ಪ್ರಶ್ನೆ : ನನಗೀಗ  30 ವರ್ಷ ವಯಸ್ಸು. ಆರು ತಿಂಗಳ ಹಿಂದೆ ಮದುವೆಯಾದೆ. ಪತ್ನಿಗೆ 25 ವರ್ಷ. ನಮ್ಮದು ಜಾಯಿಂಟ್ ಫ್ಯಾಮಿಲಿ. ನಮ್ಮ ಮನೆಯಲ್ಲಿ ಅಪ್ಪ, ಅಮ್ಮ, ನನ್ನ ಸಹೋದರಿ ಎಲ್ಲ ಇರುತ್ತಾರೆ. ಪತ್ನಿಯನ್ನು ಅವರು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ಅವಳೂ ಮನೆಗೆ ಹೊಂದಿಕೊಂಡಿದ್ದಾಳೆ. ಆದರೆ ಆರಂಭದಿಂದಲೂ ಸೆಕ್ಸ್ ಬಗ್ಗೆ ಆಸಕ್ತಿಯನ್ನೇ ತೋರೋದಿಲ್ಲ. ಈ ಬಗ್ಗೆ ವಿಚಾರಿಸಿದರೂ ಏನನ್ನೂ ಹೇಳದೇ ಸುಮ್ಮನಾಗುತ್ತಾಳೆ. ಮನೆಯವರೆಲ್ಲ ಇರುವ ಕಾರಣ ಅವಳಲ್ಲಿ ಇಂಥಾ ವಿಷಯದ ಬಗ್ಗೆ ಹೆಚ್ಚು ಮಾತಾಡೋದಕ್ಕೂ ಆಗೋದಿಲ್ಲ. ಅವಳ್ಯಾಕೆ ಹಾಗೆ ಮಾಡುತ್ತಾಳೆ. ಅವಳಿಗೆ ಈ ಮದುವೆ ಇಷ್ಟ ಇರಲಿಕ್ಕಿಲ್ಲವಾ ಅಥವಾ ಬೇರೆ ಯಾರ ಜೊತೆಗಾದರೂ ಅಫೇರ್ ಇದ್ದಿರಬಹುದಾ? ಈ ಬಗ್ಗೆ ಹೇಗೆ ತಿಳಿಯೋದು? ಅವಳಿಗೆ ಸೆಕ್ಸ್ ನಲ್ಲಿ ಆಸಕ್ತಿ ಬರಿಸೋದು ಹೇಗೆ?

*

ಉತ್ತರ : ಇದು ನಮ್ಮಲ್ಲಿ ಹೆಚ್ಚಿನವರ ಸಮಸ್ಯೆ. ಆದರೆ ಒಂದು ವಿಷಯ ತಿಳ್ಕೊಳ್ಳಿ, ಸೆಕ್ಸ್ ನಲ್ಲಿ ಹೆಂಗಸರಿಗೂ ಆಸಕ್ತಿ ಇರುತ್ತೆ. ಆದರೆ ಅವರು ಗಂಡಸರಷ್ಟು ಬೇಗ ಆ ಕ್ರಿಯೆಯಲ್ಲಿ ತೊಡಗಿಕೊಳ್ಳಲಾರರು. ಅವರಿಗೆ ಈ ವಿಷಯದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಬೇಕಾಗುತ್ತದೆ. ಹಾಗಂತ ಈ ವಿಷಯವನ್ನು ಅವರು ಬಾಯಿಬಿಟ್ಟು ಹೇಳಲ್ಲ. ಇದಕ್ಕೆ ಅವರು ಬೆಳೆದು ಬಂದ ರೀತಿ ಕಾರಣ ಇರಬಹುದು. ಮನೆಯಲ್ಲಿ ಇಂಥ ವಿಷಯ ಮಾತಾಡೋದು ಅಪರಾಧ ಎಂಬ ಮನಸ್ಥಿತಿ ಇರಬಹುದು. ಹಾಗಾಗಿ ತನ್ನೆಲ್ಲ ಫೀಲಿಂಗ್ ಗಳನ್ನ ಅವಳು ಕಟ್ಟಿಹಾಕಿಬಿಡುತ್ತಾಳೆ. ಅವಳಿಗೆ ಬೇಕಾದಷ್ಟು ಸ್ವಾತಂತ್ರ್ಯ ಸಿಗದ ಕಾರಣ ಅವಳು ಪ್ರತಿಕ್ರಿಯೆ ನೀಡದೇ ಇರುವ ಸಾಧ್ಯತೆ ಇರುತ್ತದೆ.

 

ಪೀರಿಯಡ್ಸ್ ಟೈಮ್‌ನಲ್ಲಿ ಸೆಕ್ಸ್ ಮಾಡಬಹುದಾ?

 

ನಿಮ್ಮದು ಕೂಡು ಕುಟುಂಬ ಎಂದಿರಿ. ಹೀಗಾಗಿ ಎಷ್ಟೇ ಪ್ರೀತಿಯಿಂದ ನೋಡಿಕೊಂಡರೂ ಅವಳಿಗೆ ತನಗೆ ತೋಚಿದ್ದನ್ನು ಹೇಳುವ ಸ್ವಾತಂತ್ರ್ಯ ಇಲ್ಲದೇ ಇರಬಹುದು. ಮತ್ತೊಂದು ವಿಷಯ ಅಂದರೆ ಹೆಣ್ಣಿಗೆ ಗಂಡಿನ ಹಾಗೆ ಕೇವಲ ಆ ಕ್ರಿಯೆಯಲ್ಲಿ ಮಾತ್ರ ಖುಷಿ ಸಿಗೋದಿಲ್ಲ. ಹೆಚ್ಚಿನ ಹೆಣ್ಣುಮಕ್ಕಳು ಪ್ರೀತಿಯ ಪರಾಕಾಷ್ಠೆಯನ್ನು ಸೆಕ್ಸ್ ಎಂದು ತಿಳಿದುಕೊಂಡಿರುತ್ತಾರೆ. ನೀವು ದಿನವಿಡೀ ಪ್ರೀತಿಯನ್ನೂ ತೋರಿಸದೇ ರಾತ್ರಿ ಮಾತ್ರ ಅವಳು ಸೆಕ್ಸ್ ನಲ್ಲಿ ಸಹಕರಿಸಬೇಕು ಅಂದರೆ ಅವಳಿಗೆ ಅದು ಯಾಂತ್ರಿಕ ಅನಿಸಬಹುದು.
 

ನಿಮ್ಮ ಸಮಸ್ಯೆಗೆ ಬಂದರೆ ನಿಮ್ಮಿಬ್ಬರಲ್ಲಿ ಸಂವಹನದ ಕೊರತೆ ಕಾಣುತ್ತಿದೆ. ಬಹುಶಃ ದಿನದ ಉಳಿದ ಅವಧಿಯಲ್ಲಿ ನೀವಿಬ್ಬರೂ ಆಪ್ತವಾಗಿ ಮಾತನಾಡಲು ವಿಚಾರಗಳನ್ನು ಹಂಚಿಕೊಳ್ಳಲು ಅವಕಾಶ ಇಲ್ಲ ಅನಿಸುತ್ತದೆ. ನೀವೇ ಇಂಥಾ ಅವಕಾಶಗಳನ್ನು ಕ್ರಿಯೇಟ್ ಮಾಡಬಹುದು. ದಿನಾ ನೀವಿಬ್ಬರೇ ರಾತ್ರಿ ವಾಕಿಂಗ್ ಹೋಗಬಹುದು. ಮನೆಯವರು ಇದಕ್ಕೆ ಅಬ್ಜೆಕ್ಟ್ ಮಾಡುವ ಸಾಧ್ಯತೆ ಇರುತ್ತದೆ. ಆದರೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡಿ. ಸುಮ್ಮನೇ ಪತ್ನಿಯನ್ನು ಕರೆದುಕೊಂಡು ಪಾರ್ಕ್ ಗೋ ಇಲ್ಲ ಬೇರೆ ಕಡೆಯಲ್ಲೋ ಪ್ರತೀದಿನ ವಾಕಿಂಗ್ ಮಾಡಿ. ಅಲ್ಲಿ ಅವಳ ಸಮಸ್ಯೆಯನ್ನು ಕೇಳಿ. ನಿಮ್ಮ ಕೆಲಸದ ವಿಷಯ, ಅವಳ ವಿಷಯ ಎಲ್ಲವನ್ನೂ ಇಬ್ಬರೂ ಮಾತನಾಡಿ. ಆಗ ನಿಮ್ಮಿಬ್ಬರ ನಡುವಿನ ಸಂಬಂಧ ಗಾಢವಾಗುತ್ತದೆ.

 

ಪೋರ್ನ್‌ ಚಿತ್ರಗಳಲ್ಲಿ ಮಿಂಚಿದ ಖ್ಯಾತ ನಟಿ ಬಿಚ್ಚಿಟ್ಟ ರಿಯಲ್‌ ಸ್ಟೋರಿ

 

ಸಮಯ ಸಿಕ್ಕಾಗಲೆಲ್ಲ ಇಬ್ಬರೇ ಯಾವುದಾದರೂ ಜಾಗಕ್ಕೆ ಹೋಗಿ ಉಳಿದುಬನ್ನಿ. ಆಗ ಆಕೆ ನಿಸ್ಸಂಕೋಚವಾಗಿ ಸೆಕ್ಸ್ ನಲ್ಲಿ ತೊಡಗಿಸಿಕೊಳ್ಳೋದು ಸಾಧ್ಯವಾಗುತ್ತದೆ. ನಿಮ್ಮಿಬ್ಬರ ಗೆಳೆತನವೂ ಸುಧಾರಿಸುತ್ತದೆ.

ಲೈಂಗಿಕ ಕ್ರಿಯೆಯಲ್ಲಿ ಬೇರೆ ಬೇರೆ ಭಂಗಿಗಳನ್ನು ಪ್ರಯತ್ನಿಸಿ. ಪತ್ನಿಯನ್ನೂ ಸಂಪೂರ್ಣ ಇನ್ ವಾಲ್ವ್ ಮಾಡಿ. ಆಗ ಆಕೆ ಖಂಡಿತಾ ತನ್ನ ಸಂಕೋಚ ತೊರೆದು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳೋದು ಸಾಧ್ಯವಾಗುತ್ತದೆ. ಹೆಚ್ಚಿನ ಹೆಣ್ಣುಮಕ್ಕಳಿಗೆ ಗಂಡು ಮೇಲೆ ಬಂದು ಮಾಡುವ ಲೈಂಗಿಕ ಕ್ರಿಯೆಯಲ್ಲಿ ಆ ಸುಖ ಸಿಗಲ್ಲ. ಅವಳಿಗೆ ಸ್ವಾತಂತ್ರ್ಯವಿದ್ದರೆ ಅವಳೂ ಆ ಕ್ರಿಯೆಯಲ್ಲಿ ತನಗೆ ಬೇಕಾದ ಖುಷಿ ಕಂಡುಕೊಳ್ಳುತ್ತಾಳೆ.

ಇನ್ನೊಂದು ವಿಷಯ ಲೈಂಗಿಕತೆ ಬಗ್ಗೆ ನಿಮ್ಮ ಪತ್ನಿಗೆ ಒಂದಿಷ್ಟು ತಿಳುವಳಿಕೆ ನೀಡೋದು ಬಹಳ ಮುಖ್ಯ. ಆ ಕೆಲಸವನ್ನೂ ಮಾಡಿ.