ಜಪಾನಿನ ಜನರು ಶತಾಯುಷಿಗಳಾಗಲು ಅನುಸರಿಸುವ ಮೂರು ಪ್ರಮುಖ ಅಭ್ಯಾಸಗಳನ್ನು ಈ ಲೇಖನ ವಿವರಿಸುತ್ತದೆ. ವಜ್ರಾಸನದಲ್ಲಿ ಊಟ, ಸಸ್ಯಾಹಾರ ಮತ್ತು ನಿಯಮಿತ ದೈಹಿಕ ಚಟುವಟಿಕೆಗಳು ಅವರ ದೀರ್ಘಾಯುಷ್ಯಕ್ಕೆ ಕಾರಣವೆಂದು ತಿಳಿಸುತ್ತದೆ.

ಸಾಮಾನ್ಯವಾಗಿ ನಾವು ಭಾರತದಲ್ಲಿ ನೋಡಬಹುದು ಚಿಕ್ಕ ಚಿಕ್ಕವಯಸ್ಸಿನವರೆ ಬೇರೆ ಬೇರೆ ಕಾಯಿಲೆಗೆ ಒಳಗಾಗಿ ಸಾಯುತ್ತಾರೆ. ಭಾರತದ ಜೀವಿತಾವಧಿ ಕೇವಲ 60 ವರ್ಷಕ್ಕೆ ಬಂದು ತಲುಪಿದೆ. ವಿಶ್ವದಲ್ಲೇ ಜಪಾನಿನ ಜನರು ದೀರ್ಘಕಾಲದ ವರೆಗೆ ಬದುಕುತ್ತಾರೆ ಎಂದು ಹೇಳಲಾಗುತ್ತೆದೆ. ಹಾಗೇ ಅವರ ಸೌಂದರ್ಯ ಸಹ ಎಷ್ಟೇ ವಯಸ್ಸಾದರೂ ಕೂಡ ಅವರ ಚರ್ಮ ಸುಕ್ಕುಗಟ್ಟುವುದಿಲ್ಲ. ಯಾವಾಗಲೂ ಹೊಳೆಯುತ್ತಲೇ ಇರುತ್ತದೆ. ಜಪಾನಿನ ಜನರು ಯಾಕೆ 100 ವರ್ಷ ಬದುಕುತ್ತಾರೆ, (japanese lifestyle)ಅವರಿಗೆ ದೀರ್ಘಾಯುಷ್ಯ ಯಾಕೆ ಗೊತ್ತಾ? ಅವರು ದೀರ್ಘಾಯುಷ್ಯ ರಹಸ್ಯ ಇಲ್ಲಿದೆ. ಅವರು ಅಳವಡಿಸಿಕೊಂಡಿರುವ ಈ 3 ಅಭ್ಯಾಸಗಳು ಅವರನ್ನು ದೀರ್ಘಾಯುಷ್ಯ ಇರುವಂತೆ ನೋಡಿಕೊಳ್ಳುತ್ತದೆ. ಜಪಾನಿನ ಅಭ್ಯಾಸಗಳನ್ನ ಅಳವಡಿಸಿಕೊಂಡರೆ ದೀರ್ಘಾ ಕಾಲದವರಗೆ ಬದುಕಬಹುದು. ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, ಜಪಾನಿನ ಹುಡುಗರು ಮತ್ತು ಹುಡುಗಿಯರು ಅನಾರೋಗ್ಯ ಅಥವಾ ಅಂಗವೈಕಲ್ಯವಿಲ್ಲದೆ 73 ವರ್ಷಗಳವರೆಗೆ ಬದುಕುತ್ತಿದ್ದಾರೆ, ಜಪಾನ್‌ ದೇಶವು ವಿಶ್ವದಲ್ಲೇ ಅತಿ ಹೆಚ್ಚು "ಆರೋಗ್ಯಕರ ಜೀವಿತಾವಧಿ" ಹೊಂದಿದೆ. ಅವರ ಒಟ್ಟಾರೆ ಜೀವಿತಾವಧಿ 80ವರ್ಷ ಎಂದು ಹೇಳಗಾಗುತ್ತದೆ.

ಜಪಾನ್‌, ಚೀನಾ ಮತ್ತು ವಿಯೆಟ್ನಾಂನಂತಹ ದೇಶಗಳ ಜನರು 100 ವರ್ಷಗಳಿಗಿಂತ ಹೆಚ್ಚು ಕಾಲ ಹೇಗೆ ಬದುಕುತ್ತಾರೆ. ಆದರೆ ಭಾರತದ ಜನರ ಆಯುಷ್ಯ ಕಾಲ ಕಳೆದಂತೆ ಕಡಿಮೆಯಾಗುತ್ತಿದೆ. ಕಾರಣ ರೂಢಿಸಿಕೊಂಡಿರುವಂತಹ ಅಭ್ಯಾಸಗಳಿಂದ. ಇಂದಿನ ಭಾರತದಲ್ಲಿ ಅನೇಕ ಯುವ ಜನರು ತಮ್ಮ ಆಹಾರ ಪದ್ಧತಿ ಕಡೆಗೆ ಗಮನ ನೀಡುತ್ತಿಲ್ಲ. ಹೊರಗಿನ ಊಟಕ್ಕೆ ಹೆಚ್ಚು ಆಸಕ್ತಿಯನ್ನು ತೋರಿಸುತ್ತಿದ್ದಾರೆ ಮನೆ ಊಟಕ್ಕಿಂತ ಹೊರಗಿನ ಆಹಾರಗಳನ್ನ ಹೆಚ್ಚು ಸೇವಿಸುತ್ತಿದ್ದಾರೆ. ಇದರಿಂದ ಅವರ ದೇಹದಲ್ಲಿ ಅಗತ್ಯವಾಗಿ ಬೇಕಾಗುವಂತಹ ಯಾವುದೇ ರೀತಿಯ ಪೋಷಕಾಂಶಗಳು ದೊರೆಯುವುದಿಲ್ಲ. ಆ ಕಾರಣಕ್ಕೆ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಂತಹ ಮಾರಣಾಂತಿಕ ಕಾಯಿಲೆಗಳು ಬಂದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಜಪಾನ್ ಜನರು ಆರೋಗ್ಯದ (japanese lifestyle) ವಿಚಾರದಲ್ಲಿ ಮುಂದು, ಜಪಾನಿಯರು 40ರಲ್ಲೂ ಫಿಟ್​​ ಆಗಿರುತ್ತಾರೆ. ಯಾವುದೇ ಕೆಲಸವನ್ನ ಕೊಟ್ಟರು ಸಹ ಮಾಡುವಂತಹ ಸಾಮರ್ಥ್ಯವನ್ನ ಹೊಂದಿರುತ್ತಾರೆ. ಯಾಕೆ ಜಪಾನಿನ ಜನರು ಯಾಕೆ ದೀರ್ಘಾಯುಷ್ಯ ಹೊಂದಿದ್ದಾರೆ ಗೊತ್ತಾ? ಅವರ ದೀರ್ಘಾಯುಷ್ಯ ಗುಟ್ಟೇನು ಗೊತ್ತಾ? ಜಪಾನಿನ ಜನರು ಪಾಲನೆ ಮಾಡುವ ಈ 3 ನಿಯಮಗಳು ಅವರ ಆಯಸ್ಸನ್ನು 100ರಷ್ಟು ವೃದ್ಧಿಸುತ್ತದೆ. ಜಪಾನಿಯರು ಕೆಲವು ಸರಳ ಮತ್ತು ಅದ್ಭುತ ಅಭ್ಯಾಸದಿಂದ 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕುವ ಉಡುಗೊರೆಯನ್ನು ಪಡೆದಿದ್ದಾರೆ. ಅದೇ ರೀತಿ ಭಾರತದಲ್ಲೂ ಈ ಪದ್ಧತಿಯನ್ನು ಅಳವಡಿಸಿಕೊಂಡರೆ ಖಂಡಿತ ನಾವು ಸಹ ದೀರ್ಘಾಯುಷ್ಯ ಪಡೆಯಬಹುದು.

ವಜ್ರಾಸನದಲ್ಲಿ ಊಟ ಮಾಡುವುದು: ಜಪಾನ್ ಮತ್ತು ಅನೇಕ ಏಷ್ಯಾದ ದೇಶಗಳ ಜನರು ವಜ್ರಾಸನದಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುತ್ತಾರೆ. ಮೊಣಕಾಲುಗಳ ಮೇಲೆ ಕುಳಿತು ದೇಹದ ಭಾರವನ್ನು ಹಿಮ್ಮಡಿಯ ಮೇಲೆ ಇಟ್ಟುಕೊಳ್ಳುವುದು. ಆಯುರ್ವೇದ ಮತ್ತು ಯೋಗ ವಿಜ್ಞಾನವು ಈ ಭಂಗಿಯನ್ನು ಅತ್ಯುತ್ತಮವೆಂದು ಪರಿಗಣಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ, ಆಹಾರವು ಉತ್ತಮ ರೀತಿಯಲ್ಲಿ ಜೀರ್ಣವಾಗಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಮೊಣಕಾಲುಗಳ ಮೇಲೆ ಕುಳಿತು ಊಟ ಮಾಡುವುದರಿಂದ ಹೊಟ್ಟೆ ಉಬ್ಬುವುದಾಗಲಿ ಅಥವಾ ಅಜೀರ್ಣದಂತಹ ಸಮಸ್ಯೆಗಳು ಬರುವುದಿಲ್ಲ. ವಜ್ರಾಸನದಲ್ಲಿ ಕೂತು ಊಟ ಮಾಡುವುದರಿಂದ ಬೊಜ್ಜು ಕಡಿಮೆಯಾಗುತ್ತದೆ. ಬೆನ್ನುಮೂಳೆಯು ನೇರವಾಗಿರುತ್ತದೆ, ಇದು ದೇಹದ ಭಂಗಿಯನ್ನು ಸುಧಾರಿಸುತ್ತದೆ.

ಹೆಚ್ಚು ಸಸ್ಯಹಾರ ಹಾಗೂ ಕಡಿಮೆ ಪ್ರೊಸೆಸ್ಡ ಆಹಾರ ಜಪಾನಿಯರು ಆಹಾರದ ವಿಷಯದಲ್ಲಿ ಹೆಚ್ಚು ಕಟ್ಟು ನಿಟ್ಟಿಗಿರುತ್ತಾರೆ. ಅವರು ಹೆಚ್ಚಾಗಿ ಮೀನು, ಹಸಿರು ಆಹಾರ, ಸೋಯಾ ಉತ್ಪನ್ನಗಳು, ಹಸಿರು ತರಕಾರಿಗಳು ಅವರ ಊಟದಲ್ಲಿ ಹೆಚ್ಚಾಗಿರುತ್ತದೆ. ಸಕ್ಕರೆ ಹೆಚು ಉಪ್ಪು ತೈಲ ಯುಕ್ತ ಆಹಾರಗಳನ್ನ ಸೇವಿಸುವುದು ತೀರಾ ಕಡಿಮೆ. ಇದರಿಂದ ಅವರಿಗೆ ಬೊಜ್ಜು ಇತರ ಕಾಯಿಲೆಗಳ ಕಾಡುವುದು ಕಡಿಮೆ. ಹೆಚ್ಚಿನ ತೈಲ ಭರಿತವಾದಂತಹ ಆಹಾರಗಳನ್ನ ಸೇವಿಸದೇ ಇರುವುದರಿಂದ ಅವರ ತ್ವಚೆ ಕೂಡ ಯಾವಾಗೂ ಹೊಳೆಯುತ್ತಿರುತ್ತದೆ.

ಜೀವನಶೈಲಿ: (Life Style) ಜಪಾನಿಯರು ದೈಹಿಕ ಚಟುವಟಿಕೆಯನ್ನು ಜೀವನದ ಒಂದು ಭಾಗವಾಗಿ ಅಳವಡಿಸಿಕೊಂಡಿದ್ದಾರೆ. ಅವರು ಹೆಚ್ಚು ನಡೆಯುತ್ತಾರೆ, ಸೈಕಲ್ ಓಡಿಸುತ್ತಾರೆ ಮತ್ತು ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡುತ್ತಾರೆ. ಹೆಚ್ಚಾಗಿ ಪ್ರಕೃತಿಯ ಜೊತೆಗೆ ಬೆರೆಯುತ್ತಾರೆ. ಜಪಾನಿನಲ್ಲಿ ಹೆಚ್ಚಾಗಿ ವಾಹನಗಳನ್ನ ಬಳಸುವುದಿಲ್ಲ. ಬದಲಾಗಿ ನಡೆದುಕೊಂಡು ಹೋಗುವಂತಹ ಪದ್ದತಿ ಇದೆ. ಹಾಗೇ ಜಪಾನಿನ ಜನರು ಒತ್ತಡವನ್ನು ಕಡಿಮೆ ಮಾಡಲು ವಿವಿಧ ತಂತ್ರಗಳನ್ನು ಬಳಸುತ್ತಾರೆ. ಧ್ಯಾನ, ಯೋಗ ಮತ್ತು ಪ್ರಕೃತಿಯೊಂದಿಗೆ ಸಮಯ ಕಳೆಯುವುದು ಅವರ ಜೀವನಶೈಲಿಯ ಭಾಗವಾಗಿದೆ. ಜಪಾನಿಯರು ಚಿಕ್ಕ ವಯಸ್ಸಿನಿಂದಲೇ ದೈಹಿಕ ಚಟುವಟಿಕೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ , ಶೇ. 98 ಕ್ಕಿಂತ ಹೆಚ್ಚು ಜಪಾನಿನ ಮಕ್ಕಳು ಶಾಲೆಗೆ ನಡೆದುಕೊಂಡು ಅಥವಾ ಸೈಕಲ್‌ನಲ್ಲಿ ಹೋಗುತ್ತಾರೆ.

ಸೂರ್ಯಾಸ್ತದ ನಂತರ ಊಟ ಮಾಡಬಾರದು; ಸೂರ್ಯ ಮುಳುಗಿದ ತಕ್ಷಣವೇ ಈ ದೇಶಗಳಲ್ಲಿ ಜನರು ತಮ್ಮ ದಿನದ ಊಟವನ್ನು ಮುಗಿಸುತ್ತಾರೆ. ರಾತ್ರಿ ಊಟ ಮಾಡದಿರುವುದರಿಂದ, ದೇಹವು ತನ್ನಲ್ಲಿರುವ ವಿಷದ ಅಂಶಗಳನ್ನು ನಿವಾರಣೆ ಮಾಡಲು ಹಾಗೂ ಜೀರ್ಣಕ್ರಿಯೆಯನ್ನು ಪ್ರಾರಂಭಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದು ರೋಗಗಳ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ ಮತ್ತು ರೋಗನಿರೋಧಕ ವ್ಯವಸ್ಥೆಯು ಬಲಪಡಿಸುತ್ತದೆ. ಆಯುರ್ವೇದದಲ್ಲಿ ಕೂಡ ಇದನ್ನು ‘ರಾತ್ರೌ ಭೋಜನಂ ತ್ಯಜೇತ್’ ಎಂದು ಹೇಳಲಾಗುತ್ತದೆ, ಅಂದರೆ, ರಾತ್ರಿ ಊಟವನ್ನು ಬಿಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇವೆಲ್ಲವೂ ಜಪಾನೀಯರು ಅಳವಡಿಸಿಕೊಂಡಿರುವ ಅಭ್ಯಾಸಗಳು. ಇವುಗಳಿಂದ ಅವರ ಜೀವಿತಾವಧಿ ಹೆಚ್ಚಾಗಿದೆ. ಅವರು ಹೆಚ್ಚಾಗಿ ಪ್ರಕೃತಿಯ ಜೊತೆಗೆ ಬೆರೆಯುತ್ತಾರೆ. ಭಾರತದ ಪರಂಪರೆ ಹಾಗೂ ಸಂಪ್ರದಾಯವೂ ಸಹ ಜಪಾನೀಯರ ಜೀವನ ಶೈಲಿಯನ್ನೇ ಹೋಲುತ್ತದೆ. ಆದರೆ ಇಗಿನ ಆಧುನಿಕ ಬದುಕಿನತ್ತ ಭಾರತೀಯರು ಹೆಚ್ಚಾಗಿ ಮುಖ ಮಾಡುತ್ತಿರುವುದರಿಂದ. ಜೀವಿತಾವಧಿ ಕಡಿಮೆಯಾಗುತ್ತಿದೆ.