ಚಳಿ ಬಂತೆಂದರೆ 'ಆ' ಜಾಗದಲ್ಲಿ ಸಿಕ್ಕಾಪಟ್ಟೆ ತುರಿಕೆ ಕಾಮನ್, ಏನ್ ಮಾಡಬಹುದು?
ಚಳಿ ಜೊತೆಗೆ ಒಣ ಹವೆಯೂ ಹೆಚ್ಚಾಗಿ ಮೈ ಕೈ ತುರಿಕೆ ಕಾಮನ್ ಆಗಿದೆ. ಗುಪ್ತಾಂಗದ ತುರಿಕೆಯೂ ಈ ವಾತಾವರಣದಲ್ಲಿ ಸಾಮಾನ್ಯ. ಅದು ಯಾಕೆ? ಇದಕ್ಕೆ ಏನು ಪರಿಹಾರ?
ತೀಕ್ಷ್ಣವಾದ ಚಳಿ ಸದ್ಯದ ಬೆಂಗಳೂರಿನ ಹವಾಮಾನ. ರಾಜ್ಯದ ವಿವಿಧ ಕಡೆ ಇದೇ ಹವಾಮಾನ ಇದೆ. ವಾತಾವರಣದಲ್ಲಿರೋ ತೇವಾಂಶ ಕಡಿಮೆ ಆಗಿದೆ. ಒಣ ಹವೆ ಇದೆ. ಇದರ ಪರಿಣಾಮ ಅಂದರೆ ತುರಿಕೆ. ಮೈ ಎಲ್ಲ ತುರಿಸುತ್ತೆ. ಆದರೆ ಪಬ್ಲಿಕ್‌ನಲ್ಲಿ ತುರಿಸೋದಕ್ಕೆ ಮುಜುಗರ. ಎಷ್ಟೇ ಕೋಲ್ಡ್ ಕ್ರೀಂ, ಮಾಯಿಶ್ಚರೈಸರ್ ಹಚ್ಚಿದ್ರೂ ಸಂಜೆ ಕಳೆಯುತ್ತಿದ್ದ ಹಾಗೆ ಸ್ಕಿನ್ ಡ್ರೈ ಆಗುತ್ತೆ. ಈ ಹವೆಯಲ್ಲಿ ಗುಪ್ತಾಂಗದಲ್ಲಿ ತುರಿಕೆ ಸಹ ಸಾಮಾನ್ಯ. ಜೊತೆಗೆ ಕೆಲವು ಸಮಸ್ಯೆಗಳೂ ಇದಕ್ಕೆ ಜೊತೆಗೂಡಬಹುದು.
ಪುರುಷರಿಗೆ ಗುಪ್ತಾಂಗದ ಜಾಗದಲ್ಲಿ ಡ್ರೈ ನೆಸ್ ಫೀಲ್ ಆಗಬಹುದು. ಚರ್ಮ ಒಡೆದ ಹಾಗಾಗಿ ತುರಿಕೆ ಕಾಣಿಸಿಕೊಳ್ಳಬಹುದು. ಇದಲ್ಲದೇ ಬ್ಯಾಕ್ಟೀರಿಯ ಅಥವಾ ಫಂಗಸ್ ಸೋಂಕು ಉಂಟಾಗುವುದು ಸಹಜ. ಚಳಿಯ ಜೊತೆಗೆ ಸ್ವಚ್ಛತೆ ಕಾಯ್ದು ಕೊಳ್ಳದಿದ್ದರೆ ಈ ರೀತಿ ಆಗುತ್ತದೆ. ಈ ಸಂದರ್ಭದಲ್ಲಿ ಪುರುಷರ ಜನನಾಂಗ ಕೆರೆತ ಉಂಟಾಗುತ್ತದೆ. ಜನನಾಂಗದ ಜಾಗವನ್ನು ಸರಿಯಾಗಿ ಒರೆಸಿಕೊಳ್ಳದಿದ್ದರೆ ಅಥವಾ ಆ ಭಾಗದಲ್ಲಿ ತೇವಾಂಶ ಸಹಜವಾಗಿ ಇರುವ ಕಾರಣ ಜೊತೆಗೆ ಬೆಚ್ಚಗೆ ಇರುವ ಕಾರಣ ಇದು ಸೋಂಕುಗಳಿಗೆ ಪೂರಕವಾಗಿರುತ್ತದೆ.ಇದನ್ನು ಹಾಗೆ ಬಿಟ್ಟರೆ ತೊಡೆಯ ಭಾಗದವರೆಗೆ ಕೂಡ ಹರಡುತ್ತದೆ. ಇನ್ನೊಂದು ವಿಚಾರ ಎಂದರೆ ಶಿಶ್ನದ ಭಾಗದಲ್ಲಿ ಇರುವ ಚರ್ಮದಲ್ಲಿ ಈ ರೀತಿ ಆದರೆ ಅದರಿಂದ ಲೈಂಗಿಕವಾಗಿ ಹರಡುವ ಕಾಯಿಲೆಗಳು ಕಂಡುಬರುವ ಸಾಧ್ಯತೆ ಇರುತ್ತದೆ. ಇದು ಆನಂತರ ಸಾಕಷ್ಟು ತೊಂದರೆ ಉಂಟು ಮಾಡಬಲ್ಲದು.
ಜೆಎನ್.1 ವೈರಸ್ ಹಾವಳಿ ಹೆಚ್ಚಳ, 1000 ಗಡಿ ದಾಟಿದ ಸೋಂಕಿತರ ಸಂಖ್ಯೆ; ದೇಶದಲ್ಲೇ ಕರ್ನಾಟಕ ನಂ.1
ಕ್ರಮೇಣವಾಗಿ ಈ ಸಮಸ್ಯೆ ಹೆಚ್ಚಾದಂತೆ ಅದರಿಂದ ಊತ, ನೋವು, ಉರಿ ಮೂತ್ರ, ಶಿಶ್ನದಿಂದ ಡಿಸ್ಚಾರ್ಜ್, ಚರ್ಮದ ಸಿಪ್ಪೆ ಸುಲಿದುಕೊಳ್ಳುವಿಕೆ, ಒಣ ಚರ್ಮ (dry skin), ಶಿಶ್ನದ ಭಾಗದ ಚರ್ಮ ಕೆಂಪಾಗುವುದು ಮತ್ತು ಉರಿ ಕಾಣುವುದು ಆಗುತ್ತದೆ. ಹೀಗಾಗಿ ತಕ್ಷಣವೇ ಡಾಕ್ಟರ್ ಬಳಿ ತೋರಿಸಿಕೊಂಡು ಇದಕ್ಕೆ ಸೂಕ್ತವಾದ ಚಿಕಿತ್ಸೆ (treatment) ತೆಗೆದುಕೊಳ್ಳುವುದು ಒಳ್ಳೆಯದು.
ನಿಮಗಾದ ಸಮಸ್ಯೆ ಏನು ಅಂತ ಮೊದಲು ಅರಿತುಕೊಳ್ಳಿ. ಚರ್ಮ ಒಣಗಿದಂಗಾಗಿ ತುರಿಕೆ ಕಾಣಿಸಿಕೊಂಡರೆ ಆ ಜಾಗವನ್ನು ದಿನಕ್ಕೆ ಮೂರು ಬಾರಿ ಚೆನ್ನಾಗಿ ತೊಳೆದು ಒಣಗಿರುವ ಬಟ್ಟೆಯಿಂದ ತೇವಾಂಶ ಉಳಿಯದಂತೆ ಒರೆಸಿ ಮಾಯಿಶ್ಚರೈಸರ್ ಹಚ್ಚುತ್ತಿರಿ. ಉಪ್ಪು ನೀರಿಂದ (salt water) ತೊಳೆದರೆ ಆ ಜಾಗದಲ್ಲಿ ಬ್ಯಾಕ್ಟೀರಿಯಾ ಇನ್‌ಫೆಕ್ಷನ್ ಆಗಿದ್ದರೆ ಕಡಿಮೆ ಆಗುತ್ತೆ.
ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಹಾಕಿ ಅದರಲ್ಲಿ ನಿಮ್ಮ ಶಿಶ್ನವನ್ನು ಸ್ವಲ್ಪ ಹೊತ್ತು ಇರಿಸಿ. ಇದರಿಂದ ಶಿಶ್ನದ ಕೆರೆತ ಮತ್ತು ಶಿಶ್ನದ ಭಾಗದ ಚರ್ಮದ ಉರಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
ಆಪಲ್ ಸಿಡರ್ ವಿನೆಗರ್ ಬಳಸುವುದು ಸೂಕ್ತ. ಸ್ವಲ್ಪ ಆಪಲ್ ಸೈಡರ್ ವಿನೆಗರ್ ತೆಗೆದುಕೊಂಡು ಅದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಅದರಿಂದ ನಿಮ್ಮ ಶಿಶ್ನವನ್ನು ಸ್ವಚ್ಛ ಮಾಡಿಕೊಳ್ಳಿ. ಇದರಿಂದ ನಿಮಗೆ ಶೀಘ್ರವೇ ಪರಿಹಾರ ಸಿಗುತ್ತದೆ.
ಪುರುಷರು ಹಾಗೂ ಮಹಿಳೆಯರಲ್ಲಿ ಫಲವತ್ತತೆ ಹೆಚ್ಚಿಸುತ್ತೆ ಈ ಕೆಂಪು ಹಣ್ಣು
ಶುದ್ಧ ತೆಂಗಿನ ಎಣ್ಣೆಯನ್ನು ಸೋಂಕು ಹೊಂದಿದ ಜಾಗಕ್ಕೆ ಹಚ್ಚಿದರೆ ಬಹಳ ಬೇಗನೆ ಇದರಿಂದ ಮುಕ್ತಿ ಪಡೆಯಬಹುದು.
ಈ ಸಮಯದಲ್ಲಿ ಮಹಿಳೆಯರಿಗೆ ಜನನಾಂಗದಲ್ಲಿ ಎದುರಾಗುವ ತುರಿಕೆಯನ್ನು (Itching) ಹೋಗಲಾಡಿಸಲು ಕೋಲ್ಡ್ ಕ್ರೀಂ, ಮಾಯಿಶ್ಚರೈಸರ್, ತೆಂಗಿನೆಣ್ಣೆ ಇತ್ಯಾದಿ ಸಹಕಾರಿ. ಜೊತೆಗೆ ಅಡುಗೆ ಸೋಡಾ ಬೆರೆತಿರುವ ನೀರಿನಿಂದ ಸ್ನಾನ ಮಾಡಿಕೊಂಡಾಗ ವಿಶೇಷವಾಗಿ ಶಿಲೀಂಧ್ರದ ಸೋಂಕು ಎದುರಾಗಿ ಉಂಟಾಗಿದ್ದ ತುರಿಕೆ ಇಲ್ಲವಾಗುತ್ತದೆ. ಸೇಬಿನ ಶಿರ್ಕಾ ಬೆರೆಸಿದ ನೀರಿನಿಂದಲೂ ಸ್ನಾನ ಮಾಡಿಕೊಳ್ಳಬಹುದು.