Health Tips: ಥೈರಾಯ್ಡ್ ಗ್ರಂಥಿಯಲ್ಲಾಗೋ ಏರಿಳಿತ ಪಾದಗಳಲ್ಲೂ ಗೋಚರಿಸುತ್ತೆ!
ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆಯಲ್ಲಿ ಏರಿಳಿತವಾದಾಗ ದೇಹದಲ್ಲಿ ಹಲವು ರೀತಿಯ ಲಕ್ಷಣಗಳನ್ನು ಕಾಣಬಹುದು. ಸುಸ್ತು, ತೂಕದಲ್ಲಿ ಏರಿಳಿತ ಇವೆಲ್ಲ ಸಾಮಾನ್ಯ. ಪಾದಗಳಲ್ಲೂ ಹಲವು ಲಕ್ಷಣಗಳು ಗೋಚರಿಸುತ್ತವೆ. ಪಾದಗಳಲ್ಲಿ ಕಂಡುಬರುವ ನೋವು, ಊತ, ಬಿರುಕು ಇತ್ಯಾದಿ ಥೈರಾಯ್ಡ್ ಸಮಸ್ಯೆಯ ಲಕ್ಷಣಗಳೂ ಆಗಿರಬಹುದು.
ಪುಟ್ಟದಾದ ಥೈರಾಯ್ಡ್ ಗ್ರಂಥಿ ದೇಹದ ಮೇಲೆ ಬೀರುವ ಪ್ರಭಾವ ಅಗಾಧ. ಗಂಟಲಿನಲ್ಲಿ ಮೂಲಸ್ಥಾನ ಹೊಂದಿರುವ ಚಿಟ್ಟೆ ಆಕಾರದ ಈ ಸಣ್ಣ ಗ್ರಂಥಿ ಇಡೀ ದೇಹದ ಮೆಟಬಾಲಿಸಂ ಅನ್ನು ನಿಯಂತ್ರಿಸುತ್ತದೆ ಎಂದರೆ ಮೇಲ್ನೋಟಕ್ಕೆ ನಂಬಿಕೆ ಮೂಡುವುದಿಲ್ಲ. ಆದರೆ, ಅದರ ಕಾರ್ಯದಲ್ಲಿ ಚೂರೇ ಚೂರು ಏರುಪೇರಾದರೂ ಸಾಕು, ಆರೋಗ್ಯದಲ್ಲಾಗುವ ಏರಿಳಿತವೇ ಅದರ ಕಾರ್ಯಕ್ಷಮತೆಗೆ ಸಾಕ್ಷಿ ಎನಿಸುತ್ತದೆ. ಥೈರಾಯ್ಡ್ ಗ್ರಂಥಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾದರೆ, ಕೆಲವು ಲಕ್ಷಣಗಳು ಸಾಮಾನ್ಯವಾಗಿ ಗೋಚರಿಸುತ್ತವೆ. ಅತಿಯಾದ ಸುಸ್ತು, ತೂಕದಲ್ಲಿ ಏರಿಳಿತ, ಮೂಡಿನಲ್ಲಿ ವ್ಯತ್ಯಾಸ ಇವೆಲ್ಲ ಸಾಮಾನ್ಯ. ಇಂತಹ ಕೆಲವು ಲಕ್ಷಣಗಳ ಮೂಲಕ ಥೈರಾಯ್ಡ್ ಗ್ರಂಥಿಯ ಕಾರ್ಯವಿಧಾನದಲ್ಲಿ ಏನಾದರೂ ಸಮಸ್ಯೆ ಉಂಟಾಗಿರುವುದನ್ನು ಊಹಿಸಬಹುದು. ನೀವು ಸುಸ್ತೆಂದು ವೈದ್ಯರ ಬಳಿಗೆ ಹೋದಾಗ ಕೆಲವು ಲಕ್ಷಣಗಳ ಆಧಾರದ ಮೇಲೆ ಥೈರಾಯ್ಡ್ ಟೆಸ್ಟ್ ಮಾಡಿಸಲು ಹೇಳುವುದು ಸರ್ವೇಸಾಮಾನ್ಯ. ಹಾಗೆಯೇ, ಥೈರಾಯ್ಡ್ ಕಾರ್ಯಕ್ಷಮತೆಗೆ ಧಕ್ಕೆ ಉಂಟಾದಾಗ ಪಾದಗಳಲ್ಲೂ ಅದರ ಪರಿಣಾಮ ಗೋಚರಿಸುತ್ತದೆ. ಅದನ್ನು ಗುರುತಿಸದೇ ಇದ್ದರೆ ಸಮಸ್ಯೆ ಬಿಗಡಾಯಿಸಬಹುದು. ಹೀಗಾಗಿ, ಪಾದಗಳಲ್ಲಿ ಕಂಡುಬರುವ ಥೈರಾಯ್ಡ್ ಸಮಸ್ಯೆಯ ಲಕ್ಷಣಗಳನ್ನು ಅರಿತುಕೊಳ್ಳುವುದು ಅಗತ್ಯ.
• ಪಾದಗಳಲ್ಲಿ ನೋವು (Pain in Feet)
ಥೈರಾಯ್ಡ್ ಗ್ರಂಥಿ (Thyroid Gland) ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಾಗ ಪಾದಗಳಲ್ಲಿ ನೋವು ಕಾಣುವುದು ಅತಿ ಸಾಮಾನ್ಯ ಲಕ್ಷಣ. ದೇಹದ ಮೆಟಬಾಲಿಸಂ (Metabolism) ಅಂದರೆ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುವ ಥೈರಾಯ್ಡ್ ಗ್ರಂಥಿ ಇದಕ್ಕೆ ಅಗತ್ಯವಿರುವ ಎಲ್ಲ ರೀತಿಯ ಹಾರ್ಮೋನ್ (Hormones) ಸ್ರವಿಕೆಯ ಮೇಲೆ ಪ್ರಭಾವ ಬೀರುತ್ತದೆ. ಒಂದೊಮ್ಮೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾದರೆ, ಪಾದಗಳ ಮಾಂಸಖಂಡಗಳು (Muscles) ಮತ್ತು ಕೀಲುಗಳಲ್ಲಿ ನೋವು ಉಂಟಾಗುತ್ತದೆ. ಹೈಪೋಥೈರಾಯ್ಡಿಸಂ (ಥೈರಾಯ್ಡ್ ಸಕ್ರಿಯವಾಗಿಲ್ಲದಿರುವುದು) ಹಾಗೂ ಹೈಪರ್ ಥೈರಾಯ್ಡಿಸಂ (ಥೈರಾಯ್ಡ್ ಗರಿಷ್ಠ ಪ್ರಮಾಣದಲ್ಲಿ ಸಕ್ರಿಯವಾಗಿರುವುದು) ಈ ಎರಡೂ ಸಂದರ್ಭಗಳಲ್ಲೂ ಪಾದಗಳಲ್ಲಿ ನೋವು ಕಂಡುಬರುತ್ತದೆ.
ಪುರುಷರ ಥೈರಾಯ್ಡ್ ಪ್ರಮಾಣ ಎಷ್ಟಿರಬೇಕು ಗೊತ್ತಾ?
• ಪಾದಗಳಲ್ಲಿ ಸೀಳು (Dry Cracked Feet)
ಸಾಮಾನ್ಯವಾಗಿ ನಾವು ಪಾದ ಒಡೆಯುವುದು ಅಥವಾ ಹಿಮ್ಮಡಿ ಬಿರುಕು ಎಂದು ಹೇಳುವ ಸಮಸ್ಯೆ ಕೂಡ ಥೈರಾಯ್ಡ್ ಸರಿಯಾಗಿಲ್ಲದಿರುವಾಗ ಉಂಟಾಗಬಹುದು. ಇದುವರೆಗಿನ ಅಧ್ಯಯನಗಳ (Study) ಪ್ರಕಾರ, ಹೈಪೋಥೈರಾಯ್ಡಿಸಂ ಸಮಸ್ಯೆ ಇದ್ದಾಗ ಪಾದಗಳಲ್ಲಿ ಬಿರುಕು ಉಂಟಾಗುತ್ತದೆ. ಚರ್ಮ ಶುಷ್ಕವಾಗುವುದು (Dry Skin) ಕಂಡುಬರುತ್ತದೆ. ಥೈರಾಯ್ಡ್ ಕಾರ್ಯಕ್ಷಮತೆ ಕುಂದಿರುವಾಗ (Underactive) ದೇಹದಲ್ಲಿ ಸೂಕ್ತ ಪ್ರಮಾಣದಲ್ಲಿ ತೈಲಗಳ (Oil) ಉತ್ಪಾದನೆ ಆಗುವುದಿಲ್ಲ ಹಾಗೂ ಸರಿಯಾಗಿ ಬೆವರೂ (Sweat) ಬರುವುದಿಲ್ಲ. ಇವುಗಳಿಂದ ಚರ್ಮ ತೇವದಿಂದ ಕೂಡಿರುತ್ತದೆ. ಇಲ್ಲವಾದರೆ ಶುಷ್ಕವಾಗುತ್ತದೆ. ಒರಟಾಗುತ್ತದೆ ಮತ್ತು ತುರಿಕೆ ಉಂಟಾಗುತ್ತದೆ. ಇದು ಸ್ಪಷ್ಟವಾಗಿ ಪಾದಗಳಲ್ಲಿ ಕಂಡುಬರುತ್ತದೆ. ಆಗ ಪಾದಗಳ ಹಿಮ್ಮಡಿ ಆಳವಾಗಿ ಬಿರುಕು ಬಿಡುತ್ತವೆ.
• ತುರಿಕೆ (Itchy Skin)
ಪಾದಗಳ ಬೆರಳುಗಳ ಮೇಲ್ಭಾಗದಲ್ಲಿ ಅತಿಯಾಗಿ ತುರಿಕೆ ಕಾಣುವುದು ಸಹ ಥೈರಾಯ್ಡ್ ಸಮಸ್ಯೆಯ (Problem) ಲಕ್ಷಣವಾಗಿರಬಹುದು. ಪಾದಗಳಲ್ಲೊಂದೇ ಅಲ್ಲ, ದೇಹದ ಇತರ ಭಾಗದಲ್ಲೂ ತುರಿಕೆ ಉಂಟಾಗಬಹುದು. ಚರ್ಮ ಅತಿಯಾಗಿ ಶುಷ್ಕವಾದಾಗ ಹೀಗಾಗುತ್ತದೆ.
• ಪಾದಗಳು ಅತಿಯಾಗಿ ತಣ್ಣಗಾಗುತ್ತವೆಯೇ?
ಪಾದಗಳು ಅತಿಯಾಗಿ ತಣ್ಣಗಾಗುವ (Cold) ಸಮಸ್ಯೆ ಇದೆಯೇ? ಇದೂ ಸಹ ಥೈರಾಯ್ಡ್ ಸಮಸ್ಯೆಯ ಲಕ್ಷಣ. ಏಕೆಂದರೆ, ಥೈರಾಯ್ಡ್ ಗ್ರಂಥಿ ದೇಹದ ರಕ್ತಪರಿಚಲನೆಯನ್ನು (Blood Circulation) ನಿಧಾನಗೊಳಿಸುತ್ತದೆ. ಕಾಲುಗಳಿಗೆ ಸೂಕ್ತ ಪ್ರಮಾಣದಲ್ಲಿ ರಕ್ತ ಪೂರೈಕೆ ಆಗದೆ ಇದ್ದಾಗ ಪಾದಗಳು ತಣ್ಣಗಾಗುವ ಸಮಸ್ಯೆ ಹೆಚ್ಚು. ಚಳಿಗಾಲದಲ್ಲಿ (Winter) ಈ ಕಿರಿಕಿರಿ ಅಧಿಕ.
ಸೋಯಾ ಸಾಸ್ ತಿನ್ನೋದ್ರಿಂದ ಆರೋಗ್ಯಕ್ಕೆ ಅಪಾಯ!
• ಊತ (Swelling) ಮತ್ತು ನೋವು
ಪಾದಗಳು ಊದಿಕೊಳ್ಳುವುದು, ನೋವು ಉಂಟಾಗುವುದು ಹಲವು ಸಮಸ್ಯೆಗಳಿಂದ ಉಂಟಾಗಬಹುದು. ಕಿಡ್ನಿ (Kidney) ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದಾಗ, ಮಧುಮೇಹ ಇರುವಾಗ ಇದು ಸಹಜ. ಹಾಗೆಯೇ, ಥೈರಾಯ್ಡ್ ಕ್ಷಮತೆಯಿಂದ ಇಲ್ಲದಿದ್ದರೂ ಊತ ಮತ್ತು ನೋವು ಉಂಟಾಗಬಹುದು.