ಕೇರಳದಲ್ಲಿ ಕುಝಿಮಂತಿ ಬಿರಿಯಾನಿ ತಿಂದು ಮಹಿಳೆ ಸಾವು, 178 ಮಂದಿ ಆಸ್ಪತ್ರೆಗೆ ದಾಖಲು

ಫುಡ್‌ ಪಾಯ್ಸನಿಂಗ್‌ನಿಂದ ಆರೋಗ್ಯ ಕೆಡೋದು ಹೊಸ ವಿಚಾರವೇನಲ್ಲ. ಕೆಲವೊಮ್ಮೆ ವಾಂತಿ-ಬೇಧಿ ಶುರುವಾಗಿ ಜನರು ಆಸ್ಪತ್ರೆಗೆ ಸೇರೋದು ಇದೆ. ಆದರೆ ಕೇರಳದಲ್ಲೊಬ್ಬ ಮಹಿಳೆ ಇಲ್ಲಿನ ರೆಸ್ಟೋರೆಂಟ್‌ವೊಂದರಲ್ಲಿ ಬಿರಿಯಾನಿ ಸೇವಿಸಿದ ನಂತರ ಮೃತಪಟ್ಟಿದ್ದಾರೆ. 178 ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Kerala Woman Dies After Eating Biryani At Thrissur Restaurant, 178 Hospitalised Vin

ತ್ರಿಶ್ಯೂರ್: ಕೇರಳದ ರಾಜ್ಯದ ತ್ರಿಶ್ಯೂರ್ ಜಿಲ್ಲೆಯ ಪೆರಿಂಜನಂ ಪ್ರದೇಶದ ಸ್ಥಳೀಯ ರೆಸ್ಟೋರೆಂಟ್‌ನಿಂದ ಕುಝಿಮಂತಿ  ಬಿರಿಯಾನಿ ಸೇವಿಸಿದ ನಂತರ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. 178 ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತ ಮಹಿಳೆಯನ್ನು ಕುಟಿಲಕ್ಕಡವ್‌ನ ಉಝೈಬಾ (56) ಎಂದು ಗುರುತಿಸಲಾಗಿದೆ. ಬಿರಿಯಾನಿ ತಿಂದ ನಂತರ ಹೊಟ್ಟೆ ನೋವು ಮತ್ತು ವಾಂತಿ ಶುರುವಾದ ಕಾರಣ ಉಝೈಬಾರನ್ನು ತ್ರಿಶೂರ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಘಟನೆಯ ನಂತರ, ರೆಸ್ಟೋರೆಂಟ್‌ನ್ನು ಮುಚ್ಚಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು, ಆಹಾರ ಸುರಕ್ಷತಾ ಇಲಾಖೆಯ ಪ್ರತಿನಿಧಿಗಳು, ಪಂಚಾಯತ್ ಅಧಿಕಾರಿಗಳು ಮತ್ತು ಪೊಲೀಸರು ರೆಸ್ಟೋರೆಂಟ್‌ ಪರಿಶೀಲನೆ ನಡೆಸಿದರು. ಘಟನೆಗೆ ಸ್ಪಂದಿಸಿ ರೆಸ್ಟೋರೆಂಟ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ.

ರೀಫಂಡ್‌ ಮಾಡಿದ್ರೆ ಪಾಪ ಹೋಗುತ್ತಾ? ಪನೀರ್ ಬಿರಿಯಾನಿಯಲ್ಲಿ ಚಿಕನ್ ಪೀಸ್‌ ಕಳುಹಿಸಿದ ಜೊಮ್ಯಾಟೋಗೆ ತರಾಟೆ!

ಪಂಚಾಯತ್ ಅಧ್ಯಕ್ಷೆ ವಿನೀತಾ ಮೋಹನದಾಸ್ ಈ ಬಗ್ಗೆ ಮಾತನಾಡಿ, 'ಪೆರಿಂಜನಂ, ಕಯ್ಪಮಂಗಲಂ ನಿವಾಸಿಗಳು ಕೊಡುಂಗಲೂರು, ಇರಿಂಗಲಕುಡದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ' ಎಂದು ತಿಳಿಸಿದ್ದಾರೆ. ಆರೋಗ್ಯ ಇಲಾಖೆ, ಪಂಚಾಯತ್, ಆಹಾರ ಮತ್ತು ಸುರಕ್ಷತಾ ಅಧಿಕಾರಿಗಳು ಹಾಗೂ ಪೊಲೀಸರು ಹೊಟೇಲ್ ಪರಿಶೀಲನೆ ನಡೆಸಿದರು. 

ಅನೈರ್ಮಲ್ಯದಲ್ಲಿ ಹೋಟೆಲ್ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಕಯ್ಪಮಂಗಲಂ ಪೊಲೀಸ್ ಠಾಣೆ ಮತ್ತು ಪೆರಿಂಜನಂ ಪಂಚಾಯತ್‌ಗೆ ವರದಿ ಸಲ್ಲಿಸಲಾಗಿದೆ. ಹೆಚ್ಚುವರಿಯಾಗಿ, ವಿಷಪೂರಿತ ಆಹಾರದಿಂದ ಆಸ್ಪತ್ರೆಗೆ ದಾಖಲಾದವರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಲಾಗಿದೆ.

ಭಾರತದ ಯಾವ ನಗರದಲ್ಲಿ ದಿ ಬೆಸ್ಟ್ ಬಿರಿಯಾನಿ ಸಿಗುತ್ತೆ?

ಆಹಾರ ವಿಷದ ಕಾರಣವನ್ನು ಕಂಡುಹಿಡಿಯಲು ಆರೋಗ್ಯ ಇಲಾಖೆ ಆಹಾರದ ಮಾದರಿಗಳನ್ನು ಪರೀಕ್ಷೆಗೆ ಸಂಗ್ರಹಿಸಿದೆ. ತನಿಖೆಯ ಫಲಿತಾಂಶದ ಆಧಾರದ ಮೇಲೆ ಹೋಟೆಲ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿದುಬಂದಿದೆ.

Latest Videos
Follow Us:
Download App:
  • android
  • ios