭಯದಲ್ಲಿಯೇ ಜಿಮ್ ಗೆ ಹೋಗ್ತಿರುವ ಜನರು ಹೃದಯ ಗಟ್ಟಿಯಾಗಿರಬೇಕೆಂದ್ರೆ ಕೆಲ ಟಿಪ್ಸ್ ಫಾಲೋ ಮಾಡ್ಬೇಕು. ಆಗ ಜಿಮ್ ಗೆ ಯಾವ ಆತಂಕವಿಲ್ದೆ ಹೋಗ್ಬಹುದು.
 

Know Prevention  From Heart Disease  While  Workout  In GYM Tips
Author
Bangalore, First Published Aug 18, 2022, 4:33 PM IST

ಜಿಮ್ ನಲ್ಲಿ ವ್ಯಾಯಾಮ ಎಂಬ ವಿಷ್ಯ ಬಂದಾಗ ಅನೇಕರು ಆತಂಕಕ್ಕೊಳಗಾಗ್ತಾರೆ. ಇದಕ್ಕೆ ಕಾರಣ ಪ್ರಸಿದ್ಧ ನಟರ ನಿಧನದ ಸುದ್ದಿ.  ಸದ್ಯ ಹಾಸ್ಯನಟ ರಾಜು ಶ್ರೀವಾಸ್ತವ್ ಹೃದಯಾಘಾತದ ಸುದ್ದಿ ಎಲ್ಲರ ಆತಂಕವನ್ನು ಮತ್ತೆ ಹೆಚ್ಚಿಸಿದೆ. ಜಿಮ್ ನಲ್ಲಿ ಅತಿಯಾಗಿ ವರ್ಕ್ ಔಟ್ ಮಾಡುವ ಅನೇಕ ಯುವ ಜನರು ಹೃದಯಾಘಾತಕ್ಕೊಳಗಾಗ್ತಿದ್ದಾರೆ. ವ್ಯಾಯಾಮ ಆರೋಗ್ಯಕ್ಕೆ ಒಳ್ಳೆಯದು. ಇದೇ ಕಾರಣಕ್ಕೆ ಜನರು ಜಿಮ್ ಸೇರಿದಂತೆ ಬೆವರಿಳಿಸುವ ವ್ಯಾಯಾಮ ಮಾಡ್ತಾರೆ. ಆದ್ರೆ ಇದೇ ವ್ಯಾಯಾಮ ಹೃದಯಾಘಾತಕ್ಕೆ ಕಾರಣವಾಗ್ತಿದೆ ಎಂಬುದು ಜನರಲ್ಲಿ ಭಯ ಹುಟ್ಟುಹಾಕಿದೆ. ಫಿಟ್ ಆಗಿರೋರಿಗೆ ಹೃದ್ರೋಗದ ಅಪಾಯದಲ್ಲಿ ಏಕೆ ಹೆಚ್ಚಾಗ್ತಿದೆ? ಹೃದಯಾಘಾತ ಮತ್ತು ವ್ಯಾಯಾಮದ ನಡುವಿನ ಸಂಬಂಧವೇನು? ಎಂಬ ಪ್ರಶ್ನೆ ಅನೇಕರ ತಲೆಯಲ್ಲಿದೆ. ಜಿಮ್ ಗೆ ಹೋಗೋದು ತಪ್ಪಲ್ಲ. ವರ್ಕ್ ಔಟ್ ಮಾಡೋದು ಕೂಡ ತಪ್ಪಲ್ಲ. ಫಿಟ್ ಆಗಿರಲು ದೇಹವನ್ನು ದಣಿಸುವ ಅಗತ್ಯವಿದೆ. ಆದ್ರೆ ಜಿಮ್ ಗೆ ಹೋಗಿ ತಾಲೀಮು ಮಾಡುವವರು ಕೆಲವೊಂದು ಸಂಗತಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಜಿಮ್ ಗೆ ಹೋಗುವ ಮೊದಲು ಏನೆಲ್ಲ ತಿಳಿದಿರಬೇಕೆಂದು ನಾವು ಹೇಳ್ತೇವೆ.

ಜಿಮ್ (GYM) ಗೆ ಹೋಗುವ ಮುನ್ನ ಇದು ನೆನಪಿರಲಿ : 
ದೇಹದ ದೌರ್ಬಲ್ಯಗಳ ಬಗ್ಗೆ ಮೊದಲು ತಿಳಿಯಿರಿ :
ಅನೇಕ ಯುವಜನರಿಗೆ ಫಿಟ್ನೆಸ್ ಬಗ್ಗೆ ಅತಿ ಹೆಚ್ಚು ಪ್ರೀತಿಯಿರುತ್ತದೆ. ಫಿಟ್ ಆಗ್ಬೇಕು ಎನ್ನುವ ಕಾರಣಕ್ಕೆ ಅವರು ಜಿಮ್ ಗೆ ಹೋಗ್ತಾರೆ. ಆದ್ರೆ ಜಿಮ್ ಗೆ ಹೋಗುವ ಮೊದಲು ಒಮ್ಮೆ ಹೃದ್ರೋಗ (Heart Disease) ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು. ಯುವ ಜನರು ಪರಿಧಮನಿಯ ಕಾಯಿಲೆಗೆ ಒಳಗಾಗಬಹುದು. ಆದ್ದರಿಂದ ನಿಮ್ಮ ವಯಸ್ಸು ಮತ್ತು ದೇಹದ ಸಾಮರ್ಥ್ಯಕ್ಕೆ ಅನುಗುಣವಾಗಿ ವ್ಯಾಯಾಮ ಮಾಡಬೇಕಾಗುತ್ತದೆ. ಮೊದಲೇ ನಿಮಗೆ ಹೃದಯ ಸಂಬಂಧಿ ಸಮಸ್ಯೆಯಿದ್ದರೆ ಪರೀಕ್ಷೆ ವೇಳೆ ಅದು ಗೊತ್ತಾಗುತ್ತದೆ. ಆಗ ವೈದ್ಯರೇ ಯಾವ ವ್ಯಾಯಾಮ ಮಾಡಬೇಕೆಂದು ನಿಮಗೆ ಸಲಹೆ ನೀಡ್ತಾರೆ. 

ಅತಿಯಾದ ವ್ಯಾಯಾಮದಿಂದ ಹೃದ್ರೋಗದ ಅಪಾಯ ಹೆಚ್ಚು : ಇತ್ತೀಚಿನ ದಿನಗಳಲ್ಲಿ, 22 ವರ್ಷಕ್ಕಿಂತ ಮೇಲ್ಪಟ್ಟ ಹೆಚ್ಚಿನ ಯುವಕರು  ಸಿಕ್ಸ್ ಪ್ಯಾಕ್ ಗಾಗಿ  ಅತಿಯಾದ ವ್ಯಾಯಾಮ ಮಾಡುತ್ತಾರೆ. ದೇಹದ ಸಾಮರ್ಥ್ಯಕ್ಕೆ ಮೀರಿದ ವ್ಯಾಯಾಮವು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ನಿಮ್ಮ ಸಾಮರ್ಥ್ಯಗಳನ್ನು ಗುರುತಿಸಿ ಮತ್ತು ತರಬೇತುದಾರರು ಮತ್ತು ವೈದ್ಯರ ಸಲಹೆಯ ಆಧಾರದ ಮೇಲೆ ಮಾತ್ರ ನಿಮಗಾಗಿ ಸರಿಯಾದ ವ್ಯಾಯಾಮವನ್ನು ಆರಿಸಿಕೊಳ್ಳಿ. 

ದಿನಾ ಹಸಿ ಖರ್ಜೂರ ತಿಂದ್ರೆ ಹಾರ್ಟ್ ಅಟ್ಯಾಕ್ ಭಯ ಬೇಕಿಲ್ಲ

ಹೃದಯ ಶಸ್ತ್ರಚಿಕಿತ್ಸೆ (Surgery) ಗೆ ಒಳಗಾಗಿದ್ದರೆ ಜಿಮ್‌ ನಿಂದ ದೂರವಿರಿ : ನೀವು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಜಿಮ್‌ಗೆ ಹೋಗುವುದನ್ನು ತಪ್ಪಿಸಬೇಕು. ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದವರು ಭಾರೀ ವ್ಯಾಯಾಮ (Exrcise) ಮಾಡಬೇಡಿ. ಶಸ್ತ್ರಚಿಕಿತ್ಸೆಯ ನಂತರ ಜನರು ಎಚ್ಚರಿಕೆಯಿಂದ ಇರಬೇಕು.  ತಜ್ಞರ ಪ್ರಕಾರ, ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ  ಕನಿಷ್ಠ 6 ವಾರಗಳ ನಂತರ ಮಾತ್ರ ವ್ಯಾಯಾಮವನ್ನು ಪ್ರಾರಂಭಿಸಬಹುದು. ಆದರೆ ಇದಕ್ಕಿಂತ ಮೊದಲು ನಿಮ್ಮ ವೈದ್ಯರಿಂದ ಅನುಮತಿಯನ್ನು ಪಡೆಯಬೇಕು. 

Health Tips: ಸರಿಯಾಗಿ ಅಗಿಯದೇ ತಿಂದ್ರೆ ತೂಕ ಹೆಚ್ಚಾಗುತ್ತೆ ಜೋಪಾನ !

ವರ್ಕ್ ಔಟ್ ಮೊದಲು ವಾರ್ಮ್ ಅಪ್ (Warm Up) ಮಾಡಿ : ನೀವು ಮನೆಯಲ್ಲಿ ಅಥವಾ ಜಿಮ್‌ನಲ್ಲಿ ವಾರಕ್ಕೆ 5-6 ಬಾರಿ ಮಾತ್ರ ವ್ಯಾಯಾಮ ಮಾಡಿ. ವ್ಯಾಯಾಮದ ಮೊದಲು ವಾರ್ಮ್ ಅಪ್ ಮಾಡಿ. ವ್ಯಾಯಾಮದ ಜೊತೆ 5-10 ನಿಮಿಷ  ಉಸಿರಾಟ (Breathing ) ದ ವ್ಯಾಯಾಮ ಮಾಡಿ. ವ್ಯಾಯಾಮದ ಮೊದಲು ಐದು ನಿಮಿಷಗಳ ಕಾಲ ವಾರ್ಮ್ ಅಪ್ ಮಾಡ್ಬೇಕು. ನಂತರ ಐದು ನಿಮಿಷಗಳ ಕಾಲ ಕೂಲ್ ಡೌನ್ ವ್ಯಾಯಾಮ ಮಾಡಬೇಕು. ಅದರ ನಂತರವೇ ವ್ಯಾಯಾಮವನ್ನು ಪ್ರಾರಂಭಿಸಬೇಕು. 

Follow Us:
Download App:
  • android
  • ios