Asianet Suvarna News Asianet Suvarna News

ಇರಾಕ್‌ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ, ದಾಬಿಲೈಫ್ ಫಾರ್ಮಾ ಸಿರಪ್‌ನಿಂದ ಅಪಾಯ!

ಭಾರತದ ಕೆಲ ಕಂಪನಿಗಳ ಸಿರಪ್ ಕಳೆದೊಂದು ವರ್ಷದಿಂದ ಭಾರಿ ವಿವಾದಕ್ಕೆ ಗುರಿಯಾಗಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆ ಇರಾಕ್‌ಗೆ ಮಹತ್ವದ ಎಚ್ಚರಿಕೆ ನೀಡಿದೆ. ಭಾರತದ ದಾಬಿಲೈಫ್ ಫಾರ್ಮಾ ತಯಾರಿಸಿದ ಸಿರಪ್ ಸಾವಿಗೆ ಕಾರಣವಾಗಲಿದೆ ಎಂದಿದೆ.
 

WHO Issues warning to Iraq over Indian made cold syrup unsafe for consumption ckm
Author
First Published Aug 8, 2023, 8:10 PM IST

ನವದೆಹಲಿ(ಆ.08) ಭಾರತದ ಕೆಲ ಔಷಧಿ ಫಾರ್ಮಾ ಕಂಪನಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ. ಗ್ಯಾಂಬಿಯಾ, ಉಜ್ಬೇಕ್ ಸೇರಿದಂತೆ ಕೆಲ ದೇಶದಲ್ಲಿ ಭಾರತದಲ್ಲಿ ತಯಾರಾದ ಸಿರಪ್ ಸೇವಿಸಿ ಮಕ್ಕಳ ಸಾವು ಪ್ರಕರಣ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣದ ತನಿಖೆ, ವರದಿಗಳು ಬಹಿರಂಗವಾಗುತ್ತಿರುವ ಬೆನ್ನಲ್ಲೇ  ಇದೀಗ ವಿಶ್ವಸಂಸ್ಥೆ ಇರಾಕ್‌ಗೆ ಮಹತ್ವದ ಎಚ್ಚರಿಕೆ ನೀಡಿದೆ. ಭಾರತದ ದಾಬಿಲೈಫ್ ಫಾರ್ಮಾ ತಯಾರಿಸಿದ ಸಿರಪ್ ಸೇವಿಸಿದರೆ ಸಾವಿಗೆ ಕಾರಣವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಭಾರತದ ದಾಬಿಲೈಫ್ ಫಾರ್ಮಾದ ಫೋರ್ಟಸ್ ಲ್ಯಾಬೋರೇಟರಿ ತಯಾರಿಸಿದ ಕೋಲ್ಡ್ ಸಿರಪ್ ಔಷಧಿಯಲ್ಲಿ ವಿಷ ಎಂದು ವಿಶ್ವ ಆರೋಗ್ಯ ಸಂಸ್ಥೆ ಇರಾಕ್‌ಗೆ ಎಚ್ಚರಿಕೆ ನೀಡಿದೆ. ಸಿರಪ್‌ನಲ್ಲಿನ ಮಾಲಿನ್ಯಕಾರಕ ಡೈಥಿಲೀನ್ ಮತ್ತು ಎಥಿಲೀನ್ ಗ್ಲೈಕೋಲ್ ಮಿತಿಗಿಂತ ಹೆಚ್ಚಾಗಿದೆ.  ವಿಶ್ವ ಆರೋಗ್ಯ ಸಂಸ್ಥೆ ವೈದ್ಯಕೀಯ ಪರೀಕ್ಷೆಯಲ್ಲಿ 0.25 ಶೇಕಡಾ ಡೈಥಿಲೀನ್ ಗ್ಲೈಕೋಲ್ ಹಾಗೂ ಶೇಕಡಾ 2.1 ರಷ್ಟು ಎಥಿಲಿನ್ ಗ್ಲೈಕೋಲ್ ಇದೆ. ಇದರ ಪರಿಮಿತಿ ಶೇಕಡಾ 0.10ಕ್ಕಿಂತ ಮೀರಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ 

Cough syrup: ಕೆಮ್ಮು ಬಂದಾಗಲ್ಲೆಲ್ಲಾ ಕಫ್ ಸಿರಪ್‌ ಕುಡಿಯೋ ಮುನ್ನ ಇದನ್ನೋದಿ

WHO ತನ್ನ ವೈದ್ಯಕೀಯ ಉತ್ಪನ್ನ ಎಚ್ಚರಿಕೆಯಲ್ಲಿ, ಸಿರಪ್‌ನ ಬ್ಯಾಚ್‌ನಲ್ಲಿ 0.25 ಶೇಕಡಾ ಡೈಥಿಲೀನ್ ಗ್ಲೈಕೋಲ್ ಮತ್ತು ಶೇಕಡಾ 2.1 ರಷ್ಟು ಎಥಿಲೀನ್ ಗ್ಲೈಕೋಲ್ ಇದೆ ಎಂದು ಹೇಳಿದೆ, ಇವೆರಡಕ್ಕೂ ಸ್ವೀಕಾರಾರ್ಹ ಸುರಕ್ಷತಾ ಮಿತಿಯು ಶೇಕಡಾ 0.10 ವರೆಗೆ ಇರುತ್ತದೆ. ಆದರೆ ಡಾಬಿಲೈಫ್ ಪಾರ್ಮಾದ ಔಷಧಿ ಪರಿಮಿತಿ ಮೀರಿದೆ ಎಂದಿದೆ.

ಕಳೆದ ಅಕ್ಟೋಬರ್‌ನಲ್ಲಿ ಗಾಂಬಿಯಾ ದೇಶದಲ್ಲಿ 18 ಮಕ್ಕಳ ಸಾವಿಗೆ, ಭಾರತೀಯ ಕಂಪನಿಯೊಂದು ಉತ್ಪಾದಿಸಿದ ಔಷಧಕ್ಕೂ ಬಲವಾದ ನಂಟಿದೆ ಎಂದು ಅಮೆರಿಕ ಮತ್ತು ಗ್ಯಾಂಬಿಯಾದ ಆರೋಗ್ಯ ಇಲಾಖೆ ನಡೆಸಿದ ಜಂಟಿ ತನಿಖಾ ವರದಿ ಹೇಳಿದೆ. ಗ್ಯಾಂಬಿಯಾದಲ್ಲಿ ನಡೆದ ಮಕ್ಕಳ ಸಾವಿಗೆ, ಭಾರತ ಮೂಲದ ಮೈಡೆನ್‌ ಫಾರ್ಮಾಸ್ಯುಟಿಕಲ್ಸ್‌ ಕಂಪನಿ ಪೂರೈಸಿದ ನಾಲ್ಕು ಸಿರಪ್‌ನ ನಂಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿತ್ತು. ಅದರ ಬೆನ್ನಲ್ಲೇ ಮಕ್ಕಳ ಸಾವಿಗೆ ಕಾರಣವೇನು ಎಂಬುದರ ಬಗ್ಗೆ ತನಿಖೆಗೆ ನೆರವಾಗುವಂತೆ ಗ್ಯಾಂಬಿಯಾ ಸರ್ಕಾರ, ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ(ಸಿಡಿಸಿ) ನೆರವು ಕೋರಿತ್ತು. ಅದರ ವರದಿ ಇದೀಗ ಬಿಡುಗಡೆಯಾಗಿದೆ. ವರದಿ ಅನ್ವಯ, ‘ಗ್ಯಾಂಬಿಯಾದಲ್ಲಿ ಮಕ್ಕಳು ಸೇವನೆ ಮಾಡಿದ ಔಷಧವು ಡೀಈಥೈಲೀನ್‌ ಗ್ಲೈಕೋಕ್‌ನಿಂದಾಗಿ ವಿಷಪೂರಿತವಾಗಿತ್ತು. ಇದನ್ನು ಸೇವಿಸಿದ ಮಕ್ಕಳು ತೀವ್ರ ಮೂತ್ರಜನಕಾಂಗ ಗಾಯದ ಸಮಸ್ಯೆಗೆ ತುತ್ತಾಗಿದ್ದರು’ ಎಂದು ಹೇಳಿದೆ.

Gambia 66 ಮಕ್ಕಳ ಸಾವಿಗೆ ಭಾರತದ ಸಿರಪ್‌ ಕಾರಣ ಶಂಕೆ: ಕೇಂದ್ರ ಸರ್ಕಾರದಿಂದ ತನಿಖೆಗೆ ಆದೇಶ

ಕಳೆದ ವರ್ಷ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವಿಗೆ ಕಾರಣವಾಯಿತು ಎನ್ನಲಾದ ಡಿಒಕೆ-1 ಎಂಬ ಕೆಮ್ಮಿನ ಸಿರಪ್‌ ಉತ್ಪಾದಿಸಿದ್ದ ಉತ್ತರ ಪ್ರದೇಶದ ನೊಯ್ಡಾದಲ್ಲಿರುವ ಔಷಧ ತಯಾರಕ ಕಂಪನಿ ಮರಿಯನ್‌ ಬಯೋಟೆಕ್‌ನ ಮೂವರು ಉದ್ಯೋಗಿಗಳನ್ನು ನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಕಂಪನಿಯ ಇಬ್ಬರು ನಿರ್ದೇಶಕರು ಸೇರಿದಂತೆ ಐವರ ಮೇಲೆ ಗುರುವಾರ ತಡರಾತ್ರಿ ಸೆಂಟ್ರಲ್‌ ಡ್ರಗ್‌್ಸ ಸ್ಟ್ಯಾಂಡರ್ಡ್‌ ಕಂಟ್ರೋಲ್‌ ಆರ್ಗನೈಜೇಷನ್‌ನ ಡ್ರಗ್‌್ಸ ಇನ್ಸ್‌ಪೆಕ್ಟರ್‌ ದಾಖಲಿಸಿದ ಎಫ್‌ಐಆರ್‌ ಪೈಕಿ ನಿರ್ದೇಶಕರನ್ನು ಹೊರತುಪಡಿಸಿ ಮೂವರನ್ನು ಬಂಧಿಸಲಾಗಿದೆ. 

 
 

Follow Us:
Download App:
  • android
  • ios