Menstruation: ಬೇಗ ಮುಟ್ಟಾಗುವ ಹೆಣ್ಣುಮಕ್ಕಳ ಮಾನಸಿಕ ಆರೋಗ್ಯ ಹೀಗೆ ಕಾಪಾಡಿ

ಇತ್ತೀಚೆಗೆ ಹೆಣ್ಣುಮಕ್ಕಳು ಬೇಗ ಋತುಮತಿಯರಾಗುತ್ತಿದ್ದಾರೆ. ಆದರೆ ಅವರ ಮಾನಸಿಕ ಬೆಳವಣಿಗೆ ಇನ್ನೂ ಆಗಿರುವುದಿಲ್ಲ. ಅಂಥವರನ್ನು ನೀವು ಹೇಗೆ ನೋಡಿಕೊಳ್ಳಬೇಕು ಎಂಬ ತಜ್ಞ ಸಲಹೆ ಇಲ್ಲಿದೆ.

 

 

Keeping mental wellness of girls who get early puberty

ಹಿಂದೆ 14-16 ವರ್ಷಕ್ಕೆ ಹೆಣ್ಣುಮಕ್ಕಳು ಋತುಮತಿ (Menstruation) ಯಾಗುತ್ತಿದ್ದರು. ಈಗ 12-13 ವರ್ಷಕ್ಕೆ ಪೀರಿಯೆಡ್ಸ್ (Periods) ಆರಂಭವಾಗುತ್ತಿದೆ. ಇನ್ನು ಕೆಲವರು ಬಹಳ ಚಿಕ್ಕ ವಯಸ್ಸಿಗೇ ಆಗುತ್ತಾರೆ. ಬಹಳ ಚಿಕ್ಕ ವಯಸ್ಸಿಗೆ ಋತುಮತಿಯಾದರೆ ತಮ್ಮ ದೇಹಾರೋಗ್ಯ ಕಾಪಾಡಿಕೊಳ್ಳುವ ಪ್ರಜ್ಞೆ ಅವರಲ್ಲಿ ಇರುವುದಿಲ್ಲ. ಹಾಗೇ ಅದು ಅವರ ಸಾಮಾಜಿಕ, ಸಾಂಸ್ಕೃತಿಕ, ಭಾವನಾತ್ಮಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಹೆತ್ತವರ (Parents) ಪಾತ್ರ ಬಹಳ ಮಹತ್ವದ್ದು. ಈ ಸಮಯದಲ್ಲಿ ಅವರ ಒಳಗಿನ ವೇದನೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲವಾದರೂ, ಅದನ್ನು ನಾವೇ ಅರ್ಥ ಮಾಡಿಕೊಂಡು ನಿರ್ವಹಿಸುವುದರಿಂದ ಅದು ನಿಮ್ಮ ಮಗಳಿಗೆ ಆತ್ವವಿಶ್ವಾಸ ತಂದುಕೊಡುತ್ತದೆ.

ಯಾಕೆ ಆಗುತ್ತಾರೆ?
ಮೊದಲ ಬಾರಿಗೆ ಪಿರಿಯಡ್ಸ್ ಆದಾಗ ವಯಸ್ಸಿನ ಮೇಲೆ ಪರಿಣಾಮ ಬೀರುವ ಹಲವು ಅಂಶಗಳಿವೆ. ತಾಯಂದಿರು ಪಿರಿಯಡ್ಸ್ ಆದ ವಯಸ್ಸಿಗೂ ಅವರ ಹೆಣ್ಣುಮಕ್ಕಳು ಪಿರಿಯಡ್ಸ್ ಆಗುವ ವಯಸ್ಸಿಗೂ ಸಂಬಂಧ ಇದೆ. ಅಧಿಕ ತೂಕ ಹೊಂದಿರುವ ಹುಡುಗಿಯರು ಕಡಿಮೆ ತೂಕದ ಹುಡುಗಿಯರಿಗಿಂತ ಮುಂಚೆಯೇ ಪಿರಿಯಡ್ಸ್ ಆಗುತ್ತಾರೆ. ವ್ಯಾಯಾಮ ಮಾಡದವರಿಗಿಂತ, ಹೆಚ್ಚು ದೈಹಿಕ ಚಟುವಟಿಕೆಯನ್ನು ಮಾಡುವ ಹುಡುಗಿಯರು, ಕಡಿಮೆ ಜಂಕ್ ಫುಡ್ ತಿನ್ನುವವರು ಸ್ವಲ್ಪ ಸಮಯದ ನಂತರ ಪಿರಿಯಡ್ಸ್ ಆಗುತ್ತಾರೆ. ಕೆಲವು ಅಧ್ಯಯನಗಳು ಪ್ರಾಣಿ ಪ್ರೋಟೀನ್ ಮತ್ತು ಹಾಲಿನ ಸೇವನೆಯು ಬಹಳ ಬೇಗ ಪಿರಿಯಡ್ಸ್ ಆಗಲು ಕಾರಣವಾಗಬಹುದು ಎಂದು ಹೇಳಿದೆ. ಕೆಲವು ಅಧ್ಯಯನಗಳಲ್ಲಿ ಗ್ರಾಮೀಣ ಪ್ರದೇಶದ ಹುಡುಗಿಯರು ನಗರಗಳಲ್ಲಿನ ಬಾಲಕಿಯರ ನಂತರ ಪಿರಿಯಡ್ಸ್ ಆಗುತ್ತಾರೆ ಎಂದು ಗಮನಿಸಲಾಗಿದೆ.

Yoga As Immunity Booster: ಚಳಿಗಾಲದಲ್ಲಿ ಇಮ್ಯುನಿಟಿ ಹೆಚ್ಚಿಸಲು 5 ಯೋಗ ಭಂಗಿಗಳು!

ಏನು ಮಾಡಬೇಕು?
ಹುಡುಗಿಯರು 8 ವರ್ಷಕ್ಕಿಂತ ಮುಂಚೆ ಋತುಮತಿ ಆದರೆ ವೈದ್ಯರನ್ನು ಸಂಪರ್ಕಿಸಬೇಕು. 6 ವರ್ಷಕ್ಕಿಂತ ಮುಂಚೆಯೇ ಹುಡುಗಿ ಋತುಮತಿ ಆದರೆ ಅದು ಖಂಡಿತವಾಗಿಯೂ ಆತಂಕಕಾರಿ ವಿಚಾರ. ಮೊದಲ ಬಾರಿಗೆ ಮುಟ್ಟಾದಾಗ ಸಾಮಾನ್ಯವಾಗಿ ರಕ್ತಸ್ರಾವ (Bleeding) ಹೆಚ್ಚಿರುತ್ತದೆ. ಇದರ ಬಗ್ಗೆ ಗಮನ ಕೊಡಬೇಕು. ಆರೋಗ್ಯಕರ ಆಹಾರ ನೀಡಬೇಕು. ಸಾಕಷ್ಟು ವಿಶ್ರಾಂತಿ ನೀಡಬೇಕು.

ತಿಳಿವಳಿಕೆ ನೀಡಿ
ಮುಟ್ಟಿನ ಬಗ್ಗೆ ಭಾರತದಲ್ಲಿ ಮುಕ್ತವಾಗಿ ಮಾತನಾಡುವ ವಾತಾವರಣ ಇಲ್ಲ. ಎಪ್ಪತ್ತೊಂದು ಪ್ರತಿಶತ ಭಾರತೀಯ ಹುಡುಗಿಯರಿಗೆ ಮೊದಲು ಪಿರಿಯಡ್ಸ್ ಆಗುವವರೆಗೆ ಮುಟ್ಟಿನ ಬಗ್ಗೆ ತಿಳಿದಿರುವುದಿಲ್ಲ. ಜ್ಞಾನದ ಕೊರತೆಯಿಂದಾಗಿ ಋತುಸ್ರಾವವು ವಿವಿಧ ಮಾನಸಿಕ ತೊಂದರೆಗೆ ಈಡುಮಾಡುತ್ತದೆ. ಋತುಚಕ್ರದ ಸಮಯದಲ್ಲಿ ನಿಜವಾಗಿ ಏನಾಗುತ್ತದೆ ಎಂದು ಅನೇಕ ಹುಡುಗಿಯರಿಗೆ ತಿಳಿದಿಲ್ಲ. ಮುಟ್ಟಿನ ಸಮಯದಲ್ಲಿ ನೈರ್ಮಲ್ಯವು ಹೆಣ್ಣುಮಕ್ಕಳ ಜೀವನದ ಅತ್ಯಂತ ಪ್ರಮುಖ ಮತ್ತು ಅನಿವಾರ್ಯ ಭಾಗ.

ಹೆಣ್ಣುಮಕ್ಕಳು ಋತುಮತಿ ಆಗುವ ಮೊದಲು ಅದರ ಬಗ್ಗೆ ಚರ್ಚೆಗಳನ್ನು ಪ್ರಾರಂಭಿಸಿ ಮತ್ತು ಅದರ ಬಗ್ಗೆ ಕೇವಲ ಒಂದು ಬಾರಿ ಅಲ್ಲ, ಆಗಾಗ್ಗೆ ಮಾತನಾಡಿ. ಮುಟ್ಟು ಎಂದರೇನು, ಅದು ಯಾವಾಗ ಪ್ರಾರಂಭವಾಗುತ್ತದೆ, ಅದು ನೋವುಂಟು ಮಾಡುತ್ತದೆಯಾ, ಅದು ಎಷ್ಟು ಕಾಲ ಇರುತ್ತದೆ, ಮುಟ್ಟಿನ ನೈರ್ಮಲ್ಯ ವಿಧಾನಗಳು ಕುರಿತು ಅವರಿಗೆ ಪ್ರಾಯೋಗಿಕ ಸಲಹೆ ನೀಡಿ. ಮುಟ್ಟಿನ ಉತ್ಪನ್ನಗಳನ್ನು ಸೂಕ್ತವಾಗಿ ಮತ್ತು ಆರೋಗ್ಯಕರವಾಗಿ ಬದಲಾಯಿಸುವ ಬಗ್ಗೆ ಅವರಿಗೆ ತಿಳಿಸಿ.

Food And Health: ಸಮತೋಲಿತ ಆಹಾರ ಸೇವನೆ ಕ್ರಮ ಹೀಗಿರಲಿ..

​ಮುಟ್ಟಿನ ನೈರ್ಮಲ್ಯ
ಹದಿಹರೆಯದ ಹುಡುಗಿಯರು ಸ್ವಚ್ಛ (Hygiene) ಋತುಸ್ರಾವ ನಿರ್ವಹಣಾ ಸಾಮಗ್ರಿಯನ್ನು ಬಳಸಬೇಕು. ಇತ್ತೀಚೆಗೆ ಕಪ್‌ಗಳು ಬಂದಿದ್ದು, ಇದು ಪ್ಯಾಡ್‌ಗಳಿಗಿಂತ ಅನುಕೂಲಕರವಾಗಿದೆ. ಮುಟ್ಟಿನ ಅವಧಿ ಮುಗಿಯುವವರೆಗೆ ಸಾಕಷ್ಟು ಬಾರಿ ಸೋಪು ಮತ್ತು ನೀರನ್ನು ಬಳಸಿ.

ಜೊತೆ ಕೊಡುವುದು
ಈ ಸಂದರ್ಭದಲ್ಲಿ ಹುಡುಗಿಯರ ಜೊತೆ ಅವರ ತಾಯಿ ಅಥವಾ ಮನೆಯ ಹಿರಿಯ ಹೆಣ್ಣುಮಕ್ಕಳು ಇರುವುದು ಅಗತ್ಯ. ಇದು ಒಂದು ಸಾಮಾನ್ಯ ಸಂಗತಿಯೆಂದೂ, ಇದನ್ನು ಹೇಗೆ ನಿರ್ವಹಿಸಬಹುದು ಎಂದೂ ಧೈರ್ಯವನ್ನೂ ಜ್ಞಾನವನ್ನೂ ಅವರಲ್ಲಿ ತುಂಬಬೇಕು. ಒಳ್ಳೆಯ ಆಹಾರ ನೀಡಬೇಕು. ಋತುಸ್ರಾವದ ಬಗ್ಗೆ ಚರ್ಚೆ ಮಾಡಬೇಕು. ಮನೆಯ ಗಂಡಸರೂ ಇದರಲ್ಲಿ ಪಾಲ್ಗೊಂಡು ಮುಕ್ತ ಚರ್ಚೆ ಮಾಡುವಂತಿದ್ದರೆ ಚೆನ್ನಾಗಿರುತ್ತದೆ. ಹಿಂದಿನಿಂದ ಆಚರಿಸಿಕೊಂಡು ಬಂದ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಬಿಟ್ಟು ಬಿಡುವುದು ಒಳ್ಳೆಯದು.

ಹೆಣ್ಣು ಮಗುವಿನ ತಂದೆ ಕೂಡ ಮಗಳು ಮುಟ್ಟಾದಳೆಂದು, ದೊಡ್ಡವಳಾದಳು ಎಂದು ಆಕೆಯನ್ನು ದೂರವಿಡುವುದು ಸಲ್ಲದು. ಆಕೆಯ ಜೊತೆಗೆ ಮೊದಲಿನಂತೆಯೇ ಪ್ರೀತಿಯಿಂದ ವ್ಯವಹರಿಸಿ, ಏನೂ ಬದಲಾಗಿಲ್ಲ ಎಂಬಂತೆ ಇರಬೇಕು. ಇದು ಹೆಣ್ಣು ಮಗುವಿನ ಮನಸ್ಸಿನಲ್ಲಿ ಧೈರ್ಯ ತುಂಬುತ್ತದೆ.

Egg a Day: ಮಧುಮೇಹಕ್ಕೆ ನೀಡುತ್ತಾ ಆಹ್ವಾನ ?

Latest Videos
Follow Us:
Download App:
  • android
  • ios