Home Remedies : ಸೊಳ್ಳೆ ಮನೆ ಹತ್ರನೂ ಬರಬಾರದು ಅಂದ್ರೆ ಈ ಸ್ಪ್ರೇ ಬಳಸಿ

ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳೋದು ಸುಲಭವಲ್ಲ. ಅರೆ ಕ್ಷಣದಲ್ಲಿ ಬಂದು ಕಚ್ಚಿ ಹೋಗುವ ಈ ಸೊಳ್ಳೆ ಬ್ಯಾಟ್ ಗೆ ಸಿಗೋದಿಲ್ಲ. ಕೆಲ ಮಾರಕ ರೋಗಕ್ಕೆ ಕಾರಣವಾಗುವ ಸೊಳ್ಳೆಯ ಕಾಟ ಇರಬಾರದು ಅಂದ್ರೆ ಕೆಲ ಸ್ಪ್ರೇ ಬಳಸಿ ನೋಡಿ.
 

How To Make Natural Mosquito Repellent Spray

ಸೊಳ್ಳೆ ಕಾಟ ಈಗಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಸೊಳ್ಳೆಯಿಂದ ಅನೇಕ ಆರೋಗ್ಯ ಸಮಸ್ಯೆ ನಮ್ಮನ್ನು ಕಾಡ್ತಿದೆ. ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ ಸೇರಿದಂತೆ ಭಯಾನಕ ರೋಗಕ್ಕೆ ನಾವು ತುತ್ತಾಗ್ತೇವೆ. ಮನೆ, ಪಾರ್ಕ್, ಬೀದಿ ಎಲ್ಲೆಂದರಲ್ಲಿ ಸೊಳ್ಳೆ ನಮ್ಮನ್ನು ಮುತ್ತಿಕೊಳ್ಳುತ್ತದೆ. ಸಂಜೆಯಾಗ್ತಿದ್ದಂತೆ ಈ ಸೊಳ್ಳೆ ಕಾಟ ವಿಪರೀತವಾಗುತ್ತದೆ. ರಾತ್ರಿ ಸರಿಯಾಗಿ ನಿದ್ರೆ ಕೊಡೋದಿಲ್ಲ. ಸಣ್ಣ ಮಕ್ಕಳಿಗೆ ಸೊಳ್ಳೆ ಕಚ್ಚಿ ಚರ್ಮದ ಮೇಲೆ ದುದ್ದುಗಳಾಗುತ್ತವೆ.

ಸೊಳ್ಳೆ (Mosquito) ಕಾಟದಿಂದ ತಪ್ಪಿಸಿಕೊಳ್ಳುವುದು ಹೇಳಿದಷ್ಟು ಸುಲಭವಲ್ಲ. ಮಾರುಕಟ್ಟೆ (Market) ಯಲ್ಲಿ ಹಲವು ಬಗೆಯ ಸ್ಪ್ರೇಗಳು ಲಭ್ಯವಿವೆ. ಈ ಸ್ಪ್ರೇ (Spray) ಚಿಕ್ಕ ಮಕ್ಕಳ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಸ್ಪ್ರೇ ಬದಲು ನೈಸರ್ಗಿಕ ಸ್ಪ್ರೇಯನ್ನು ನೀವು ಬಳಸಬಹುದು. ಮನೆಯಲ್ಲಿಯೇ ತಯಾರಿಸುವ ನೈಸರ್ಗಿಕ (Natural) ಸ್ಪ್ರೇ ಆರೋಗ್ಯಕ್ಕೆ ಯಾವುದೇ ಹಾನಿಯುಂಟು ಮಾಡೋದಿಲ್ಲ. ಇದ್ರಿಂದ ಬಹಳಷ್ಟು ಹಣವನ್ನು ಉಳಿಸಬಹುದು. ನಾವಿಂದು ನೈಸರ್ಗಿಕ ಸ್ಪ್ರೇ ತಯಾರಿಸೋದು ಹೇಗೆ ಎಂಬುದನ್ನು ಹೇಳ್ತೇವೆ.

ನಿಂಬೆ ಯೂಕಲಿಪ್ಟಸ್ ಆಯಿಲ್ : 90 ಮಿಲಿ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯಲ್ಲಿ 10 ಮಿಲಿ ನಿಂಬೆ ಯೂಕಲಿಪ್ಟಸ್ ಎಣ್ಣೆಯನ್ನು ಮಿಶ್ರಣ ಮಾಡಿ. ಅದನ್ನು ಬಾಟಲಿಯಲ್ಲಿ ಹಾಕಿ ಮನೆಯ ಮೂಲೆ ಮೂಲೆಯಲ್ಲಿ ಚಿಮುಕಿಸಿ. ಮಗು ಮನೆಯ ಹೊರಗೆ ಆಡಲು ಹೋಗೋದಾದ್ರೆ ಈ ಸ್ಪ್ರೇ ಯನ್ನು ಅವರ ದೇಹಕ್ಕೆ ಹಚ್ಚಿ ಕಳುಹಿಸಿ. ಈ ರೀತಿ ಮಾಡುವುದರಿಂದ ಸೊಳ್ಳೆ ಮಗುವಿನ ಹತ್ತಿರ ಬರೋದಿಲ್ಲ. ಹಾಗೆ ಇದನ್ನು ತಯಾರಿಸೋದು ಕೂಡ ಸುಲಭ.

ತರಕಾರಿ ತಿಂದ್ರೂ ಹೊಟ್ಟೆ ಕೆಡುತ್ತೆ, ನೀವು ಸರಿಯಾದ ರೀತೀಲಿ ತಿನ್ತಿದ್ದೀರಾ ಚೆಕ್ ಮಾಡ್ಕೊಳ್ಳಿ

ಸೊಳ್ಳೆ ಓಡಿಸಲು ಬಳಸಿ ಬೇವು : ಸೊಳ್ಳೆಯ ಕಾಟದಿಂದ ಮುಕ್ತಿ ಪಡೆಯಲು ನೀವು ಬೇವನ್ನು ಕೂಡ ಬಳಸಬಹುದು. ಬೇವಿನ ವಾಸನೆಯಿಂದ ಸೊಳ್ಳೆಗಳು ಓಡಿಹೋಗುತ್ತವೆ. 30 ಮಿಲಿ ತೆಂಗಿನ ಎಣ್ಣೆಯಲ್ಲಿ 10 ಹನಿ ಬೇವಿನ ಎಣ್ಣೆಯನ್ನು ಬೆರೆಸಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ನಿಮ್ಮ ದೇಹಕ್ಕೆ ಹಚ್ಚಿಕೊಳ್ಳಿ. ಇದು ರಾಸಾಯನಿಕ ಮುಕ್ತವಾಗಿದೆ. ದೊಡ್ಡವರಿಗೆ ಮಾತ್ರವಲ್ಲ ಚಿಕ್ಕವರಿಗೆ ಕೂಡ ಇದನ್ನು ಬಳಸಬಹುದು. 

ಸೊಳ್ಳೆ ಓಡಿಸಲು ಸಹಕಾರಿ ಲ್ಯಾವೆಂಡರ್ : ಸೊಳ್ಳೆಗಳು ಲ್ಯಾವೆಂಡರ್ ವಾಸನೆಯನ್ನು ಇಷ್ಟಪಡುವುದಿಲ್ಲ. ಹಾಗಾಗಿ ನೀವು ಸೊಳ್ಳೆ ಓಡಿಸಲು ಲ್ಯಾವೆಂಡರ್ ಬಳಸಬಹುದು. ಲ್ಯಾವೆಂಡರ್ ಸೊಳ್ಳೆ ಆಯಿಲ್ ತಯಾರಿಸಲು 3-4 ಚಮಚ ನಿಂಬೆ ರಸ, 3-4 ಚಮಚ ವೆನಿಲ್ಲಾ ಮತ್ತು 10-12 ಹನಿ ಲ್ಯಾವೆಂಡರ್ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ. ಮನೆಯಲ್ಲಿ  ಸೊಳ್ಳೆ ಇರುವ ಜಾಗದಲ್ಲಿ ಇದನ್ನು ಸ್ಪ್ರೇ ಮಾಡಿ. ಇದನ್ನು ಮನೆಯ ಮೂಲೆಗಳಲ್ಲಿ ಸಿಂಪಡಿಸಿ. ಅಲ್ಲದೆ ಇದನ್ನು ದೇಹಕ್ಕೂ ಹಚ್ಚಿಕೊಳ್ಳಬಹುದು. ಹೀಗೆ ಮಾಡಿದ್ರೆ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಬಹುದು.

ಟೀ ಟ್ರೀ ಆಯಿಲ್ : ಅನೇಕ ಔಷಧೀಯ ಗುಣಗಳಿಂದ ತುಂಬಿರುವ ಟೀ ಟ್ರೀ ಆಯಿಲ್ ಕೂಡ ನಿಮಗೆ ಉಪಯುಕ್ತವಾಗಿದೆ. ಇದರಲ್ಲಿರುವ ಆ್ಯಂಟಿ ಸೆಪ್ಟಿಕ್ ಮತ್ತು ಉರಿಯೂತ ನಿವಾರಕ ಅಂಶಗಳು ಸೊಳ್ಳೆಗಳ ವಿಷಕಾರಿ ಅಂಶವನ್ನು ಕಡಿಮೆ ಮಾಡುತ್ತವೆ. ಇದ್ರ ವಾಸನೆ, ಸೊಳ್ಳೆಗಳು ಮನೆಯೊಳಗೆ ಬರದಂತೆ ತಡೆಯುತ್ತವೆ.  30 ಎಂಎಲ್ ತೆಂಗಿನ ಎಣ್ಣೆಗೆ 10 ಹನಿ ಟೀ ಟ್ರೀ ಆಯಿಲ್ ಹಾಕಿ. ಇದಕ್ಕೆ ಸ್ವಲ್ಪ ನೀರು ಮತ್ತು ವೋಡ್ಕಾ ಸೇರಿಸಿ. ನಂತ್ರ ಇದನ್ನು ಮನೆಯ ಮೂಲೆ ಮೂಲೆಗೆ ಸ್ಪ್ರೇ ಮಾಡಿ. ಸೊಳ್ಳೆಗಳನ್ನು ಓಡಿಸಲು ಇದು ಉತ್ತಮವಾದ ಸ್ಪ್ರೇ ಆಗಿದೆ. ಇದನ್ನು ಬಳಸುವುದ್ರಿಂದ ಯಾವುದೇ ಹಾನಿಯಿಲ್ಲ. 

ಕೂದಲು ಬಾಚೋದು ಆರೋಗ್ಯಕ್ಕೂ ಒಳ್ಳೇದು, ಆ ಕೆಲ್ಸ ಹೇಗ್ ಮಾಡ್ಬೇಕು?

ಲೆಮನ್ ಗ್ರಾಸ್ ಮತ್ತು ರೋಸ್ಮರಿ ಎಣ್ಣೆ : ಸೊಳ್ಳೆಯನ್ನು ಓಡಿಸಲು ನೀವು ಲೆಮನ್ ಗ್ರಾಸ್ ಮತ್ತು ರೋಸ್ಮರಿ ಎಣ್ಣೆಯನ್ನು ಬಳಸಬಹುದು. 60 ಎಂಎಲ್ ತೆಂಗಿನ ಎಣ್ಣೆಗೆ 10 ಹನಿ ಲೆಮನ್ ಗ್ರಾಸ್ ಹಾಗೂ ರೋಸ್ಮರಿ ಎಣ್ಣೆಯನ್ನು ಸೇರಿಸಿ. ಈ ಲಿಕ್ಟಿಡನ್ನು ಮನೆಯ ಮೂಲೆಗೆ ಸ್ಪ್ರೇ ಮಾಡಿ. 
 

Latest Videos
Follow Us:
Download App:
  • android
  • ios