ಜೆನೆರಿಕ್‌ ಔಷಧ ಬರೆಯದಿದ್ದರೆ ವೈದ್ಯರಿಗೆ ದಂಡ, ಸಸ್ಪೆಂಡ್‌ ಶಿಕ್ಷೆ

ಔಷಧ ಖರೀದಿಸಲು ರೋಗಿಗಳು ಸಾಕಷ್ಟು ಹಣ ವ್ಯಯ ಮಾಡುತ್ತಿರುವುದನ್ನು ತಪ್ಪಿಸಲು ದೇಶದ ವೈದ್ಯರು ರೋಗಿಗಳಿಗೆ ಜೆನೆರಿಕ್‌ ಔಷಧಗಳನ್ನೇ ಶಿಫಾರಸು ಮಾಡಬೇಕು ಹಾಗೂ ಅನಗತ್ಯವಾಗಿ ಔಷಧಗಳನ್ನು ಸೂಚಿಸಬಾರದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಕಟ್ಟುನಿಟ್ಟಿನ ಸೂಚನೆ ನೀಡಿದೆ.

If generic medicine is not prescribed by Doctor he will be punished by fine and suspend akb

 

  •  ರೋಗಿಗಳ ನೆರವಿಗೆ ಧಾವಿಸಿದ ವೈದ್ಯಕೀಯ ಆಯೋಗ
  •  ದುಬಾರಿ ಬ್ರ್ಯಾಂಡೆಡ್‌ ಔಷಧ ಖರೀದಿಸುವ ಕಷ್ಟಇನ್ನಿಲ್ಲ?
  •  ಜೆನೆರಿಕ್‌ ಔಷಧಗಳನ್ನೇ ಶಿಫಾರಸು ಮಾಡಬೇಕೆಂಬ ನಿಯಮ ಈಗಲೂ ಇದೆ
  •  ಅದರಲ್ಲಿ ದಂಡ, ಶಿಕ್ಷೆ ಇರಲಿಲ್ಲ: ಈಗ ದಂಡ ವಿಧಿಸಲು ನಿರ್ಧರಿಸಿದ ಕೇಂದ್ರ
  •  ವೈದ್ಯರ ಸೇವಾ ನಡತೆ ನಿಯಮದಲ್ಲಿ ಜೆನೆರಿಕ್‌ ಔಷಧ ನಿಯಮ ಸೇರ್ಪಡೆ

ನವದೆಹಲಿ: ಔಷಧ ಖರೀದಿಸಲು ರೋಗಿಗಳು ಸಾಕಷ್ಟು ಹಣ ವ್ಯಯ ಮಾಡುತ್ತಿರುವುದನ್ನು ತಪ್ಪಿಸಲು ದೇಶದ ವೈದ್ಯರು ರೋಗಿಗಳಿಗೆ ಜೆನೆರಿಕ್‌ ಔಷಧಗಳನ್ನೇ ಶಿಫಾರಸು ಮಾಡಬೇಕು ಹಾಗೂ ಅನಗತ್ಯವಾಗಿ ಔಷಧಗಳನ್ನು ಸೂಚಿಸಬಾರದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಒಂದು ವೇಳೆ, ಜೆನೆರಿಕ್‌ ಔಷಧ ಬಿಟ್ಟು ಬ್ರ್ಯಾಂಡೆಡ್‌ ಔಷಧವನ್ನು (Branded Medicine) ವೈದ್ಯರು ಸಲಹೆ ಮಾಡಿದರೆ ಅಂತಹ ವೈದ್ಯರ ಮೇಲೆ ದಂಡ ಹಾಗೂ ನಿರ್ದಿಷ್ಟಅವಧಿಗೆ ಲೈಸೆನ್ಸ್‌ ಅಮಾನತುಗೊಳಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದೆ. ಕಿರಿಕ್‌ ಮಾಡುವ ರೋಗಿಗಳಿಗೆ ಚಿಕಿತ್ಸೆ ನಿರಾಕರಣೆ, ಔಷಧ ಕಂಪನಿಗಳಿಂದ ಉಡುಗೊರೆ ಪಡೆಯುವಂತಿಲ್ಲ ಎಂಬ ಅಂಶಗಳನ್ನು ಹೊಂದಿರುವ, ಆ.2ರಂದು ಪ್ರಕಟಗೊಂಡಿರುವ ವೈದ್ಯರ ಸೇವಾ ನಡತೆ ನಿಯಮಾವಳಿಗಳಲ್ಲಿ ಈ ಅಂಶವೂ ಇದೆ.

ಈಗಲೂ ನಿಯಮ ಇದೆ:

ವೈದ್ಯರು ರೋಗಿಗಳಿಗೆ ಜೆನೆರಿಕ್‌ ಔಷಧವನ್ನೇ (generic medicine) ಶಿಫಾರಸು ಮಾಡಬೇಕು ಎಂಬ ನಿಯಮ ಈಗಲೂ ಇದೆ. 2002ರಲ್ಲಿ ಭಾರತೀಯ ವೈದ್ಯಕೀಯ ಮಂಡಳಿ ಬಿಡುಗಡೆ ಮಾಡಿದ್ದ ಆ ನಿಯಮದಲ್ಲಿ ದಂಡದ ಪ್ರಸ್ತಾಪ ಇರಲಿಲ್ಲ. ಹೀಗಾಗಿ ಹೊಸ ನಿಯಮಾವಳಿಗಳಲ್ಲಿ ಅದನ್ನು ಸೇರ್ಪಡೆ ಮಾಡಲಾಗಿದೆ.

ಒಂದು ವೇಳೆ ವೈದ್ಯರು ಈ ಸೂಚನೆಯನ್ನು ಉಲ್ಲಂಘಿಸಿದರೆ ವೈದ್ಯರಿಗೆ ಎಚ್ಚರಿಕೆ ನೀಡಲಾಗುತ್ತದೆ ಅಥವಾ ಕಾರ್ಯಾಗಾರ ಅಥವಾ ಶೈಕ್ಷಣಿಕ ಕಾರ್ಯಕ್ರಮ ಅಥವಾ ವೃತ್ತಿಪರ ತರಬೇತಿಯಲ್ಲಿ ಪಾಲ್ಗೊಳ್ಳುವಂತೆ ನಿರ್ದೇಶಿಸಲಾಗುತ್ತದೆ. ಆದಾಗ್ಯೂ ನಿಯಮವನ್ನು ಪದೇ ಪದೇ ಉಲ್ಲಂಘಿಸಿದರೆ ನಿರ್ದಿಷ್ಟಅವಧಿಗೆ ವೈದ್ಯ ವೃತ್ತಿ ಅಭ್ಯಾಸ ಮಾಡುವ ಲೈಸೆನ್ಸ್‌ ರದ್ದುಗೊಳಿಸಲಾಗುತ್ತದೆ ಎಂದು ನಿಯಮಾವಳಿಯಲ್ಲಿ ತಿಳಿಸಲಾಗಿದೆ.

ರೋಗಿಗಳಿಗೆ ಜೆನೆರಿಕ್‌ ಔಷಧ ಶಿಫಾರಸು ಮಾಡಿ, ಇಲ್ಲದಿದ್ರೆ ಕ್ರಮ ಎದುರಿಸಿ: ಕೇಂದ್ರ ಸರ್ಕಾರ ಎಚ್ಚರಿಕೆ

ಜನೌಷಧಿ ಕೇಂದ್ರಗಳು ಹಾಗೂ ಇನ್ನಿತರೆ ಜೆನೆರಿಕ್‌ ಔಷಧ ಮಳಿಗೆಗಳಿಂದ ಜೆನೆರಿಕ್‌ ಔಷಧ ಖರೀದಿಸುವಂತೆ ರೋಗಿಗಳಿಗೆ ವೈದ್ಯರು ಸಲಹೆ ಮಾಡಬೇಕು. ಸಾಕಷ್ಟುಜೆನೆರಿಕ್‌ ಔಷಧ ದಾಸ್ತಾನು ಇಟ್ಟುಕೊಳ್ಳುವಂತೆ ಆಸ್ಪತ್ರೆಗಳು ಹಾಗೂ ಸ್ಥಳೀಯ ಔಷಧ ಅಂಗಡಿಗಳಿಗೂ ವೈದ್ಯರು ಸೂಚಿಸಬೇಕು. ಬ್ರ್ಯಾಂಡೆಡ್‌ ಔಷಧಿಗೂ ಜೆನೆರಿಕ್‌ ಔಷಧಿಗೂ ವ್ಯತ್ಯಾಸವಿಲ್ಲ ಎಂದು ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಜೆನೆರಿಕ್‌ ಔಷಧ ಉತ್ತೇಜನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ನಿರ್ದೇಶಿಸಿದೆ.

ಇರಾಕ್‌ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ, ದಾಬಿಲೈಫ್ ಫಾರ್ಮಾ ಸಿರಪ್‌ನಿಂದ ಅಪಾಯ! 

Latest Videos
Follow Us:
Download App:
  • android
  • ios