ಇಂಡಿಗೋ ವಿಮಾನದಲ್ಲಿ ನೀಡೋ ಉಪ್ಪಿಟ್ಟಲ್ಲಿ ಮ್ಯಾಗಿಗಿಂತ ಹೆಚ್ಚು ಸೋಡಿಯಂ ಇದೆಯೆಂಂದ ಹೆಲ್ತ್ ಇನ್‌ಫ್ಲುಯೆನ್ಸರ್!

ಫೇಮಸ್ ಹೆಲ್ತ್‌ ಇನ್‌ಫ್ಲುಯೆನ್ಸರ್‌ ಒಬ್ಬರು ಇಂಡಿಗೋ ಏರ್‌ಲೈನ್ಸ್‌ನಲ್ಲಿ ವಿತರಿಸಿದ ಆಹಾರವನ್ನು ಟೀಕಿಸಿದ್ದಾರೆ. ಮ್ಯಾಗಿಗಿಂತ ಹೆಚ್ಚಿನ ಸೋಡಿಯಂ ಇಂಡಿಗೋ ವಿತರಿಸುವ ಉಪ್ಮಾದಲ್ಲಿ ಇದೆ ಎಂದು ವೀಡಿಯೋ ಶೇರ್ ಮಾಡಿದ್ದಾರೆ.

IndiGos poha and upma have high sodium, alleges influencer, airline clarifies Vin

ಫುಡ್ ಫಾರ್ಮರ್ ಎಂದೇ ಜನಪ್ರಿಯವಾಗಿರುವ ಹೆಲ್ತ್‌ ಇನ್ಫುಲಿಯನ್ಸರ್‌ ರೇವಂತ್ ಹಿಮತ್‌ಸಿಂಕಾ, ಇಂಡಿಗೋ ಏರ್‌ಲೈನ್ಸ್‌ನಲ್ಲಿ ವಿತರಿಸಿದ ಆಹಾರವನ್ನು ಟೀಕಿಸಿದ್ದಾರೆ. ಎಕ್ಸ್‌ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಇಂಡಿಗೋ ವಿಮಾನಗಳಲ್ಲಿ ನೀಡಲಾಗುವ ಕೆಲವು ಪೂರ್ವ-ಪ್ಯಾಕ್ ಮಾಡಿದ ಆಹಾರಗಳಲ್ಲಿ ಹೆಚ್ಚಿನ ಸೋಡಿಯಂ ಇರುತ್ತದೆ ಎಂದು ರೇವಂತ್ ಹೇಳಿಕೊಂಡಿದ್ದಾರೆ. ಆದರೆ ಇಂಡಿಗೋ ಏರ್‌ಲೈನ್ಸ್ ಹೆಲ್ತ್‌ ಇನ್‌ಫ್ಲುಯನ್ಸರ್‌ ಆರೋಪವನ್ನು ವಿರೋಧಿಸಿದೆ, 'ಕೆಲವು ಪೂರ್ವ-ಪ್ಯಾಕೇಜ್ ಮಾಡಿದ ಉತ್ಪನ್ನಗಳ ತಯಾರಿಕೆಯನ್ನು ಸಾಂಪ್ರದಾಯಿಕ ಭಾರತೀಯ ಪಾಕವಿಧಾನಗಳ ಪ್ರಕಾರ ಮಾಡಲಾಗುತ್ತದೆ ಮತ್ತು ಉಪ್ಪಿನಂಶವು ನಿಗದಿತ ಮಾನದಂಡಗಳಲ್ಲಿ ಇರುತ್ತದೆ' ಎಂದು ಸ್ಪಷ್ಟನೆ ನೀಡಿದೆ.

ರೇವಂತ್ ಎಕ್ಸ್‌ನಲ್ಲಿ 'ಫುಡ್ ಫಾರ್ಮರ್' ಎಂಬ ಹೆಸರಿನಿಂದ ಫೇಮಸ್ ಆಗಿದ್ದಾರೆ. 88 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ವೀಡಿಯೊದೊಂದಿಗೆ ರೇವಂ, 'ಇಂಡಿಗೋ ಏರ್‌ಲೈನ್ಸ್‌ನಲ್ಲಿ ನೀಡಲಾದ ಆಹಾರದ ಬಗ್ಗೆ ಆಘಾತಕಾರಿ ವೀಡಿಯೊ. ಮ್ಯಾಗಿ ಹೆಚ್ಚಿನ ಸೋಡಿಯಂ ಆಹಾರ ಎಂದು ನಮ್ಮಲ್ಲಿ ಹೆಚ್ಚಿನವರಿಗೆ ಈಗಾಗಲೇ ತಿಳಿದಿದೆ. ಇಂಡಿಗೋದ ಮ್ಯಾಜಿಕ್ ಉಪ್ಮಾದಲ್ಲಿ ಶೇಕಡಾ 50ರಷ್ಟು ಹೆಚ್ಚು ಸೋಡಿಯಂ ಇದೆ ಎಂಬುದು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿಲ್ಲ. ಮ್ಯಾಗಿಗಿಂತ ಇಂಡಿಗೋಸ್ ಪೋಹಾವು ಮ್ಯಾಗಿಗಿಂತ 83 ಪ್ರತಿಶತ ಹೆಚ್ಚು ಸೋಡಿಯಂನ್ನು ಹೊಂದಿದೆ ಮತ್ತು ದಾಲ್ ಚಾವಲ್ ಮ್ಯಾಗಿಯಷ್ಟೇ ಸೋಡಿಯಂ ಅನ್ನು ಹೊಂದಿದೆ' ಎಂದು ಬರೆದುಕೊಂಡಿದ್ದಾರೆ.

ವಿಮಾನದಲ್ಲಿ ವಿತರಿಸಿದ ಆಹಾರದಲ್ಲಿ ಕೂದಲು ಪತ್ತೆ, ಸಂಸದೆಯ ಟ್ವೀಟ್‌ ವೈರಲ್

'ಭಾರತೀಯರು ಈಗಾಗಲೇ ಹೆಚ್ಚು ಸೋಡಿಯಂ ಸೇವಿಸುತ್ತಾರೆ. ನಿಯಮಿತವಾಗಿ ಹೆಚ್ಚುವರಿ ಸೋಡಿಯಂ ನಮ್ಮ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆಗಳು ಮತ್ತು ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗಬಹುದು' ಎಂದು ರೇವಂತ್ ಮಾಹಿತಿ ಹಂಚಿಕೊಂಡಿದ್ದಾರೆ. ಇಂಡಿಗೋ ಏರ್‌ಲೈನ್ಸ್‌ನಲ್ಲಿ ಪ್ರಯಾಣಿಸುವ ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ರೇವಂತ್ ಸಲಹೆ ಸಹ ನೀಡಿದ್ದಾರೆ. ವಿಮಾನದಲ್ಲಿ ನಿಮ್ಮೊಂದಿಗೆ ಮನೆಯಿಂದ ಪ್ಯಾಕ್ ಮಾಡಿದ ಆಹಾರವನ್ನು ತರುವುದು, ಅಥವಾ ಇಂಡಿಗೋದಲ್ಲಿ ಬಾದಾಮಿ, ಕಾಳುಗಳನ್ನಷ್ಟೇ ತಿನ್ನುವುದು ಎಂದಿದ್ದಾರೆ.

ಇಂಡಿಗೋ ತನ್ನ ಹೇಳಿಕೆಯಲ್ಲಿ,'ಇಂಡಿಗೋ ತಾಜಾ ಮತ್ತು ಪೂರ್ವ-ಪ್ಯಾಕೇಜ್ ಮಾಡಿದ ಆಹಾರವನ್ನು ಅತ್ಯಂತ ಪ್ರಸಿದ್ಧ ಮಾರಾಟಗಾರರಿಂದ ಮಾತ್ರ ಪೂರೈಸುತ್ತದೆ. ಇಂಡಿಗೋ ವಿಮಾನಗಳಲ್ಲಿ ನೀಡಲಾಗುವ ಎಲ್ಲಾ ಆಹಾರ ಪದಾರ್ಥಗಳು ಮತ್ತು ಪೌಷ್ಠಿಕಾಂಶದ ಮಾಹಿತಿಯನ್ನು FSSAI ಮಾನದಂಡಗಳ ಪ್ರಕಾರ ವಿವರಗಳನ್ನು ಹೊಂದಿರುತ್ತದೆ. ಪ್ರಯಾಣಿಕರು ಹೊಸದಾಗಿ ತಯಾರಿಸಿದ ಮುಂಚಿತ-ಬುಕ್ ಮಾಡಲಾದ ಊಟದಿಂದ ಆಯ್ಕೆ ಮಾಡಿಕೊಳ್ಳಬಹುದು ಅಥವಾ ಬೋರ್ಡ್‌ನಲ್ಲಿ ಪೂರ್ವ-ಪ್ಯಾಕ್ ಮಾಡಲಾದ ಆಹಾರ ಉತ್ಪನ್ನಗಳನ್ನು ಖರೀದಿಸಬಹುದು. ಕೆಲವು ಪೂರ್ವ-ಪ್ಯಾಕೇಜ್ ಮಾಡಿದ ಉತ್ಪನ್ನಗಳ ತಯಾರಿಕೆಯನ್ನು ಸಾಂಪ್ರದಾಯಿಕ ಭಾರತೀಯ ಪಾಕವಿಧಾನಗಳ ಪ್ರಕಾರ ಮಾಡಲಾಗುತ್ತದೆ ಮತ್ತು ಉಪ್ಪಿನಂಶವು ನಿಗದಿತ ಮಾನದಂಡಗಳಲ್ಲಿ ಉತ್ತಮವಾಗಿದೆ' ಎಂದು ಸ್ಪಷ್ಟಪಡಿಸಿದೆ.

Indigo Airlines ಪ್ರಯಾಣಿಕರು -ಗಗನಸಖಿ ನಡುವೆ ವಾಗ್ವಾದ: ವಿಡಿಯೋ ವೈರಲ್‌

'ಪ್ಯಾಕೇಜ್‌ನಲ್ಲಿ ಮುದ್ರಿಸಲಾದ ಮಾಹಿತಿಯು ಪ್ರಯಾಣಿಕರಿಗೆ ಅವರ ಪೌಷ್ಟಿಕಾಂಶದ ಸೇವನೆಯನ್ನು ಅಂದಾಜು ಮಾಡಲು ಮತ್ತು ಅವರ ವಿವೇಚನೆಗೆ ಅನುಗುಣವಾಗಿ ಸೇವಿಸಲು ಸಲಹೆಯಂತೆ ಕಾರ್ಯನಿರ್ವಹಿಸುತ್ತದೆ. ನಮ್ಮ ಸೇವೆಗಳನ್ನು ಸುಧಾರಿಸಲು ನಮ್ಮ ಗ್ರಾಹಕರಿಂದ ಎಲ್ಲಾ ಪ್ರತಿಕ್ರಿಯೆಗಳನ್ನು ಸ್ವಾಗತಿಸುತ್ತೇವೆ' ಎಂದು ಇಂಡಿಗೋ ಏರ್‌ಲೈನ್ಸ್ ತಿಳಿಸಿದೆ.

Latest Videos
Follow Us:
Download App:
  • android
  • ios