ಹಾರ್ಟ್‌ ಅಟ್ಯಾಕ್‌ ಪ್ರಮಾಣ ಕಳೆದ 10 ವರ್ಷಗಳಲ್ಲಿ ಶೇ.22 ಹೆಚ್ಚಳ: ಡಾ. ಸಿ.ಎನ್. ಮಂಜುನಾಥ್‌

ನಮ್ಮ ರಾಜ್ಯದಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ಹಾರ್ಟ್‌ ಅಟ್ಯಾಕ್‌ಗೆ ಒಳಗಾಗುವವರ ಸಂಖ್ಯೆ ಶೇ.22 ಹೆಚ್ಚಳವಾಗಿದೆ ಎಂದು ಡಾ.ಸಿ.ಎನ್.ಮಂಜುನಾಥ್ ಹೇಳಿದರು.

Karnataka Heart attack rate has increased by 22 percent in the last 10 years said Dr CN Manjunath

ಬೆಂಗಳೂರು (ಅ.31): ನಮ್ಮ ರಾಜ್ಯದಲ್ಲಿ 15 ವರ್ಷಗಳಿಂದ ಹೃದಯಾಘಾತ ಪ್ರಕರಣಗಳು ಹೆಚ್ಚಳಗೊಂಡಿದೆ. ಅದರಲ್ಲಿಯೂ ಕಳೆದ 10 ವರ್ಷಗಳ ಅವಧಿಯಲ್ಲಿ ಹಾರ್ಟ್‌ ಅಟ್ಯಾಕ್‌ಗೆ ಒಳಗಾಗುವವರ ಸಂಖ್ಯೆ ಶೇ.22 ಜಾಸ್ತಿ ಆಗಿದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಪುನೀತ್‌ ರಾಜ್‌ಕುಮಾರ್‌ ಹೃದಯಜ್ಯೋತಿ ಯೋಜನೆ ಕುರಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ನಿಂದ ಹಾರ್ಟ್ ಅಟ್ಯಾಕ್ ಆಗ್ತಿದೆ ಅಂತ ಹೇಳಲು ಸಾಧ್ಯವಿಲ್ಲ. ಕೋವಿಡ್ ಲಸಿಕೆಯಿಂದ ಹಾರ್ಟ್ ಅಟ್ಯಾಕ್ ಆಗಿಲ್ಲ ಅಂತ ಕೇಂದ್ರ ಸಚಿವರು ಕೂಡ ಹೇಳಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ 15 ವರ್ಷಗಳಿಂದ ಹೃದಯಾಘಾತ ಪ್ರಕರಣಗಳು ಹೆಚ್ಚಳಗೊಂಡಿದೆ. ಕೋವಿಡ್‌ ಬರುವುದಕ್ಕಿಂತ ಮುಂಚಿತವಾಗಿಯೂ, ಅಂದರೆ ಕಳೆದ 10 ವರ್ಷಗಳ ಅವಧಿಯಲ್ಲಿ ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆ ಶೇ.22 ಹೆಚ್ಚಳವಾಗಿದೆ ಎಂದು ಮಾಹಿತಿ ನೀಡಿದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಸರ್ಕಾರಿ ಶಾಲೆಗೆ ಭೂಮಿ ಕೊಟ್ಟ ಹುಚ್ಚಮ್ಮ ಸೇರಿ 68 ಮಂದಿ ಆಯ್ಕೆ

ನಮ್ಮ ದೇಶದಲ್ಲಿ ಈಗಾಗಲೇ ಶೇ. 90 ಪರ್ಸೆಂಟ್‌ ಜನರಿಗೆ ಕೋವಿಡ್ ಬಂದಿದೆ. ಚಿಕ್ಕ ವಯಸ್ಸಿನಲ್ಲಿರುವವರಿಗೆ ಕೋವಿಡ್ ಬಂದಿರೋದು ಹೊಸದೇನಲ್ಲ. ಕೋವಿಡ್ ಗೂ‌ ಮುನ್ನ ಚಿಕ್ಕ ವಯಸ್ಸಿನವರಿಗೆ ಹೃದಯಾಘಾತ ಆಗ್ತಿದೆ. ಯುವಜನರಿಗೆ ಹೃದಯಾಘಾತ ಸಂಭವಿಸುವ ಗುಂಪಿನಲ್ಲಿ (ಯಂಗ್ ಹಾರ್ಟ್ ಅಟ್ಯಾಕ್ ಗ್ರೂಪ್) ಶೇಕಡಾ 8 ರಷ್ಟು ಮಹಿಳೆಯರಿದ್ದಾರೆ. ಜೊತೆಗೆ, ಶೇ.25 ರೋಗಿಗಳಿಗೆ ನಿಖರವಾದ ಯಾವುದೇ ಇತರೆ ತೊಂದರೆಗಳು ಇರುವುದಿಲ್ಲ. ಆದರೂ ಹೃದಯಾಘಾತ ಸಮಸ್ಯೆಗಳು ಕಾಡುತ್ತಿವೆ ಎಂದು ತಿಳಿಸಿದರು.

ವಾಯುಮಾಲಿನ್ಯ ಕೂಡ ಹೃದಯಾಘಾತಕ್ಕೆ ಕಾರಣವಾಗಿದೆ. ಕಳೆದ ಒಂದೇ ವರ್ಷದಲ್ಲಿ ವಾಯುಮಾಲಿನ್ಯ ಸಮಸ್ಯೆಯಿಂದ 22 ಲಕ್ಷ ಜನ ಸಾವನ್ನಪ್ಪಿದ್ದಾರೆ. ಒತ್ತಡ ಕೂಡ ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಕಾರಣವಾಗುತ್ತಿದೆ. ವೈದ್ಯರ ಮೇಲೆ ಒತ್ತಡ ಹೆಚ್ಚಾಗ್ತಿರೋದ್ರಿಂದ ವೈದ್ಯರ ಆಯಸ್ಸು 10 ವರ್ಷ ಕಡಿಮೆ ಆಗ್ತಿದೆ. ಕೇರಳ ವೈದ್ಯರು ಈ ಬಗ್ಗೆ ಸರ್ವೆ ಮಾಡಿದ್ದಾರೆ. ಮತ್ತೊಂದೆಡೆ ಪ್ರೀ ಡಯಾಬಿಟಿಸ್ ಇದ್ದವರಿಗೂ ಹೃದಯಾಘಾತ ಆಗ್ತಿದೆ. ಪ್ರೀ ಡಯಾಬಿಟಿಸ್ ಇದ್ದವರಿಗೆ ಡಯಾಬಿಟಿಸ್ ಇದ್ದ ಹಾಗೆಯೇ ಲೆಕ್ಕ. ಧೂಮಪಾನ, ಅತಿಯಾದ ಮದ್ಯಪಾನ, ಸೋಮಾರಿತನ, ಒತ್ತಡ ಇವುಗಳು ಹೃದಯಾಘಾತಕ್ಕೆ ಪ್ರಮುಖ ಕಾರಣಗಳು ಎಂದು ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್‌ ತಿಳಿಸಿದರು.

ಬರಗಾಲದಿಂದ 33,770 ಕೋಟಿ ರೂ. ನಷ್ಟವಾಗಿದ್ರೂ, ಪರಿಹಾರ ಕೇಳದೇ 25 ಸಂಸದರು ಕಳ್ಳೆಕಾಯಿ ತಿನ್ನುತ್ತಿದ್ದಾರಾ? ಸಿಎಂ ಟೀಕೆ

ಕೇಂದ್ರ ಆರೋಗ್ಯ ಸಚಿವರ ಹೇಳಿಕೆಗೆ ಆಧಾರವೇನಿದೆ?: ಕೇಂದ್ರ ಆರೋಗ್ಯ ಸಚಿವರು, ಕೋವಿಡ್ ಬಂದವರು ಹೆಚ್ಚು ಶ್ರಮದ ಕೆಲಸ ಮಾಡಬಾರದು ಎಂದು ಯಾವ ಆಧಾರದ ಮೇಲೆ ಈ ಮಾತು ಹೇಳಿದ್ದಾರೋ ಗೊತ್ತಿಲ್ಲ. ಇದಕ್ಕೆ ಯಾವ ವೈಜ್ಞಾನಿಕ ಆಧಾರ ಇಲ್ಲ. ನನಗೂ ಕೋವಿಡ್ ಬಂದಿತ್ತು. ಕೋವಿಡ್ ಬಂದವರು ಶ್ರಮದ ಕೆಲಸ ಮಾಡಬಾರದು ಎಂಬುದಕ್ಕೆ ಯಾವುದೇ ಆಧಾರ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios