Asianet Suvarna News Asianet Suvarna News

Home Remedies: ಸಂಗಾತಿಯ ಗುಟ್ಕಾ ಚಟ ಬಿಡಿಸ್ಬೇಕಾ? ಇಲ್ಲಿವೆ ಮನೆ ಮದ್ದು

ಯಾವುದೇ ಚಟ ಅಂಟಿಕೊಂಡ್ರೆ ಅದರಿಂದ ಹೊರ ಬರೋದು ಕಷ್ಟ. ಮದ್ಯಪಾನದಂತೆ ತಂಬಾಕು ಸೇವನೆ ಕೂಡ ಆರೋಗ್ಯಕ್ಕೆ ಅಪಾಯಕಾರಿ. ಗುಟ್ಕಾ ಸೇವನೆ ಸದ್ದಿಲ್ಲದೆ ಇಡೀ ದೇಹಕ್ಕೆ ಹಾನಿಯುಂಟು ಮಾಡುತ್ತದೆ. ಅದ್ರಿಂದ ಬೇಗ ಬಿಡುಗಡೆ ಪಡೆಯುವುದು ಮುಖ್ಯ.
 

How To Get Rid Of Tobacco And Gutkha home remedies are here
Author
First Published Sep 1, 2022, 5:22 PM IST

ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ. ಇದು ತಂಬಾಕು ಪ್ಯಾಕೆಟ್ ಮೇಲೆ ಇರುತ್ತೆ. ಇದನ್ನು ಸೇವನೆ ಮಾಡೋದು ಮಾತ್ರ ಗುಟ್ಕಾ ಪ್ಯಾಕ್ ಮೇಲಿರುವ ಈ ವಿಷ್ಯವನ್ನು ಎಂದೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಗುಟ್ಕಾ, ತಂಬಾಕು ಸೋ ಪಾಯಿಸನ್ ರೀತಿಯಲ್ಲಿ ಕೆಲಸ ಮಾಡುತ್ತದೆ. ನಿಧಾನವಾಗಿ ವ್ಯಕ್ತಿಯನ್ನು ಇದು ಸಾಯಿಸುತ್ತೆ.  ಆರಂಭದಲ್ಲಿ ಇದು ತಮಾಷೆಯಿಂದ ಶುರುವಾಗುತ್ತದೆ. ಸ್ನೇಹಿತರ ಜೊತೆ ಸೇರಿದಾಗ ಅಲ್ಲೋ, ಇಲ್ಲೋ ಇದನ್ನು ಸೇವನೆ ಮಾಡುವ ಮನುಷ್ಯ ದಿನ ಕಳೆದಂತೆ ಅದಕ್ಕೆ ದಾಸನಾಗುತ್ತಾನೆ. ಇಡೀ ದಿನ ಬಾಯಿಯಲ್ಲಿ ತಂಬಾಕು ತುಂಬಿಕೊಳ್ಳಲು ಶುರು ಮಾಡ್ತಾನೆ. ಅನೇಕರು ಮಧ್ಯ ರಾತ್ರಿ ಗುಟ್ಕಾ, ತಂಬಾಕಿನ ಸೇವನೆ ಮಾಡ್ತಾರೆ. ಬಾಯಿಯ ಒಂದು ಕಡೆ ಅನೇಕ ಗಂಟೆಗಳ ಕಾಲ ಗುಟ್ಕಾ ಇಟ್ಟುಕೊಂಡರೆ ಅದು ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ಕಾರಣವಾಗುತ್ತದೆ. ಒಮ್ಮೆ ಶುರುವಾದ ಈ ತಂಬಾಕು ಸೇವನೆಯನ್ನು ಬಿಡುವುದು ಸುಲಭವಲ್ಲ. ಆರಂಭದಲ್ಲಿಯೇ ತಂಬಾಕು ಸೇವನೆಯಿಂದ ದೂರವಿರುವುದು ಒಳ್ಳೆಯದು. ಒಂದ್ವೇಳೆ ಅದು ಚಟವಾಗ್ತಿದೆ ಎನ್ನಿಸಿದ್ರೆ ಎಚ್ಚೆತ್ತುಕೊಳ್ಳಿ. ಕೆಲ ಸುಲಭ ವಿಧಾನಗಳ ಮೂಲಕ ತಂಬಾಕು ಸೇವನೆ ಬಿಡಲು ಪ್ರಯತ್ನಿಸಿ. ನಾವಿಂದು ತಂಬಾಕಿನ ಚಟದಿಂದ ದೂರವಿರಲು ಏನು ಮಾಡ್ಬೇಕು ಎಂಬುದನ್ನು ಹೇಳ್ತೇವೆ.

ತಂಬಾಕು (Tobacco) ಬಿಡಲು ನೀವು ಸೋಂಪು (Fennel) ಸಹಾಯ ಪಡೆಯಬಹುದು. ಸೋಂಪು ಹಾಗೂ ನಿಂಬೆ ರಸದ ಮಿಶ್ರಣವನ್ನು ನೀವು ಸೇವನೆ ಮಾಡ್ತಾ ಬಂದ್ರೆ ತಂಬಾಕು ಚಟ ಬಿಡುವುದು ಸುಲಭ. ಅದಕ್ಕೆ ನಿಮಗೆ 100 ಗ್ರಾಂ ಸೋಂಪು, 10 ಗ್ರಾಂ ಓಂಕಾಳು ಮತ್ತು ಸ್ವಲ್ಪ ಕಲ್ಲು ಉಪ್ಪು (Salt) ತೆಗೆದುಕೊಳ್ಳಿ. ಇವುಗಳನ್ನು ಮಿಕ್ಸ್  ಮಾಡಿ ಮತ್ತು ಅದಕ್ಕೆ ಎರಡು ನಿಂಬೆ ಹಣ್ಣಿನ ರಸವನ್ನು (Lemon Juice) ಸೇರಿಸಿ. ನಂತ್ರ ಇದನ್ನು ಬಾಣಲೆಯಲ್ಲಿ ಹಾಕಿ ಸ್ವಲ್ಪ ಹುರಿಯಿರಿ. ಈ ಮಿಶ್ರಣವನ್ನು ನೀವು ಸದಾ ನಿಮ್ಮ ಜೊತೆ ಇಟ್ಟುಕೊಳ್ಳಿ. ಗುಟ್ಕಾ ಸೇವನೆ ಮಾಡ್ಬೇಕು ಎನ್ನಿಸಿದಾಗ ಇದನ್ನು ತಿನ್ನಿ. ಓಂಕಾಳು, ಸೋಂಪು ಹಾಗೂ ನಿಂಬೆ ಹಣ್ಣಿನ ಈ ಮಿಶ್ರಣ ನಿಮಗೆ ಗುಟ್ಕಾ ಸೇವನೆ ಚಟದಿಂದ ಮುಕ್ತಿ ನೀಡುವ ಜೊತೆಗೆ ನಿಮ್ಮ ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ. ಹಾಗೆ ರಕ್ತ ಶುದ್ಧಿಗೆ ನೆರವಾಗುತ್ತದೆ.  ಇದ್ರಿಂದ ಯಾವುದೇ ಅಡ್ಡಪರಿಣಾಮವಿಲ್ಲ. ಬೇರೆ ಯಾವುದಾದ್ರೂ ಆರೋಗ್ಯ ಸಮಸ್ಯೆಯಿದೆ ಎನ್ನುವವರು ಈ ಮಿಶ್ರಣವನ್ನು ಸೇವಿಸುವ ಮೊದಲು ಆಯುರ್ವೇದ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು. ಈ ಮಿಶ್ರಣ ಸೇವನೆ ಜೊತೆ ಕೆಲ ಉಪಾಯಗಳು ಗುಟ್ಕಾ ಬಿಡಲು ನಿಮ್ಮ ನೆರವಿಗೆ ಬರುತ್ತವೆ. 

Womens Health: ತಿಂಗಳಿಗೆ ಎರಡೇ ದಿನ ಮುಟ್ಟಾಗ್ತಿದ್ಯಾ ? ಕಾರಣವೇನು ತಿಳ್ಕೊಳ್ಳಿ

ಗುಟ್ಕಾದಿಂದ ದೂರವಿಡುತ್ತೆ ಈ ಆಹಾರ : 
• ಆಹಾರದಲ್ಲಿ ಹೆಚ್ಚು ಮೂಲಂಗಿ ಬಳಕೆ ಮಾಡಿ. ಇದು ನಿಮ್ಮ ಗುಟ್ಕಾ ಬಯಕೆಯನ್ನು ಕಡಿಮೆ ಮಾಡುತ್ತದೆ.  
• ಒಂದು ಗ್ಲಾಸ್ ಬಿಸಿ ನೀರಿಗೆ  ಅರ್ಧ ಚಮಚ ಜೀರಿಗೆ ಹಾಕಿ. ಅದನ್ನು ದಿನಕ್ಕೆ 3 ರಿಂದ 4 ಬಾರಿ ಕುಡಿಯುತ್ತ ಬನ್ನಿ. ಇದು ತಂಬಾಕು ಚಟವನ್ನು ಕಡಿಮೆ ಮಾಡಲು ನೆರವಾಗುತ್ತದೆ. 
• ಬಾಯಿ ಹೈಡ್ರೀಕರಣಗೊಂಡಿದ್ದರೆ ಗುಟ್ಕಾ ಚಟದಿಂದ ದೂರವಿರಬಹುದು.
• ಕಲ್ಲಂಗಡಿ, ದಾಳಿಂಬೆ, ಕಿತ್ತಳೆ, ದ್ರಾಕ್ಷಿ, ಪಪ್ಪಾಯಿ, ಅನಾನಸ್,  ಪೇರಲೆ ಹಣ್ಣುಗಳು ಕೂಡ ತಂಬಾಕು ಸೇವನೆ ಚಟದಿಂದ ನಿಮ್ಮನ್ನು ದೂರವಿಡಲು ನೆರವಾಗುತ್ತವೆ.  

ಮಧುಮೇಹಿಗಳು ಅಕ್ಕಿ, ಗೋಧಿ ಸೇವನೆ ಕಡಿಮೆ ಮಾಡಿ ಅನ್ನೋದ್ಯಾಕೆ ?

ಗುಟ್ಕಾ ಬಿಡಲು ಸಮಯ : ಅನೇಕ ದಿನಗಳಿಂದ ಗುಟ್ಕಾ ಸೇವನೆ ಮಾಡ್ತಿದ್ದರೆ ಅದನ್ನು ಬಿಡಲು ಒಂದು ಸಮಯವನ್ನು ನಿಗದಿಪಡಿಸಿ. ಹೊಸ ವರ್ಷಾರಂಭ ಅಥವಾ ಹುಟ್ಟು ಹಬ್ಬ ಅಥವ ಬೇರೆ ಯಾವುದೋ ವಿಶೇಷ ಸಂದರ್ಭದ ನಂತ್ರ ಗುಟ್ಕಾ ಸೇವನೆ ಮಾಡುವುದಿಲ್ಲವೆಂಬ ನಿರ್ಧಾರಕ್ಕೆ ಬನ್ನಿ. ಯಾವ ಸಮಯದಲ್ಲಿ ನೀವು ಹೆಚ್ಚು ಗುಟ್ಕಾ ಸೇವನೆ ಮಾಡ್ತೀರಿ ಎಂಬುದನ್ನು ಪತ್ತೆ ಮಾಡಿ. ಆ ಸಮಯದಲ್ಲಿ ಬೇರೆ ಕೆಲಸ ಮಾಡಲು ಮುಂದಾಗಿ. ಧ್ಯಾನ (Meditation) ಹಾಗೂ ಯೋಗ (Yoga) ಕೂಡ ನಿಮಗೆ ಗುಟ್ಕಾ ಬಿಡಲು ನೆರವಾಗುತ್ತದೆ. 
 

Follow Us:
Download App:
  • android
  • ios