Health Tips : ಮೂಲಂಗಿಯನ್ನು ಹೀಗೆ ತಿಂದ್ರೆ ಗ್ಯಾಸ್ ಸಮಸ್ಯೆ ಕಾಡಲ್ಲ..

ಮೂಲಂಗಿ ಹೆಸರು ಕೇಳಿದ್ರೆ ಮೂಗು ಮುರಿಯುವವರೇ ಹೆಚ್ಚು. ವೈದ್ಯರು ಸಲಹೆ ನೀಡಿದಾಗ ಮಾತ್ರ ಮೂಗು ಮುಚ್ಚಿ ಮೂಲಂಗಿ ತಿನ್ನುವವರಿದ್ದಾರೆ. ಮೂಲಂಗಿ ಗ್ಯಾಸ್ ಗೆ ಮೂಲ ಎನ್ನುವವರು ಇದನ್ನು ಓದಿ. ಸರಿಯಾದ ಸಮಯದಲ್ಲಿ ಮೂಲಂಗಿ ಸೇವಿಸಿದ್ರೆ ಸಾಕಷ್ಟು ಪ್ರಯೋಜನವಿದೆ.
 

If You Eat Radish Like This You Need Not Bother About Gas Problem

ಮೂಲಂಗಿ (Radish )ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಆರೋಗ್ಯ ತಜ್ಞರ (Health Experts) ಪ್ರಕಾರ, ಚಳಿಗಾಲದಲ್ಲಿ ಮೂಲಂಗಿಯ ಸೇವನೆಯು ರೋಗನಿರೋಧಕ ಶಕ್ತಿ (Immunity )ಯನ್ನು ಬಲಪಡಿಸುತ್ತದೆ. ಮೂಲಂಗಿ, ಶೀತ(Cold )ಮತ್ತು ಕೆಮ್ಮಿ(Cough)ನಂತಹ ಕಾಯಿಲೆಗಳಿಂದ ನಮ್ಮನ್ನು ದೂರವಿಡುತ್ತದೆ. ಮೂಲಂಗಿಯನ್ನು ತಿನ್ನುವುದರಿಂದ ಹೃದಯ (Heart) ಸಂಬಂಧಿ ಕಾಯಿಲೆಗಳ ಅಪಾಯವೂ ಕಡಿಮೆಯಾಗುತ್ತದೆ.

ಆದರೆ ಅನೇಕರಿಗೆ ಮೂಲಂಗಿ ವಾಸನೆ (smell) ಇಷ್ಟವಾಗುವುದಿಲ್ಲ. ಇದೇ ಕಾರಣಕ್ಕೆ ಮೂಲಂಗಿಯಿಂದ ದೂರವಿರ್ತಾರೆ. ಮೂಲಂಗಿ ತಿಂದ ನಂತರ ಗ್ಯಾಸ್ ಹೊರ ಬರುತ್ತದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮುಜುಗರ ಅನುಭವಿಸಬೇಕಾಗುತ್ತದೆ. ಇದು ಕೂಡ ಮೂಲಂಗಿಯಿಂದ ಜನರು ದೂರವಿರಲು ಒಂದು ಕಾರಣವಾಗಿದೆ. ಅನೇಕ ಜನರು ಮೂಲಂಗಿ ತಿಂದ ನಂತರ ಹೊಟ್ಟೆ ನೋವು (Stomach pain )ಬರುತ್ತೆ ಎನ್ನುತ್ತಾರೆ. ಆಯುರ್ವೇದ (Ayurved)ದ ಪ್ರಕಾರ, ಮೂಲಂಗಿಯನ್ನು ಸರಿಯಾದ ವಿಧಾನದಲ್ಲಿ ಸೇವನೆ ಮಾಡದೆ ಹೋದಲ್ಲಿ ಈ ಎಲ್ಲ ಸಮಸ್ಯೆಯುಂಟಾಗುತ್ತದೆ.

ಮೂಲಂಗಿಯನ್ನು ತಿನ್ನಲು ಸರಿಯಾದ ಸಮಯ (Time)ವಿದೆ. ಜನರು ಸಮಯವಲ್ಲದ ಸಮಯದಲ್ಲಿ  ಹಾಗೂ ತಮ್ಮದೇ ವಿಧಾನದಲ್ಲಿ ಮೂಲಂಗಿಯನ್ನು ಸೇವಿಸುತ್ತಾರೆ. ಇದರ ಪರಿಣಾಮವಾಗಿ ಹೊಟ್ಟೆ ನೋವು ಅಥವಾ ಅತಿಯಾದ ಗ್ಯಾಸ್ ಸಮಸ್ಯೆ ಕಾಡುತ್ತದೆ. ಮೂಲಂಗಿಯನ್ನು ತಿನ್ನಲು ಸರಿಯಾದ ಸಮಯ ಯಾವುದು ಮತ್ತು ಮೂಲಂಗಿಯನ್ನು ಸೇವಿಸುವ ಸರಿಯಾದ ವಿಧಾನ ಯಾವುದು ಎಂಬುದನ್ನು ಇಂದು ಹೇಳ್ತೆವೆ. 

ಮೂಲಂಗಿ ತಿನ್ನಲು ಸರಿಯಾದ ಸಮಯ ಯಾವುದು?
ಮೂಲಂಗಿಯನ್ನು ಎಂದಿಗೂ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ರಾತ್ರಿಯ ಊಟದಲ್ಲಿಯೂ ಮೂಲಂಗಿಯನ್ನು ಸೇವಿಸಬಾರದು.ಆಗಾಗ್ಗೆ ಜನರು ಮೂಲಂಗಿಯನ್ನು ಆಹಾರದೊಂದಿಗೆ ಸಲಾಡ್ ಆಗಿ ತಿನ್ನುತ್ತಾರೆ. ಬೇಯಿಸಿದ ತರಕಾರಿ ಜೊತೆ ಹಸಿ ತರಕಾರಿ ಸೇವನೆ ಮಾಡಿದರೆ  ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಬೀಳುತ್ತದೆ. ಆದ್ದರಿಂದ, ಮೂಲಂಗಿಯನ್ನು ಬೆಳಗಿನ ಉಪಾಹಾರದ ನಂತರ ಅಥವಾ ಊಟದ ಮೊದಲು ತಿನ್ನಬೇಕು. ನೀವು ಬಯಸಿದರೆ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಡುವಿನ ಸಮಯದಲ್ಲಿ ನೀವು ಮೂಲಂಗಿಯನ್ನು ತಿನ್ನಬಹುದು. ಈ ಸಮಯದಲ್ಲಿ ಮೂಲಂಗಿಯನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ ಮೂಲಂಗಿಯ ಎಲ್ಲಾ ಪೋಷಕಾಂಶಗಳು ಸಿಗುತ್ತದೆ ಮತ್ತು ಜೀರ್ಣಕ್ರಿಯೆಯೂ ಚೆನ್ನಾಗಿರುತ್ತದೆ. 

ಮೂಲಂಗಿಯನ್ನು ತಿನ್ನಲು ಸರಿಯಾದ ಮಾರ್ಗ 

  • ಹಸಿ ಮೂಲಂಗಿಯನ್ನು ತಿನ್ನಲು ಬಯಸಿದ್ರೆ ಅದರೊಂದಿಗೆ ಇತರ ಹಸಿ ತರಕಾರಿಗಳನ್ನು ಸೇರಿಸಿ ಸೇವನೆ ಮಾಡಿ. ಉದಾಹರಣೆಗೆ ಸೌತೆಕಾಯಿ, ಟೊಮಾಟೊ, ಕ್ಯಾರೆಟ್ ಇತ್ಯಾದಿಗಳನ್ನು ಮಿಕ್ಸ್ ಮಾಡಿ ಸಲಾಡ್‌ನಂತೆ ತಿನ್ನಬಹುದು.
  • ಮೂಲಂಗಿಯನ್ನು ಖರೀದಿಸುವಾಗ, ಬೆಳೆದ ಮೂಲಂಗಿಯನ್ನು ಖರೀದಿಸಬೇಡಿ. ಬೆಳೆದ ಮೂಲಂಗಿಯನ್ನು ತಿನ್ನುವ ಬದಲು, ಎಳೆಯ, ಸಣ್ಣ ಮತ್ತು ಸಿಹಿ ಮೂಲಂಗಿಯನ್ನು ಸೇವನೆ ಮಾಡುವುದು ಅತ್ಯುತ್ತಮ.
  • ಮೂಲಂಗಿ ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಮೂಲಂಗಿಯನ್ನು ತಿಂದ ನಂತರ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಬೇಡಿ. ಸ್ವಲ್ಪ ಅಲ್ಲಿ ಇಲ್ಲಿ ನಡೆದಾಡಲು ಮರೆಯಬೇಡಿ.
  • ಮೂಲಂಗಿಯನ್ನು ಸಿಪ್ಪೆ ತೆಗೆದು ಕಪ್ಪು ಉಪ್ಪಿನೊಂದಿಗೆ ತಿನ್ನುವುದು ಬಹಳ ಪ್ರಯೋಜನಕಾರಿ.
  • ಮೂಲಂಗಿಯನ್ನು ತುರಿದು, ಅದಕ್ಕೆ ಉಪ್ಪು, ಸ್ವಲ್ಪ ಮೆಣಸಿನ ಪುಡಿ ಹಾಗೂ ಮೊಸರಿನೊಂದಿಗೆ ಸೇವನೆ ಮಾಡಿದರೆ ರುಚಿಯಾಗಿರುತ್ತದೆ. ಹಾಗೆ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ.

    Bully Bai App Case: ನಿಮ್ಮ ಫೋಟೋ ಯಾರ್ಯಾರೋ ಬಳಸುತ್ತಾರೆ, ಮಹಿಳೆಯರೇ ಹುಷಾರ್‌!

ಮೂಲಂಗಿಯನ್ನು ಯಾರು ತಿನ್ನಬಾರದು?

  • ನೋವಿನ ಸಮಸ್ಯೆಯಿರುವವರು ಮೂಲಂಗಿಯಿಂದ ದೂರವಿರುವುದು ಒಳ್ಳೆಯದು. ಮೂಲಂಗಿ, ನೋವಿನ ಸಮಸ್ಯೆಯನ್ನು ಹೆಚ್ಚು ಮಾಡುವ ಸಾಧ್ಯತೆಯಿರುತ್ತದೆ.
  • ದೈಹಿಕ ಚಟುವಟಿಕೆಯನ್ನು ಮಾಡದೆ,ಒಂದೇ ಕಡೆ ಕುಳಿತಿರುವ ಜನರು ಮೂಲಂಗಿ ತಿನ್ನುವುದು ಒಳ್ಳೆಯದಲ್ಲಿ. ಕುಳಿತು ಕೆಲಸ ಮಾಡುವವರು ಮೂಲಂಗಿ ಸೇವನೆ ಮಾಡಿದರೆ ಅವರಿಗೆ ಗ್ಯಾಸ್ ಹಾಗೂ ಹೊಟ್ಟೆ ನೋವಿನ ಸಮಸ್ಯೆ ಕಾಡುವ ಸಾಧ್ಯತೆಯಿರುತ್ತದೆ. ಹಾಗಾಗಿ ಸದಾ ಕುಳಿತು ಕೆಲಸ ಮಾಡುವವರು ಮೂಲಂಗಿಯಿಂದ ದೂರವಿರಿ.

            Honey To Belly Button : ಪ್ರತಿದಿನ ನಾಭಿಗೆ ಜೇನುತುಪ್ಪ ಹಚ್ಚಿದ್ರೆ ಹಲವು ಪ್ರಯೋಜನ
 
ಮೂಲಂಗಿ ಸೇವನೆಯಿಂದ ಆಗುವ ಪ್ರಯೋಜನಗಳು

  • ಚಳಿಗಾಲದಲ್ಲಿ ಪ್ರತಿದಿನ ಮೂಲಂಗಿಯನ್ನು ತಿನ್ನುವುದರಿಂದ ಕೆಮ್ಮು ಮತ್ತು ನೆಗಡಿ ಸಮಸ್ಯೆ ದೂರವಾಗುತ್ತದೆ.
  • ಮೂಲಂಗಿಯ ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಮೂಲಂಗಿ ಪ್ರಯೋಜನಕಾರಿಯಾಗಿದೆ.
  • ಮೂಲಂಗಿಯು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು  ಕಡಿಮೆ ಮಾಡುತ್ತದೆ.
Latest Videos
Follow Us:
Download App:
  • android
  • ios