ಸಾಂಕ್ರಾಮಿಕವಲ್ಲದ ರೋಗ ನಿಯಂತ್ರಣ: ಕೇರಳಕ್ಕೆ ವಿಶ್ವಸಂಸ್ಥೆ ಪ್ರಶಸ್ತಿ

ವಿಶ್ವ ಸಂಸ್ಥೆ ನೀಡುವ ಇಂಟರ್ ಏಜೆನ್ಸಿ ಕಾರ್ಯಪಡೆ ಅವಾರ್ಡ್‌ ಈ ಬಾರಿ ಕೇರಳಕ್ಕೆ | ಸಾಂಕ್ರಾಮಿಕವಲ್ಲದ ರೋಗ ನಿಯಂತ್ರಣ ಹಿನ್ನೆಲೆ ಪ್ರಶಸ್ತಿಗೆ ಆಯ್ಕೆ

Kerala Wins UN Award For Control Of Non-Communicable Diseases dpl

ತಿರುವನಂತಪುರಂ(ಸೆ.25): ಸುಸ್ಥಿರ  ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿ ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸುವಲ್ಲಿ ಕೇರಳ ನೀಡಿದ ಕೊಡುಗೆಯನ್ನು ಪರಿಗಣಿಸಿ ವಿಶ್ವಸಂಸ್ಥೆ ಏಜೆನ್ಸಿ ಕಾರ್ಯಪಡೆ ಅವಾರ್ಡ್‌ ನೀಡಿ ಗೌರವಿಸಿದೆ.

ಸಾಂಕ್ರಾಮಿಕವಲ್ಲದ ರೋಗ ನಿಯಂತ್ರಣ ಮತ್ತು ತಡೆಗೆ ಸಂಬಂಧಿಸಿ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರೋಸ್ ಅಧನೋಮ್ ಗೆಬ್ರಿಯಾಸಿಸ್ ಈ ಪ್ರಶಸ್ತಿ ಘೋಷಿಸಿದ್ದಾರೆ.

ಒಂದೇ ಒಂದು ಸೊಳ್ಳೆ ಕಚ್ಚಿದರೂ ಡೆಂಗ್ಯೂ ಬರುತ್ತಾ? ಇಲ್ಲಿದೆ ಉತ್ತರ

2019ರ ಅವಧಿಯಲ್ಲಿ ಸಾಂಕ್ರಾಮಿಕವಲ್ಲದ ರೋಗ ನಿಯಂತ್ರಣಕ್ಕೆ ಬೇರೆ ಬೇರೆ ವಲಯಗಳಲ್ಲಿ, ಮಾನಸಿಕ ಆರೋಗ್ಯ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿಗಳ ನಿಟ್ಟಿನಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಆರೋಗ್ಯ ವಲಯದಲ್ಲಿ ಕೇರಳ ನೀಡಿದ ಅವಿರತ ಸೇವೆಗೆ ಸಂದ ಗೌರವ ಇದು ಎಂದು ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ತಿಳಿಸಿದ್ದಾರೆ.

Kerala Wins UN Award For Control Of Non-Communicable Diseases dpl

ಸಾರ್ವಜನಿಕ ಆರೋಗ್ಯ ಕೇಂದ್ರಗಳಿಂದ ತೊಡಗಿ ಆಸ್ಪತ್ರೆ ಮಟ್ಟದ ತನಕ ರೋಗ ನಿಯಂತ್ರಣಕ್ಕೆ ಸರ್ಕಾರ ಕ್ರಮಗಳನ್ನು ಕೈಗೊಂಡಿತ್ತು. ಕೊರೋನಾ ಸಂದರ್ಭದಲ್ಲಿ ಸಾವಿನ ಪ್ರಮಾಣ ನಿಯಂತ್ರಿಸಿದ್ದರಿಂದ ಸಾಂಕ್ರಾಮಿಕವಲ್ಲದ ರೋಗಗಳ ನಿಯಂತ್ರಣದ ಕಡೆ ಗಮನ ನೀಡುವುದು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ. ರಾಜ್ಯದ ಸಾಧನೆಗೆ ಕೈಜೋಡಿಸಿದ ಎಲ್ಲ ಆರೋಗ್ಯ ಕಾರ್ಯಕರ್ತರಿಗೂ ಸಚಿವೆ ಶುಭಾಶಯ ತಿಳಿಸಿದ್ದಾರೆ. ಈ ಅವಾರ್ಡ್‌ಗೆ ಮೊದಲ ಬಾರಿ ಕೇರಳ ರಾಜ್ಯ ಆಯ್ಕೆಯಾಗಿದೆ. 

Latest Videos
Follow Us:
Download App:
  • android
  • ios