ಜಪಾನ್‌ನ ಮುಖ್ಯ ನೆಲದಿಂದ ದಕ್ಷಿಣಕ್ಕೆ ಒಂದು ಪುಟ್ಟ ದ್ವೀಪವಿದೆ. ಅದರ ಹೆಸರು ಒಕಿನಾವಾ. ಚಿರಂಜೀವಿಗಳ ನೆಲ ಎಂದೇ ಇದನ್ನು ಅಭಿಮಾನದಿಂದ ಕರೆಯುವವರಿದ್ದಾರೆ. ಇಲ್ಲಿರುವ ಮೂರನೇ ಒಂದು ಭಾಗದಷ್ಟು ಮಂದಿ ನೂರು ವರ್ಷ ದಾಟಿದ್ದಾರೆ. ಆದರೂ ಆರೋಗ್ಯವಾಗಿಯೇ ಇದ್ದಾರೆ. ಜಗತ್ತಿನ ಬೇರೆ ಯಾವುದೇ ಕಡೆಯಲ್ಲಿ ಇರುವುದಕ್ಕಿಂತ ಹೆಚ್ಚು ಶತಾಯುಷಿಗಳು ಇಲ್ಲಿದ್ದಾರೆ. ಇಲ್ಲಿನವರನ್ನು ಇದುವರೆಗೂ ಹೃದಯ ರೋಗವಾಗಲಿ, ಮಧುಮೇಹವಾಗಲಿ, ಕ್ಯಾನ್ಸರ್‌ ಆಗಲೀ, ಪಾರ್ಶ್ವವಾಯುವಾಗಲೀ ಬಾಧಿಸಿಲ್ಲ. ಇದೊಂದು ವೈದ್ಯಲೋಕದ ಅಚ್ಚರಿ, ಪ್ರಕೃತಿಯ ಕೌತುಕ ಎಂದೇ ಹೇಳಲಾಗುತ್ತದೆ. 

ಆದರೆ ಇದಕ್ಕಿರುವ ಕಾರಣಗಳೂ ಅಷ್ಟೇ ಸರಳವಾಗಿವೆ. ಇದು ಒಕಿನಾವಾದ ಮಂದಿ ಪಾಲಿಸುವ ಡಯಟ್‌ನ ಫಲ ಎಂದು ಅಧ್ಯಯನಕಾರರು ಹೇಳುತ್ತಾರೆ. ಇವರ ಆಹಾರಕ್ರಮ ತುಂಬಾ ಸಿಂಪಲ್‌- ತರಕಾರಿ, ಸೋಯ್ ಉತ್ಪನ್ನ ಹಾಗೂ ಸಮುದ್ರೋತ್ಪನ್ನಗಳು ಹೆಚ್ಚು ಸೇವಿಸುತ್ತಾರೆ. ಇಲ್ಲಿ ಹೆಚ್ಚಾಗಿ ಬಳಸುವ ತರಕಾರಿಗಳೆಂದರೆ ಹಾಗಲಕಾಯಿ, ಸ್ವೀಟ್‌ ಆಲೂಗಡ್ಡೆ, ಹಸಿರು ಸೊಪ್ಪಿನ ತರಕಾರಿಗಳು ಹಾಗೂ ಬೇರಿನಲ್ಲಿ ಆಗುವ ಗಡ್ಡೆಗಳು. ಅಂದರೆ ಆಲೂಗಡ್ಡೆ, ಗೆಣಸಿನ ವೈವಿಧ್ಯಮಯ ಖಾದ್ಯಗಳು. ಹಣ್ಣುಗಳನ್ನು ಸಾಕಷ್ಟು ಸೇವಿಸುತ್ತಾರೆ. ಸಮುದ್ರ ಉತ್ಪನ್ನಗಳಾದ ನಾನಾ ಬಗೆಯ ಮೀನುಗಳು, ಸಿಗಡಿ, ಏಡಿ ಮುಂತಾದವು ಇವರ ಬಟ್ಟಲಲ್ಲಿ ಕಾಯಂ. ದಿನಕ್ಕೆರಡು ಬಾರಿ ಟೀ ಕುಡಿಯುತ್ತಾರೆ- ಅದಕ್ಕೆ ಹಾಲು ಸೇರಿಸುವುದಿಲ್ಲ. ಹೆಚ್ಚು ಕೊಬ್ಬಿಲ್ಲದ ಚಿಕನ್‌ ಮುಂತಾದ ಮಾಂಸಾಹಾರ ಮಾಡುತ್ತಾರೆ. ಸಂಸ್ಕರಿಸಿದ ಆಹಾರಗಳು, ಸಂಸ್ಕರಿಸಿದ ಬೇಳೆಕಾಳು, ಡೇರಿ ಉತ್ಪನ್ನಗಳನ್ನು ತಿನ್ನುವುದಿಲ್ಲ. ಸಕ್ಕರೆಯನ್ನು ಬಳಸುವುದಿಲ್ಲ. ಕಡಿಮೆ ಕ್ಯಾಲೊರಿ, ಹೆಚ್ಚು ಕಾರ್ಬೊಹೈಡ್ರೇಟ್‌, ಅಧಿಕ ಪ್ರೊಟೀನ್‌, ಸಾಕಷ್ಟು ಪೌಷ್ಟಿಕಾಂಶಗಳೂ ಇವರ ಆಹಾರದಲ್ಲಿ ಇರುತ್ತವೆ.

ಕ್ಯಾಮೆರಾ ಆಚೆಗಿಡಿ, ಈ ಕ್ಷಣ ಎಂಜಾಯ್ ಮಾಡಿ! ದಾಂಪತ್ಯಕ್ಕೆ ಟಿಪ್ಸ್ 
ಒಕಿನಾವಾದ ಜನ ನೋಡಲು ಕುಳ್ಳರು, ತೆಳ್ಳಗಿರುತ್ತಾರೆ. ಬೊಜ್ಜಿನ ಸಮಸ್ಯೆ ಇವರಲ್ಲಿ ಇಲ್ಲ. ನೂರರ ಮುದುಕ ಮುದುಕಿಯರೂ ಇಲ್ಲಿನ ಬೀದಿಗಳಲ್ಲಿ ಸುಟಿಸುಟಿಯಾಗಿ ನಡೆದುಕೊಂಡು ಹೋಗುತ್ತಾರೆ. 
ಒಕಿನಾವಾದ ಜನತೆ ಇನ್ನೊಂದು ಸೂತ್ರವನ್ನೂ ಆಲಿಸುತ್ತಾರೆ- ಹರಾ ಹಚಿ ಬೂ. ಹಾಗೆಂದರೆ ಹೊಟ್ಟೆ ಸ್ವಲ್ಪ ಖಾಲಿ ಇರಲಿ ಎಂದರ್ಥ. ಹೊಟ್ಟೆ ತುಂಬಿ ಬಿರಿಯುವಷ್ಟು ಇವರು ಎಂದೂ ತಿನ್ನವುದಿಲ್ಲ. ಸ್ವಲ್ಪಾಂಶ ಖಾಲಿ ಬಿಟ್ಟೇ ಇರುತ್ತಾರೆ. ಇದು ಜಠರ ಸಂಕುಚನ ವಿಕಸನಕ್ಕೆ ಹೆಚ್ಚಿನ ಅವಕಾಶ ನೀಡುತ್ತದೆ. ಜೀರ್ಣಾಂಗಕ್ಕೆ ಕೆಲಸ ಹೊರೆಯಾಗುವುದಿಲ್ಲ. 

ಸರ್ಪಗಳಿದ್ದಲ್ಲಿ ನಿಧಿ ಇದ್ದೇ ಇರುತ್ತಾ? 
ಹಾಗಾದರೆ ನೀವು ಒಕಿನಾವಾ ಡಯಟ್ ಪಾಲಿಸಿದರೆ ನೂರು ವರ್ಷ ಬದುಕಬಹುದೇ? ಹಾಗೇನೂ ಹೇಳಲಾಗುವುದಿಲ್ಲ. ಯಾಕೆಂದರೆ ಒಕಿನಾವಾದ ಜೀವನಶೈಲಿ, ವಾತಾವರಣ ಎಲ್ಲವೂ ನಮಗಿಂತ ಬೇರೆ. ನಾವು ನಮ್ಮ ದೇಸಿ ಆಹಾರಪದ್ಧತಿ, ಇಲ್ಲಿನ ವಾತಾವರಣಕ್ಕೆ ಪೂರಕವಾದ ಆಹಾರವನ್ನು ಸೇವಿಸಬೇಕು. ಆಹಾರದ ಜೊತೆಗೆ ಇತರ ಅಂಶಗಳೂ ಈ ದೀರ್ಘಾಯುಷ್ಯದಲ್ಲಿ ಇವೆ. ಉದಾಹರಣೆಗೆ, ದುಡಿಮೆ. ನಾವು ದಿನದ ಹತ್ತಾರು ಗಂಟೆ ಕುಳಿತೇ ಇರುತ್ತೇವೆ. ಒಕಿನಾವನ್ನರು ದಿನದ ಹಗಲು ಹೊತ್ತನ್ನೆಲ್ಲ ಮೈಬಗ್ಗಿಸಿ ದುಡಿಯುತ್ತ ಕಳೆಯುತ್ತಾರೆ.  ಇಲ್ಲಿನವರು ಸ್ವಲ್ಪ ಆಲ್ಕೋಹಾಲ್ ಸೇವಿಸುತ್ತಾರೆ. ಆದರೆ ಅದು ಸ್ಥಳೀಯವಾಗಿ ತಯಾರಿಸಿದ, ಹಣ್ಣುಗಳಿಂದ ಮಾಡಿದ ಬ್ರಾಂದಿ. 

ನಿಮ್ಮ ಮಗು ನಗೋಕೆ ಶುರು ಮಾಡೋದು ಯಾವಾಗ? 
ಇವರನ್ನು ಖುಷಿಯಾಗಿ, ನೆಮ್ಮದಿಯಾಗಿಟ್ಟಿರುವ ಇನ್ನೊಂಧು ಅಂಶ ಎಂದರೆ ಇವರ ಸಾಮಾಜಿಕ ಜೀವನ. ನಮ್ಮ ಹಾಗೆ ಇವರು ಮನೆಗಳಲ್ಲೇ ಉಳಿಯುವುದಿಲ್ಲ. ಸಾಮಾಜಿಕವಾಗಿ ತುಂಬಾ ಬೆರೆಯುತ್ತಾರೆ, ಇವರ ಗುಂಪುಜೀವನ ಸಶಕ್ತವಾಗಿದೆ. ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ಇನ್ನೊಬ್ಬರ ಕಷ್ಟಸುಖಗಳಿಗೆ ಒದಗುತ್ತಾರೆ. ಹೀಗಾಗಿ ಇವರಲ್ಲಿ ಮಾನಸಿಕ ಸಮಸ್ಯೆಗಳಿಲ್ಲ. ಹಾಗಾಗಿ ಅವರ ಜೀವನವೂ ನೆಮ್ಮದಿಯಿಂದ ಕೂಡಿದೆ.