ಬೆಂಗಳೂರು(ಆ.03): ಶಿವಾಜಿನಗರದ ಬ್ರಾಡ್‌ ವೇ ಆಸ್ಪತ್ರೆಯನ್ನು ಇಸ್ಫೋಸಿಸ್‌ ಪ್ರತಿಷ್ಠಾನದ ನೆರವಿನೊಂದಿಗೆ 200 ಹಾಸಿಗೆಗಳ ಸುಸಜ್ಜಿತ ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತಿದ್ದು, ಇದಕ್ಕಾಗಿ ಪ್ರತಿಷ್ಠಾನದ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಬ್ರಾಡ್‌ ವೇ ಆಸ್ಪತ್ರೆಯು 200 ಹಾಸಿಗೆಗಳ ಕೋವಿಡ್‌ ಆಸ್ಪತ್ರೆಯಾಗಿ ಸಜ್ಜಾಗುತ್ತಿದೆ. ಇದರ ಸಮರ್ಪಕ ನಿರ್ವಹಣೆಗೆ ಅಗತ್ಯವಿರುವ ವೈದ್ಯರು, ನರ್ಸ್‌, ಪ್ಯಾರಾ ಮೆಡಿಲ್‌ ಮತ್ತು ಇತರೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಇನ್ನು ಎರಡು ವಾರದೊಳಗೆ ಕಾರ್ಯಾರಂಭ ಆಗಲಿದೆ ಎಂದು ತಿಳಿಸಿದ್ದಾರೆ. 

ಲಾಕ್‌ಡೌನ್‌ನಿಂದ ಕಷ್ಟದಲ್ಲಿರೋ ಮೈಸೂ​ರು ಝೂಗೆ 20 ಲಕ್ಷ: ಸುಧಾಮೂರ್ತಿ

 

ಈ ಆಸ್ಪತ್ರೆಯನ್ನು ಸುಸಜ್ಜಿತ ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಲು ಅಗತ್ಯ ಮೂಲಸೌಕರ್ಯ ಒದಗಿಸಲು ನೆರವಾದ ಇಸ್ಫೋಸಿಸ್‌ ಪ್ರತಿಷ್ಠಾನ ಮತ್ತು ಅದರ ಮುಖ್ಯಸ್ಥರಾದ ಡಾ.ಸುಧಾಮೂರ್ತಿ ಅವರಿಗೆ ಸರ್ಕಾರ ಮತ್ತು ಜನತೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಟ್ವೀಟ್‌ ಮೂಲಕ ಹೇಳಿದ್ದಾರೆ.