ರೀಫಂಡ್ ಮಾಡಿದ್ರೆ ಪಾಪ ಹೋಗುತ್ತಾ? ಪನೀರ್ ಬಿರಿಯಾನಿಯಲ್ಲಿ ಚಿಕನ್ ಪೀಸ್ ಕಳುಹಿಸಿದ ಜೊಮ್ಯಾಟೋಗೆ ತರಾಟೆ!
ಸಸ್ಯಾಹಾರಿಯೊಬ್ಬರು ಹಸಿವು ಅಂತ ಆನ್‌ಲೈನ್‌ನಲ್ಲಿ ಪನೀರ್ ಬಿರಿಯಾನಿ ಆರ್ಡರ್ ಮಾಡಿದ್ದರು. ಆದ್ರೆ ಆಹಾರದಲ್ಲಿ ಮಾಂಸದ ತುಂಡು ಬಂದಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿವೆ.
ಪುಣೆ: ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡೋದು ಇಂದು ಕಾಮನ್. ಆದರೆ ಕೆಲವೊಮ್ಮೆ ಆಹಾರಗಳ ಪ್ಯಾಕೇಟ್ ಅದಲು ಬದಲು ಆಗಿರುತ್ತದೆ. ಪುಣೆಯ ವ್ಯಕ್ತಿಯೊಬ್ಬರಿಗೆ ಪನೀರ್ ಬಿರಿಯಾನಿಯಲ್ಲಿ ಚಿಕನ್ ಪೀಸ್ ಬಂದಿದೆ. ಈ ಬಗ್ಗೆ X ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇಂದು ಹೋಟೆಲ್ ಆಹಾರ ಎಷ್ಟು ಆರೋಗ್ಯಕರ ಎಂಬ ಚರ್ಚೆಗಳ ನಡುವೆಯೂ ಅನಿವಾರ್ಯವಾಗಿ ಇಂತಹ ಫುಡ್ ಮೇಲೆ ಅವಲಂಬನೆಯಾಗುವ ಸ್ಥಿತಿ ಬಂದೊಗಿದೆ. ಇದರ ಜೊತೆಯಲ್ಲಿ ಗ್ರಾಹಕರನ್ನು ಆಕರ್ಷಿಸಲು ಹೋಟೆಲ್‌ಗಳು ಸಹ ಪರದಾಡುತ್ತಿವೆ. ಹೋಟೆಲ್‌ಗಳು ತಮ್ಮಲ್ಲಿ ಶುದ್ಧವಾಗಿ ಉತ್ತಮ ಗುಣಮಟ್ಟದಿಂದ ತಯಾರಿಸಿದ ಆಹಾರ ಸಿಗುತ್ತೆ ಎಂಬ ಜಾಹೀರಾತುಗಳನ್ನು ನೀಡುತ್ತಿರುತ್ತವೆ. ಇಷ್ಟು ಮಾತ್ರವಲ್ಲದೇ ಆಹಾರ ಪೂರೈಕೆ ಮಾಡುವ ಜೊಮ್ಯಾಟೋ, ಸ್ವಿಗ್ಗಿ ಅಂತಹ ಆಪ್‌ಗಳಲ್ಲಿ ಗ್ರಾಹಕರು ನೀಡುವ ರೇಟಿಂಗ್ ಸಹ ಹೋಟೆಲ್‌ಗಳಿಗೆ ಮುಖ್ಯವಾಗುತ್ತದೆ. ಆಹಾರ ಪೂರೈಕೆ ಅಂತಹ ಆಪ್‌ಗಳು ದೇಶದ ಎರಡನೇ ದರ್ಜೆಯ ನಗರಗಳಿಗೂ ಕಾಲಿಟ್ಟಿವೆ.
ವಿಶೇಷ ಬೆಂಗಳೂರು, ಮುಂಬೈ, ದೆಹಲಿ, ಪುಣೆ ಅಂತಹ ಮಹಾನಗರಗಳಲ್ಲಿ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡಿಕೊಳ್ಳುತ್ತಾರೆ. ಆದರೆ ಒಬ್ಬರಿಗೆ ಪನೀರ್ ಬಿರಿಯಾನಿಯಲ್ಲಿ ಚಿಕನ್ ಪೀಸ್ ಬಂದಿದ್ದು, ಇದು ನನ್ನ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಬೇಸರವನ್ನು ಹೊರ ಹಾಕಿದ್ದಾರೆ.
ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ವಾಸವಾಗಿರುವ ಪಂಕಜ್ ಶುಕ್ಲಾ ತಮ್ಮ ಆಹಾರ ಸಸ್ಯಾಹಾರದಲ್ಲಿ ಮಾಂಸದ ತುಂಡು ಬಂದಿರೋದನ್ನು ಫೋಟೋ ಸಮೇತ ಬರೆದುಕೊಂಡಿದ್ದಾರೆ.
ಕಾಶಿ ಎಕ್ಸ್‌ಪ್ರೆಸ್‌ನಲ್ಲಿ ವಿತರಿಸಿದ ಆಹಾರದ ಪ್ಯಾಕೆಟ್‌ನಲ್ಲಿತ್ತು ಹುಳ, ವೀಡಿಯೋ ವೈರಲ್
ನಾನೊಬ್ಬ ಧಾರ್ಮಿಕ ವ್ಯಕ್ತಿ
ಮಹಾರಾಷ್ಟ್ರದ ಪುಣೆಯ ಕರ್ವೆ ನಗರದ ಪಿಕೆ ಬಿರಿಯಾನಿ ಹೌಸ್‌ನಿಂದ ಪನೀರ್ ಬಿರಿಯಾನಿ ಆರ್ಡರ್ ಮಾಡಿದ್ದೆ. ಆದರೆ ಇದರಲ್ಲಿ ಚಿಕನ್ ಪೀಸ್ ಸಿಕ್ಕಿದೆ. ನಾನು ಶುದ್ಧ ಸಸ್ಯಹಾರಿ ಆಗಿದ್ದೇನೆ. ನನಗೆ ಆ ಕೂಡಲೇ ರೀಫಂಡ್ ಸಿಕ್ಕಿದ್ದು, ಆದ್ರೆ ಇದು ಪಾಪವಾಗಿದೆ. ನಾನೊಬ್ಬ ಧಾರ್ಮಿಕ ವ್ಯಕ್ತಿಯಾಗಿದ್ದು, ಇದು ನನ್ನ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು ಬರೆದುಕೊಂಡಿದದ್ದಾರೆ.
ನೆಟ್ಟಿಗರು ಹೇಳಿದ್ದೇನು?
ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಸಸ್ಯಹಾರಿಗಳು ಆದಷ್ಟು ವೆಜ್ ಹೋಟೆಲ್‌ಗಳಿಂದ ಆಹಾರ ಆರ್ಡರ್ ಮಾಡಿಕೊಳ್ಳುವುದು ಉತ್ತಮ ಎಂದು ಹೇಳಿದದ್ದಾರೆ. ಬ್ಯುಸಿ ಮತ್ತು ಎರಡು ಬಗೆಯ ಆಹಾರ ತಯಾರಿಸುವ ಹೋಟೆಲ್‌ಗಳಲ್ಲಿ ಈ ರೀತಿಯ ತಪ್ಪುಗಳು ಮರುಕಳಿಸುತ್ತಿರುತ್ತವೆ.
ಹೆಲ್ಮೆಟ್ ಧರಿಸಿಲ್ಲ ಅಂತ ಕಾರಿಗೂ ಒಂದು ಸಾವಿರ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು
ಹೋಟೆಲ್ ವಿರುದ್ಧ ಕ್ರಮಕ್ಕೆ ನೆಟ್ಟಿಗರ ಆಗ್ರಹ
ನೀವು ಧಾರ್ಮಿಕ ವ್ಯಕ್ತಿಯಾಗಿದ್ದರೆ ವೆಜ್ ಆಹಾರ ಸಿಗುವಲ್ಲಿ ಮಾತ್ರ ಫುಡ್ ಆರ್ಡರ್ ಮಾಡಿ ಎಂದು ಒಬ್ಬರು ಹೇಳಿದ್ರೆ, ಒಂದಿಷ್ಟು ಜನರು ಹೋಟೆಲ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಹೋಟೆಲ್‌ಗಳು ಗ್ರಾಹಕರ ಹಿತಾಸಕ್ತಿ ಕಾಪಾಡಬೇಕು ಮತ್ತು ಅವರ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.