ತಂದೆಯ ಈ ಪ್ರೀತಿಗೆ ಬೆಲೆ ಕಟ್ಟೋದು ಹ್ಯಾಗೆ...!
- ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಗು
- ಶಸ್ತ್ರಚಿಕಿತ್ಸೆಗಾಗಿ ಮಗುವಿನ ತಲೆಗೆ ಬ್ಲೇಡ್ : ತಲೆ ತುಂಬಾ ಸ್ಟಿಚ್
- ಪುಟ್ಟ ಮಗಳ ಮೇಲಿನ ಪ್ರೀತಿಗಾಗಿ ಆಕೆಯಂತೆ ಹೇರ್ ಸ್ಟೈಲ್ ಮಾಡಿಸಿಕೊಂಡ ತಂದೆ
ಪೋಷಕರು ಮಕ್ಕಳ ಒಳಿತಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧರಿರುತ್ತಾರೆ. ತಮ್ಮನ್ನು ಕಷ್ಟಕ್ಕೆ ತಳ್ಳಿಯಾದರೂ ಅವರು ತಮ್ಮ ಮಕ್ಕಳಿಗೆ ಸುಂದರ ಬದುಕು ನೀಡಲು ಇನ್ನಿಲ್ಲದ ಶ್ರಮ ವಹಿಸುತ್ತಾರೆ. ಹಾಗೆಯೇ ತಂದೆ ತಾಯಿ ಪ್ರೀತಿಗೆ ಸರಿಸಟಿಯಾದುದು ಈ ಜಗತ್ತಿನಲ್ಲಿ ಬೇರಾವುದು ಇಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ. ಇಲ್ಲಿ ಮಗಳ ಮೇಲೆ ತಂದೆಯೊಬ್ಬರು ತೋರಿದ ಪ್ರೀತಿಯ ಎಲ್ಲರ ಹೃದಯವನ್ನು ಬೆಚ್ಚಗಾಗಿಸುತ್ತಿದೆ.
ಇಂಟರ್‌ನೆಟ್ ತಂದೆ ಮಗಳ ಫೋಟೋವೊಂದು ವೈರಲ್ ಆಗಿದೆ. ಇದು ತಂದೆ(Father) ಮಗಳ ನಡುವಿನ ಒಂದು ಬಾಂಧವ್ಯವನ್ನು ಸೂಚಿಸುತ್ತದೆ. ಮಗಳಿಗೆ ಇತ್ತೀಚೆಗೆ ಮೆದುಳಿನ ಶಸ್ತ್ರಚಿಕಿತ್ಸೆಯಾಗಿತ್ತು. ಶಸ್ತ್ರಚಿಕಿತ್ಸೆಯ ಹಿನ್ನೆಲೆಯಲ್ಲಿ ಆ ಪುಟ್ಟಮಗುವಿನ ತಲೆಯನ್ನು ಅರ್ಧ ಶೇವ್ ಮಾಡಿ ತಲೆ ತುಂಬ ಹೊಲಿಗಗಳನ್ನು ಹಾಕಲಾಗಿತ್ತು. ಮಗುವಿನ ತಲೆತುಂಬ ಸ್ಟಿಚ್‌ಗಳು ಕಾಣಿಸುವ ದೃಶ್ಯ ಈ ಫೋಟೋದಲ್ಲಿದೆ. ಮಗುವಿಗೆ ಜೊತೆ ನೀಡುವ ಸಲುವಾಗಿ ತಂದೆಯೂ ಕೂಡ ತನ್ನ ಮಗುವಿನಂತೆಯೇ ತನ್ನ ತಲೆಗೆ ಶೇವ್ ಮಾಡಿ ಸ್ಟಿಚ್‌ಗಳಿರುವಂತೆ ಹೇರ್ ಸ್ಟೈಲ್ (Hair style) ಮಾಡಿಸಿಕೊಂಡಿದ್ದಾನೆ. ತಂದೆ ತನ್ನ ಮುದ್ದಾದ ಪುಟಾಣಿ ಮಗುವಿನ ತಲೆ ಸವರುತ್ತಿರುವ ದೃಶ್ಯದ ಫೋಟೋ ಇದಾಗಿದೆ.
ಸಣ್ಣ ಮಗುವಿಗೆ ಮಿದುಳಿನ ಶಸ್ತ್ರಚಿಕಿತ್ಸೆ (Surgery) ಮಾಡಲಾಗಿತ್ತು ಮತ್ತು ಆಕೆಯ ತಂದೆ ಮಗುವಿಗೆ ಜೊತೆಯಾಗುವ ಸಲುವಾಗಿ ತನ್ನ ಕೂದಲನ್ನು ಅದೇ ರೀತಿ ವಿನ್ಯಾಸ ಗೊಳಿಸಿದರು ಇದು ನನ್ನನ್ನು ಅಳುವಂತೆ ಮಾಡಿತು ಎಂದು ಬರೆದು ಈ ಫೋಟೋವನ್ನು ಪೋಸ್ಟ್ ಮಾಡಲಾಗಿದೆ.
ಚಿತ್ರವು ಈಗ ವೈರಲ್ ಆಗಿದ್ದು, 8000 ಕ್ಕೂ ಹೆಚ್ಚು ಜನರು ಇದನ್ನು ಇಷ್ಟ ಪಟ್ಟಿದ್ದಾರೆ . ಜೊತೆಗೆ ಈ ಫೋಟೋ 1000 ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. ಈ ಫೋಟೋ ನೋಡಿದ ಬಹುತೇಕರು ಭಾವುಕರಾಗಿದ್ದಾರೆ. ಒಬ್ಬ ಬಳಕೆದಾರನು ತಂದೆಯ ಪ್ರೀತಿಯು ಆತ ತೋರ್ಪಡಿಸಿದ್ದಕ್ಕಿಂತ ಆತನ ಹೃದಯದಲ್ಲಿ ಅಡಗಿರುವ ಪ್ರೀತಿ ಹೆಚ್ಚಾಗಿದೆ ಎಂದು ಹೇಳಿದರು. ನಿಸ್ವಾರ್ಥ ಪ್ರೀತಿ ಮತ್ತು ದುಃಖವು ಈ ಉದಾತ್ತ ವ್ಯಕ್ತಿಯ ಮುಖ ಮತ್ತು ಮುಚ್ಚಿದ ಕಣ್ಣುಗಳಿಂದ ಪ್ರತಿಫಲಿಸುತ್ತಿದೆ, ಈ ಬಾರಿಯ ವರ್ಷದ ತಂದೆ ಪ್ರಶಸ್ತಿಯು ಈ ವ್ಯಕ್ತಿಗೆ ಹೋಗುತ್ತದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮಂಗದ ಮರಿಗೆ ಮಗುವನ್ನು ಹೋಲಿಸಿದ ಎಲನ್ ಮಸ್ಕ್
ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಅಪ್ಪ ಎಂದರೆ ಒಂದು ಹಿಡಿ ಹೆಚ್ಚು ಪ್ರೀತಿ. ಅಪ್ಪನಿಗೂ ಅಷ್ಟೇ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಮೇಲೆಯೇ ಒಂದಷ್ಟು ಹೆಚ್ಚಿಗೆ ಪ್ರೀತಿ. ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಟ್ಟು ಕಳುಹಿಸುವಾಗಲಂತೂ ಕೆಲವು ಕುಟುಂಬಗಳಲ್ಲಿ ತಂದೆಯರು ಮಕ್ಕಳಂತೆ ಅಳುವುದನ್ನು ನಾವು ನೋಡಿದ್ದೇವೆ. ನೀವು ನೋಡಿರಬಹುದು. ಅದೇ ರೀತಿಯ ಅಪ್ಪ ಮಗಳ ಬಾಂಧವ್ಯದ ಕತೆ ಇದು. ಕಳೆದು ಹೋದ ಅಪನನ್ನು ಮದುವೆ ಸಂದರ್ಭದಲ್ಲಿ ನೆನೆದ ಮಗಳು ಅವರ ನೆನಪು ಸದಾ ಹಚ್ಚ ಹಸುರಾಗಿ ಉಳಿಯುವ ಸಲುವಾಗಿ ತಾನು ಮದುವೆಗೆ ಬಳಸುವ ವೇಲ್‌ನಲ್ಲಿ ಅಪ್ಪ ಆಕೆಗೆ ಬರೆದ ಪತ್ರವನ್ನು ಅಂಬ್ರಾಯಿಡರಿಯಲ್ಲಿ ಸ್ಟಿಚ್ ಮಾಡಿಸಿದ್ದಳು. ಇದು ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, ನೋಡುಗರ ಕಣ್ಣನ್ನು ತೇವಗೊಳಿಸಿತ್ತು.
Covid Vaccine ಹಾಕಿಸಲು ಅಪ್ಪನನ್ನು ಆರು ಗಂಟೆ ಬೆನ್ನ ಮೇಲೆ ಹೊತ್ತು ಸಾಗಿದ ಮಗ!