MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಬ್ಯೂಟಿ ಪಾರ್ಲರ್ ಸಿಂಡ್ರೋಮ್ ಅಂದ್ರೇನು? ಸಣ್ಣ ತಪ್ಪು ಅನಾರೋಗ್ಯಕ್ಕೆ ಹೇಗೆ ಆಗಬಹುದು ಕಾರಣ?

ಬ್ಯೂಟಿ ಪಾರ್ಲರ್ ಸಿಂಡ್ರೋಮ್ ಅಂದ್ರೇನು? ಸಣ್ಣ ತಪ್ಪು ಅನಾರೋಗ್ಯಕ್ಕೆ ಹೇಗೆ ಆಗಬಹುದು ಕಾರಣ?

ಬ್ಯೂಟಿ ಪಾರ್ಲರ್ ನ ಒಂದು ಸಣ್ಣ ತಪ್ಪು ನಿಮ್ಮನ್ನು ಈ ಅಪಾಯಕಾರಿ ಸಿಂಡ್ರೋಮ್ ಗೆ ಬಲಿಯಾಗುವಂತೆ ಮಾಡಬಹುದು. ಬ್ಯೂಟಿ ಪಾರ್ಲರ್ ಗೆ ತೆರಳಿ ಫೇಶಿಯಲ್,ಹೇರ್ ವಾಶ್ ಮಾಡೋರಿಗೆ ಅಪಾಯ ಹೆಚ್ಚು. ಹಾಗಾಗಿ ಇನ್ನು ಮುಂದೆ ಪಾರ್ಲರ್ ಗೆ ಹೋದಾಗ ಜಾಗರೂಕರಾಗಿರಿ.  

3 Min read
Suvarna News
Published : Jan 19 2024, 04:33 PM IST
Share this Photo Gallery
  • FB
  • TW
  • Linkdin
  • Whatsapp
110

ಚೆನ್ನಾಗಿ ಕಾಣಿಸಬೇಕೆಂದು ಪಾರ್ಲರ್ ಗೆ ಹೋಗ್ತಾರೆ. ಆದ್ರೆ ಅಲ್ಲಿಯೇ ಜೀವಕ್ಕೆ ಅಪಾಯ ಬಂದ್ರೆ ಏನು ಮಾಡೋದು? ಇತ್ತೀಚಿನ ದಿನಗಳಲ್ಲಿ ಬ್ಯೂಟಿ ಪಾರ್ಲರ್ ಗೆ ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ, ಇದರಿಂದಾಗುವ ಅನಾಹುತವೂ ಹೆಚ್ಚಾಗಿದೆ. ಅಂದ್ರೆ ಪಾರ್ಲರ್ ಸ್ಟ್ರೋಕ್ ಸಿಂಡ್ರಮ್ ಗೆ (parlour stroke syndrome) ಒಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
 

210

ಕಳೆದ ವರ್ಷ ಕರ್ನಾಟಕ, ಹೈದರಾಬಾದ್, ಮುಂಬೈ ಮತ್ತು ದೆಹಲಿ ಮೊದಲಾದೆಡೆ ಬ್ಯೂಟಿ ಪಾರ್ಲರ್ ಗಳಿಗೆ ಸಂಬಂಧಿಸಿದ ಅನೇಕ ಘಟನೆಗಳು ನಡೆದಿದ್ದು, ಇದರಲ್ಲಿ ಹೆಚ್ಚಿನ  ಮಹಿಳೆಯರು ಆಸ್ಪತ್ರೆಗೆ ದಾಖಲಾಗಬೇಕಾಗಿ ಬಂದಿತ್ತು. ಸಮೀಕ್ಷೆ ಪ್ರಕಾರ, ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಮಹಿಳೆಯರು ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್ ಗೆ ಬಲಿಯಾಗುತ್ತಾರೆ. ಬ್ಯೂಟಿ ಪಾರ್ಲರ್ ಸಿಂಡ್ರೋಮ್ ಎಂದರೇನು, ತಪ್ಪಿಸುವುದು ಹೇಗೆ ಅನ್ನೋದನ್ನು ತಿಳಿಯೋಣ. 
 

310

ಕಳೆದ ವರ್ಷ ನವೆಂಬರ್ನಲ್ಲಿ ಹೈದರಾಬಾದ್‌ನಲ್ಲಿ ಮಹಿಳೆಯೊಬ್ಬರು ಬ್ಯೂಟಿ ಪಾರ್ಲರ್ ನಲ್ಲಿ (beauty parlour) ಹೇರ್ ವಾಶ್ ಮಾಡೋವಾಗ ಅವರಿಗೆ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್ ಆಗಿತ್ತು.  ಆ ಸಂದರ್ಭದಲ್ಲಿ ಅವರಿಗೆ ತಲೆತಿರುಗುವಿಕೆ, ತಲೆನೋವು ಮತ್ತು ದೃಷ್ಟಿ ಮಸುಕಾಗಿತ್ತಂತೆ.  ಪರಿಸ್ಥಿತಿ ಹದಗೆಟ್ಟಾಗ, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಮತ್ತೊಂದು ಪ್ರಕರಣದಲ್ಲಿ, ದೆಹಲಿಯ ಗ್ರೀನ್ ಪಾರ್ಕಿನಲ್ಲಿಫೇಸ್ ಮಸಾಜ್ ಮಾಡೋವಾಗ ಮಹಿಳೆಯ ಕುತ್ತಿಗೆಯ ರಕ್ತನಾಳವನ್ನು ಗಟ್ಟಿಯಾಗಿ ಒತ್ತಿದ್ದರಂತೆ, ಇದರಿಂದ ಅವರಿಗೆ ಸಮಸ್ಯೆ ಉಂಟಾಗಿ ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ಫಿಸಿಯೋಥೆರಪಿ ನೀಡಲಾಯಿತು.
 

410

ನಮ್ಮ ಕರ್ನಾಟಕದಲ್ಲೂ, ಪಾರ್ಲರ್‌ನಿಂದಾಗಿ ಮದುವೆಗೆ ಸುಂದರವಾಗಿ ಕಾಣಬೇಕೆಂದು ಮೇಕಪ್ ಮಾಡಲು ಹೋದ ವಧುವಿನ ಮುಖಕ್ಕೆ ಗಂಭೀರ ಹಾನಿಯಾದ ಕಾರಣ ಮದುವೆಯೇ ನಿಂತು ಹೋದ ಘಟನೆ ನಡೆದಿತ್ತು. ಪರಿಸ್ಥಿತಿ ಹೇಗಿತ್ತೆಂದರೆ ವಧುವನ್ನು ಐಸಿಯುಗೆ ದಾಖಲಿಸಬೇಕಾಯಿತು. ಇಂತಹುದೇ ಇನ್ನೊಂದು ಪ್ರಕರಣ ಮುಂಬೈನ ಅಂಧೇರಿಯಲ್ಲೂ ನಡೆದಿತ್ತು, ಮುಖದ ಮಸಾಜ್ ಮಾಡಲು, ಮಹಿಳೆ ಪಾರ್ಲರ್ ಗೆ ದೊಡ್ಡ ಮೊತ್ತವನ್ನೆ ನೀಡಿದ್ದರು, ಆದರೆ ಮಸಾಜ್ ಮಾಡಿ ಮಹಿಳೆಯ ಮುಖವೇ ಸುಟ್ಟು ಹೋಗಿತ್ತು. ಮಹಿಳೆಯ ಪರಿಸ್ಥಿತಿ ಗಂಭೀರವಾದ ಬಳಿಕ ಮಹಿಳೆ ಸಲೂನ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇನ್ನು, ನೆದರ್ಲ್ಯಾಂಡ್ಸ್ನಲ್ಲಿ 43 ವರ್ಷದ ಮಹಿಳೆಯೊಬ್ಬರು ಪೆಡಿಕ್ಯೂರ್ ಮಾಡಿಕೊಳ್ಳುವಾಗ ಪ್ಯೂಮಿಸ್ ಕಲ್ಲು ಕಾಲಿನ ಭಾಗವನ್ನು ಕತ್ತರಿಸಿತ್ತು, ಇದು ನಂತರ ಇನ್ ಫೆಕ್ಷನ್ ಆಗಿ ಕೊನೆಗೆ ಮಹಿಳೆ ಸಾವನ್ನಪ್ಪಿದ್ದರು. ಹೀಗೆ ಹತ್ತು ಹಲವು ಘಟನೆಗಳಲ್ಲಿ ಪಾರ್ಲರ್ ನಿಂದಾಗಿಯೇ ಮಹಿಳೆಯ ಜೀವಕ್ಕೆ ಅಪಾಯ ಒಡ್ಡಿತ್ತು. 

510

ಬ್ಯೂಟಿ ಪಾರ್ಲರ್ ಸಿಂಡ್ರೋಮ್ ಎಂದರೇನು?
ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್ ಎಂಬ ಪದವನ್ನು ಮೊದಲು 1993 ರಲ್ಲಿ ಜರ್ನಲ್ ಆಫ್ ದಿ ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ ನಲ್ಲಿ ಉಲ್ಲೇಖಿಸಲಾಯಿತು. ಹೇರ್ ಸಲೂನ್‌ನಲ್ಲಿ ಶಾಂಪೂ ಸೆಷಸ್‌ಗಳ ನಂತರ ಪಾರ್ಶ್ವವಾಯುವಿನಂತಹ ನರವೈಜ್ಞಾನಿಕ ರೋಗಲಕ್ಷಣಗಳನ್ನು ಹೊಂದಿದ ಐದು ಮಹಿಳೆಯರನ್ನು ಅಧ್ಯಯನ ಮಾಡಿದ ನಂತರ ಈ ಪದವನ್ನು ಬಳಸಲಾಯಿತು. ತಲೆತಿರುಗುವಿಕೆ, ನಿಂತುಕೊಳ್ಳಲು ಕಷ್ಟವಾಗೋದು ಮತ್ತು ಮುಖದಲ್ಲಿ ಮರಗಟ್ಟುವಿಕೆಯ ಅನುಭವ ಎಲ್ಲವೂ ಈ ಸಮಸ್ಯೆಯಲ್ಲಿ ಕಂಡು ಬರುತ್ತೆ. 

610

ವೈದ್ಯರು ಹೇಳುವಂತೆ ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್ ಸಂಭವಿಸಲು ಮುಖ್ಯ ಕಾರಣ ರಕ್ತನಾಳವನ್ನು ನಿಗ್ರಹಿಸುವುದು. ಹೈದರಾಬಾದ್ ನಲ್ಲಿ ನಡೆದ ಪ್ರಕರಣದಲ್ಲಿ, ಕೂದಲನ್ನು ತೊಳೆಯುವಾಗ ಕುತ್ತಿಗೆಯ (pressure on neck) ಮೇಲೆ ಹೆಚ್ಚು ಒತ್ತಡ ಬಿತ್ತು ಮತ್ತು ಸಿಂಕಿನಲ್ಲಿ ಕುತ್ತಿಗೆಗೆ ಸರಿಯಾದ ಬೆಂಬಲ ಸಿಗದಿದ್ದುದರಿಂದ ಮಹಿಳೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ರಕ್ತನಾಳದ ಮೇಲೆ ಪ್ರೆಶರ್ ಬಿದ್ದಾಗ ಸ್ಟ್ರೋಕ್ ಆಗೋದು ಖಚಿತ. 
 

710

ದೇಹದ ಯಾವುದೇ ರಕ್ತನಾಳ ಇರಲಿ ಅದನ್ನು ಒತ್ತಿದಾಗ, ಮೆದುಳಿಗೆ ರಕ್ತ ಪೂರೈಕೆ ಸರಿಯಾಗಿ ಆಗೋದಿಲ್ಲ, ಮೆದುಳಿಗೆ ಸರಿಯಾಗಿ ರಕ್ತ ಸಿಗದೇ ಇದ್ದಾಗ ಸ್ಟ್ರೋಕ್ ಉಂಟಾಗುತ್ತೆ. ತಲೆತಿರುಗುವಿಕೆ, ತೀವ್ರ ತಲೆನೋವು (heavy headache), ಮಸುಕಾದ ದೃಷ್ಟಿ, ದೇಹದ ಯಾವುದೇ ಭಾಗದಲ್ಲಿ ಮರಗಟ್ಟುವಿಕೆಯಂತಹ ರೋಗಲಕ್ಷಣಗಳು ಕಾಣಿಸಿಕೊಂಡರೆ, ತಕ್ಷಣ ಆಸ್ಪತ್ರೆಗೆ ದಾಖಲಿಸುವುದು ಅವಶ್ಯಕ. ಪಾರ್ಲರ್ ನಲ್ಲಿ ಇದ್ದವರೆಲ್ಲಾ ಸರಿಯಾಗಿ ಮಸಾಜ್ ಮಾಡಲು ತಿಳಿದೋರು ಅಲ್ಲ, ಹಾಗಾಗಿ, ಅವರಿಂದ ಮಸಾಜ್ ಪಡೆಯಲು ಹೋಗಿ ಅಪಾಯಕ್ಕೆ ಸಿಕ್ಕಿ ಹಾಕಿಕೊಳ್ಳೋರ ಸಂಖ್ಯೆ ಹೆಚ್ಚಿದೆ. 

810

ಪಾರ್ಲರ್ ಮೂಲಕ ಸೋಂಕು ಮನೆಗೆ ತಲುಪಬಹುದು
ಬ್ಯೂಟಿ ಸಲೂನ್ ಉಪಕರಣಗಳು ಮತ್ತು ಬ್ಯೂಟಿ ಪ್ರಾಡಕ್ಟ್ ಗಳಿಂದ (beauty product) ಉಂಟಾಗುವ ಸೋಂಕುಗಳು ಆರೋಗ್ಯಕ್ಕೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂದು ಅನೇಕ ಸಂಶೋಧನೆಗಳು ತಿಳಿಸಿವೆ. ಸಮೀಕ್ಷೆಯ ಪ್ರಕಾರ, ಮೊಡವೆಗಳು, ದದ್ದು, ಶುಷ್ಕತೆ, ಸೋಂಕು ಇತ್ಯಾದಿಗಳು ಪಾರ್ಲರ್ ಮೂಲಕ ಮನೆಗೆ ಬರುವ ಕೆಲವು ಸಾಮಾನ್ಯ ಸೋಂಕುಗಳು. ಫೇಶಿಯಲ್, ವ್ಯಾಕ್ಸಿಂಗ್, ಥ್ರೆಡಿಂಗ್ ಮತ್ತು ಮಸಾಜ್ ನಂತರ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಇದು ಬ್ಯಾಕ್ಟೀರಿಯಾದ ಸೋಂಕು. ಸ್ಟೀಮ್, ಫೇಸ್ ಪ್ಯಾಕ್ ಅಥವಾ ಬ್ಲೀಚ್ ನ ಅತಿಯಾದ ಬಳಕೆಯು ಚರ್ಮದಿಂದ ತೇವಾಂಶ ಕಡಿಮೆ ಮಾಡುತ್ತದೆ, ಇದು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳಿಗೆ ಕಾರಣವಾಗುತ್ತದೆ.

910

ಹೇರ್ ವಾಶ್ ನಿಂದ ಹಿಡಿದು ಮಸಾಜ್ ವರೆಗೆ ಮಹಿಳೆಯರು ಜಾಗರೂಕರಾಗಿರಬೇಕು
ಸಲೂನ್ ನಲ್ಲಿ ಹೇರ್ ವಾಶ್ (hair wash) ಅಥವಾ ಮಸಾಜ್ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು. ನಿಮ್ಮ ಕುತ್ತಿಗೆ ಆರಾಮ ಸ್ಥಿತಿಯಲ್ಲಿದೆಯೇ? ಅನ್ನೋದನ್ನು ಮೊದಲು ಪರಿಶೀಲಿಸಿ. ಕುತ್ತಿಗೆಗೆ ಹೆಚ್ಚು ಒತ್ತಡ (Pressure) ಬಿದ್ದರೆ, ಕೂಡಲೇ ಅದನ್ನು ತಿಳಿಸಿ. ತಲೆ ತೊಳೆಯುವಾಗ ಯಾವಾಗಲೂ ಉಗುರು ಬೆಚ್ಚಗಿನ ನೀರನ್ನು (Warm Water) ಸೇರಿಸಿ. ಈಗಾಗಲೇ ಆರೋಗ್ಯ ಸಮಸ್ಯೆ ಇದ್ದರೆ, ನೀವು ಹೆಚ್ಚು ಜಾಗರೂಕರಾಗಿರಬೇಕು.  ಪಾರ್ಲರ್ ಗೆ ಹೋದಾಗ, ಪಾರ್ಲರ್ ನವರು ಹೇಳಿದ್ದನ್ನೆಲ್ಲಾ ಮಾಡಿಸುವ ಮೊದಲು ಎಲ್ಲಾ ಸೂಕ್ಷ್ಮ ವಿಷಯಗಳನ್ನು ಗಮನಿಸೋದು ಮುಖ್ಯ. 
 

1010

ಕೆಲವು ಜನರ ಚರ್ಮ ಅಥವಾ ಕೂದಲು ತುಂಬಾ ಶುಷ್ಕವಾಗಿರುತ್ತದೆ, ಆದರೆ ಕೆಲವರದು ಆಯ್ಲಿ ಸ್ಕಿನ್ (oily Skin) ಆಗಿರುತ್ತೆ. ಅಂತಹ ಪರಿಸ್ಥಿತಿಯಲ್ಲಿ, ಮೊದಲು ಚರ್ಮದ ಕಂಡೀಶನ್ (Skin Condition) ಅರ್ಥಮಾಡಿಕೊಳ್ಳುವುದು ಮುಖ್ಯ. ಯಾವುದೇ ಬ್ಯೂಟಿ ಟ್ರೀಟ್ ಮೆಂಟ್ (Beauth Treatment) ತೆಗೆದುಕೊಳ್ಳುವ ಮೊದಲು ಪಾರ್ಲರ್ ಬಗ್ಗೆ ಮಾಹಿತಿ ಪಡೆಯುವುದು ಮುಖ್ಯ. ಅಲ್ಲದೆ, ಪಾರ್ಲರ್ ಅನ್ನು ಆಯ್ಕೆ ಮಾಡುವಾಗ ಸೌಲಭ್ಯಗಳು, ನೈರ್ಮಲ್ಯ, ಸಿಬ್ಬಂದಿ ಮತ್ತು ಸೌಂದರ್ಯ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ಪಡೆಯುವುದು ಮುಖ್ಯ.
 

About the Author

SN
Suvarna News
ಆರೋಗ್ಯ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved