ಕೆಲವರು ಎರಡು ದಿನಕ್ಕೊಮ್ಮೆ ಸ್ನಾನ ಮಾಡಿದರೂ ಅವರ ದೇಹದಿಂದ ಯಾವುದೇ ವಾಸನೆ ಬರುವುದಿಲ್ಲ. ಇನ್ನು ಕೆಲವರು ದಿನಕ್ಕೆರಡು ಬಾರಿ ಸ್ನಾನ ಮಾಡಿದರೂ ಅವರ ದೇಹ ಗಬ್ಬು ನಾತ ಹೊಡೆಯುತ್ತಿರುತ್ತೆ. ನೀವು ಅಂಥವರಾ ಅಂತ ಚೆಕ್‌ ಮಾಡಿಕೊಳ್ಳಿ. ಕೆಲವೊಮ್ಮೆ ನಮ್ಮ ದೇಹದ ಪರಿಮಳ ನಮಗೇ ಗೊತ್ತಾಗಲಿಕ್ಕಿಲ್ಲ. ಅಥ ಸಂದರ್ಭದಲ್ಲಿ ಸಂಗಾತಿಯಿಂದ, ಮನೆ ಸದಸ್ಯರ ಕೈಯಿಂದ ಟಿಫ್ಸ್‌ ಪಡೆಯುವುದು ಒಳ್ಳೆಯದು.

ಬೆವರಿನ ಕಿರಿಕಿರಿ; ಆಯುರ್ವೇದದಲ್ಲಿದೆ ಚಿಕಿತ್ಸೆ!

ನಿಮ್ಮ ದೇಹದ ವಾಸನೆಯು ನಿಮ್ಮ ಆಹಾರ ಮತ್ತು ಕ್ಲೀನ್ಲಿನೆಸ್‌ನ ಅಭ್ಯಾಸಗಳಿಗೆ ನೇರವಾಗಿ ಸಂಬಂಧಿಸಿದೆ. ನೀವು ಸರಿಯಾಗಿ ಸ್ನಾನ ಮಾಡುತ್ತೀರಾ? ಮಾಡೋದಿಲ್ಲ ಅಂದರೆ ಅದನ್ನು ಸರಿಪಡಿಸಿಕೊಳ್ಳಿ. ನೀವು ಕಾಫಿ ಅಥವಾ ಟೀ ಅರ್ಥಾತ್‌ ಕೆಫೀನ್‌ ಸೇವಿಸೋದು ಹೆಚ್ಚಿದೆಯಾ? ತಕ್ಷ ಣ ಅದನ್ನು ನಿಲ್ಲಿಸಿ.
ಬೆವರುವುದು

ವ್ಯಾಯಾಮ ಮಾಡಿದಾಗ ಬೆವರುವುದು ಸಹಜ. ಒತ್ತಡ ಮತ್ತು ವಾತಾವರಣದಲ್ಲಿ ತುಂಬಾ ಸೆಖೆ ಅಥವಾ ಬಿಸಿಲು ಹೆಚ್ಚಿದ್ದರೆ ಇದು ಉಂಟಾಗಬಹುದು. ಈ ಬೆವರು ಚರ್ಮದ ಮೇಲಿನ ಸತ್ತ ಜೀವಕೋಶಗಳನ್ನು ಸೇರಿಕೊಂಡಾಗ ಅಲ್ಲಿ ಬ್ಯಾಕ್ಟೀರಿಯಾ ಬೆಳೆಯುತ್ತವೆ. ಇವು ವಾಸನೆ ಸೃಷ್ಟಿಸುತ್ತವೆ.

ದುರ್ವಾಸನೆ ನಿವಾರಿಸಲು ಮಾರ್ಗವಿದೆಯಾ? ದೇಹದ ದುರ್ವಾಸನೆಯನ್ನು ದೂರ ಮಾಡಲು ಹಲವಾರು ಮಾರ್ಗಗಳಿವೆ.

- ಪೌಷ್ಟಿಕಾಂಶ ಸರಿಯಾಗಿ ಹೊಂದಿರುವ ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸಿ. ಹಣ್ಣುಗಳು ಮತ್ತು ತರಕಾರಿಗಳು, ಸಾಕಷ್ಟು ಪ್ರೋಟೀನ್‌, ಧಾನ್ಯಗಳು, ವಿಟಮಿನ್‌ ಬಿ ಕಾಂಪ್ಲೆಕ್ಸ್‌ ಸೇವಿಸಿ.

ಬಗಲ ಬ್ಯಾಕ್ಟೀರಿಯಾ ಬಡಿದೋಡಿಸುವ ಅಡುಗೆ ಸೋಡಾ

- ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ತಪ್ಪಿಸಿ. ಏಕೆಂದರೆ ಅವು ದೇಹದ ದುರ್ವಾಸನೆಯನ್ನು ಪ್ರಚೋದಿಸುತ್ತವೆ.

- ಪ್ರತಿದಿನ ಕನಿಷ್ಠ 2-3 ಲೀಟರ್‌ ನೀರು ಕುಡಿಯಿರಿ. ಜ್ಯೂಸ್‌, ಶರಬತ್‌ನಂತಹ ನೀರಿನ ಬೇರೆ ಬೇರೆ ಅವವತಾರಗಳೂ ಓಕೆ.

- ರಾತ್ರಿ ಅಲ್ಯೂಮಿನಿಯಂ ಕ್ಲೋರೈಡ್‌ ಹೊಂದಿರುವ ಯಾವುದಾದರೂ ಕ್ರೀಮ್‌ ದೇಹಕ್ಕೆ ಬಳಸಬಹುದು.

- ಹಗಲು ಸಮಯದಲ್ಲಿ ಆ್ಯಂಟಿ ಫಂಗಲ್‌, ಟಾಲ್ಕಮ್‌ ಪೌಡರ್‌ ಬಳಸಿ.

- ನೀವು ಅತಿಯಾಗಿ ಬೆವರುವವರಾದರೆ ಬೆವರು- ನಿರೋಧಕ ಲೋಷನ್‌ ಬಳಸಿ. ಈ ಲೋಷನ್‌ಗಳು ಅಲ್ಯೂಮಿನಿಯಂ ಕ್ಲೋರೈಡ್‌ ಹೊಂದಿರುತ್ತವೆ. ರಾತ್ರಿ ಕಂಕುಳಡಿ, ಅಂಗೈ ಮತ್ತು ಸಂದುಗಳಲ್ಲಿ  ಬಳಸಬೇಕು.

ಇದು ಹೆಣ್ಣಿನ ಸಮಸ್ಯೆ, ಯೋನಿಗೆ ತಪ್ಪಲಿ ಬೆವರಿನ ಕಾಟ

- ಡಿಯೋಡರೆಂಟ್‌ಗಳನ್ನು ಬಳಸಬಹುದು. ಅವು ದೇಹದ ವಾಸನೆಯನ್ನು ಮರೆಮಾಚಲು ಸಹಾಯ ಮಾಡುತ್ತವೆ.

- ನೀವು ಸಿಕ್ಕಾಪಟ್ಟೆ ಬೆವರುವವರಾದರೆ ದಿನಕ್ಕೆ ಎರಡು ಬಾರಿಯಾದರೂ ಶವರ್‌ ಮಾಡಿ. ಸ್ನಾನದ ಬಳಿಕ ದೇಹದ ಎಲ್ಲಾ ಸಂದುಗಳಿಗೆ ಪೌಡರ್‌ ಬಳಸಿ.

- ಹತ್ತಿಯ ಬಟ್ಟೆಗಳನ್ನು ಧರಿಸಿ. ಇದು ಬೆವರನ್ನು ಹೀರಿಕೊಳ್ಳುತ್ತದೆ. ದೇಹದ ಶಾಖವನ್ನು ಕಡಿಮೆ ಮಾಡುತ್ತವೆ.

- ಕೆಫೀನ್‌ ಸೇವನೆಯನ್ನು ಕಡಿಮೆ ಮಾಡಿ. ಗ್ರೀನ್‌ ಟೀ, ಮೂಲಿಕೆ ಟೀಗಳನ್ನು ಸೇವಿಸಿ.

- ಕೆಲವೊಮ್ಮೆ ನೀವು ಉಪಯೋಗಿಸುವ ಡಿಯೋಡರೆಂಟ್‌ಗಳೇ ನಿಮಗೆ ರಿಯಾಕ್ಷನ್‌ ಉಂಟುಮಾಡಬಹುದು. ಇವುಗಳನ್ನು ಬಳಸುವಾಗ ನಿಮ್ಮ ದೇಹದಲ್ಲಿ ಉಂಟಾಗುವ ಪರಿವರ್ತನೆಯನ್ನು ಗಮನಿಸಿ. ಇತರರಿಗೆ ಅದು ಪ್ಲೆಸೆಂಟ್‌ ಅನಿಸಿದರೆ ಓಕೆ. ಕೆಲವೊಮ್ಮೆ ಇವುಗಳೇ ನಿಮ್ಮ ದೇಹದ ವಾಸನೆಯೊಂದಿಗೆ ಸೇರಿಕೊಂಡು ವಿಚಿತ್ರ ವಾಸನೆ ಸೃಷ್ಟಿಸಬಹುದು. ಅವುಗಳನ್ನು ಅವಾಯ್ಡ್‌ ಮಾಡಿ.

- ರಾತ್ರಿ ಮಲಗುವ ಕನಿಷ್ಠ ಒಂದು ಗಂಟೆ ಮುನ್ನವಾದರೂ ಊಟ ಮಾಡಿ. ನೀವು ಸ್ಥೂಲಕಾಯದವರಾಗಿದ್ದರೆ, ಬೆವರಿದ ಕೂಡಲೇ ಸ್ನಾನ ಮಾಡುವುದು ಒಳ್ಳೆಯದು.

- ನೀವು ಧರಿಸುವ ಬಟ್ಟೆಗಳನ್ನು ಪ್ರತಿದಿನ ಕಳಚಿದ ಕೂಡಲೇ ಒಗೆದು ಒಣಹಾಕಿ. ಒಂದಕ್ಕಿಂತ ಹೆಚ್ಚು ಬಾರಿ ಅವುಗಳನ್ನು ಬಳಸುವ ಸಾಹಸಕ್ಕೆ ಹೋಗಬೇಡಿ.