ಡಾ. ಕಿಶೋರ್‌ ಕುಮಾರ್‌

ನಿಯೋನಟಾಲಜಿಸ್ಟ್‌, ಕ್ಲೌಡ್‌ ನೈನ್‌

ಕೊರಿನೆಬ್ಯಾಕ್ಟೀರಿಯಂ ಡಿಫ್ತಿರಿಯಾ ಅನ್ನೋ ಬ್ಯಾಕ್ಟೀರಿಯಾದಿಂದ ಗಂಟಲುಮಾರಿ ಅನ್ನೋ ಸಾಂಕ್ರಾಮಿಕ ರೋಗ ಬರುತ್ತೆ. 5 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರು ಈ ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚು.

ತಮಾಷೆಯೇ ಅಲ್ಲರೀ... ಲೈಂಗಿಕ ಸುಖ ಜೀವನ ನಡೆಸೋದ್ರಲ್ಲಿ ಕೃಷಿಕರೇ ನಂಬರ್ 1 ಅಂತೆ!

ಈ ರೋಗ ಬರೋದು ಹೇಗೆ?

ಆರಂಭದಲ್ಲಿ ಗಂಟಲು ಮತ್ತು ಶ್ವಾಸನಾಳದ ಮೇಲ್ಭಾಗದಲ್ಲಿ ಸೋಂಕು ಉಂಟಾಗುತ್ತೆ. ಆ ಬ್ಯಾಕ್ಟೀರಿಯಾಗಳು ಟಾಕ್ಸಿನ್‌ ಅರ್ಥಾತ್‌ ವಿಷಕಾರಿ ಅಂಶ ಬಿಡುಗಡೆ ಮಾಡುತ್ತವೆ. ಅವು ರಕ್ತಪ್ರವಾಹದ ಮೂಲಕ ದೇಹಾದ್ಯಂತ ಹರಡುತ್ತದೆ. ಆಗ ಮೂಗು, ಗಂಟಲು, ನಾಲಿಗೆ ಮತ್ತು ಶ್ವಾಸನಾಳಗಳ ಮೇಲೆ ದಪ್ಪ, ಬೂದು ಬಣ್ಣದ ಲೇಪನವನ್ನುಕಾಣುತ್ತದೆ.

ಬಹಳ ತೀವ್ರವಾದ ಬ್ಯಾಕ್ಟೀರಿಯಾ ಸೋಂಕಿದು. ಸುಲಭವಾಗಿ ಹರಡಬಹುದು. ಇದರಲ್ಲಿ ಎರಡು ವಿಧ. ಒಂದು ಗಂಟಲು, ಮೂಗು ಮತ್ತು ಟಾನ್ಸಿಲ್‌ ಮೇಲೆ ಪರಿಣಾಮ ಬೀರುವ ಶ್ವಾಸನಾಳದ ಗಂಟಲುಮಾರಿ, ಇನ್ನೊಂದು ಚರ್ಮದ ಗಂಟಲುಮಾರಿ.

ಮಲಗುವ ಭಂಗಿಯಲ್ಲೇ ಅಡಗಿದೆ ನೋವಿನ ಸೀಕ್ರೆಟ್!

ಡಿಫ್ತೀರಿಯಾ ಲಕ್ಷಣಗಳಿವು

ಗಂಟಲು ಮತ್ತು ಟಾನ್ಸಿಲ್‌ಗಳ ಮೇಲೆ ದಪ್ಪ, ಬೂದು ಪದರ ಗಂಟಲುಮಾರಿಯ ಮುಖ್ಯ ಲಕ್ಷಣ. ಚಳಿ, ಕುತ್ತಿಗೆಯಲ್ಲಿ ಉಬ್ಬಿರುವ ಗ್ರಂಥಿಗಳು, ಜೋರು ಕೆಮ್ಮು, ಗಂಟಲು ನೋವು, ನೀಲಿ ಚರ್ಮ, ಜೊಲ್ಲು ಸುರಿಸುವುದು, ಕಿರಿಕಿರಿ ಆರಂಭಿಕ ಲಕ್ಷಣ. ಸೋಂಕು ಉಲ್ಬಣಿಸಿದಂತೆ ಮಾತು ಅಸ್ಪಷ್ಟವಾಗುತ್ತದೆ. ಉಸಿರಾಟದ ಸಮಸ್ಯೆ, ನುಂಗಲು ಕಷ್ಟವಾಗುವುದು, ದೃಷ್ಟಿಯಲ್ಲಿ ಬದಲಾವಣೆಯಾಗುತ್ತದೆ. ಸೋಂಕು ಇರುವ ವ್ಯಕ್ತಿಯ ಕೆಮ್ಮು, ಸೀನು ಇತ್ಯಾದಿಗಳ ಮೂಲಕ ಅದು ಇತರರಿಗೆ ಹರಡುತ್ತದೆ. ಇದ್ಯಾವ ಲಕ್ಷಣಗಳನ್ನೂ ತೋರಿಸದೇ ಐದಾರು ದಿನಗಳ ಬಳಿಕ ಇದ್ದಕ್ಕಿದ್ದಂತೆ ಚಿಹ್ನೆ ಕಾಣಿಸಬಹುದು. ಕೂಡಲೇ ಆಸ್ಪತ್ರೆಗೆ ಹೋಗಬೇಕು. ಇಲ್ಲವಾದಲ್ಲಿ ಪ್ರಾಣಾಪಾಯವಿದೆ.

ಲಸಿಕೆ ಕಡ್ಡಾಯ

ಡಿಟಿಪಿ ಎಂಬ ಐದು ಚುಚ್ಚುಮದ್ದು ಸರಣಿ ಆರು ವಾರಗಳ ಮಗುವಿನಿಂದಲೇ ನೀಡಬೇಕು. ಇದು ಮುಂದುವರಿದು 9 ರಿಂದ 15 ವರ್ಷವಾಗುವವರೆಗೂ ನೀಡುವ ವ್ಯವಸ್ಥೆ ಇದೆ. ಶಾಲೆಗಳಲ್ಲೂ ಈ ಇಂಜೆಕ್ಷನ್‌ ನೀಡುವ ವ್ಯವಸ್ಥೆ ಮಾಡಲಾಗಿದೆ. ಡಿಫ್ತೀರಿಯಾ ಮೂಲಕ ಸಾವಿನ ಅಪಾಯದಿಂದ ಮಕ್ಕಳನ್ನು ರಕ್ಷಿಸಲು ಲಸಿಕೆಯನ್ನು ಹೇಳಿದ ಸಮಯಕ್ಕೆ ಸರಿಯಾಗಿ ಹಾಕಿಸಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಈ ಲಸಿಕೆ ಸಿಗುತ್ತದೆ.

ಪದೆ ಪದೇ ಸೂಸು ಹೋಗ್ಬೇಕು ಎನಿಸುತ್ತಿದ್ಯಾ?