ವಯಸ್ಸು 50 ಆಯಿತೆಂದರೆ ಬದಲಾಗಲಿ ಡಯಟ್!

ನಮಗೆ ವಯಸ್ಸಾದಂತೆಲ್ಲ ದೇಹವು ಆಹಾರಕ್ಕೆ ಪ್ರತಿಕ್ರಿಯಿಸುವ ರೀತಿ ಬದಲಾಗುತ್ತದೆ. ಹಾಗಾಗಿ, 50 ವರ್ಷ ದಾಟಿದವರು ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳಲು ಕೆಲ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ತಮ್ಮ ಡಯಟ್‌ನಲ್ಲಿ ಬಳಸಬೇಕಾಗುತ್ತದೆ. 
Items that people over fifty should include in their diet
ಪ್ರತಿಯೊಬ್ಬರ ದೇಹವೂ ಆಹಾರಕ್ಕೆ ಪ್ರತಿಕ್ರಿಯಿಸುವ ರೀತಿ ವಿಭಿನ್ನ. ಹಾಗಾಗಿಯೇ ಕೆಲವರು ಇಷ್ಟ ಬಂದದ್ದನ್ನೆಲ್ಲ ತಿಂದೂ ಫಿಟ್ ಹಾಗೂ ಆ್ಯಕ್ಟಿವ್ ಆಗಿರುತ್ತಾರೆ. ಮತ್ತೆ ಕೆಲವರಿಗೆ ಫಿಟ್ ಆಗಿರಲು ತಿನ್ನುವ ಆಹಾರದ ಕುರಿತು ಎಕ್ಸ್ಟ್ರಾ ಕಾಳಜಿ ವಹಿಸಬೇಕಾಗುತ್ತದೆ. ಈ ವಿಷಯವನ್ನು ಬದಿಗಿಟ್ಟರೂ ತಿನ್ನುವಾಗ ವಯಸ್ಸನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. 50 ವರ್ಷ ದಾಟಿದ ಜನರು ತಿನ್ನುವಾಗ ಆಹಾರದ ಬಗ್ಗೆ ಹೆಚ್ಚಿನ ಗಮನ ವಹಿಸುವುದು ಮುಖ್ಯ. 

ವಯಸ್ಸು ಇರುವಾಗ ಕಲ್ಲನ್ನು ಕೂಡಾ ತಿಂದು ಜೀರ್ಣಿಸಿಕೊಳ್ಳುವ ಶಕ್ತಿ ದೇಹಕ್ಕಿರುತ್ತದೆ. ಆದರೆ ವಯಸ್ಸಾದಂತೆಲ್ಲ ದೇಹ ಎಲ್ಲವನ್ನೂ ಜೀರ್ಣಿಸಿಕೊಳ್ಳಲಾಗದು. ಜೊತೆಗೆ ಆಹಾರದ ಸತ್ವ ಹೀರಿಕೊಳ್ಳುವ ಶಕ್ತಿಯೂ ಕಡಿಮೆಯಾಗುತ್ತದೆ. ಅಲ್ಲದೆ, ಯುವಕರಾಗಿದ್ದಾಗ ಸೇವಿಸುವುದನ್ನೆಲ್ಲ ವಯಸ್ಸಾದ ಮೇಲೆ ಸೇವಿಸಿದರೆ ಕಾಯಿಲೆಗಳು ಹುಡುಕಿಕೊಂಡು ಬಂದು ದೇಹದೊಳಗೆ ಮನೆ ಮಾಡಿಕೊಳ್ಳುತ್ತವೆ. ಅದೇ ಕಾರಣಕ್ಕೆ ಸಕ್ಕರೆ, ಟ್ರಾನ್ಸ್ ಫ್ಯಾಟ್, ಕೊಲೆಸ್ಟೆರಾಲ್ ಮುಂತಾದವನ್ನು ದೂರವಿಡಲೇಬೇಕಾಗುತ್ತದೆ. ಇವು ನಮ್ಮ ಹೃದಯ, ಮೆದುಳು, ಚರ್ಮ ಎಲ್ಲಕ್ಕೂ ಅನಾರೋಗ್ಯ ತರುವಂಥವು. ಈ ವಯಸ್ಸಿನಲ್ಲಿ ಆಹಾರದಲ್ಲಿ ತರಕಾರಿ, ಹಣ್ಣುಗಳು, ಧಾನ್ಯಗಳು ಮುಂತಾದವನ್ನು ಹೆಚ್ಚು ಹೆಚ್ಚಾಗಿ ಬಳಸಬೇಕು. ಇದರ ಜೊತೆಗೆ ಒಂದಿಷ್ಟು ಹರ್ಬ್ಸ್ ಹಾಗೂ ಮಸಾಲೆ ಪದಾರ್ಥಗಳನ್ನೂ ಸೇರಿಸಿಕೊಂಡರೆ ವಯಸ್ಸಾಗುವಿಕೆಯನ್ನು ತಕ್ಕ ಮಟ್ಟಿಗೆ ತಡೆಯಬಹುದು. ಜೊತೆಗೆ ಕಾಯಿಲೆಗಳನ್ನೂ ಸಾಧ್ಯವಾದಷ್ಟು ದೂರವಿಡಬಹುದು. 50 ವರ್ಷದ ಬಳಿಕ ಡಯಟ್‌ನಲ್ಲಿ ಹೆಚ್ಚಾಗಿ ಬಳಸಬೇಕಾದ ಆಹಾರ ಪದಾರ್ಥಗಳಿವು. 

ಪ್ರಕೃತಿ ಚಾಲೆಂಜ್ ಹಾಕುತ್ತಿದೆ, ಯಾಕೆ ಯಾರೂ Accept ಮಾಡ್ತಾ ಇಲ್ಲ?!

ದ್ರಾಕ್ಷಿ ಹಣ್ಣು
ವಯಸ್ಸಾದಂತೆಲ್ಲ ಎದುರಾಗುವ ಜೀರ್ಣ ಸಮಸ್ಯೆಗಳಿಗೆ ಫೈಬರ್ ಹೆಚ್ಚಾಗಿ ಸೇವಿಸುವುದು ಅಗತ್ಯ. ಒಣದ್ರಾಕ್ಷಿ ಹಣ್ಣುಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಹಾಗೂ ಫೈಬರ್ ಹೇರಳವಾಗಿದೆ. ಇದನ್ನು 50 ವರ್ಷ ದಾಟಿದವರು ದಿನನಿತ್ಯ ಸೇವಿಸುವುದು ಒಳಿತು. ದ್ರಾಕ್ಷಿ ಇಷ್ಟವಿಲ್ಲವೆಂದಾದಲ್ಲಿ ಫೈಬರ್ ಹೆಚ್ಚಿರುವ ಪಾಲಕ್, ಸೇಬು, ಬೀನ್ಸ್, ಬಟಾಣಿ ಹಾಗೂ ಸಂಪೂರ್ಣ ಧಾನ್ಯಗಳ ಬಳಕೆ ಹೆಚ್ಚಿಸಿ. 

ದಾಲ್ಚೀನಿ
ದಾಲ್ಚೀನಿಯಲ್ಲೂ ಆ್ಯಂಟಿಆಕ್ಸಿಡೆಂಟ್ಸ್ ಹೆಚ್ಚಾಗಿರುತ್ತದೆ. ಇವುಗಳ ಆ್ಯಂಟಿ ಇನ್ಫ್ಲಮೇಟರಿ ಗುಣ ವಯಸ್ಸಾದಂತೆ ಕಾಡುವ ಹಲ ಸಮಸ್ಯೆಗಳನ್ನು ದೂರವಿಡಬಲ್ಲದು. ಇದು ಟೈಪ್ 2 ಡಯಾಬಿಟೀಸ್ ಇರುವವರ ಇನ್ಸುಲಿನ್ ಸೆನ್ಸಿಟಿವಿಟಿಯನ್ನೂ ಹೆಚ್ಚಿಸಬಲ್ಲದು. 

ಅಧ್ಯಾತ್ಮದೊಂದಿಗೆ ಕನೆಕ್ಟ್ ಮಾಡೋ ಭಾರತೀಯ ಆಹಾರ
 
ಮೊಸರು
ವಯಸ್ಸು ಹೆಚ್ಚಾದಂತೆಲ್ಲ ನಮ್ಮ ಮೂಳೆಗಳ ಸಾಂದ್ರತೆ ಕಡಿಮೆಯಾಗುತ್ತದೆ. ಹಾಗಾಗಿ ಮೂಳೆ ಮುರಿಯುವ, ಆಸ್ಟಿಯೋಪೋರೋಸಿಸ್‌ಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗುತ್ತದೆ. ಹಾಗಾಗಿ, ಮೂಳೆಗಳ ಆರೋಗ್ಯ ಹೆಚ್ಚಿಸುವಂಥ ಆಹಾರ ಸೇವನೆ ಹೆಚ್ಚಿಸಬೇಕು. ಮೊಸರು ಈ ಕೆಲಸ ಮಾಡುತ್ತದೆ. ಕ್ಯಾಲ್ಶಿಯಂ ಹಾಗೂ ವಿಟಮಿನ್ ಡಿ ಹೆಚ್ಚಾಗಿ ಇರುವಂಥ ಮೊಸರನ್ನು ಸೇವಿಸುವುದನ್ನು ರೂಢಿಸಿಕೊಳ್ಳಿ. ಜೊತೆಗೆ ವಿಟಮಿನ್ ಹಾಗೂ ಕ್ಯಾಲ್ಶಿಯಂ ಮಾತ್ರೆಗಳನ್ನೂ ಸಪ್ಲಿಮೆಂಟ್ ಆಗಿ ಸೇವಿಸಬಹುದು. 

ಕಾರ್ನ್‌ಫ್ಲೇಕ್ಸ್
ಕಾರ್ನ್‌ಫ್ಲೇಕ್ಸ್‌ನಲ್ಲಿ ವಿಟಮಿನ್ ಬಿ12 ಹಾಗೂ ಇತರೆ ಪೋಷಕಸತ್ವಗಳು ಶ್ರೀಮಂತವಾಗಿವೆ. ವಯಸ್ಸಾದಂತೆಲ್ಲ ಹೊಟ್ಟೆಯಲ್ಲಿ ಅಸಿಡಿಟಿ ಕಡಿಮೆಯಾಗುತ್ತದೆ. ಹಾಗಾಗಿ, ಆಹಾರದ ಮೂಲಕ ಬಿ12 ವಿಟಮಿನ್ ಪಡೆಯುವುದು ಕಷ್ಟವಾಗುತ್ತದೆ. ಆ ಸಂದರ್ಭದಲ್ಲಿ ಕಾರ್ನ್‌ಫ್ಲೇಕ್ಸ್ ಈ ಕೊರತೆ ತುಂಬಬಹುದು. 

ಅರಿಶಿನ
ಅರಿಶಿನ ಕೇವಲ ಔಷಧೀಯ ಸಸ್ಯವಲ್ಲ, ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂಥ ಆ್ಯಂಟಿ ಆಕ್ಸಿಡೆಂಟ್‌ಗಳು ಬಹಳಷ್ಟಿವೆ. ಜೊತೆಗೆ ಇದಕ್ಕೆ ಆ್ಯಂಟಿ ಇನ್ಫ್ಲಮೇಟರಿ ಗುಣವೂ ಇರುವುದರಿಂದ ಅರಿಶಿನವನ್ನು ಧೈನಂದಿನ ಡಯಟ್‌ನ ಭಾಗವಾಗಿ ಬಳಸಬೇಕು. ಅಲ್ಲದೆ, ಇದರಲ್ಲಿರುವ ಆ್ಯಕ್ಟಿವ್ ಕಾಂಪೌಂಡ್ ಮೆದುಳನ್ನೂ ಚುರುಕಾಗಿಸುತ್ತದೆ ಎನ್ನುತ್ತವೆ ಹಲವಾರು ಅಧ್ಯಯನಗಳು. ವಯಸ್ಸು 50 ದಾಟುತ್ತಿದ್ದಂತೆ  ಡಲ್ ಆಗುವ ಮೆದುಳಿಗೆ ಇಂಥ ಆಹಾರದ ಅಗತ್ಯವಿದೆ. 

ಸಂಧಿವಾತ ಓಡಿಸಲು ಅರಿಶಿನದ ಅಡುಗೆಗಳು

ಪ್ರತಿಯೊಬ್ಬರ ದೇಹವೂ ಆಹಾರಕ್ಕೆ ಪ್ರತಿಕ್ರಿಯಿಸುವ ರೀತಿ ವಿಭಿನ್ನ. ಹಾಗಾಗಿಯೇ ಕೆಲವರು ಇಷ್ಟ ಬಂದದ್ದನ್ನೆಲ್ಲ ತಿಂದೂ ಫಿಟ್ ಹಾಗೂ ಆ್ಯಕ್ಟಿವ್ ಆಗಿರುತ್ತಾರೆ. ಮತ್ತೆ ಕೆಲವರಿಗೆ ಫಿಟ್ ಆಗಿರಲು ತಿನ್ನುವ ಆಹಾರದ ಕುರಿತು ಎಕ್ಸ್ಟ್ರಾ ಕಾಳಜಿ ವಹಿಸಬೇಕಾಗುತ್ತದೆ. ಈ ವಿಷಯವನ್ನು ಬದಿಗಿಟ್ಟರೂ ತಿನ್ನುವಾಗ ವಯಸ್ಸನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. 50 ವರ್ಷ ದಾಟಿದ ಜನರು ತಿನ್ನುವಾಗ ಆಹಾರದ ಬಗ್ಗೆ ಹೆಚ್ಚಿನ ಗಮನ ವಹಿಸುವುದು ಮುಖ್ಯ.
Latest Videos
Follow Us:
Download App:
  • android
  • ios