ನಿಮ್ಮ ನೆಗೆಟಿವ್ ವಿಚಾರದ ಮಾದರಿಯನ್ನು ಗುರುತಿಸಿಕೊಂಡು ಅವುಗಳನ್ನು ಅರಿವಿನ ಪರಿಧಿಯೊಳಕ್ಕೆ ತಂದು ಪುನರ್ ರಚಿಸಿಕೊಳ್ಳಬೇಕು. ಇದೊಂದು ತಂತ್ರವಾಗಿದ್ದು, ಚೂರು ಎಚ್ಚರಿಕೆ ವಹಿಸಿದರೆ ಭಾವನೆಗಳು, ನೆಗೆಟಿವ್ ವಿಚಾರಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಸಾಧ್ಯವಾಗುತ್ತದೆ. 

ನಮ್ಮ ವಿಚಾರಗಳು, ಭಾವನೆಗಳು ಅತ್ಯಂತ ಸಶಕ್ತವಾಗಿರುತ್ತವೆ. ಅವೇ ನಮ್ಮನ್ನು ರೂಪಿಸುತ್ತವೆ. ನಮ್ಮ ಭಾವನೆಗಳು ನಮ್ಮ ಕ್ರಿಯೆಗೆ ಮೂಲ ಕಾರಣವಾಗುತ್ತವೆ. ಜಗತ್ತನ್ನು ನಾವು ಹೇಗೆ ಸ್ವೀಕರಿಸಬೇಕು ಎನ್ನುವುದರ ಮೇಲೆ ಪ್ರಭಾವ ಬೀರುತ್ತವೆ. ಕೆಲವರನ್ನು ನೋಡಿ, ಎಷ್ಟೇ ಕಷ್ಟದ ಸನ್ನಿವೇಶ ಎದುರಾಗಲಿ, ಕೆಲವೇ ಸಮಯದಲ್ಲಿ ಅದರಿಂದ ಹೊರಬರುತ್ತಾರೆ. ಅವರ ಭಾವನೆಗಳೇ ಅಷ್ಟು ಸದೃಢವಾಗಿರುತ್ತವೆ. ಕೆಲವೊಮ್ಮೆ ನೆಗೆಟಿವ್ ವಿಚಾರಧಾರೆಯ ಹಿಡಿತದಲ್ಲಿ ಮನುಷ್ಯರು ಸಿಲುಕುತ್ತ ಹೋಗುತ್ತಾರೆ. ಒಮ್ಮೆ ನೆಗೆಟಿವ್ ವಿಚಾರಧಾರೆಯ ಹಿಡಿತಕ್ಕೆ ಸಿಲುಕಿದರೆ ಅದು ಬದುಕನ್ನು ದುರಂತಮಯವಾಗಿಸುತ್ತದೆ. ಯಾವತ್ತೋ ಒಂದು ಸನ್ನಿವೇಶದಲ್ಲಿ ಹೀಗಾದರೆ ಸುಧಾರಿಸಿಕೊಳ್ಳಬಹುದು.

ಪದೇ ಪದೆ ಅಥವಾ ಚಿಕ್ಕಪುಇಟ್ಟ ಸಂಗತಿಗಳಿಗೂ ಮನಸ್ಸು ಹಾಳಾಗುತ್ತಿದ್ದರೆ ಮಿದುಳಿನಲ್ಲಿ ಕ್ರಮೇಣ ರಾಸಾಯನಿಕ ಸ್ರವಿಕೆಯಲ್ಲಿ ವ್ಯತ್ಯಾಸವಾಗಿ ಕೆಟ್ಟ ವಿಚಾರಗಳ ಬಿಗಿತ ಹೆಚ್ಚಾಗುತ್ತದೆ. ಹೀಗಾಗಿ, ಇಂತಹ ಸಮಯದಲ್ಲಿ ಅರಿವನ್ನು ಪುನರ್ ರಚನೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಆಳವಾಗಿ ನೆಗೆಟಿವ್ ಭಾವನೆಗಳಲ್ಲಿ ಮುಳುಗುವ ಮುನ್ನ ವಿಚಾರಗಳನ್ನು ಬದಲಿಸಿಕೊಳ್ಳುವುದು ಇದರ ತಂತ್ರವಾಗಿದ್ದು, ಜೀವನದ ಕಡೆಗೆ ಹೆಚ್ಚು ಧನಾತ್ಮಕ ದೃಷ್ಟಿಕೋನ ಹೊಂದಲು ಸಾಧ್ಯವಾಗುತ್ತದೆ. ಅರಿವಿನ ಪುನರ್ ರಚನೆಗೆ ಸ್ವಯಂ ಪ್ರಯತ್ನ ಅತ್ಯಗತ್ಯ.

ಮಾನಸಿಕ ತಂತ್ರ (Mental Technique): ಕಾಗ್ನಿಟಿವ್ ರಿಫ್ರೇಮಿಂಗ್ (Cognitive Reframing) ಎನ್ನುವುದು ಮಾನಸಿಕ ತಂತ್ರವಾಗಿದ್ದು, ಇದು ಸನ್ನಿವೇಶಗಳು, ಭಾವನೆಗಳು, ಘಟನೆಗಳನ್ನು ನಾವು ನೋಡುವ ದೃಷ್ಟಿಕೋನವನ್ನು ಬದಲಿಸುತ್ತದೆ. ನಮ್ಮ ವಿಚಾರಗಳನ್ನು ಸವಾಲಿಗೆ (Challenge) ಒಡ್ಡುವುದು ಇದರ ಪ್ರಮುಖ ಕಾರ್ಯ. ಎಷ್ಟೋ ಬಾರಿ ಆಧಾರವಿಲ್ಲದೆ ನಮ್ಮಷ್ಟಕ್ಕೆ ನಾವು ನೆಗೆಟಿವ್ ವಿಚಾರದ ಲ್ಲಿ ಮುಳುಗಿರುತ್ತೇವೆ, ಸತ್ಯವೆಂದು ನಮ್ಮಷ್ಟಕ್ಕೆ ನಾವು ಏನನ್ನೋ ಭಾವಿಸುತ್ತೇವೆ, ಇವು ನಮ್ಮ ಸ್ಥಿತಿಯನ್ನು ಇನ್ನಷ್ಟು ಆಳಕ್ಕೆ ತಳ್ಳುತ್ತವೆ.

3 ತಿಂಗಳ ಚಿಕಿತ್ಸೆಯಿಂದ 10 ಕೆಜಿ ಕಳೆದುಕೊಂಡ ಯತಿ; ಮಗನ ಆರೋಗ್ಯದ ಬಗ್ಗೆ ಸತ್ಯ ಬಿಚ್ಚಿಟ್ಟ ಪರಿಮಳ

ಇವುಗಳನ್ನು ಪ್ರಶ್ನಿಸಿಕೊಳ್ಳುವುದಕ್ಕೆ (Questioning) ಈ ತಂತ್ರ ಅನುವು ಮಾಡಿಕೊಡುತ್ತದೆ. ಅಸಲಿಗೆ, ಮನುಷ್ಯರ ಭಾವನೆಗಳು (Emotions) ಹಿಂದಿನ ಅನುಭವ, ನೆನಪು, ಪೂರ್ವಾಗ್ರಹಗಳಿಂದ (Prejudice) ಕೂಡಿದ್ದು ಸ್ಪಷ್ಟವಾಗಿರುವುದಿಲ್ಲ. ಈ ತಂತ್ರ ಅನುಸರಿಸುವುದರಿಂದ ನಮ್ಮ ಭಾವನೆಗಳನ್ನು ಕ್ಲಿಯರ್ (Clear) ಮಾಡಿಕೊಳ್ಳಲು ಸಾಧ್ಯವಾಗುತ್ತದೆ. 

ನೆಗೆಟಿವ್ ಚಿಂತನೆ ರೂಪುಗೊಳ್ಳೋದು ಹೀಗೆ
ಮನುಷ್ಯನ ಚಿಂತನಾಕ್ರಮದಲ್ಲಿ ನೆಗೆಟಿವ್ ಚಿಂತನೆಗೆ (Negative Thoughts) ಅನುವು ಮಾಡಿಕೊಡುವಂತಹ ನಿರ್ದಿಷ್ಟ ಮಾದರಿಗಳನ್ನು ಗುರುತಿಸಲಾಗಿದೆ. ಯಾರ ವಿಚಾರದಲ್ಲಾದರೂ ಇದು ಸತ್ಯ. ಅವುಗಳನ್ನು ಗಮನಿಸಿಕೊಳ್ಳಬೇಕು. 
• ಧ್ರುವೀಕೃತ ಚಿಂತನೆ ಅಂದರೆ, ಒಂದೇ ದೃಷ್ಟಿಕೋನದಿಂದ ವಿಚಾರ ಮಾಡುವುದು. 
• ಎಲ್ಲವನ್ನೂ ಅತಿಯಾಗಿ ಸಾಮಾನ್ಯೀಕರಣಗೊಳಿಸುವುದು. ಉದಾಹರಣೆಗೆ, “ನಾನು ಒಂದು ಕಪ್ ನೀರು ಚೆಲ್ಲಿದೆ. ನಾನು ಯಾವಾಗಲೂ ಹೀಗೆ ಅಶಿಸ್ತು ಹೊಂದಿದ್ದೇನೆ’ ಎಂದುಕೊಳ್ಳುವಂತಹ ವಿಚಾರ.
• ಯಾವಾಗಲೂ ನೆಗೆಟಿವ್ ವಿಚಾರದತ್ತಲೇ ಗಮನ ಹರಿಸುವುದು.
• ಮೈಂಡ್ ರೀಡಿಂಗ್ (Mind Reading) ಮಾಡುವುದು ಸುಲಭವಲ್ಲ. ಇತರರು ನಮ್ಮ ಬಗ್ಗೆ ಕೆಟ್ಟದಾಗಿಯೇ ಯೋಚಿಸುತ್ತಿದ್ದಾರೆ ಎಂದುಕೊಳ್ಳುವುದು.
• ಸಣ್ಣ ಸಮಸ್ಯೆಗಳು ಸಹ ಅತಿಕೆಟ್ಟ ಪರಿಣಾಮಕ್ಕೆ ಕಾರಣವಾಗುತ್ತವೆ ಎಂದು ಯೋಚಿಸುವುದು. 
• ದೂರುವ (Blame) ಪರಿಪಾಠ

ಪ್ರತಿ ದಿನ ಪುಷ್-ಅಪ್‌ ಮಾಡೋದ್ರಿಂದ ನಿಮ್ಮ ದೇಹದಲ್ಲಿ ಈ ಬದಲಾವಣೆ ಕಾಣ್ಬೋದು..

ವಿಚಾರಕ್ರಮ ಬದಲಿಸಿಕೊಳ್ಳೋದು ಹೇಗೆ?
• ನೆಗೆಟಿವ್ ಚಿಂತನೆಗೆ ಸ್ಪಷ್ಟತೆ ಬರಬೇಕು ಎಂದಾದರೆ ಸಾಕ್ಷಿಗಳನ್ನು (Evidence) ಕಲೆ ಹಾಕಿ ಅಥವಾ ನೀವು ಸುಮ್ಮನೆ ಅಂತಿಮ ತೀರ್ಮಾನಕ್ಕೆ ಬರುತ್ತಿದ್ದೀರಾ ನೋಡಿಕೊಳ್ಳಿ.
• ಬದಲಿ ಅಂಶಗಳತ್ತ ಗಮನಹರಿಸಿ. ಯಾವುದೇ ಸನ್ನಿವೇಶವನ್ನು ಮತ್ತೊಂದು ಮಗ್ಗುಲಿಂದ ಯೋಚನೆ ಮಾಡಲು ಮನಸ್ಸನ್ನು ಪ್ರೇರೇಪಿಸಿ.
• ಪಾಸಿಟಿವ್ ಅಂಶಕ್ಕೆ ಆದ್ಯತೆ ನೀಡಿ. ಒಂದು ಕೆಟ್ಟ ಘಟನೆಯಿಂದ ಕಲಿತುಕೊಳ್ಳುವಂತಹ ಅಂಶಗಳನ್ನು ಗಮನಿಸಿ.
• ಕೆಲವು ಸಮಯವನ್ನು ಲಘುವಾಗಿ ಪರಿಗಣಿಸುವುದು ಅಗತ್ಯ. ಹಾಸ್ಯಮಯವಾಗಿ (Humour) ಘಟನೆಗಳನ್ನು ನೋಡುವುದು ಸಹ ಅಗತ್ಯ.
• ನೀವು ನಿಯಂತ್ರಿಸಬಹುದಾದ (Control) ಅಂಶಗಳತ್ತ ಕೇಂದ್ರೀಕರಿಸಿ. ನಿಮ್ಮ ನಿಯಂತ್ರಣದಲ್ಲಿರುವಂತಹ ಇಲ್ಲದಿರುವಂತಹ ಅಂಶಗಳನ್ನು ಪಟ್ಟಿ ಮಾಡಿಕೊಳ್ಳಿ. 
• ಯಾವುದೇ ನೆಗೆಟಿವ್ ವಿಚಾರವನ್ನು ಬರೆಯಿರಿ (Write). 
• ಸದಾಕಾಲ ಯಾವುದಾದರೂ ಕಾರ್ಯದಲ್ಲಿ ಮಗ್ನವಾಗಿರಿ.