Health Study: ಕೊರೊನಾದಿಂದ ಚೇತರಿಸಿಕೊಂಡ ಮಕ್ಕಳನ್ನು ಕಾಡೋ ಅನಾರೋಗ್ಯ

ಈ ಕೊರೋನಾ ಬಂದು ಕೊಟ್ಟ ಕಾಟ ಅಷ್ಟಿಷ್ಟಲ್ಲ. ಆದರೆ, ಅದರಿಂದ ಚೇತರಿಸಿಕೊಂಡವರು ಬದುಕಿದೆಯಾ ಬಡ ಜೀವ ಅಂತ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಅಂತವರಲ್ಲಿ ವಿಚಿತ್ರ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಅದರಲ್ಲಿ ಮಕ್ಕಳಲ್ಲಿ ಇದು ವಿಪರೀತ ಎನ್ನುವಷ್ಟು ಕಾಟ ಕೊಡುತ್ತಿವೆ.

Illness among kids who recovered from coronavirus and solutions

ಕೊರೊನಾ (Corona) ಮಹಾಮಾರಿ ದುಃಸ್ವಪ್ನವಾಗಿ ಕಾಡ್ತಿದೆ. ಜಗತ್ತಿ (World) ನ ಜನರು ಕೊರೊನಾದಿಂದ ಸಾಕಷ್ಟು ಬದಲಾವಣೆ ಕಂಡಿದ್ದಾರೆ. ಕೊರೊನಾ ಇಡೀ ಜಗತ್ತಿನ ಚಿತ್ರಣವನ್ನು ಬದಲಿಸಿದೆ ಅಂದ್ರೆ ತಪ್ಪಾಗಲಾರದು. ಈಗ ಕೆಲ ಪ್ರದೇಶಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಿರಬಹುದು ಆದ್ರೆ ಅಪಾಯ ಇನ್ನೂ ಇದೆ. ಕೊರೊನಾದಿಂದಾಗಿ ಅನೇಕರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ಕೊರೊನಾ ಗೆದ್ದು ಬಂದಿದ್ದರೂ ಅದ್ರ ಸೋಂಕು (Infection) ಅವರ ಜೀವ ಹಿಂಡುತ್ತಿದೆ. ಅನೇಕ ಜನರು ಕೊರೊನಾದಿಂದ ಈಗ್ಲೂ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಅಪಾಯಕಾರಿ ಕೊರೊನಾ ಮಕ್ಕಳನ್ನು ಬಿಟ್ಟಿಲ್ಲ. ಕೊರೊನಾ ವೈರಸ್‌ನಿಂದ ಮಕ್ಕಳು ಕೂಡ ತೀವ್ರ ತೊಂದರೆ ಅನುಭವಿಸಿದ್ದಾರೆ, ಅನುಭವಿಸುತ್ತಿದ್ದಾರೆ. ಕೊರೊನಾ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ. ಈಗ ಮತ್ತೊಂದು ಸಂಶೋಧನೆ ಮಕ್ಕಳ ಬಗ್ಗೆ ಆಘಾತಕಾರಿ ವಿಷ್ಯವನ್ನು ಹೊರ ಹಾಕಿದೆ. ಕೊರೊನಾ ಬಗ್ಗೆ  ಯುಕೆ ಯುನಿವರ್ಸಿಟಿ ಆಫ್ ಈಸ್ಟ್ ಆಂಗ್ಲಿಯಾ ಮತ್ತು ಫಿಫ್ತ್ ಸೆನ್ಸ್ ನ ಸಂಶೋಧಕರು ನಡೆಸಿದ ಅಧ್ಯಯ ಏನು ಹೇಳುತ್ತದೆ ಎಂಬುದನ್ನು ನೋಡೋಣ.

ಬಗ್ಗೆ  ಯುಕೆ ಯುನಿವರ್ಸಿಟಿ ಆಫ್ ಈಸ್ಟ್ ಆಂಗ್ಲಿಯಾ ಮತ್ತು ಫಿಫ್ತ್ ಸೆನ್ಸ್ ನ ಸಂಶೋಧಕರ ಪ್ರಕಾರ, ಕೊರೊನಾದಿಂದ ವಾಸನೆ ಕಳೆದುಕೊಂಡಿದ್ದ ಹಾಗೂ ಬಾಯಿ ರುಚಿ ಕಳೆದುಕೊಂಡಿದ್ದ ಮಕ್ಕಳ ಆಹಾರ ಪದ್ಧತಿ ಈಗ ಹದಗೆಟ್ಟಿದೆ. ಅವರ ಆಹಾರ ಸೇವನೆ ವಿಧಾನವೂ ಬದಲಾಗಿದೆಯಂತೆ. ಕೊರೊನಾದಿಂದ ಚೇತರಿಸಿಕೊಂಡ ಮಕ್ಕಳು ವಿಚಿತ್ರ ವಾಸನೆ ಹಾಗೂ ಬಾಯಿ ರುಚಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಆ ವಾಸನೆಯ ಕಾರಣಕ್ಕೆ ಮಕ್ಕಳು ಆಹಾರದಿಂದ ದೂರ ಸರಿಯುತ್ತಿದ್ದಾರೆ. ಅವರ ಆಹಾರ ಸೇವನೆ ಕಡಿಮೆಯಾಗಿದೆ ಎಂದು ಈ ಅಧ್ಯಯನವು ಹೇಳುತ್ತದೆ. ನಿಮ್ಮ ಮಗುವೂ ಕೋವಿಡ್‌ನಿಂದ ಬಳಲಿದ್ದರೆ ಅಥವಾ ಬಳಲುತ್ತಿದ್ದರೆ, ಚೇತರಿಕೆ ನಂತ್ರ ಅವ್ರ ಸಮಸ್ಯೆ ಅರಿಯುವುದು ಬಹಳ ಮುಖ್ಯ. ಪಾಲಕರು ಮಕ್ಕಳ ಸಮಸ್ಯೆ ಅರಿತಾಗ ಪರಿಹಾರ ಸುಲಭವಾಗುತ್ತದೆ.

ಎಸಿ ಇಲ್ಲದೆ ಮನೆಯನ್ನು ತಂಪಾಗಿ ಇರಿಸಲು ಕೆಲವು ಟಿಪ್ಸ್!

ಕೊರೊನಾ ಲಕ್ಷಣದಲ್ಲಿ ಇದೂ ಒಂದು : ಅನೇಕ ಸಂಶೋಧಕರು ಮತ್ತು ತಜ್ಞರು ಕೊರೊನಾ ವೈರಸ್‌ನಿಂದ ವಾಸನೆ ಮತ್ತು ರುಚಿಯ ನಷ್ಟವನ್ನು ದೃಢಪಡಿಸಿದ್ದಾರೆ. ಮೊದಲ ಅಲೆ ಮತ್ತು ಎರಡನೇ ಅಲೆ ಸಮಯದಲ್ಲಿ ಸಹ ರೋಗಿಗಳು ವಾಸನೆ ಮತ್ತು ರುಚಿ ಕಳೆದುಕೊಂಡಿರುವುದನ್ನು ವರದಿ ಮಾಡಿದ್ದಾರೆ.  ದೇಹದಿಂದ ಸೋಂಕು ಸಂಪೂರ್ಣವಾಗಿ ಹೊರಗೆ ಹೋಗುವವರೆಗೂ ಈ ಲಕ್ಷಣವಿರುತ್ತದೆ. ಅದೇ ಸಮಯದಲ್ಲಿ, ಮೂರನೇ ಅಲೆಯಲ್ಲಿ ಈ ಲಕ್ಷಣದ ಬಗ್ಗೆ ಯಾವುದೇ ವರದಿ ಬಂದಿಲ್ಲ.

ಮಕ್ಕಳನ್ನು ಕಾಡ್ತಿದೆ ಸಮಸ್ಯೆ : ಕೊರೊನಾ ಸೋಂಕಿನ ನಂತ್ರ ಮಕ್ಕಳ ಆಹಾರ ಸೇವನೆಯಲ್ಲಿ ಸಾಕಷ್ಟು ಬದಲಾವಣೆ ಕಾಣ್ತಿದೆ. ಮಕ್ಕಳು ಮೊದಲು ಇಷ್ಟಪಟ್ಟು ತಿನ್ನುತ್ತಿದ್ದ ಆಹಾರದಿಂದಲೂ ಈಗ ದೂರ ಸರಿಯುತ್ತಿದ್ದಾರೆ. ಮೊದಲಿನಿಂದಲೂ ಕಡಿಮೆ ಆಹಾರ ಸೇವನೆ ಮಾಡುವ ಆಟಿಜಂನಂತಹ ಸಮಸ್ಯೆ ಹೊಂದಿರುವ ಮಕ್ಕಳಿಗೆ ಇದು ಮತ್ತಷ್ಟು ಸಮಸ್ಯೆ ಎನ್ನುತ್ತಿದ್ದಾರೆ ತಜ್ಞರು.

Fitness Tips: ಈ ಅಪಾಯಕಾರಿ ವ್ಯಾಯಾಮದ ಸುದ್ದಿಗೆ ಹೋಗ್ಬೇಡಿ

ಸಮಸ್ಯೆಗೆ ಇಲ್ಲಿದೆ ಪರಿಹಾರ : ಮಕ್ಕಳು ಕಡಿಮೆ ಆಹಾರ ಸೇವನೆ ಮಾಡ್ತಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ಶಿಕ್ಷೆ ನೀಡುವುದು ತಪ್ಪು. ಅಥವಾ ಇದನ್ನು ಪಾಲಕರು ನಿರ್ಲಕ್ಷ್ಯಿಸಬಾರದು. ಮಕ್ಕಳಿಗೆ ಪೌಷ್ಠಿಕಾಂಶದ ಕೊರತೆಯಾದ್ರೆ ತೊಂದ್ರೆಯಾಗುತ್ತದೆ. ಹಾಗೆ ತೂಕ ನಷ್ಟ ಸೇರಿದಂತೆ ಅನಾರೋಗ್ಯ ಅವರನ್ನು ಕಾಡ್ಬಹುದು. ಹಾಗಾಗಿ ಪಾಲಕರು ಈ ಬಗ್ಗೆ ಗಮನ ಹರಿಸ್ಬೇಕು. ಮಕ್ಕಳಿಗೆ ಮೃದುವಾದ ಆಹಾರ ತಿನ್ನಲು ನೀಡಬೇಕು. ಜೊತೆಗೆ ಯಾವ ಆಹಾರವನ್ನು ಮಕ್ಕಳು ಇಷ್ಟಪಡ್ತಿದ್ದಾರೆ ಎಂಬುದನ್ನು ಗಮನಿಸಿ ಅದನ್ನೇ ಹೆಚ್ಚಿನ ಪ್ರಮಾಣದಲ್ಲಿ ತಿನ್ನಿಸಬೇಕು. ಮಕ್ಕಳು ಆಹಾರ ಸೇವನೆ ಮಾಡುವಾಗ ವಾಸನೆ ಬರದಂತೆ ಅವರ ಮೂಗನ್ನು ಮೃದುವಾಗಿ ಮುಚ್ಚಿದ್ರೆ ಒಳ್ಳೆಯದು. 

Latest Videos
Follow Us:
Download App:
  • android
  • ios