ದೀಪಾವಳಿ ನಂತರ ನಿಮ್ಮ ದೇಹವನ್ನು ಡಿಟಾಕ್ಸ್ ಮಾಡಿಕೊಳ್ಳುವುದು ಮಸ್ಟ್!
ಹಬ್ಬದ ಸಿಹಿತಿಂಡಿಗಳ ಸೇವನೆ, ಮೂರು ಹೊತ್ತೂ ಭರ್ಜರಿ ತಿಂಡಿ, ಪಟಾಕಿ ಹೊಗೆ ಇತ್ಯಾದಿಗಳಿಂದ ನಿಮ್ಮ ದೇಹ ವಿಷಪೂರಿತವಾಗಿರುತ್ತದೆ. ಇದನ್ನು ಡಿಟಾಕ್ಸ್ ಮಾಡುವುದು ಅಗತ್ಯ.
ದೀಪಾವಳಿ (Diwali) ಅಂದರೆ ಬೆಳಕಿನ ಹಬ್ಬ, ಪಟಾಕಿಗಳ ಹಬ್ಬ, ಸಿಹಿತಿಂಡಿಗಳ ಹಬ್ಬ. ಆಪ್ತರು ನೆಂಟರಿಷ್ಟರು ಬಂದು ಸ್ವೀಟ್ (sweets) ಕೊಟ್ಟಾಗ ಬೇಡ ಎನ್ನಲೂ ಆಗೋಲ್ಲ. ಹೀಗಾಗಿ ತಿಂಡಿಗಳನ್ನು ಸೇವಿಸುತ್ತಾ ಇರುತ್ತೀರಿ. ನಿಮ್ಮ ದೇಹದ ಆಹಾರ ಸೇವನೆಯ ಬಗ್ಗೆ ನಮಗೆ ಹಿಡಿತವೇ ಇರೋಲ್ಲ. ಹೀಗಾಗಿ ನಮ್ಮ ದೇಹದ ಜಠರ, ಕಿಡ್ನಿಗಳು ಇಡೀ ದಿನ ಕೆಲಸ ಮಾಡುತ್ತಲೇ ಇರುತ್ತವೆ. ಹೆಚ್ಚು ಸಕ್ಕರೆಯ ಅಂಶ ದೇಹಕ್ಕೆ ಹೋಗುವಾಗ ಹೆಚ್ಚು ಬಾಯಾರಿಕೆಯಾಗುತ್ತದೆ; ಆದರೆ ಅದಕ್ಕೆ ತಕ್ಕ ನೀರನ್ನು ಸೇವಿಸುವುದಿಲ್ಲ. ಮೂರು ದಿನ ಪೂರ್ತಿ ಪಟಾಕಿ ಸಿಡಿಸುವುದರಿಂದಾಗಿ, ವಾತಾವರಣದಲ್ಲಿ ಹೊಗೆ, ಗಂಧಕ, ರಂಜಕ ಹಬ್ಬಿಕೊಂಡಿರುತ್ತದೆ. ಅದನ್ನು ಸೇವಿಸಿ, ಶುದ್ಧೀಕೃತ ಆಮ್ಲಜನಕವನ್ನು ಹೊರತೆಗೆಯಲು ನಿಮ್ಮ ಶ್ವಾಸಕೋಶ ತುಂಬಾ ಕಠಿಣ ರೀತಿಯಲ್ಲಿ ಕೆಲಸ ಮಾಡಿರುತ್ತದೆ. ಹೀಗಾಗಿ ನಿಮ್ಮ ಜಠರ, ಕರುಳು, ಶ್ವಾಸಕೋಶ ಎಲ್ಲವನ್ನೂ ಹಬ್ಬದ ನಂತರ ಡಿಟಾಕ್ಸ್ ಮಾಡುವುದು- ಅಥವಾ ನಿರ್ವಿಷೀಕರಣ ಮಾಡುವುದು- ಅಗತ್ಯವಾಗಿರುತ್ತದೆ. ಅದು ಹೇಗೆ? ಇಲ್ಲಿ ತಿಳಿಯೋಣ.
ಬಹಳಷ್ಟು ನೀರು ಕುಡಿಯಿರಿ (water)
ತಿಂಡಿಯ ಮೂಲಕ ಹೆಚ್ಚಿಸಿಕೊಂಡ ತೂಕವನ್ನು ಕಳೆದುಕೊಳ್ಳಲು, ಚರ್ಮದ ನಿರ್ಜಲೀಕರಣ ತಡೆಗಟ್ಟುವುದು, ನವ ಯೌವನ ಪಡೆಯುವುದು- ಇತ್ಯಾದಿ ಉದ್ದೇಶಗಳಿಗಾಗಿ ಪ್ರತಿದಿನ ಆರು ಗ್ಲಾಸ್ ನೀರನ್ನು ಕುಡಿಯುವುದು ದಿನವಿಡೀ ತಾಜಾವಾಗಿರಲು ಸಹಾಯ ಮಾಡುತ್ತದೆ.
ಗ್ರೀನ್ ಟೀ ಅಥವಾ ಹರ್ಬಲ್ ಟೀ (Green, herbal tea)
ಈ ವಾರ ನಿಮ್ಮ ಸಾಮಾನ್ಯ ಚಹಾಕ್ಕಿಂತ ನಿಂಬೆ ಚಹಾ, ಜೀರಿಗೆ ನೀರು, ಶುಂಠಿ ಚಹಾ, ದಾಲ್ಚಿನ್ನಿ ಚಹಾ, ಗ್ರೀನ್ ಇತ್ಯಾದಿ ಚಹಾಗಳನ್ನು ಮಾಡಿಕೊಂಡು ಕುಡಿಯುವುದು ನಿರ್ವಿಷೀಕರಣಕ್ಕೆ ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ದೇಹದ ತೂಕವನ್ನು ಕಳೆಯುತ್ತದೆ.
ಯೋಗ (Yoga) ಮತ್ತು ವ್ಯಾಯಾಮಗಳು (excersice)
ನಿರ್ವಿಷೀಕರಣ ಎಂದರೆ ನಿಮ್ಮ ದೇಹಕ್ಕೆ ಉಲ್ಲಾಸಕರ ಆರಂಭವನ್ನು ನೀಡುವುದು. ಆದ್ದರಿಂದ ಯೋಗದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಸಿರಾಟದ ವ್ಯಾಯಾಮ ಮತ್ತು ಐದು ಸೂರ್ಯ ನಮಸ್ಕಾರಗಳನ್ನು ಮಾಡುವುದರಿಂದ ನಿಮ್ಮ ದೇಹವು ಹೊಸ ಪ್ರಾರಂಭದೊಂದಿಗೆ ಸಹಾಯ ಮಾಡುತ್ತದೆ.
ಹೆಚ್ಚು ತರಕಾರಿಗಳು (Vegetables)
ತರಕಾರಿಗಳು ಮತ್ತು ಮತ್ತು ನಾರಿನ ಆಹಾರಗಳ ಸೇವನೆಯನ್ನು ಹೆಚ್ಚಿಸಬೇಕು, ವಿಶೇಷವಾಗಿ ಪಾಲಕ್, ಎಲೆಕೋಸು, ಕೋಸುಗಡ್ಡೆ, ಮೊಗ್ಗುಗಳು ಇತ್ಯಾದಿ. ಸಿಹಿತಿಂಡಿ ಹಾಗೂ ಕರಿದ ತಿಂಡಿಗಳ ಸೇವನೆಯನ್ನು ಇನ್ನು ಕೆಲವು ದಿನ ಬಿಟ್ಟುಬಿಡುವುದು ಒಳ್ಳೆಯದು.
ಹಾರ್ಮೋನ್ ಅಸಮತೋಲನ ಸಮಸ್ಯೆ ತಪ್ಪಿಸಲು ಈ ಆಹಾರ ತ್ಯಜಿಸಿ
ಅಧಿಕ ನಾರಿನಂಶವಿರುವ ಆಹಾರಗಳು (Fibre)
ಬೀನ್ಸ್, ಬೆರ್ರಿ ಹಣ್ಣುಗಳು, ಅವಕಾಡೊ, ಧಾನ್ಯಗಳು, ಒಣ ಹಣ್ಣುಗಳು ಇತ್ಯಾದಿಗಳು ಸಹ ನಿರ್ವಿಷೀಕರಣದಲ್ಲಿ ಸಹಾಯಕವಾಗಿವೆ; ಇದರಿಂದ ಯಕೃತ್ತು ಮತ್ತು ಮೂತ್ರಪಿಂಡಗಳ ಆರೋಗ್ಯವನ್ನು ರಕ್ಷಿಸಬಹುದು.
ಸೂಕ್ತ ಆಹಾರ ಪದ್ಧತಿ (Diet)
ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವ ಮತ್ತು ಮಲಗುವ ಕ್ರಮವನ್ನು ಅನುಸರಿಸಿದರೆ, ಆರೋಗ್ಯವು ಉತ್ತಮ ಸ್ಥಿತಿಯಲ್ಲಿರುತ್ತದೆ. ಮಲಗುವ ನಾಲ್ಕು ಗಂಟೆಗಳ ಮೊದಲು ದಿನದ ಕೊನೆಯ ಊಟವನ್ನು ಮಾಡಿ.
ಸರಿಯಾದ ನಿದ್ದೆ (sleep)
ಒಳ್ಳೆಯ ನಿದ್ದೆಯಿಂದ ಮೆದುಳಿಗೆ ಚೈತನ್ಯ ತುಂಬಿ ಚೈತನ್ಯ ಸಿಗುತ್ತದೆ, ಜೊತೆಗೆ ವಿಷಕಾರಿ ತ್ಯಾಜ್ಯಗಳನ್ನು ಹೊರಹಾಕುತ್ತದೆ. ವಯಸ್ಕರು ಒಟ್ಟು 7ರಿಂದ 8 ಗಂಟೆಗಳ ನಿದ್ದೆ ಮಾಡುವುದು ಮುಖ್ಯ.
Diabetes: ಹಬ್ಬದ ಸೀಸನ್‌ನಲ್ಲಿ ಹುಷಾರಾಗಿರಲು ಇಲ್ಲಿವೆ ಟಿಪ್ಸ್
ಡಿಟಾಕ್ಸ್ ಪಾನೀಯ (detox)
1. ನಿಂಬೆ ಮತ್ತು ಪುದೀನದೊಂದಿಗೆ ತೆಂಗಿನ ನೀರು
ಒಂದು ಒಣ ತೆಂಗಿನಕಾಯಿ ತೆಗೆದುಕೊಂಡು ಅದರ ಒಳತಿರುಳಿನ ಭಾಗವನ್ನು ನುಣ್ಣಗೆ ಕತ್ತರಿಸಿ ತೆಂಗಿನ ನೀರಿಗೆ ಸೇರಿಸಿ. ಪುದೀನ ಎಲೆಗಳು, ನಿಂಬೆ ರಸ ಮತ್ತು ಜೇನುತುಪ್ಪವನ್ನು ಸೇರಿಸಿ. ಇದನ್ನು ಬ್ಲೆಂಡರ್‌ನಲ್ಲಿ ಮಿಶ್ರಣ ಮಾಡಿಕೊಂಡು ಕುಡಿಯಿರಿ.
2. ಕ್ಯಾರೆಟ್ ಮತ್ತು ಬೀಟ್ರೂಟ್ ಪಾನೀಯ
ಕತ್ತರಿಸಿದ ದಾಲ್ಚಿನ್ನಿ ಕಡ್ಡಿ, ಕ್ಯಾರೆಟ್ ಮತ್ತು ಬೀಟ್ರೂಟ್ ಅನ್ನು ಇಟ್ಟುಕೊಂಡು, ಅದಕ್ಕೆ ತುಸು ನೀರು ಸೇರಿಸಿ ಮತ್ತು ಅದಕ್ಕೆ ನಿಂಬೆ ರಸವನ್ನು ಮಿಶ್ರಣ ಮಾಡಿ. ಸಬ್ಬಸಿಗೆ ಚಿಗುರುಗಳನ್ನು ಸೇರಿಸಿ ಮತ್ತು ಬಾಟಲಿಯನ್ನು ಅಲ್ಲಾಡಿಸಿ. ಇದರಿಂದ ಎಲ್ಲಾ ಪದಾರ್ಥಗಳು ಮಿಶ್ರಣವಾಗುತ್ತವೆ. ಒಂದು ಗಂಟೆ ಇದನ್ನು ಹಾಗೇ ಬಿಡಿ. ನಂತರ ನೀರನ್ನು ಸೇವಿಸಿ.
Fitness: 2 ನಿಮಿಷದ ವ್ಯಾಯಾಮ ಮಾಡಿ, ಮೆದುಳು ಕಂಪ್ಯೂಟರ್ ಗಿಂತ ವೇಗವಾಗುತ್ತೆ ನೋಡಿ