ಹೃದಯ ಸಂಬಂಧಿ ಖಾಯಿಲೆಗಳು (Heart Diseases) ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸ್ಟಾರ್ ಸೆಲೆಬ್ರೆಟಿಗಳು(Star Celebrity) ಹಲವು ಖಾಯಿಲೆಗಳಿಗೆ ತುತ್ತಾಗಿ ಮೃತಪಟ್ಟಿರುವುದನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ನಮ್ಮ ಹೃದಯದ(Heart) ಬಗ್ಗೆ ನಾವು ತಿಳಿದಿರಲೇಬೇಕಾದ ಕೆಲ ವಿಚಾರಗಳಿವೆ. ಈ ಬಗ್ಗೆ ಡೀಟೇಲ್ಸ್ ಇಲ್ಲಿದೆ.
'ಹೃದಯದ ಬಡಿತ ಹೃದಯವೇ ಕೇಳು' ಇದು ಹಾಡಿನ(Song) ಸಾಲಾಗಿರಬಹುದು. ಹೃದಯ ಸಂಬಂಧಿ ಖಾಯಿಲೆಗಳು (Heart Disease) ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸ್ಟಾರ್ ಸೆಲೆಬ್ರೆಟಿಗಳು(Star Celebrity) ಹಲವು ಖಾಯಿಲೆಗಳಿಗೆ ತುತ್ತಾಗಿ ಮೃತಪಟ್ಟಿರುವುದನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ನಮ್ಮ ಹೃದಯದ ಬಗ್ಗೆ ನಾವು ತಿಳಿದಿರಲೇಬೇಕಾದ ಕೆಲ ವಿಚಾರಗಳಿವೆ. ಈ ಬಗ್ಗೆ ಡೀಟೇಲ್ಸ್ ಇಲ್ಲಿದೆ.
ಮನುಷ್ಯನ ಜೀವಂತವಾಗಿ ನಿಂತಿರುವುದು ಹೃದಯದ ಆಧಾರದ ಮೇಲೆಯೇ. ಹೃದಯದ ಬಡಿತ (Heart Beat) ನಿಂತಿತು ಎಂದರೆ ವೈಜ್ಞಾನಿಕವಾಗಿ (Medically) ಆತನ ಆಯಸ್ಸು ಮುಗಿಯಿತು ಎಂದರ್ಥ. ಅದೇ ಮಿದುಳು (Brain) ಕೆಲಸ ಮಾಡದೆ ಇನ್ನೂ ಬದುಕಿದ್ದಾನೆಂದರೆ ಆತ ಬದುಕಿದ್ದರೂ ಕೋಮಾದಲ್ಲಿದ್ದಾನೆ(Coma) ಎಂದರ್ಥ. ಹಾಗಾಗಿ ಹೃದಯಕ್ಕೆ ಸಾಹಿತಿಗಳು(Author), ಕವಿಗಳು (Poet), ಬರಹಗಾರರು (Writers) ಅಷ್ಟು ಪ್ರಾಮುಖ್ಯತೆ ನೀಡುತ್ತಾರೆ.
ದೀಪಿಕಾ ಪಡುಕೋಣೆ ಎದೆಬಡಿತ ದಿಢೀರ್ ಏರಿಕೆಯಾಗಿದ್ದೇಕೆ ? ಇಂಥಾ ಅಸ್ವಸ್ಥತೆಗೆ ಕಾರಣವಾಗೋದೇನು ?
ಹೃದಯದಲ್ಲಿ ಕೇವಲ ಭಾವನಾತ್ಮಕ (Emotional) ಮತ್ತು ಪ್ರೀತಿಯೊಂದೇ (Love) ತುಂಬಿರದೆ, ದೇಹದ ಪ್ರಮುಖ ಅಂಗವಾಗಿದೆ (Part). ಸಂಪೂರ್ಣ ದೇಹಕ್ಕೆ ರಕ್ತವನ್ನು (Blood) ಒದಗಿಸುವುದರ ಜೊತೆಗೆ ಪೌಷ್ಠಿಕಾಂಶ (Nutrition) ನೀಡುತ್ತದೆ. ಹೃದಯಕ್ಕೆ ಸಂಬAಧಿಸಿದ ಕೆಲ ನಂಬಲಾಗದ ಸಂಗತಿಗಳನ್ನು ಇಲ್ಲಿ ತಿಳಿಸಲಾಗಿದೆ.
1. ದಿನಕ್ಕೆ ಹೃದಯವು 100,000 ಬಾರಿ ಬಡಿದುಕೊಳ್ಳುತ್ತದೆ. ಅಲ್ಲದೆ 1.5 ಗ್ಯಾಲನ್ ರಕ್ತವನ್ನು(Galleon Blood) ಪ್ರತೀ ನಿಮಿಷಕ್ಕೆ ಪಂಪ್(Pump) ಮಾಡುತ್ತದೆ. ಅಂದರೆ ದಿನಕ್ಕೆ 2,000 ಗ್ಯಾಲನ್ ರಕ್ತ ಉತ್ಪಾದಿಸುವ ಸಾಮರ್ಥ್ಯ ಹೃದಯಕ್ಕಿದೆ.
2. ನಮ್ಮ ದೇಹದಲ್ಲಿ 60,000 ದಷ್ಟು ರಕ್ತನಾಳಗಳಿದ್ದು(Blood Vessels), ವಿಶ್ವವನ್ನು(World) ಎರಡು ಭಾರಿ ಸುತ್ತಬಹುದಾಗಿದೆ.
3. ಮಹಿಳೆಯ(Woman) ಸರಾಸರಿ ಹೃದಯ ಬಡಿತವು ಪುರುಷನ ಹೃದಯ ಬಡಿತಕ್ಕಿಂತ ನಿಮಿಷಕ್ಕೆ 8 ಬಡಿತಗಳ ವೇಗವಾಗಿರುತ್ತದೆ.
4. ವಯಸ್ಕರ ಹೃದಯವು ಸುಮಾರು 2 ಕೈಗಳ(Hands) ಗಾತ್ರವನ್ನು ಒಟ್ಟಿಗೆ ಜೋಡಿಸಿದಷ್ಟು ಇರುತ್ತದೆ. ಮಗುವಿನಲ್ಲಿ ಒಂದು ಮುಷ್ಟಿಯಷ್ಟು ಹೃದಯ ಗಾತ್ರವಿರುತ್ತದೆ.
5. ಕಾರ್ನಿಯಾವನ್ನು(Cornea) ಹೊರತುಪಡಿಸಿ ದೇಹದ ಉಳಿದ ಎಲ್ಲಾ ಭಾಗಗಳಿಗೂ ಹೃದಯದಿಂದ ಉತ್ಪತ್ತಿಯಾದ ರಕ್ತ ಹರಿಯುತ್ತದೆ.
6. ಹೃದಯದ ಬಲಭಾಗದಲ್ಲಿ(Right Side) ಶ್ವಾಸಕೋಶಕ್ಕೆ(Lungs) ರಕ್ತವನ್ನು ಪಂಪ್ ಮಾಡಿದರೆ ಎಡಭಾಗದಲ್ಲಿ(Left Side) ದೇಹದ ಎಲ್ಲಾ ಭಾಗಕ್ಕೂ ರಕ್ತವನ್ನು ಪಂಪ್ ಮಾಡುತ್ತದೆ.
7. ಹೃದಯವು ಎಡಭಾಗದಲ್ಲಿ(Left Side) ಇದೆ ಎಂದು ಎಲ್ಲರು ನಂಬಿರುವ ಸತ್ಯ. ಆದರೆ ಅದು ಎರಡೂ ಶ್ವಾಸಕೋಶಗಳ(Lungs) ನಡುವಲ್ಲಿ ಇರುತ್ತದೆ.
ಚಿಕ್ಕ ಮಕ್ಕಳಲ್ಲಿ ಹೃದ್ರೋಗ, ಲಕ್ಷಣಗಳ ಬಗ್ಗೆ ಎಚ್ಚರವಿರಲಿ!
8. ಮನೆಯಲ್ಲಿ ಎಲೆಕ್ಟಿçಕ್ ಕನೆಕ್ಷನ್ ಕೊಟ್ಟಿರುವಂತೆ ಹೃದಯಕ್ಕೂ ವಿದ್ಯುತ್ ವ್ಯವಸ್ಥೆ(Electrical System) ಇದೆ. ಈ ವಿದ್ಯುತ್ ವ್ಯವಸ್ಥೆಯು ಹೃದಯ ಬಡಿತದ ಸಂಕೇತವನ್ನು ಉತ್ಪಾದಿಸುತ್ತದೆ.
9. ಲೈಂಗಿಕತೆಯ(Sex) ಒಂದು ಅವಧಿಯು ಹೃದಯಕ್ಕೆ ಉತ್ತಮ ವ್ಯಾಯಾಮವಾಗಿದೆ(Exercise). ಇದು ಕೆಲವು ಅಂದಾಜಿನ ಪ್ರಕಾರ 200 ಕ್ಯಾಲೋರಿಗಳನ್ನು(Calorie) ಸುಡುತ್ತದೆ. ಅಂದರೆ ಸುರುಕಾದ 15 ನಿಮಿಷಗಳ(Minuit) ಓಟವನ್ನು ಅಳೆಯುತ್ತದೆ.
10. ನಮ್ಮ ಜೀವಿತಾವಧಿಯಲ್ಲಿ(Life Span) ಹೃದಯವು ಒಂದು ಟ್ರಕ್ ಅಥವಾ ಶಾಲಾ ಬಸ್ ಅನ್ನು ಚಂದ್ರ ಮತ್ತು ಹಿಂದಕ್ಕೆ ಓಡಿಸಲು ಸಾಕಷ್ಟು ಶಕ್ತಿಯನ್ನು(Energy) ಉತ್ಪಾದಿಸುತ್ತದೆ.
11. ಮಹಿಳೆಯರು ಒತ್ತಡದಲ್ಲಿದ್ದಾಗ(Stress) ಹೃದಯವು ರಕ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಪಂಪ್ ಮಾಡುತ್ತದೆ. ಜೊತೆಗೆ ಪಲ್ಸ್ ರೇಟ್(Pulse Rate) ಸಹ ಹೆಚ್ಚಾಗಿರುತ್ತದೆ. ಆದರೆ ಪುರುಷನ ಅಪಧಮನಿಗಳು ಸಂಕುಚಿತಗೊಳ್ಳುತ್ತವೆ ಹಾಗೂ ರಕ್ತದ ಒತ್ತಡವೂ(Blood Pressure) ಹೆಚ್ಚಿಸುತ್ತದೆ.
12. ಪ್ರತೀ ದಿನ ಡಾರ್ಕ್ ಚಾಕೋಲೇಟ್(Dark Chocolate) ತಿನ್ನುವುದು, ಬ್ಯಾಲೆನ್ಸಡ್ ಡಯೆಟ್(Balanced Diet), ಉತ್ತಮ ಹಾಗೂ ಆರೋಗ್ಯಕರ ಜೀವನ ಶೈಲಿಯು(Healthy Life) ಹೃದಯ ಸಂಬAಧಿ ಖಾಯಿಲೆಯನ್ನು ನಿಯಂತ್ರಿಸುತ್ತದೆ.
13. ಮನುಷ್ಯ ನಿದ್ರಿಸಿದಾಗ(Sleep) ಹೃದಯ ಬಡಿತವು ಸಾಮಾನ್ಯವಾಗಿ ಕಡಿಮೆಯಾಗುತ್ತದೆ(Decrease). ದೇಹದ ನಿಧಾನಗತಿಯ ಚಯಾಪಚಯನ ಕ್ರಿಯೆಯಿಂದಾಗಿ ಇದು ಪ್ರತೀ ನಿಮಿಷಕ್ಕೆ 40 ರಿಂದ 60 BPM ನಡುವೆ ಬದಲಾಗುತ್ತಿರುತ್ತದೆ.

