New Year 2023: ಹೊಸ ವರ್ಷ ಹೀಗಿರಲಿದೆ ಡಯಟ್ ಟ್ರೆಂಡ್
ವರ್ಷ ವರ್ಷಕ್ಕೂ ನಮ್ಮ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗ್ತಿದೆ. ಕೊರೊನಾ ಮಹಾಮಾರಿ ಇಡೀ ಜಗತ್ತಿನ ಗತಿಯನ್ನು ಬದಲಿಸಿದೆ. ಆರಾಮವಾಗಿ ಉಂಡು-ತಿಂದ್ಕೊಂಡು ಇದ್ದವರು ಈಗ ಆರೋಗ್ಯದ ಬಗ್ಗೆ ಕಾಳಜಿ ಶುರು ಮಾಡಿದ್ದಾರೆ.
ರೋಗ ನಿರೋಧಕ ಶಕ್ತಿ ಎಷ್ಟು ಇಂಪಾರ್ಟೆಂಟ್ ಅನ್ನೋದು ಕೊರೊನಾ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ತಿಳಿದಿದೆ. ಇದೇ ಕಾರಣಕ್ಕೆ ಜನರು ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ಹೆಚ್ಚು ಗಮನ ಹರಿಸ್ತಿದ್ದಾರೆ. ಎರಡು ವರ್ಷಗಳ ಕಾಡಿದ ಕೊರೊನಾ ಈಗ್ಲೂ ನಮ್ಮಿಂದ ದೂರವಾಗಿಲ್ಲ. ಆದ್ರೆ ಹಿಂದಿನಷ್ಟು ಭಯ ಈಗ ಇಲ್ಲದ ಕಾರಣ ಜನರು ಆರೋಗ್ಯವನ್ನು ಸುಧಾರಿಸುವತ್ತ ಚಿತ್ತ ಹರಿಸಿದ್ದಾರೆ. ಆರೋಗ್ಯಕರ ಆಹಾರ ಹಾಗೂ ಡಯಟ್ ಗೆ ಹೆಚ್ಚು ಆದ್ಯತೆ ನೀಡ್ತಿದ್ದಾರೆ. 2022ರಲ್ಲಿ ಕೆಲ ಡಯಟ್ ಪ್ರಸಿದ್ಧಿ ಪಡೆದಿದೆ. 2023ರಲ್ಲೂ ಈ ಆಹಾರ ಸೇವನೆ ಮುಂದುವರೆಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2023 ರಲ್ಲೂ ಜನರು ತಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುವ ಬಗ್ಗೆ ಗಮನ ಹರಿಸಲಿದ್ದಾರೆ. ವಿಭಿನ್ನ ಆಹಾರ ತಜ್ಞರ ವರದಿಗಳನ್ನು ನೋಡಿದ ನಂತ್ರ 2023 ರ ರಲ್ಲಿ ಯಾವಾ ಆಹಾರ ಪದ್ಧತಿ ಇರಲಿದೆ ಎಂಬುದು ಬಹುತೇಕ ಸ್ಪಷ್ಟವಾಗಿದೆ. ನಾವಿಂದು 2023ರಲ್ಲಿ ಮುಂದುವರೆಯಬಹುದಾದ ಡಯಟ್ ಟ್ರೆಂಡ್ ಬಗ್ಗೆ ಮಾಹಿತಿ ನೀಡ್ತೆವೆ.
ಹೆಲ್ತಿ (Healthy) ಸ್ನ್ಯಾಕ್ಸ್ ಟ್ರೆಂಡ್ : ನಮ್ಮ ಜೀವನಶೈಲಿ (Lifestyle) ಯು ಆರೋಗ್ಯಕರವಾದ ಆಹಾರವನ್ನು ಅವಲಂಬಿಸಿದೆ. ಅದ್ರಲ್ಲೂ ಆರೋಗ್ಯಕರ ಸ್ನ್ಯಾಕ್ಸ್ (Snacks) ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಆಹಾರ ವಿತರಣಾ ಅಪ್ಲಿಕೇಶನ್‌ಗಳು ಆರೋಗ್ಯಕರ ಆಹಾರ (Food) ವನ್ನು ಮನೆಗೆ ಕಳುಹಿಸುತ್ತಿವೆ. ಆರೋಗ್ಯಕರ ಸ್ನ್ಯಾಕ್ಸ್ ಪ್ರವೃತ್ತಿ 2023 ರಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. ಪ್ರೊಟೀನ್ ನಿಂದ ತುಂಬಿದ ಆಹಾರ ಸೇವನೆ ಪ್ರವೃತ್ತಿ ಹೆಚ್ಚಾಗಲಿದೆ. ಇದಲ್ಲದೆ ರೆಡಿ ಟು ಗೊ ಡ್ರಿಂಕ್ಸ್ ಹಾಗೂ ತರಕಾರಿ ಮತ್ತು ಹಣ್ಣಿನ ಜ್ಯೂಸ್ ಸೇವನೆ ಟ್ರೆಂಡ್ ಕೂಡ 2023ರಲ್ಲಿ ಹೆಚ್ಚಾಗಲಿದೆ. ವರ್ಕ್ ಫ್ರಂ ಹೋಮ್ ನಲ್ಲಿರುವ ಜನರು ಈ ಆಹಾರಕ್ಕೆ ಹೆಚ್ಚಿನ ಮಹತ್ವ ನೀಡ್ತಿದ್ದಾರೆ.
ಹಸಿ ಟೊಮೇಟೋನೆ ಎಷ್ಟ್ ತಿನ್ತೀರಿ, ಡ್ರೈ ಟೊಮೆಟೋ ತಿನ್ನಿ..ಕ್ಯಾನ್ಸರ್ ಬರಲ್ಲ
ಸಪ್ಲಿಮೆಂಟ್ಸ್ ಆಹಾರದ ಟ್ರೆಂಡ್ : 2020 ರಿಂದಲ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಜೀವನಶೈಲಿಯಲ್ಲಿ ಸುಧಾರಣೆ ತರುವ ಪ್ರಯತ್ನ ನಡೆಸಿದ್ದಾರೆ. ಈಗಿಗ ಸಪ್ಲಿಮೆಂಟರಿ ಟ್ರೆಂಡ್ ಹೆಚ್ಚಾಗಿದೆ. ವಿಟಮಿನ್ ಡಿ ಸಪ್ಲಿಮೆಂಟ್, ಐರನ್ ಸಪ್ಲಿಮೆಂಟ್ ಜೊತೆಗೆ ಇನ್ನೂ ಸಪ್ಲಿಮೆಂಟ್ ಸೇವನೆ ಮಾಡ್ತಿದ್ದಾರೆ. ಜೀರ್ಣಕ್ರಿಯೆ ಸುಧಾರಿಸಬಲ್ಲ ಹಾಗೂ ರೋಗನಿರೋಧಕ ಶಕ್ತಿಗೆ ಅಗತ್ಯವಿರುವ ಸಪ್ಲಿಮೆಂಟರಿ ಲಭ್ಯವಿದ್ದು, ಜನರು ಅದರ ಸೇವನೆ ಹೆಚ್ಚು ಮಾಡಿದ್ದಾರೆ. ಮುಂದಿನ ವರ್ಷ ಅಂದ್ರೆ 2023ರಲ್ಲಿ ಈ ಪ್ರವೃತ್ತಿ ಮತ್ತಷ್ಟು ಹೆಚ್ಚಾಗಲಿದೆ.
ಪ್ರೋಟೀನ್ ಭರಿತ ಆಹಾರದ ಟ್ರೆಂಡ್ : ಆರೋಗ್ಯಕರ ತಿಂಡಿ ಮಾತ್ರವಲ್ಲ 2023 ರಲ್ಲಿ ಪ್ರೋಟೀನ್ ಭರಿತ ಆಹಾರಗಳ ಟ್ರೆಂಡ್ ಕೂಡ ಪ್ರಾರಂಭವಾಗಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಜ್ಞರು ಪ್ರೊಟೀನ್ ಯುಕ್ತ ಆಹಾರ ಸೇವನೆ ಮಾಡುವಂತೆ ಸಲಹೆ ನೀಡ್ತಿದ್ದಾರೆ. ತಜ್ಞರ ಸಲಹೆ ಪಾಲನೆ ಮಾಡ್ತಿರುವ ಜನರು ಪ್ರೊಟೀನ್ ಆಹಾರಕ್ಕೆ ಆದ್ಯತೆ ನೀಡಲು ಶುರು ಮಾಡಿದ್ದಾರೆ.
ಮನೆಯಲ್ಲಿಯೇ ಸಿದ್ಧವಾದ ಊಟ : ಕೊರೊನಾ ನಂತ್ರ ಜನರು ಮನೆ ಊಟಕ್ಕೆ ಹೆಚ್ಚು ಗಮನ ಹರಿಸಿದ್ದಾರೆ. ರೋಗನಿರೋಧಕ ಶಕ್ತಿ ಹೆಚ್ಚಿಸಲು ಮನೆ ಊಟ ಸಹಕಾರಿ ಎಂಬುದು ಜನರ ಅರಿವಿಗೆ ಬಂದಿದೆ. ಮನೆ ಊಟ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಹೊಟೇಲ್ ಅಥವಾ ಹೊರಗೆ ಆಹಾರ ಸೇವನೆ ಮಾಡ್ತಿದ್ದವರು ಕಚೇರಿಗೆ ಡಬ್ಬಿ ಕೊಂಡೊಯ್ಯಲು ಶುರು ಮಾಡಿದ್ದಾರೆ. ಮನೆ ಊಟದ ಟ್ರೆಂಡ್ 2023ರಲ್ಲೂ ಮುಂದುವರೆಯಲಿದೆ. ಸಲಾಡ್ ಸೇರಿದಂತೆ ಎಲ್ಲ ಆಹಾರವನ್ನು ಜನರು ಮನೆಯಲ್ಲಿಯೇ ತಯಾರಿಸಲು ಶುರು ಮಾಡಿದ್ದಾರೆ.
ಚಳಿಗಾಲದಲ್ಲಿ ಕುಗ್ಗುವ ರಕ್ತನಾಳ, ಹೀಗೆ ಮಾಡಿಲ್ಲಾಂದ್ರೆ ಹಾರ್ಟ್ ಅಟ್ಯಾಕ್ ಗ್ಯಾರಂಟಿ
ವಿಭಿನ್ನ ಆಹಾರ, ಆಗಾಗ ಸೇವನೆ : ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡ ಜನರು ಪ್ಲೇಟ್ ನಲ್ಲಿ ಕಾರ್ಬೋಹೈಡ್ರೇಟ್ ಆಹಾರವನ್ನು ಕಡಿಮೆ ಮಾಡಿದ್ದಾರೆ. ಹಣ್ಣು, ತರಕಾರಿ ಸೇವನೆ ಮಾಡ್ತಿದ್ದಾರೆ. ಎಲ್ಲ ಬಣ್ಣದ ಆಹಾರಕ್ಕೆ ಪ್ರಾಮುಖ್ಯತೆ ನೀಡುವ ಜೊತೆಗೆ ಆಗಾಗ ಸ್ವಲ್ಪ ಸ್ವಲ್ಪ ಆಹಾರ ತಿನ್ನುವ ಪ್ರವೃತ್ತಿ ರೂಢಿಸಿಕೊಳ್ತಿದ್ದಾರೆ.