ವ್ಯಾಯಾಮ ಇಲ್ದೆ ಲೈಫೇ ಇಲ್ಲ ಅನ್ನೋ ಹಾಗಿದೆ ಇವತ್ತಿನ ಲೈಫ್‌ಸ್ಟೈಲ್. ಹಾಗಾಗಿಯೇ ಹೆಚ್ಚಿನವರು ಮನೆಯಲ್ಲೇ ಟ್ರೆಡ್‌ಮಿಲ್ ತಂದಿಟ್ಕೊಳ್ತಾರೆ. ಆದ್ರೆ ಇದು ಎಲ್ಲರಿಗೂ ಅಫೋರ್ಡೆಬಲ್ ಅಲ್ಲ. ಹೀಗಿರುವಾಗ ಕೇರಳದಲ್ಲೊಬ್ಬ ವ್ಯಕ್ತಿ ಮರದ ಟ್ರೆಡ್‌ಮಿಲ್ ತಯಾರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಆರೋಗ್ಯವಾಗಿರಲು ವ್ಯಾಯಾಮ ಮಾಡುವುದು ತುಂಬಾ ಮುಖ್ಯ. ಡೈಲೀ ಜಿಮ್‌ಗೆ ಹೋಗಲು ಸಮಯ ಹೊಂದಿಸಿಕೊಳ್ಳಲು ಕಷ್ಟ ಎನ್ನುವವರು ಮನೆಯಲ್ಲೇ ಟ್ರೆಡ್ ಮಿಲ್ ತಂದಿಟ್ಟುಕೊಳ್ಳುತ್ತಾರೆ. ಆದರೆ ಟ್ರೆಡ್‌ಮಿಲ್‌ನ್ನು ಸರಿಯಾಗಿ ಬಳಸಿಕೊಳ್ಳಲು ಗೊತ್ತಿಲ್ಲದಿದ್ದರೆ ಇದು ಅಪಾಯಕಾರಿಯೂ ಹೌದು. ಟ್ರೆಡ್‌ಮಿಲ್ ಸ್ಪೀಡ್ ಹೆಚ್ಚಿದರೆ ಜಾರಿ ಬೀಳುವ ಸಾಧ್ಯತೆಯೂ ಹೆಚ್ಚಿದೆ. ಆದರೆ ಇದು ಸ್ಪಲ್ಪ ಕಾಸ್ಟ್ಲೀ ಆಗಿರುವ ಕಾರಣ ಎಲ್ಲರೂ ಅಫೋರ್ಡ್ ಮಾಡುವಂತಿಲ್ಲ. ವಿದ್ಯುತ್ ಅಥವಾ ಬ್ಯಾಟರಿ ಬೇಕಾಗುವ ಕಾರಣ ಅದಕ್ಕೂ ಖರ್ಚು ತಗುಲುತ್ತದೆ. ಮಧ್ಯಮ ವರ್ಗದವರಂತೂ ಅಷ್ಟೆಲ್ಲಾ ಯಾರ್ ಖರ್ಚು ಮಾಡ್ತಾರಪ್ಪ. ಅದಕ್ಕಿಂತ ಸುಮ್ನೆ ರನ್ನಿಂಗ್ ಮಾಡಿದ್ರಾಯ್ತು ಅಂದ್ಕೊಂಡ್ ಬಿಡ್ತಾರೆ. ಆದರೆ ಕೇರಳದಲ್ಲೊಬ್ಬ ವ್ಯಕ್ತಿ ಮನೆಯಲ್ಲೇ ಮರದ ಟ್ರೆಡ್‌ಮಿಲ್ ತಯಾರಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.
ಕೇರಳದ ವ್ಯಕ್ತಿಯೊಬ್ಬರು ಮರವನ್ನು (Wood) ಬಳಸಿಕೊಂಡು ಈ ವಿಶಿಷ್ಟ ಆವಿಷ್ಕಾರ (Innovation) ಮಾಡಿದ್ದು ಆನ್‌ಲೈನ್‌ನಲ್ಲಿ ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾರೆ. ರವೀಂದ್ರನ್ ಎಂದು ಗುರುತಿಸಲಾದ ವ್ಯಕ್ತಿ, ವಿದ್ಯುತ್ ಮತ್ತು ಬ್ಯಾಟರಿ ಬಳಸದೆ ಕೆಲಸ ಮಾಡುವ ಮರದ ಟ್ರೆಡ್ ಮಿಲ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಅವರ ವಿನೂತನ ಉತ್ಪನ್ನ, ಪರಿಸರ ಸ್ನೇಹಿ ಪರ್ಯಾಯದ ವೀಡಿಯೊ ವೈರಲ್ ಆಗುತ್ತಿದೆ ಮತ್ತು ನೆಟಿಜನ್‌ಗಳು ಅವರ ನಾವೀನ್ಯತೆಯನ್ನು ಹೊಗಳಿದ್ದಾರೆ.
ಸೋಮಾರಿ ಫಿಟ್‌ನೆಸ್ ಫ್ರೀಕ್, ಟ್ರೆಡ್‌ಮಿಲ್‌ನಲ್ಲಿ ಕುಳಿತು ಸ್ನ್ಯಾಕ್ಸ್ ಮೆಲ್ಲುತ್ತಿರುವ ಭೂಪ!
ಮರದಿಂದ ತಯಾರಿಸಿರುವ ಟ್ರೆಡ್‌ಮಿಲ್ ವಿಡಿಯೋ ವೈರಲ್
ಮನೋಜ್ ಕುಮಾರ್ ಎಂದು ಗುರುತಿಸಲಾದ ಟ್ವಿಟ್ಟರ್ ಬಳಕೆದಾರರು ಮರದಿಂದ ತಯಾರಿಸಿರುವ ಟ್ರೆಡ್‌ಮಿಲ್‌ನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಟ್ರೆಡ್‌ಮಿಲ್ ತಯಾರಿಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ. 'ಈ ಲುಂಗಿ ಮತ್ತು ರಬ್ಬರ್ ಚಪ್ಪಲಿ ಧರಿಸಿದ ನವೋದ್ಯಮಿ ರವೀಂದ್ರನ್ ಅವರು ಕೇರಳದ ವಯನಾಡಿನಲ್ಲಿ ಯಾವುದೇ ವಿದ್ಯುತ್ ಅಥವಾ ಬ್ಯಾಟರಿಯ ಅಗತ್ಯವಿಲ್ಲದೆ ಮರದಿಂದ ಮಾಡಿದ ಟ್ರೆಡ್ ಮಿಲ್ ಅನ್ನು ರಚಿಸಿದ್ದಾರೆ. ಅವರು ಈಗಾಗಲೇ ಅದರ ಎರಡು ಮಾರ್ಪಾಡುಗಳನ್ನು ಹೊಂದಿದ್ದಾರೆ. ಅವರ ಸಾಧನೆಗೆ (Achievement) ಮೆಚ್ಚುಗೆಯಿರಲಿ' ಎಂದು ಶೀರ್ಷಿಕೆ ನೀಡಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ, ವೀಡಿಯೊವು 14.7K ವೀಕ್ಷಣೆಗಳನ್ನು (Views) ಗಳಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಆವಿಷ್ಕಾರವನ್ನು ಪ್ರಶಂಸಿದ್ದಾರೆ. ಒಬ್ಬ ಬಳಕೆದಾರ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರನ್ನು ಟ್ಯಾಗ್ ಮಾಡಿ, 'ಸರ್, ಹೈಟೆಕ್ ಯುಗದಲ್ಲಿ ಮತ್ತೊಂದು ನವೀನ ಉತ್ಪನ್ನ. ಸೆನ್ಸಾರ್‌ಗಳು + ಎಲೆಕ್ಟ್ರಾನಿಕ್ಸ್ ಉಪಯುಕ್ತತೆ ಮತ್ತು ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಇದಕ್ಕೆ ಮೌಲ್ಯವನ್ನು ಸೇರಿಸಬಹುದು. ಇದು ಬಹಳ ಕಾಲ ಬಾಳ್ವಿಕೆ ಬರಬಹುದು. ಅಭಿವೃದ್ಧಿಶೀಲ ಪ್ರಪಂಚದ ಜನರನ್ನು ಉತ್ತಮ ಉತ್ಪನ್ನವಾಗಿದೆ (Product)' ಎಂದು ಕಾಮೆಂಟ್ ಮಾಡಿದ್ದಾರೆ.
ಟ್ರೆಡ್ ಮಿಲ್ ಮೇಲೆ ಓಡುವ ಮುನ್ನ ಇದನ್ನು ತಿಳ್ಕೊಂಡಿರಿ!
'ಕೇರಳದಲ್ಲಿ ಎಲ್ಲಾ ಕಾರ್ಮಿಕ ಮತ್ತು ರಾಜಕೀಯ ಸಮಸ್ಯೆಗಳ ನಡುವೆಯೂ ಹೊಸ ವಸ್ತುಗಳ ಆವಿಷ್ಕಾರದ ಮನೋಭಾವವು ಜೀವಂತವಾಗಿದೆ ಇದು ತೋರಿಸುತ್ತದೆ' ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮೂರನೇ ಬಳಕೆದಾರರು, 'ಹ್ಯಾಟ್ಸಾಫ್, ಮರದಿಂದ ಮಾಡಿರುವ ಪರಿಕರಗಳು ಪರಿಸರ ಸ್ನೇಹಿಯಾಗಿವೆ. ಮಾತ್ರವಲ್ಲ ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲಿ ಉತ್ತಮವಾಗಿದೆ' ಎಂದಿದ್ದಾರೆ.
