ಅಲ್ಜೀಮರ್ಸ್ ಹಾಗೂ ಡಿಮೆನ್ಷಿಯಾಗಳು ಮರೆವಿನ ಕಾಯಿಲೆಗಳು, ಕ್ರಮೇಣ ಇವು ನರವ್ಯೂಹದ ಮೇಲಿನ ನಮ್ಮ ನಿಯಂತ್ರಣವನ್ನೂ ಕುಂದಿಸುತ್ತವೆ. ನಿಮ್ಮ ಮೆದುಳು ಚುರುಕಾಗಿರುವಂತೆ ನೋಡಿಕೊಳ್ಳುವುದು ಈ ರೋಗಗಳನ್ನು ದೂರವಿಡುವ ಪ್ರಮುಖ ಉಪಾಯ. 
ಈ ರೋಗವನ್ನು ಬರುವ ಮುನ್ನ ಗುರುತಿಸಬಹುದಾದ ಲಕ್ಷಣಗಳನ್ನು ನೆನಪಿಟ್ಟುಕೊಳ್ಳಿ, ಈ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಳ್ಳತೊಡಗಿದರೆ, ನೀವು ಎಚ್ಚೆತ್ತುಕೊಳ್ಳಬೇಕಾದ ಸಮಯ ಬಂದಿದೆ ಎಂದರ್ಥ.
- ನೆನಪಿನ ಶಕ್ತಿಯ ನಷ್ಟ: ಅಲ್ಜೀಮರ್ಸ್‌ ಕಾಯಿಲೆಯ ಅತ್ಯಂತ ಸಾಮಾನ್ಯ ಲಕ್ಷಣಗಳಲ್ಲಿ ಒಂದು ನೆನಪಿನ ಶಕ್ತಿ ನಷ್ಟವಾಗುವುದು. ಅದರಲ್ಲೂ ಇತ್ತೀಚೆಗೆ ಕಲಿತ ವಿಷಯಗಳನ್ನು ಮರೆಯುವುದು. ಮರೆತು ಹೋಗುವ ಇತರ ವಿಚಾರಗಳೆಂದರೆ ದಿನಾಂಕಗಳು ಮತ್ತು ಘಟನೆಗಳು, ಪದೇಪದೇ ಒಂದೇ ಮಾಹಿತಿಯನ್ನು ಕೇಳುವುದು, ನೆನಪಿಗೆ ಟಿಪ್ಪಣಿಗಳು ಅಥವಾ ಮೊಬೈಲ್ ಹೆಚ್ಚು ಅವಲಂಬಿಸುವುದು ಅಥವಾ ಹಿಂದೆ ಸ್ವತಃ ನಿಭಾಯಿಸುತ್ತಿದ್ದ ಕೆಲಸಗಳಿಗೆ ಕುಟುಂಬ ಸದಸ್ಯರನ್ನು ಅವಲಂಬಿಸುವುದು.


- ಸಮಸ್ಯೆಗಳ ಪರಿಹಾರ ಕಷ್ಟ: ಕೆಲವು ವ್ಯಕ್ತಿಗಳಿಗೆ ಯಾವುದೇ ಯೋಜನೆ ಅನುಸರಿಸಲು ಅಥವಾ ಅಂಕಿಸಂಖ್ಯೆಗಳ ಜತೆಗೆ ಕೆಲಸ ಮಾಡಲು ಕಷ್ಟವಾಗಬಹುದು. ಚಿರಪರಿಚಿತ ಅಡುಗೆ ತಯಾರಿ ಅಥವಾ ತಿಂಗಳ ಬಿಲ್ಲುಗಳ ಪಾವತಿ ಆಗಿದೆಯೇ ಇಲ್ಲವೇ ಎಂಬುದರ ಬಗ್ಗೆ ಖಚಿತವಾಗಿರಲು ಸಾಧ್ಯವಾಗದೆ ಇರಬಹುದು. ಏಕಾಗ್ರತೆಯ ಕುಸಿತ ಉಂಟಾಗಬಹುದು, ಹಿಂದೆ ಮಾಡುತ್ತಿದ್ದ ಕೆಲಸಗಳನ್ನು ಮಾಡಲು ಹೆಚ್ಚು ಕಾಲ ತಗಲಬಹುದು.
- ದಿನಚರಿಯೇ ಕಷ್ಟ: ಅಲ್ಜೀಮರ್ಸ್‌ಗೆ ತುತ್ತಾಗಿರುವ ವ್ಯಕ್ತಿಗಳು ಸಾಮಾನ್ಯವಾಗಿ ದೈನಿಕ ಕೆಲಸ ಕಾರ್ಯಗಳನ್ನು ಪೂರೈಸಲು ತೊಂದರೆ ಅನುಭವಿಸುತ್ತಾರೆ. ಕೆಲವೊಮ್ಮೆ ಪರಿಚಿತವಾದ ಸ್ಥಳಗಳಿಗೆ ವಾಹನ ಚಲಾಯಿಸಲು ಅಥವಾ ಹೋಗುವುದು ಸಮಸ್ಯೆಯಾಗಬಹುದು, ಉದ್ಯೋಗ ಸ್ಥಳದಲ್ಲಿ ದಿನವೂ ನಿರ್ವಹಿಸುವ ಕೆಲಸ ಮಾಡಲು ಕಷ್ಟವಾಗಬಸುದು. ಇಷ್ಟವಾಗಿ ಯಾವತ್ತೂ ಆಡುವ ಆಟದ ನಿಯಮಗಳನ್ನು ನೆನಪಿಸಿಕೊಳ್ಳಲು ಸಮಸ್ಯೆಯಾಗಬಹುದು.
- ಕಾಲ ಮತ್ತು ಸ್ಥಳದ ಕುರಿತು ಗೊಂದಲ: ಅಲ್ಜೀಮರ್ಸ್‌ಗೆ ತುತ್ತಾಗಿರುವ ರೋಗಿಗಳು ದಿನಾಂಕಗಳು, ಋತುಮಾನ ಮತ್ತು ಸಮಯ ಸರಿದುದನ್ನು ಮರೆತುಬಿಡಬಹುದು. ತತ್‌ಕ್ಷಣವಾದುದರ ಹೊರತಾಗಿ ಇತರ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಕಷ್ಟವಾಗಬಹುದು. ಕೆಲವೊಮ್ಮೆ ತಾವು ಎಲ್ಲಿದ್ದೇವೆ ಅಥವಾ ಇಲ್ಲಿಗೆ ಹೇಗೆ ಬಂದೆವು ಎಂಬುದೇ ಅವರಿಗೆ ಜ್ಞಾಪಕವಿಲ್ಲದೆ ಇರಬಹುದು.

ಇಲ್ಲಿದೆ ನೋಡಿ ಶತಾಯುಷಿಗಳ ದ್ವೀಪ: ನೂರು ವರ್ಷ ಬದುಕೋದು ಹೇಗೆ? 
- ದೂರ, ಅಂತರಗಳ ಸಮಸ್ಯೆ: ಕೆಲವು ಮಂದಿಗೆ ದೃಷ್ಟಿ ದೋಷಗಳೂ ಅಲ್ಜೀಮರ್ಸ್‌ನ ಲಕ್ಷಣವಾಗಿರುತ್ತವೆ. ಓದುವುದಕ್ಕೆ, ದೂರವನ್ನು ಅಂದಾಜು ಮಾಡುವುದಕ್ಕೆ ಅಥವಾ ಬಣ್ಣವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅವರಿಗೆ ತೊಡಕಾಗುತ್ತದೆ, ಇದರಿಂದ ವಾಹನ ಚಲಾಯಿಸುವುದು ಕಷ್ಟವಾಗುತ್ತದೆ.
- ಮಾತು ಮತ್ತು ಬರವಣಿಗೆಯ ಸಮಸ್ಯೆಗಳು: ಅಲ್ಜೀಮರ್ಸ್‌ಗೆ ತುತ್ತಾಗಿರುವ ವ್ಯಕ್ತಿಗಳಿಗೆ ಮಾತನಾಡುವಾಗ ವಾಕ್ಯಗಳನ್ನು ಜೋಡಿಸಲು ಸಮಸ್ಯೆಯಾಗುತ್ತದೆ. ಸಂಭಾಷಣೆ ನಡೆಸುತ್ತಿರುವಾಗ ಹೇಗೆ ಮುಂದುವರಿಸುವುದು ಎಂಬುದು ಗೊತ್ತಾಗದೆ ಅರ್ಧದಲ್ಲಿಯೇ ನಿಲ್ಲಿಸಿಬಿಡಬಹುದು ಅಥವಾ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿರಬಹುದು. ಪದಗಳಿಗಾಗಿ ತಡಕಾಡಬಹುದು ಅಥವಾ ಸರಿಯಾದ ಪದಗಳು ಸಿಗದಿರಬಹುದು ಅಥವಾ ವಸ್ತುಗಳನ್ನು ತಪ್ಪಾಗಿ ಸಂಬೋಧಿಸಬಹುದು.

ಬೈಪೋಲಾರ್ ಡಿಸಾರ್ಡ್‌ರ್‌ನಿಂದ ಬಳಲುತ್ತಿರೋ ಸೆಲೆಬ್ರಿಟಿಗಳಿವರು 
- ವಯಸ್ಸು ಮತ್ತು ಕೌಟುಂಬಿಕ ಜೀನ್‌ ಇತಿಹಾಸಗಳು ಅಲ್ಜೀಮರ್ಸ್‌ಗೆ ತೀವ್ರವಾದ ನಂಟು ಹೊಂದಿವೆ. ಅತಿಯಾದ ಮದ್ಯಪಾನ, ತಲೆಗಾದ ಗಾಯ, ಅಧಿಕ ರಕ್ತದೊತ್ತಡ, ಮಧುಮೇಹ, ಧೂಮಪಾನ ಮತ್ತು ದಡೂತಿ ದೇಹ ಹೊಂದಿರುವುದೇ ಮೊದಲಾದ ಹೃದ್ರೋಗದ ಅಪಾಯಾಂಶಗಳು ಕೂಡ ಡಿಮೆನ್ಶಿಯಾ ಹೊಂದುವ ಅಪಾಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ.
- ತಮ್ಮ ಮಿದುಳನ್ನು ಸಕ್ರಿಯವಾಗಿ ಇರಿಸಿಕೊಳ್ಳುವವರಿಗೆ ಡಿಮೆನ್ಶಿಯಾ ಕಾಯಿಲೆ ಬಾಧಿಸುವ ಅಪಾಯ ಕಡಿಮೆ. ಓದುವಿಕೆ, ಚೆಸ್ ಅಥವಾ ಮಿದುಳಿಗೆ ಕೆಲಸ ಕೊಡುವ ಇತರ ಯಾವುದೇ ಆಟಗಳನ್ನು ಆಡುವುದು, ಪದಬಂಧಗಳನ್ನು, ಜಾಣ್ಮೆಯ ಆಟಗಳನ್ನು ಆಡುವವರು ಕಡಿಮೆ ಅಪಾಯ ಹೊಂದಿರುತ್ತಾರೆ.

ನಿಮ್ಮ ಮಗು ನಗೋಕೆ ಶುರು ಮಾಡೋದು ಯಾವಾಗ?