Infosys Foundation; ನನಗೆ ಹೆರಿಗೆಯಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲೇ, ಇಂಥ ಕೆಲಸದಿಂದ ತೃಪ್ತಿ ಇದೆ

* ಜಯದೇವ ಹೃದ್ರೋಗ ಆಸ್ಪತ್ರೆಯ ಆವರಣದಲ್ಲಿ ಇನ್ಫೋಸಿಸ್‌ ಫೌಂಡೇಶನ್‌ ವತಿಯಿಂದ ನಿರ್ಮಾಣಗೊಂಡಿರುವ ನೂತನ ಕಟ್ಟಡ
* 350 ಬೆಡ್‌ಗಳ ಸೌಲಭ್ಯ ಹೊಂದಿರುವ ನೂತನ ಘಟಕ ಉದ್ಘಾಟನೆ
* ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಭಾಗಿ
* ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ದಿನದ ಸವಾಲು ಅಲ್ಲ

Infosys Foundation Inaugurates 350-bed Block at the Jayadeva Hospital Bengaluru mah

ಬೆಂಗಳೂರು(ನ.17)  ಜಯದೇವ (Jayadeva Hospital) ಹೃದ್ರೋಗ ಆಸ್ಪತ್ರೆಯ ಆವರಣದಲ್ಲಿ ಇನ್ಫೋಸಿಸ್‌ ಫೌಂಡೇಶನ್‌(Infosys Foundation) ವತಿಯಿಂದ ನಿರ್ಮಾಣಗೊಂಡಿರುವ ನೂತನ ಕಟ್ಟಡ (ಇನ್ಫೋಸಿಸ್‌ ಬ್ಲಾಕ್‌) ಲೋಕಾರ್ಪಣೆಯಾಗಿದೆ.

350 ಬೆಡ್‌ಗಳ ಸೌಲಭ್ಯ ಹೊಂದಿರುವ ನೂತನ ಘಟಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಉದ್ಘಾಟಿಸಿದ್ದಾರೆ. ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್‌(Dr. K.sudhakar)  ಇನ್ಫೋಸಿಸ್‌ ಗೌರವಾನ್ವಿತ ಅಧ್ಯಕ್ಷ ಎನ್‌.ಆರ್‌. ನಾರಾಯಣ ಮೂರ್ತಿ, ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾ ಮೂರ್ತಿ, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಮಂಜುನಾಥ್  ಹಾಗೂ ಶಾಸಕಿ ಸೌಮ್ಯ ರೆಡ್ಡಿ ಭಾಗವಹಿಸಿದ್ದರು.

103 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಆಸ್ಪತ್ರೆ ನಿರ್ಮಾಣ  ಮಾಡಲಾಗಿದೆ.  4 ಅಂತಸ್ತಿನ ಹೊಸ ಆಸ್ಪತ್ರೆಯಲ್ಲಿ ಎರಡು ಕ್ಯಾಥ್ ಲ್ಯಾಬ್ ಇದೆ. ಎರಡು ಆಪರೇಷನ್ ಥಿಯೇಟರ್, ಒಂದು ಹೈಬ್ರಿಡ್ ಆಪರೇಷನ್ ಥಿಯೇಟರ್ ಇದೆ. 100 ICCU ಬೆಡ್ ಗಳು, 250 ಜನರಲ್ ಬೆಡ್ ವ್ಯವಸ್ಥೆ ಹೊಂದಿರುವ ಆಸ್ಪತ್ರೆ ಇದಾಗಿದೆ. ಒಟ್ಟಾರೆ ಜಯದೇವ ಆಸ್ಪತ್ರೆ 1000 ಬೆಡ್ ಸಾಮರ್ಥ್ಯ ಹೊಂದಿದೆ. ದೇಶದ ಅತ್ಯಂತ ದೊಡ್ಡ ಹೃದ್ರೋಗ ಆಸ್ಪತ್ರೆ ಎಂಬ ಹೆಗ್ಗಳಿಕೆ ಜಯದೇವ ಆಸ್ಪತ್ರೆಯದ್ದು ಎಂದು ಸಿಎಂ ತಿಳಿಸಿದರು.

ಕೊರೋನಾ ಸಂಕಷ್ಟಕ್ಕೆ ಮಿಡಿದ ಸುಧಾಮೂರ್ತಿ

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಮಂಜುನಾಥ್  ಮಾತನಾಡಿ, ಪ್ರತೀ ಐದು ನಿಮಿಷಕ್ಕೆ ಒಬ್ಬ ರೋಗಿ ಎಮರ್ಜೆನ್ಸಿ ಬರ್ತಾರೆ. ಆಸ್ಪತ್ತೆ ದೊಡ್ಡದಿದ್ರೂ ಹಾಸಿಗೆಗಳ ಕೊರತೆ ಇತ್ತು. ನಾರಾಯಣಮೂರ್ತಿ ಅವರು ನಮ್ಮ ಆಸ್ಪತ್ರೆಗೆ ಬಂದು ನೋಡಿದ್ರು. ಅವರು ಬಂದು ಹೋದ 24 ಗಂಟೆಗಳಲ್ಲಿ ಹೊಸ ಆಸ್ಪತ್ರೆ ಕಟ್ಟಿಸಿಕೊಡ್ತೇವೆ ಅಂದ್ರು. ನಾನು 200 ಬೆಡ್ ಸಾಕು ಅಂದ್ರು ಅವರು 350 ಬೆಡ್ ಆಸ್ಪತ್ರೆ ಕಟ್ಟಿಕೊಡ್ತೇವೆ ಅಂದ್ರು. ನಾರಾಯಣ ಮೂರ್ತಿ ದಂಪತಿ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ., ಕಡಿಮೆ ಜಾಗದಲ್ಲಿ ಉತ್ತಮವಾದ ಆಸ್ಪತ್ರೆಯನ್ನು ಕಟ್ಟಿಕೊಟ್ಟಿದಾರೆ. ಅವರಿಗೆ ಎಲ್ಲಾ ರೋಗಿಗಳ ಪರವಾಗಿ ಧನ್ಯವಾದಗಳನ್ನ ತಿಳಿಸ್ತೇನೆ. ಕೇವಲ 20 ತಿಂಗಳಲ್ಲಿ ಆಸ್ಪತ್ರೆ ಕಟ್ಟಿಕೊಟ್ಟ ಕಾರ್ಮಿಕರಿಗೂ ಅಭಿನಂದನೆ ಸಲ್ಲಿಸ್ತೇನೆ ಎಂದರು.

ಯುವಕರಲ್ಲಿ ಇತ್ತೀಚಿಗೆ ಹೃದಯಾಘಾತ (Heart Attack) ಹೆಚ್ಚುತ್ತಿದೆ. ಈ ವರ್ಷ 3850 ಯುವಕರಿಗೆ ಹೃದಯ ಚಿಕಿತ್ಸೆ ಮಾಡಲಾಗಿದೆ. ಹಿಂದೆಲ್ಲಾ ಮಕ್ಕಳು ಪೋಷಕರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ಆದರೆ ಈಗ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಇನ್ಫೋಸಿಸ್ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ  ಮಾತನಾಡಿ,  ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ ಧನ್ಯವಾದ ಕಡು ಬಡವರಿಗೆ ಮೂಕ ಸೌಕರ್ಯಗಳು ಒದಗಿಸಬೇಕು. ಭವಿಷ್ಯದ ಭಾರತ ಸಶಕ್ತವಾಗಬೇಕು . ಇದನ್ನು ಇನ್ಫೋಸಿಸ್ ಫೌಂಡೇಶನ್ ಅರ್ಥೈಸಿ ಅದಕ್ಕಾಗಿ ಕೆಲಸ ಮಾಡ್ತಿದೆ. WHO ಪ್ರಕಾರ ಭಾರತ ವಿಶ್ವದಲ್ಲೇ ಹೃದಯ ರೋಗಿಗಳ‌ ಸಂಖ್ಯೆ ಹೆಚ್ಚಿದೆ  ಬಹಳಷ್ಟು ಮಂದಿ ಭಾರತದಲ್ಲಿ ಕೃಷಿಯನ್ನೇ ಅವಲಂಬಿಸಿದ್ದಾರೆ ಭಾರತದ ಜಿಡಿಪಿ‌ ಮತ್ತು ಆದಾಯ ಮೂಲ ಕಡಿಮೆ ಇರೋದ್ರಿಂದ ಉತ್ತಮವಾಗಿ ಮೂಲಸೌಕರ್ಯ ಪಡೆಯೋದು ಕಷ್ಟ. ಸುಧಾಮೂರ್ತಿಬಡ ಜನರಿಗೆ ಸಹಾಯ ಮಾಡ್ತಿದ್ದಾರೆ. ಇದಕ್ಕೆ‌ ನಾನು ತುಂಬಾ ಕೃತಜ್ಞನನಾಗಿದ್ದೇನೆ ಎಂದು ತಿಳಿಸಿದರು.

ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ(Sudha Murty)  ಮಾತನಾಡಿ, ನಾರಾಯಣ ಮೂರ್ತಿ ಕೆಲಸ‌ ಮಾತ್ರ ಮಾಡ್ತಾರೆ. ಹಣದ ಬಗ್ಗೆ ಕೇಳಲ್ಲ. ನಾರಾಯಣ ಮೂರ್ತಿ ಮಾಡುವ ಕೆಲಸ ಮನಮಿಡಿಯುತ್ತೆ. ಡಾ. ಮಂಜುನಾಥ್ (DRr. CN Manjunath) ಅವರನ್ನು ನಾನು ವಿಶೇಷವಾಗಿ ಅಭಿನಂದಿಸ್ತೇನೆ. ಯಾಕಂದ್ರೆ ಇಬ್ಬರೂ ಹಳ್ಳಿಯಿಂದ ಬಂದವರು ಇಬ್ಬರೂ ಕನ್ನಡ ಮೀಡಿಯಂ ನಲ್ಲಿ ಕಲಿತವರು

ನನ್ನ ಇಬ್ಬರು ಮಕ್ಕಳು ಡೆಲಿವರಿ ಆಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ. ಆಸ್ಪತ್ರೆಗೆ ನಾವು ಮಾಡಿದ್ದು ನಮ್ಮ‌ ಕರ್ತವ್ಯ. ಬಂದ ಹಣ ಬಡವರಿಗಾಗಿಯೇ ಉಪಯೋಗಿಸಬೇಕು. ಸಮಾಜದಿಂದ ಬಂದ ಹಣ ಸಮಾಜಕ್ಕೆ ಹೋಗಬೇಕು ಆಸ್ಪತ್ರೆ ನಿರ್ಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ. ಇದರ ಉಪಯೋಗ ನಮ್ಮ ನಾಡಿನ ಜನರು ಪಡೆದುಕೊಳ್ಳಲಿ. ವೃಕ್ಷ ಪಡೆದ ಹಣ್ಣು ತಾನು ತಿನ್ನೋದಿಲ್ಲ. ಹಾಲು ಕೊಡುವ ಹಸು ತಾನು ಕುಡಿಯಲ್ಲ. ಅದೇ ರೀತಿ ಇನ್ಫೋಸಿಸ್ ಫೌಂಡೇಶನ್ ಮಾಡುವ ಕೆಲಸ ನಿಮ್ಮ ಜೀವನದಲ್ಲಿ ಕಡೆಗೆ ಏನು ಬರಲ್ಲ..ಉಳಿಯುವುದು ಜನರ ಹಾರೈಕೆ ಮಾತ್ರ ಎಂದು ತಿಳಿಸಿದರು. 

Latest Videos
Follow Us:
Download App:
  • android
  • ios