ದೀಪಿಕಾ ಪಡುಕೋಣೆ (Deepika Padukone) ಹೃದಯ ಬಡಿತ (Heartbeat) ದಿಢೀರ್ ಹೆಚ್ಚಾಯಿತು, ಆಸ್ಪತ್ರೆಗೆ ಹೋಗಬೇಕಾಯಿತು, ಈ ರೋಗವು ಹೃದಯಾಘಾತ (Heart attack)ವನ್ನು ಸೂಚಿಸುತ್ತದೆ ಎಂದು ತಿಳಿದುಬಂದಿದೆ. ಹೆಚ್ಚಿದ ಹೃದಯ ಬಡಿತ ಕೂಡ ಹೃದಯಕ್ಕೆ ಸಂಬಂಧಿಸಿದ ಅಸ್ವಸ್ಥತೆಯಾಗಿದೆ. ವೈದ್ಯಕೀಯ ಭಾಷೆಯಲ್ಲಿ ಹಾರ್ಟ್ ಆರ್ಹೆತ್ಮಿಯಾ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಗೆ ಕಾರಣವೇನು ಮತ್ತು ಚಿಕಿತ್ಸೆಯೇನು ತಿಳಿಯಿರಿ. 

ಕರ್ನಾಟಕ ಮೂಲದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ (Deepika Padukone) ಶೂಟಿಂಗ್‌ ನಡುವೆಯೇ ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪ್ರಾಜೆಕ್ಟ್‌ ಕೆ (Project K movie shooting) ಎಂಬ ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿರುವ ದೀಪಿಕಾ ಪಡುಕೋಣೆ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದರು. ಅದಾದ ನಂತರ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ದೀಪಿಕಾ ಅವರ ಎದೆಬಡಿತ (Heartbeat) ಇದ್ದಕ್ಕಿದ್ದಂತೆ ಏರಿಕೆಯಾಯಿತು. ನಂತರ ತುಂಬಾ ಬಳಲಿಕೆಯಿಂದ ಕಂಡುಬಂದರು. ಅವರೇ ಇದನ್ನು ಗಮನಿಸಿ ತಿಳಿಸಿದರು. ತಕ್ಷಣ ಚಿಕಿತ್ಸೆ ನೀಡಲಾಗಿದ್ದು. ಸೆಟ್‌ಗೆ ವಾಪಸಾಗಿದ್ದಾರೆ ಮತ್ತು ಗುಣಮುಖರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಹೃದ್ರೋಗಕ್ಕೆ ಸಂಬಂಧಿಸಿದ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ ಮತ್ತು ಯುವಕರು ಸಹ ಇದಕ್ಕೆ ಬಲಿಯಾಗುತ್ತಿದ್ದಾರೆ. ಇತ್ತೀಚೆಗೆ ಗಾಯಕ ಕೆಕೆ ಮತ್ತು ಕಳೆದ ಒಂದು ವರ್ಷದಲ್ಲಿ ಅನೇಕ ಸೆಲೆಬ್ರಿಟಿಗಳು ಹೃದಯ ಸಂಬಂಧಿ ಅಸ್ವಸ್ಥತೆಗಳಿಂದ ನಿಧನರಾದರು. ಹೆಚ್ಚಿದ ಹೃದಯ ಬಡಿತ ಕೂಡ ಹೃದಯಕ್ಕೆ ಸಂಬಂಧಿಸಿದ ಅಸ್ವಸ್ಥತೆಯಾಗಿದೆ. ವೈದ್ಯಕೀಯ ಭಾಷೆಯಲ್ಲಿ ಹಾರ್ಟ್ ಆರ್ಹೆತ್ಮಿಯಾ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಗೆ ಕಾರಣವೇನು ಮತ್ತು ಚಿಕಿತ್ಸೆಯೇನು ತಿಳಿಯಿರಿ.

Deepika Padukone ಸೇರಿದಂತೆ ಡ್ರಗ್ಸ್' ವ್ಯಸನದ ಆರೋಪವಿರುವ ಟಾಪ್‌ ನಟಿಯರು ಇವರೇ

ಹಾರ್ಟ್ ಆರ್ಹೆತ್ಮಿಯಾ ಎಂದರೇನು ?
ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರು ತಮ್ಮ ಹೃದಯದ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಈ ಕಾರಣದಿಂದಾಗಿ, ಹೃದಯದ ಆರ್ಹೆತ್ಮಿಯಾ (Arrhythmia) ಬಗ್ಗೆ ನೀವೆಲ್ಲರೂ ತಿಳಿದಿರಬೇಕು. ಏಕೆಂದರೆ ಈ ಸಮಸ್ಯೆಯು ಹೃದಯಾಘಾತದ ಲಕ್ಷಣವಾಗಿರಬಹುದು. ಹಾರ್ಟ್ ಆರ್ಹೆತ್ಮಿಯಾ ಹೃದಯದ ಅಸ್ವಸ್ಥತೆಯಾಗಿದ್ದು ಇದರಲ್ಲಿ ನಿಮ್ಮ ಹೃದಯ ಬಡಿತವು ಅಸಹಜ ಮತ್ತು ಅನಿಯಮಿತವಾಗುತ್ತದೆ. ಹೃದಯದ ಆರ್ಹೆತ್ಮಿಯಾ ಹೃದಯದ ಕಾಯಿಲೆಯಾಗಿದ್ದು, ಇದರಲ್ಲಿ ಹೃದಯ ಬಡಿತ ಮತ್ತು ಲಯವು ತೊಂದರೆಗೊಳಗಾಗುತ್ತದೆ. ಈ ಸಂಕೇತಗಳು ಹೃದಯ ಸ್ನಾಯುಗಳ ಚಟುವಟಿಕೆಯನ್ನು ಸಂಘಟಿಸುತ್ತದೆ, ಇದರಿಂದ ಹೃದಯವು ಆರಾಮವಾಗಿ ರಕ್ತವನ್ನು ಒಳಗೆ ಮತ್ತು ಹೊರಗೆ ಪಂಪ್ ಮಾಡುತ್ತದೆ. ಈ ಮಾರ್ಗಗಳೊಂದಿಗಿನ ಸಮಸ್ಯೆಗಳು ಅಥವಾ ವಿದ್ಯುತ್ ಪ್ರಚೋದನೆಗಳು ಆರ್ಹೆತ್ಮಿಯಾಗಳಿಗೆ ಕಾರಣವಾಗಬಹುದು.

ಹೃದಯ ಆರ್ಹೆತ್ಮಿಯಾ ಎಷ್ಟು ಅಪಾಯಕಾರಿ?
ಹೃದಯದ ಆರ್ಹೆತ್ಮಿಯಾಗಳು ಸಾಮಾನ್ಯ ಮತ್ತು ನಿರುಪದ್ರವವಾಗಿದ್ದರೂ, ಮೆದುಳು, ಶ್ವಾಸಕೋಶಗಳು, ಹೃದಯ ಅಥವಾ ಇತರ ಪ್ರಮುಖ ಅಂಗಗಳಿಗೆ ರಕ್ತದ ಹರಿವಿನಲ್ಲಿ ಅಡಚಣೆಯನ್ನು ಉಂಟುಮಾಡಿದಾಗ ಚಿಕಿತ್ಸೆ ನೀಡದೆ ಬಿಟ್ಟಾಗ ಅವು ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಇದನ್ನು ಆರ್ಹೆತ್ಮಿಯಾವನ್ನು ಡಿಸ್ರಿತ್ಮಿಯಾ ಎಂದೂ ಕರೆಯಬಹುದು.

ಯುವಜನರು ಹಾರ್ಟ್‌ ಸ್ಕ್ರೀನಿಂಗ್ ಮಾಡೋದ್ರಿಂದ ಹೃದಯಾಘಾತ ತಪ್ಪಿಸಬಹುದಾ ?

ಆರ್ಹೆತ್ಮಿಯಾ ಲಕ್ಷಣಗಳು
ಆರ್ಹೆತ್ಮಿಯಾದ ಯಾವುದೇ ನಿರ್ದಿಷ್ಟ ಲಕ್ಷಣಗಳಿಲ್ಲ, ಆದರೆ ಕೆಲವು ಚಿಹ್ನೆಗಳ ಮೂಲಕ ನೀವು ಅದನ್ನು ಕಂಡು ಹಿಡಿಯಬಹುದು. ಇಂಥಾ ಸಮಸ್ಯೆ ಕಂಡು ಬಂದಾಗ, ಕುತ್ತಿಗೆ ಅಥವಾ ಎದೆಯಲ್ಲಿ ನೋವು, ವೇಗದ ಹೃದಯ ಬಡಿತ, ನಿಧಾನ ಹೃದಯ ಬಡಿತ, ಅನಿಯಮಿತ ಹೃದಯ ಬಡಿತ ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇನ್ನು ಕೆಲವೊಮ್ಮೆ ಎದೆ ನೋವು, ಉಸಿರಾಟದ ತೊಂದರೆ, ಮೂರ್ಛೆ, ಆಯಾಸ, ಅತಿಯಾದ ಬೆವರುವಿಕೆಯಂತಹ ರೋಗಲಕ್ಷಣಗಳನ್ನು ಅನುಭವಿಸಿದರೆ, ತಕ್ಷಣ ವೈದ್ಯರ ಬಳಿಗೆ ಹೋಗಿ. ಏಕೆಂದರೆ ಇದು ಗಂಭೀರ ಹೃದಯ ಕಾಯಿಲೆಯೂ ಆಗಿರಬಹುದು.

ಆರ್ಹೆತ್ಮಿಯಾ ಕಾರಣಗಳು
ಆರ್ಹೆತ್ಮಿಯಾ ಸಂಭವಿಸುವಿಕೆಯ ಹಿಂದೆ ಅನೇಕ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ವೈದ್ಯಕೀಯ ಕಾರಣಗಳಿರಬಹುದು. ತೀವ್ರ ರಕ್ತದೊತ್ತಡ, ಖಿನ್ನತೆ, ಅಲರ್ಜಿಗಳು, ಚಳಿ, ಥೈರಾಯ್ಡ್ ಅಸ್ವಸ್ಥತೆ, ನಿದ್ರೆಯಲ್ಲಿ ಉಸಿರುಕಟ್ಟುವಿಕೆ, ರಕ್ತಹೀನತೆ, ವ್ಯಾಯಾಮ, ಒತ್ತಡ ಅಥವಾ ಆತಂಕ, ಧೂಮಪಾನ ಅಥವಾ ಮದ್ಯಪಾನ, ಕೆಲವೊಂದು ಔಷಧಿಗಳನ್ನು ತೆಗೆದುಕೊಳ್ಳುವುದು, ಹೃದಯರೋಗ ಮೊದಲಾದವುಗಳು ಆರ್ಹೆತ್ಮಿಯಾ ಸಮಸ್ಯೆಗೆ ಕಾರಣವಾಗಬಹುದು.

ಆರ್ತಿಮಿಯಾಗೆ ಚಿಕಿತ್ಸೆಯೇನು ? 
ಆರ್ಹೆತ್ಮಿಯಾ ಸಮಸ್ಯೆಯನ್ನು ಪತ್ತೆಹಚ್ಚಲು, ವೈದ್ಯರು ಇಸಿಜಿ, ಹೃದಯ ಮಾನಿಟರ್, ಒತ್ತಡ ಪರೀಕ್ಷೆ, ಎಲೆಕ್ಟ್ರೋಫಿಸಿಯೋಲಾಜಿಕಲ್ ಪರೀಕ್ಷೆ, ರಕ್ತ ಪರೀಕ್ಷೆ ಇತ್ಯಾದಿಗಳ ಸಹಾಯವನ್ನು ತೆಗೆದುಕೊಳ್ಳಬಹುದು. ನಂತರ ಆರ್ಹೆತ್ಮಿಯಾ ಚಿಕಿತ್ಸೆಯು ಪ್ರಾರಂಭವಾಗುತ್ತದೆ. ಇದರ ಚಿಕಿತ್ಸೆಯು ಜೀವನಶೈಲಿಯ ಬದಲಾವಣೆ, ಅಧಿಕ ರಕ್ತದೊತ್ತಡ ಅಥವಾ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದು, ತಣ್ಣೀರಿನಿಂದ ಮುಖವನ್ನು ನೆನೆಸುವುದು, ಹೃದಯ ಬಡಿತವನ್ನು ನಿಧಾನಗೊಳಿಸಲು ಕೆಲವು ರೀತಿಯಲ್ಲಿ ವೇಗಸ್ ನರವನ್ನು ಸಕ್ರಿಯಗೊಳಿಸುವುದು, ಬೀಟಾ-ಬ್ಲಾಕರ್‌ಗಳು, ಕ್ಯಾಲ್ಸಿಯಂ ಚಾನಲ್ ಬ್ಲಾಕರ್‌ಗಳು, ಆಂಟಿಅರಿಥಮಿಕ್ ಔಷಧಿಗಳು ಇತ್ಯಾದಿಗಳನ್ನು ತೆಗೆದುಕೊಳ್ಳುವುದು ಸೇರಿದೆ.