Feminine Hygiene Alert: ಖಾಸಗಿ ಭಾಗವನ್ನು ಸ್ವಚ್ಛಗೊಳಿಸಲು ನೀವು ಸೋಪ್ ಬಳಸುತ್ತಿದ್ದರೆ ಸೋಂಕಿನ ಅಪಾಯ ಹೆಚ್ಚಾಗುತ್ತದೆ.
ವೈಯಕ್ತಿಕ ನೈರ್ಮಲ್ಯ(Personal hygiene)ದ ಕಡೆ ಅನೇಕರು ಗಮನಹರಿಸುವುದಿಲ್ಲ. ಆದರೆ ನೀವು ಮಾಡುವ ಸಣ್ಣ ಸಣ್ಣ ತಪ್ಪುಗಳೇ ಮುಂದೊಂದು ದಿನ ಗಂಭೀರವಾದ ಕಾಯಿಲೆಗಳಿಗೆ ಆಹ್ವಾನ ನೀಡುತ್ತವೆ. ಹಾಗಾಗಿ ಕಾಯಿಲೆಗಳು ಅಥವಾ ಸೋಂಕುಗಳನ್ನು ತಪ್ಪಿಸಲು ಈಗಿನಿಂದಲೇ ವಿಶೇಷವಾಗಿ ಮಹಿಳೆಯರು ತಮ್ಮ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ವೈಯಕ್ತಿಕ ನೈರ್ಮಲ್ಯ ಎಂದಾಗ ನಿಯಮಿತವಾಗಿ ಸ್ನಾನ ಮಾಡುವುದು, ಕೈ ತೊಳೆಯುವುದು, ಹಲ್ಲುಜ್ಜುವುದು, ಕೂದಲು ಮತ್ತು ಬಟ್ಟೆಗಳನ್ನು ಸ್ವಚ್ಛಗೊಳಿಸುವುದು ಮಾತ್ರವಲ್ಲ. ಖಾಸಗಿ ಭಾಗಗಳನ್ನು ಸ್ವಚ್ಛವಾಗಿಡುವುದು ಸಹ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
ಸಾಮಾನ್ಯವಾಗಿ ಹೆಚ್ಚಿನ ಮಹಿಳೆಯರು ತಮ್ಮ ಖಾಸಗಿ ಭಾಗವನ್ನು ಸೋಪಿನಿಂದ ಸ್ವಚ್ಛಗೊಳಿಸುತ್ತಾರೆ. ಆದರೆ ಈ ವಿಧಾನ ಅನುಸರಿಸುವುದರಿಂದ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳ ಅಪಾಯ ಕಡಿಮೆ ಆಗುವ ಬದಲು ಹೆಚ್ಚಾಗುತ್ತದೆ. ಇದರರ್ಥ ಮಹಿಳೆಯರಿಗೆ ಯೋನಿಯನ್ನು ಎಂದಿಗೂ ಸೋಪಿನಿಂದ ಸ್ವಚ್ಛಗೊಳಿಸದಂತೆ ಸೂಚಿಸಲಾಗಿದೆ. ನೀವು ಕೂಡ ಇದೇ ರೀತಿ ಮಾಡುತ್ತಿದ್ದರೆ ಖಾಸಗಿ ಭಾಗವನ್ನು ಹಾರ್ಡ್ ಆದ ಸೋಪಿನಿಂದ ತೊಳೆಯುವುದು ಏಕೆ ಅಸುರಕ್ಷಿತ ಎಂದು ನೋಡೋಣ ಬನ್ನಿ. ಜೊತೆಗೆ ಅದನ್ನು ಸ್ವಚ್ಛಗೊಳಿಸುವ ಸರಿಯಾದ ವಿಧಾನವನ್ನು ತಿಳಿಯೋಣ.
ಸೋಪ್ ಬಳಸದಿರಿ
ಹೆಚ್ಚಿನ ಜನರು ಸ್ನಾನಕ್ಕೆ ಸೋಪ್ ಅಥವಾ ಬಾಡಿ ವಾಶ್ ಬಳಸುತ್ತಾರೆ ಮತ್ತು ಹೆಚ್ಚಿನ ಮಹಿಳೆಯರು ತಮ್ಮ ಖಾಸಗಿ ಭಾಗವನ್ನು ಅದೇ ಸ್ನಾನದ ಉತ್ಪನ್ನಗಳಿಂದ ಸ್ವಚ್ಛಗೊಳಿಸುತ್ತಾರೆ, ಆದರೆ ತಜ್ಞರ ದೃಷ್ಟಿಯಲ್ಲಿ ಹಾಗೆ ಮಾಡುವುದು ಸರಿಯಲ್ಲ. ಏಕೆಂದರೆ ಯೋನಿಯ ಸಹಜ ಪಿಎಚ್ ಮಟ್ಟವು 3.8 – 4.5ರ ಮಧ್ಯೆ ಇರುತ್ತದೆ. ಸಾಮಾನ್ಯ ಸಾಬೂನುಗಳು alkaline ಸ್ವಭಾವ ಹೊಂದಿದ್ದು, ಈ ಸಮತೋಲನವನ್ನು ಹಾಳುಮಾಡುತ್ತವೆ. ಯೋನಿಯಲ್ಲಿ "ಲ್ಯಾಕ್ಟೋಬ್ಯಾಸಿಲಿ" ಎಂಬ ಒಳ್ಳೆಯ ಬ್ಯಾಕ್ಟೀರಿಯಾ ಇರುತ್ತವೆ. ಇವು ಸೋಂಕುಗಳಿಂದ ರಕ್ಷಿಸುತ್ತವೆ. ಆದರೆ ಸಾಬೂನು ಇವುಗಳನ್ನು ನಾಶಪಡಿಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಸಾಬೂನುಗಳು ಕೆಮಿಕಲ್‌ನಿಂದ ಕೂಡಿರುತ್ತವೆ. ಇವು ಚರ್ಮ ಉರಿಯೂತ, ಕೆರಕು ಅಥವಾ ಈಸ್ಟ್ ಇನ್ಫೆಕ್ಷನ್‌ಗೆ ಕಾರಣವಾಗಬಹುದು.
ಸ್ವಯಂ-ಶುಚಿಗೊಳಿಸಿಕೊಳ್ಳುವ ಅಂಗ
ನಿಮಗೆ ಈ ವಿಚಾರ ತಿಳಿದರೆ ಆಶ್ಚರ್ಯವಾಗಬಹುದು. ಹೌದು, ಯೋನಿಯನ್ನು ತೊಳೆಯುವ ಅಗತ್ಯವಿಲ್ಲ. ಮೆಡಿಕಲ್ ನ್ಯೂಸ್ ಟುಡೇ (ref) ಪ್ರಕಾರ, ಯೋನಿಯು ಸ್ವಯಂ-ಶುಚಿಗೊಳಿಸಿಕೊಳ್ಳುವ ಅಂಗವಾಗಿದ್ದು, ಇದಕ್ಕೆ ಯಾವುದೇ ಶುಚಿಗೊಳಿಸುವ ಉತ್ಪನ್ನದ ಅಗತ್ಯವಿರುವುದಿಲ್ಲ. ಆದ್ದರಿಂದ ಅತಿಯಾದ ಶುಚಿಗೊಳಿಸುವಿಕೆಯು ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು.
ಪಿಎಚ್ ಅಸಮತೋಲನ
ಒಳ್ಳೆಯ ಬ್ಯಾಕ್ಟೀರಿಯಾಗಳು ಯೋನಿಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ಕೆಮಿಕಲ್ ಸೋಪುಗಳು ಅಥವಾ ಡೌಚ್‌ಗಳಿಂದ ತೊಳೆಯುವುದು, ಯೋನಿಯ pH ಅನ್ನು ಅಸಮತೋಲನಗೊಳಿಸುತ್ತದೆ, ಸೋಂಕು ಮತ್ತು ವಾಸನೆಯ ಅಪಾಯವನ್ನು ಹೆಚ್ಚಿಸುತ್ತದೆ.
ಹೀಗೆ ಮಾಡದಿರಿ
ನೀವು ಸೋಪನ್ನು ವಾಸನೆಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಬಳಸುತ್ತೀರಿ. ಆದರೆ ಆರೋಗ್ಯಕರ ಯೋನಿಯು ಸ್ವಾಭಾವಿಕವಾಗಿ ಸೌಮ್ಯವಾದ ವಾಸನೆಯನ್ನು ಹೊಂದಿರುತ್ತದೆ. ಇದೇ ಕಾರಣಕ್ಕೆ ಜನರು ಯೋನಿಯನ್ನು ತೊಳೆಯುವ ಮೂಲಕ ಎಲ್ಲಾ ಕೆಟ್ಟ ವಾಸನೆಯನ್ನು ತೊಡೆದುಹಾಕಲು ಪ್ರಯತ್ನಿಸಬಾರದು.
ಬೆಚ್ಚಗಿನ ನೀರಿನ ಬಳಕೆ
ಯೋನಿಯನ್ನು ಸ್ವಚ್ಛಗೊಳಿಸಲು ಹೊರ ಭಾಗವನ್ನು ಬೆಚ್ಚಗಿನ ನೀರಿನಿಂದ ತೊಳೆಯಬಹುದು. ಬೇಕಾದರೆ ನೀವು ಸೌಮ್ಯವಾದ, ವಾಸನೆಯಿಲ್ಲದ ಸೋಪ್ ಅನ್ನು ಬಳಸಬಹುದು. ಆದರೆ ಇದಾದ ನಂತರ, ಯೋನಿಯನ್ನು ನೀರಿನಿಂದ ಚೆನ್ನಾಗಿ ತೊಳೆದು ಆ ಪ್ರದೇಶವನ್ನು ಚೆನ್ನಾಗಿ ಒಣಗಿಸಿ. ಆದರೆ ಯೋನಿಯೊಳಗೆ ಸೋಪು ಹಾಕದಿರುವುದು ಮುಖ್ಯ.
ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ರೀತಿಯಲ್ಲೂ ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
