ಲಾಕ್‌ಡೌನ್‌ ಟೈಮ್‌ನಲ್ಲಿ ಎಕ್ಸರ್‌ಸೈಸ್‌ ಅಂದ್ರೆ ಯಾವ ಕರ್ಮಕ್ಕೆ ಅಂತ ಮನಸ್ಸು ಕೇಳೋದು ಸಹಜವೇ. ಆದರೆ ಈ ದಿನಗಳಲ್ಲಿ ಎಕ್ಸರ್‌ಸೈಸ್‌ ಹೆಚ್ಚೆಚ್ಚು ಬೇಕು. ಏಕೆಂದರೆ ಹೊರಗೆ ಓಡಾಡಲ್ಲ. ನಾಲ್ಕು ಗೋಡೆಗಳ ಮಧ್ಯ ಎಷ್ಟುಓಡಾಡಿದರೂ ದೇಹದಲ್ಲಿ ಕೊಬ್ಬು ತುಂಬೋದು ತಪ್ಪಲ್ಲ. ಅದಕ್ಕೋಸ್ಕರ ಮನೆಯಲ್ಲಿ ಎಕ್ಸರ್‌ಸೈಸ್‌ ಮಿಸ್‌ ಮಾಡ್ಬೇಡಿ ಅಂತಾರೆ ಮಂದಿರಾ. ಅವರು ಹೇಳೋ ಹೋಮ್‌ ವರ್ಕೌಟ್‌ ಟಿಫ್ಸ್‌ ಹೀಗಿದೆ.

- ಫಿಟ್‌ನೆಸ್‌ ಗೋಲ್‌ ಹಾಕ್ಕೊಳ್ಳಿ. ಇನ್ನು ಒಂದು ತಿಂಗಳು ಇಷ್ಟುಎಕ್ಸರ್‌ಸೈಸ್‌ ದಿನಾಲೂ ಮಾಡೇ ಮಾಡ್ತೀನಿ ಅಂತ ಶಪಥ ಮಾಡಿ. ಈ ಕ್ಷಣದಿಂದ ಎಕ್ಸರ್‌ಸೈಸ್‌ ಶುರು ಮಾಡಿ. ನಾನಂತೂ 365 ದಿನಗಳಿಗೆ ಗೋಲ್‌ ಸೆಟ್‌ ಮಾಡಿದ್ದೇನೆ. ಒಂದು ದಿನವೂ ಮಿಸ್‌ ಮಾಡಿಲ್ಲ.

ಫೋಮೋ ಅಂದ್ರೆ ಕಳೆದು ಹೋಗುವ ಭಯ;ನಿಮಗೂ ಇದೆಯಾ ಚೆಕ್‌ ಮಾಡಿಕೊಳ್ಳಿ!

- ಓಡಾಡಿ, ನಡೆದಾಡಬೇಡಿ. ಮನೆಯೊಳಗೆ ಓಡುತ್ತಲೇ ಕೆಲಸ ಮಾಡಿ. ನಡೆಯೋದನ್ನೇ ಓಟವಾಗಿ ಮಾರ್ಪಡಿಸಿ,

- ಬಸ್ಕಿ ಹೊಡೆಯೋದು ಬೆಸ್ಟ್‌. ನಿಮ್ಮ ತಾಕತ್ತಿನ ಮೇಲೆ ಗುರಿ ನಿಗದಿ ಮಾಡಿ ಬಸ್ಕಿ ಹೊಡಿಯೋಕೆ ಶುರು ಮಾಡಿ. ಎಲ್ಲ ಸೈಡ್‌ಗೂ ತಿರುಗುತ್ತಾ ಬಸ್ಕಿ ಹೊಡಿಯೋದು ಮುಂದುವರಿಸಿ.

- ಐದು ಮೆಟ್ಟಿಲು ಹತ್ತಿ, ಇಳಿಯಿರಿ. ಹೀಗೇ ಒಂದೈವತ್ತು ಸಲ ಮಾಡಿ.

ವಯಸ್ಸು 50 ಆಯಿತೆಂದರೆ ಬದಲಾಗಲಿ ಡಯಟ್! .

- ನಿಮ್ಮ ವಯಸ್ಸು, ಮನಸ್ಸು, ದೇಹದ ಗಾತ್ರ ಎಲ್ಲ ಮರೆತು ನಿಮ್ಮ ಮನಸ್ಸಿಗೆ ಬಂದ ಹಾಗೆ ಡ್ಯಾನ್ಸ್‌ ಮಾಡಿ. ಆಮೇಲೆ ದೇಹ, ಮನಸ್ಸು ಎರಡೂ ಹಗುರಾಗಿರೋದು ನಿಮ್ಮರಿವಿಗೆ ಬರುತ್ತೆ.