ತಿರುವಾಂಕೂರಿನ ಅನಂತಪದ್ಮನಾಭ ದೇವಾಲಯದಲ್ಲಿ ದೊಡ್ಡ ಪ್ರಮಾಣದ ನಿಧಿ ಪತ್ತೆಯಾಗಿದ್ದನ್ನು ನೀವು ಓದಿರಬಹುದು. ಅಲ್ಲಿ ಇನ್ನೂ ತೆರೆಯದ ಹಲವು ಕೋಣೆಗಳಿವೆ. ಈ ಕೋಣೆಗಳಲ್ಲಿ ಏನಿದ್ದರೂ ಅದು ರಾಜಮನೆತನಕ್ಕೆ ಸೇರಿದ್ದು ಎಂದು ಕೋರ್ಟ್ ಹೇಳಿದೆ. ಇದಕ್ಕೂ ಮುನ್ನ, ಒಂದು ಕೋಣೆಯ ಬಾಗಿಲು ತೆರೆದಾಗ ಅಲ್ಲಿ ಸಾವಿರ ಕೋಟಿ ರೂಪಾಯಿಗೂ ಮಿಕ್ಕಿದ ಚಿನ್ನದ ಆಭರಣಗಳು ದೊರೆತದ್ದು ನಿಮಗೆ ಗೊತ್ತಿರಬಹುದು. ಈ ಚಿನ್ನವೆಲ್ಲ ಸರಕಾರಕ್ಕೆ ಸೇರಬೇಕು ಎಂದು ಹಠ ಹಿಡಿದ ಹಲವರಿಗೆ, ನಂತರ ಸಮಸ್ಯೆ ಸೃಷ್ಟಿಯಾಗಿದೆ ಎಂದು ಸ್ಥಳೀಯ ಜ್ಯೋತಿಷ್ಯರು ಹೇಳಿದ್ದಾರೆ. ಅಂಥ ಅಧಿಕಾರಿಗಳಲ್ಲಿ ಒಬ್ಬಾತನಿಗೆ ನಂತರ ಹಾವು ಕಚ್ಚಿತು. ಇನ್ನೊಬ್ಬನ ಕನಸಿನಲ್ಲಿ ಪದೇ ಪದೇ ಹಾವು ಬರತೊಡಗಿತು. ಇನ್ನೊಬ್ಬನ ಮಕ್ಕಳಿಗೆ ಹೋದಲ್ಲಿ ಬಂದಲ್ಲಿ ಹಾವು ಕಾಣಿಸಿಕೊಳ್ಳತೊಡಗಿತು. ಇದೇನೂ ಕಾಕತಾಳೀಯವಲ್ಲ. ಯಾಕೆಂದರೆ ನಿಧಿಯನ್ನು ಕಾಯುವ ಕೆಲಸವನ್ನು ಸರ್ಪಗಳು ಶತಮಾನಗಳಿಂದ ಮಾಡಿಕೊಂಡು ಬರುತ್ತಿವೆ. ಈ ನಿಧಿಗಳು ಯಾರಿಗೆ ಸೇರಬೇಕೋ, ಅವರಿಗೆ ಅಥವಾ ಅವರ ಉತ್ತರಾಧಿಕಾರಿಗಳಿಗೆ ಸೇರುವವರೆಗೂ ಈ ಸರ್ಪಗಳು ನಿಧಿಯನ್ನು ಕಾಯುತ್ತವೆ. ಇದನ್ನು ಹಲವು ಭಾರತೀಯ ಪುರಾಣಗಳು, ಇತಿಹಾಸದ ಕತೆಗಳೂ ಕೂಡ ಸಾಬೀತುಪಡಿಸಿವೆ.

ಹಂಪಿಯಲ್ಲಿ ನಾಗರಹಾವುಗಳು ಹೆಚ್ಚಿವೆ. ಇದೇ ಹಂಪಿ ಹಿಂದೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತೆಂಬುದನ್ನೂ, ಅಲ್ಲಿ ವರ್ತಕರು ಬೀದಿಬೀದಿಗಳಲ್ಲಿ ಮುತ್ತು ರತ್ನಗಳನ್ನು ಸುರಿದು ತೂಕಮಾಡಿ ಮಾರುತ್ತಿದ್ದರೆಂಬುದನ್ನೂ ಇತಿಹಾಸಕಾರರು ಹೇಳಿದ್ದಾರೆ. ಅಂದಮೇಲೆ ಇಲ್ಲಿನ ಜನತೆ ಅವುಗಳನ್ನು ಕೊಳ್ಳುವಷ್ಟು ಶ್ರೀಮಂತರಾಗಿರಬೇಕು. ಹಾಗಿದ್ದರೆ ಈ ಸಾಮ್ರಾಜ್ಯದ ನಿಧಿಯೆಲ್ಲ ಸಾಮ್ರಾಜ್ಯದ ಅಳಿವಿನ ಬಳಿಕ ಎಲ್ಲಿ ಹೋಯಿತು? ಇದಕ್ಕೆ ಉತ್ತರ ಸಿಗುವುದಿಲ್ಲ. ಕೆಲವರು ಇದನ್ನು ಮುಸ್ಲಿಂ ಸುಲ್ತಾನರು ಕೊಳ್ಳೆ ಹೊಡೆದರೆನ್ನುತ್ತಾರೆ. ಆದರೆ ಎಲ್ಲವನ್ನೂ ಕೊಳ್ಳೆ ಹೊಡೆದಿರಲು ಸಾಧ್ಯವಿಲ್ಲ. ಕೆಲವಾದರೂ ಹಂಪಿಯ ಅವಶೇಷಗಳ ನಡುವೆ ಎಲ್ಲೋ ನಿಧಿಯ ಸ್ವರೂಪದಲ್ಲಿ ಹುದುಗಿರಬೇಕು. ಇಂದಿಗೂ ಹಂಪಿಯಲ್ಲಿ ನಿಧೀಕಳ್ಳರು ಕಾರ್ಯಶೀಲವಾಗಿರುವುದನ್ನು ಗಮನಿಸಬಹುದು. ಆದರೆ ಅವು ಯಾವುದೂ ಅವರಿಗೆ ದಕ್ಕಿದಂತಿಲ್ಲ. ಸಿಕ್ಕಿದರೂ ಅವರಿಗೆ ದಕ್ಕದಿರಲು ಕಾರಣ ಇದೇ ಸರ್ಪಗಾವಲು.

ಯಾವ ವಾರ ಹುಟ್ಟಿದವರು ಬೆಸ್ಟ್ ಉದ್ಯೋಗಿಗಳು? 
ಬ್ರೆಜಿಲ್‌ನ ಬಳಿ ಒಂದು ದ್ವೀಪವಿದೆ. ಅದಕ್ಕೆ ಹೆಸರಿಲ್ಲ. ಆದರೆ ಅಲ್ಲಿರುವ ನಾನಾ ಬಗೆಯ ಸರ್ಪಜಾತಿಗಳು, ವಿಷಕಾರಿ ಹಾವುಗಳನ್ನು ಕಂಡವರು ಅದಕ್ಕೆ ಸರ್ಪದ್ವೀಪ- ದಿ ಸರ್ಪೆಂಟ್‌ ಐಲ್ಯಾಂಡ್‌ ಎಂದೇ ಹೆಸರಿಟ್ಟಿದ್ದಾರೆ. ಅಲ್ಲಿ ಪ್ರತಿ ನಾಲ್ಕು ಹೆಜ್ಜೆಗೊಂದರಂತೆ ಹಾವುಗಳು ಸಿಗುತ್ತವೆ. ಎಂಥ ವಿಷಕಾರಿ ಹಾವುಗಳಿವೆ ಎಂದರೆ, ಅಲ್ಲಿಗೆ ಸುರಕ್ಷತಾ ಸಾಧನಗಳಿಲ್ಲದೆ ಹೋದವರ್ಯಾರೂ ಬದುಕಿ ಬಂದ ನಿದರ್ಶನಗಳು ಕಡಿಮೆ. ಹೋದವರೆಲ್ಲರಿಗೂ ಒಂದಲ್ಲ ಒಂದು ಹಾವು ಕಚ್ಚಿದೆ. ಈ ಹಾವುಕಡಿತಕ್ಕೆ ಒಂದು ಗಂಟೆಯ ಒಳಗೆ ಔಷಧ ದೊರೆಯದಿದ್ದರೆ, ಕಚ್ಚಿಲ್ಪಟ್ಟವನು ಸತ್ತೇ ಹೋಗುತ್ತಾನೆ. ಇಲ್ಲಿ ಯಾಕೆ ಇಷ್ಟೊಂದು ಹಾವುಗಳಿವೆ? ಯಾಕೆಂದರೆ ಇಲ್ಲಿ ನೂರಾರು ವರ್ಷಗಳ ಕೆಳಗೆ, ಕಡಲ್ಗಳ್ಳರು ತಾವು ದೋಚಿದ ಮುತ್ತುರತ್ನ ಬೆಳ್ಳಿ ಬಂಗಾರಗಳನ್ನು ಇಲ್ಲಿ ತಂದು ಹೂತಿಡುತ್ತಿದ್ದರು. ಅವುಗಳನ್ನು ಯಾರೂ ದೋಚಲು ಬರದೆ ಇರಲಿ ಎಂಬ ಉದ್ದೇಶದಿಂದ ವಿಷಕಾರಿ ಹಾವುಗಳನ್ನು ತಂದು ಬಿಟ್ಟರು. ಅವುಗಳು ಸಂತಾನೋತ್ಪತ್ತಿ ಮಾಡೀ ಮಾಡೀ ಈಗ ದ್ವೀಪ ತುಂಬಾ ಹಾವುಗಳೇ ತುಂಬಿಕೊಂಡಿವೆ. ಇದರಿಂದಾಗಿ ದ್ವೀಪದಲ್ಲಿ ಈಗ ಇನ್ಯಾವ ಬಗೆಯ ಜೀವಿಗಳೂ ಇಲ್ಲ. ಕಡಲ್ಗಳ್ಳರ ಅವಸಾನಾನಂತರ ನಿಧಿಯೂ ರಹಸ್ಯವಾಗಿ ಉಳಿದುಹೋಗಿದೆ. 

ಅಧಿಕ ಮಾಸ ಬಹು ಶ್ರೇಷ್ಠ; ಅಂದುಕೊಂಡದ್ದು ಆಗಬೇಕೆಂದರೆ ಹೀಗೆ ಮಾಡಿ... 
ನಾಗಗಳು ಈ ನಿಧಿ ಕಾಯುವ ರಹಸ್ಯವಾದರೂ ಏನು? ಇದರ ಹಿಂದಿನ ರಹಸ್ಯ ಯಾರಿಗೂ ಗೊತ್ತಿಲ್ಲ. ಆದರೆ, ವಿಷಕಾರಿ ಹಾವುಗಳನ್ನು ಹಿಂದಿನವರು ನಿಧಿಗಳನ್ನು ಕಾಯಲೆಂದೇ ತಂದು ಇಡುತ್ತಿದ್ದುದು ಉಂಟು. ಚಂದ್ರಗುಪ್ತ ಮೌರ್ಯನ ಚಾಣಾಕ್ಷ ಮಂತ್ರಿ ಚಾಣಕ್ಯ, ಹೀಗೆ ಮಾಡುತ್ತಿದ್ದನಂತೆ. ಈತ ಸಾಮ್ರಾಜ್ಯದ ಖಜಾನೆಯನ್ನು ಹೀಗೆ ಶತ್ರುಗಳಿಂದ ಕಾಪಾಡುತ್ತಿದ್ದ ಬಗ್ಗೆ ದಂತಕತೆಗಳಿವೆ. 
ಹೀಗಾಗಿ ಯಾವುದೇ ಗುಪ್ತನಿಧಿಯನ್ನು ಪಡೆಯಲು ಅಗೆಯುವ ಮುನ್ನ, ಸರ್ಪಶಾಂತಿ, ನಾಗಶಾಂತಿ ಮಾಡಿಸಬೇಕು. ಇಲ್ಲವಾದರೆ ಸರ್ಪಗಳಿಂದ ತೊಂದರೆ ಕಟ್ಟಿಟ್ಟದ್ದು. ಅಷ್ಟು ಮಾಡಿಸಿದರೂ, ನೀವು ಆ ನಿಧಿಯ ಸರಿಯಾದ ವಾರಸುದಾರರಲ್ಲದೆ ಹೋದಲ್ಲಿ, ಅದು ನಿಮಗೆ ದಕ್ಕುವುದು ಕಷ್ಟ. ಒಂದಲ್ಲ ಒಂದು ರೀತಿಯಲ್ಲಿ ಅದು ವ್ಯಯವಾಗುತ್ತದೆ. 

ಮೇಷ ರಾಶಿಯವರು ಹಿಂದಿನ ಜನ್ಮದಲ್ಲಿ ಗೊರಿಲ್ಲಾ ಆಗಿರೋ ಸಾಧ್ಯತೆ ಇದೆ,