Asianet Suvarna News Asianet Suvarna News

ತೂಕ ಇಳಿಯುತ್ತೆ, ಕೊಬ್ಬು ಕರಗುತ್ತೆ ಅಂತ ಏನೋನೇ ತಿನ್ನೋ ಮುನ್ನ ಚಾಣಕ್ಯ ಹೇಳೋದ ಕೇಳಿ!

ಚಾಣಕ್ಯ ನೀತಿಯ 10ನೇ ಅಧ್ಯಾಯದಲ್ಲಿ ಅವರು ಯಾವ ರೀತಿಯ ಆಹಾರದಿಂದ ಎಷ್ಟು ಶಕ್ತಿಯನ್ನು ಪಡೆಯುತ್ತಾರೆ ಎಂದು ಹೇಳಿದ್ದಾರೆ. ಇದರಲ್ಲಿ ಧಾನ್ಯಕ್ಕಿಂತ 38 ಪಟ್ಟು ಶಕ್ತಿಯುತವಾದ ಆಹಾರದ ಬಗ್ಗೆ ಹೇಳಿದ್ದಾರೆ.

this is the best energy booster food according to Chanakya nihi bni
Author
First Published Oct 12, 2023, 10:38 AM IST

ಆಚಾರ್ಯ ಚಾಣಕ್ಯರು ಬಹುಶಃ ತಮ್ಮ ನೀತಿಶಾಸ್ತ್ರದಲ್ಲಿ (Chanakya Neethi) ಹೇಳದ ವಿಚಾರಗಳೇ ಇಲ್ಲ ಎನ್ನಬಹುದು. ಆದರೆ ಅವರು ಎಲ್ಲವನ್ನು ಶ್ಲೋಕ ಹಾಗೂ ಸೂತ್ರರೂಪದಲ್ಲಿ ಹೇಳಿದ್ದಾರೆ. ಅವರು ಹೇಳಿರುವ ಒಂದೊಂದು ಸೂತ್ರವನ್ನೂ ವಿಸ್ತರಿಸಿ ಒಂದು ಪುಸ್ತಕದಷ್ಟು ವಿಚಾರಗಳನ್ನು ಬರೆಯಬಹುದಾಗಿದೆ. ರಾಜ್ಯಭಾರದಿಂದ ಹಿಡಿದು ಕರ ವಸೂಲಿಯವರೆಗೆ, ಬೇಹುಗಾರಿಕೆಯಿಂದ ಹಿಡಿದು ಮಹಿಳೆಲೆಯರ ವರ್ತನೆಗಳ ವರೆಗೆ ಅವರು ತಿಳಿಸದ ವಿಷಯಗಳೇ ಇಲ್ಲ.

ಹಾಗೆ ಅವರು ತಿಳಿಸಿರುವ ವಿಚಾರಗಳಲ್ಲಿ ಆಹಾರದ ಬಗೆಗಿನದು ಕೂಡ ಒಂದು. ಉತ್ತಮ ಬುದ್ಧಿವಂತಿಕೆ, ಜಾಣ್ಮೆ, ರಾಜ್ಯಭಾರ ನಡೆಸುವ ತಾಕತ್ತುಗಳನ್ನು ಗಳಿಸಲು ರಾಜನು ಯಾವ ಆಹಾರವನ್ನು ಸೇವಿಸಬೇಕು? ಈ ವಿಚಾರವಾಗಿ ಚಾಣಕ್ಯ ನೀತಿ ಹೇಳುತ್ತದೆ. ಚಾಣಕ್ಯ ನೀತಿಯ 10ನೇ ಅಧ್ಯಾಯದಲ್ಲಿ ಅವರು ಯಾವ ರೀತಿಯ ಆಹಾರದಿಂದ ಎಷ್ಟು ಶಕ್ತಿಯನ್ನು ಪಡೆಯುತ್ತಾರೆ ಎಂದು ಹೇಳಿದ್ದಾರೆ. ಇದರಲ್ಲಿ ಮುಖ್ಯ ಶ್ಲೋಕವೆಂದರೆ ಕೆಳಗಿನದು. ಇದರಲ್ಲಿ ಪಿಷ್ಟ, ಹಾಲು, ಸಸ್ಯಾಹಾರ ಮತ್ತು ಮಾಂಸಾಹಾರಿ ಆಹಾರದಿಂದ ಪಡೆಯುವ ಶಕ್ತಿಗಳ ಬಗ್ಗೆ ಇದೆ. ಅದನ್ನು ತಿಳಿಯೋಣ.

ಶ್ಲೋಕ ಹೀಗಿದೆ.

ಅನ್ನಾದ್ದಶಗುಣಂ ಪಿಷ್ಟಂ ಪಿಷ್ಟಾದ್ದಶಗುಣಂ ಪಯಃ ।
ಪಾಯಸೋ ಅಷ್ಟಗುಣಂ ಮಾಂಸಂ ಮಾಂಸಾದ್ದಶಗುಣಂ ಘೃತಮ್ ।

ಶ್ಲೋಕದ ಅರ್ಥ ಹೀಗೆ: ʼಪಿಷ್ಟವು ಆಹಾರಗಳಲ್ಲಿ ಉತ್ತಮ. ಇದು ಇತರೆಲ್ಲವುಗಳಿಗಿಂತ ಹತ್ತು ಪಟ್ಟು ಶಕ್ತಿಯನ್ನು ನೀಡುತ್ತದೆ. ಪಿಷ್ಟಕ್ಕಿಂತ ಹತ್ತು ಪಟ್ಟು ಹೆಚ್ಚಿನ ಶಕ್ತಿಯನ್ನು ಹಾಲು (ಪಯ) ಹೊಂದಿದೆ. ಹಾಲಿಗಿಂತ ಎಂಟು ಪಟ್ಟು ಶಕ್ತಿಯನ್ನು ಮಾಂಸ ಹೊಂದಿರುತ್ತದೆ. ಮಾಂಸಕ್ಕಿಂತ ಹತ್ತು ಪಟ್ಟು ಹೆಚ್ಚಿನ ಶಕ್ತಿಯು ತುಪ್ಪದಲ್ಲಿದೆ.ʼ

ಆಚಾರ್ಯ ಚಾಣಕ್ಯರು ಈ ಶ್ಲೋಕದಲ್ಲಿ ಆಹಾರವು ಮಾನವನ ಜೀವನಕ್ಕೆ ಬಹಳ ಮುಖ್ಯವೆಂದು ಪರಿಗಣಿಸುತ್ತಾರೆ. ಅದರಲ್ಲೂ ಪಿಷ್ಟ. ಇತರ ಧಾನ್ಯಗಳಿಗಿಂತ ಪಿಷ್ಟ ಹತ್ತು ಪಟ್ಟು ಉತ್ತಮ ಎನ್ನುತ್ತಾರೆ. ಪಿಷ್ಟ ಎಂದರೆ ಕಾರ್ಬೋಹೈಡ್ರೇಟ್.‌ ಇದರಲ್ಲಿ ಇಡ್ಲಿ, ದೋಸೆ, ಅನ್ನ ಇತ್ಯಾದಿಗಳು ಬರುತ್ತವೆ. ಹಿಟ್ಟು ಎಲ್ಲಾ ಇತರ ಧಾನ್ಯಗಳಿಗಿಂತ 10 ಪಟ್ಟು ಹೆಚ್ಚು ಶಕ್ತಿಯನ್ನು ಹೊಂದಿದೆ. ರೊಟ್ಟಿ ಅಥವಾ ಅನ್ನ ಸೇವಿಸಿದ ವ್ಯಕ್ತಿಯು ದಿನವಿಡೀ ಶಕ್ತಿಯಿಂದ ತುಂಬಿರುತ್ತಾನೆ. ನಮ್ಮ ಜೀರ್ಣಾಂಗ ವ್ಯವಸ್ಥೆಯು ಅನ್ನವನ್ನು ಜೀರ್ಣಿಸಿಕೊಂಡು ಶಕ್ತಿ ಪಡೆಯುವುದಕ್ಕಾಗಿಯೇ ವಿನ್ಯಾಸಗೊಂಡಿದೆ. ಅದನ್ನು ಜೀರ್ಣಿಸಿಕೊಳ್ಳುವಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ.

ಹಾಲಿಗೆ ಹಿಟ್ಟಿಗಿಂತ 10 ಪಟ್ಟು ಹೆಚ್ಚು ಶಕ್ತಿಯಿದೆ ಎಂದು ಚಾಣಕ್ಯ ಹೇಳುತ್ತಾರೆ. ವೈದ್ಯರು ಕೂಡ ಇದೇ ಕಾರಣಕ್ಕೆ ಹಾಲಿನ ಸೇವನೆಯನ್ನು ಶಿಫಾರಸು ಮಾಡುತ್ತಾರೆ. ಪ್ರತಿದಿನ ನಿಗದಿತ ಪ್ರಮಾಣದ ಹಾಲು ಕುಡಿಯುವುದು ವ್ಯಕ್ತಿಯನ್ನು ಹಲವು ವಿಧದ ರೋಗಗಳಿಂದ ದೂರವಿಡುತ್ತದೆ. ಅದಲ್ಲದೆ, ಇದು ಸುಲಭವಾಗಿ ಜೀರ್ಣವಾಗುತ್ತದೆ. ಅದರಲ್ಲೂ ಗುಡ್ಡಬೆಟ್ಟದಲ್ಲಿ ಗಿಡಮೂಲಿಕೆ ಮೇಯ್ದು ಬರುವ ದೇಸಿ ಹಸುವಿನ ಹಾಲು ಉತ್ಕೃಷ್ಟವಾದುದು.

ನಗ್ ನಗ್ತಾನೇ ಮನೆ ನಾಶ ಮಾಡೋ ಇಂಥ ಮಹಿಳೆಯರ ಬಗ್ಗೆ ಹುಷಾರು ಅಂತಾನೆ ಚಾಣಕ್ಯ

ಮಾಂಸವು ಹಾಲಿಗಿಂತ ಹೆಚ್ಚಿನ ಶಕ್ತಿಯನ್ನು ಹೊಂದಿದೆ. ಚಾಣಕ್ಯನ ಪ್ರಕಾರ ಹಾಲಿಗಿಂತ ಎಂಟು ಪಟ್ಟು ಹೆಚ್ಚು ಶಕ್ತಿಯಿದೆ ಮಾಂಸದಲ್ಲಿ. ಮಾಂಸದಲ್ಲಿ ಸಿಗುವ ಪ್ರೊಟೀನ್‌ ಹಾಗೂ ಇತರ ಪೋಷಕಾಂಶಗಳು ಪಿಷ್ಟದಲ್ಲಿ ಸಿಗುವುದಿಲ್ಲ. ಇದು ರಜೋದಾಯಕ ಗುಣವುಳ್ಳದ್ದಾದುದರಿಂದ ಕಷ್ಟದ ಕೆಲಸಗಳನ್ನು ನಿರ್ವಹಿಸಲು ಶಕ್ತಿ ಹಾಗೂ ದೃಢಚಿತ್ತ ಕೊಡುತ್ತದೆ.

ಆದರೂ ಚಾಣಕ್ಯನು ಮಾಂಸಾಹಾರಕ್ಕಿಂತ ಶಕ್ತಿಯುತವಾದದ್ದನ್ನು ಉಲ್ಲೇಖಿಸುತ್ತಾನೆ. ಯಾವುದು ಗೊತ್ತೆ? ಮಾಂಸಾಹಾರಕ್ಕಿಂತ ತುಪ್ಪ 10 ಪಟ್ಟು ಹೆಚ್ಚು ಶಕ್ತಿಯನ್ನು ಹೊಂದಿದೆ ಎನ್ನುತ್ತಾನೆ. ತುಪ್ಪ ಹೆಚ್ಚಿನ ಶಕ್ತಿಯನ್ನು ದೇಹಕ್ಕೆ ನೀಡುತ್ತದಂತೆ. ಇದನ್ನು ಸೇವಿಸುವ ಮೂಲಕ ವ್ಯಕ್ತಿಯ ಮುಖವು ಆರೋಗ್ಯಕರ ಕಳೆಯಿಂದ ನಳನಳಿಸುತ್ತದೆ, ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ತುಪ್ಪವು ದೈಹಿಕ ಆರೋಗ್ಯ ನೀಡುವುದಕ್ಕಿಂತಲೂ ಹೆಚ್ಚಾಗಿ ಮಾನಸಿಕ ಶಕ್ತಿ, ಸ್ಪಷ್ಟತೆ, ದೃಢಚಿತ್ತತೆ, ಬುದ್ಧಿಶಕ್ತಿ, ವಿವೇಕ ಇತ್ಯಾದಿಗಳನ್ನು ನೀಡುತ್ತದೆ. ಹೀಗಾಗಿ ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿರುವವರು ಆಹಾರದಲ್ಲಿ ತುಪ್ಪವನ್ನು ಅಳವಡಿಸಿಕೊಂಡಿರವುದನ್ನು ನೀವು ನೋಡಬಹುದು. ಇದು ಸಾಕಷ್ಟು ರೋಗನಿರೋಧಕ ಶಕ್ತಿಯನ್ನು ದೇಹಕ್ಕೆ ಒದಗಿಸಿ ದೀರ್ಘಾವಧಿಯಲ್ಲಿ ರೋಗಗಳನ್ನು ತಪ್ಪಿಸುತ್ತದೆ.

ಅಂದರೆ, ಸಾಮಾನ್ಯ ಆಹಾರಕ್ಕಿಂತ ತುಪ್ಪವು 38 ಪಟ್ಟು ಹೆಚ್ಚಿನ ಶಕ್ತಿಯನ್ನು ನೀಡುತ್ತದೆ ಎಂದಾಯಿತು. ಹೇಗೆ ಎಂದು ನೀವೇ ಮೇಲಿನ ಶ್ಲೋಕದಿಂದ ಲೆಕ್ಕ ಹಾಕಿಕೊಳ್ಳಿ. ಆಯುರ್ವೇದ ವೈದ್ಯರು ತುಪ್ಪವನ್ನು ಯಾಕೆ ಶಿಫಾರಸು ಮಾಡುತ್ತಾರೆ ಎಂದು ಈಗ ಗೊತ್ತಾಯಿತೆ? 

ವೃತ್ತಿಜೀವನದಲ್ಲಿ ಉತ್ತುಂಗಕ್ಕೇರಲು ಚಾಣಕ್ಯ ನೀಡಿದ ಸಲಹೆ ಏನು ಗೋತ್ತಾ..?
 

Follow Us:
Download App:
  • android
  • ios