MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • Fitness: 2 ನಿಮಿಷದ ವ್ಯಾಯಾಮ ಮಾಡಿ, ಮೆದುಳು ಕಂಪ್ಯೂಟರ್ ಗಿಂತ ವೇಗವಾಗುತ್ತೆ ನೋಡಿ

Fitness: 2 ನಿಮಿಷದ ವ್ಯಾಯಾಮ ಮಾಡಿ, ಮೆದುಳು ಕಂಪ್ಯೂಟರ್ ಗಿಂತ ವೇಗವಾಗುತ್ತೆ ನೋಡಿ

ಮೆದುಳು ಚುರುಕಾಗಲು ಜನ ಏನೇನೋ ಮಾಡುತ್ತಾರೆ. ಆದರೆ ನಿಮಗೆ ಗೊತ್ತಾ? ವ್ಯಾಯಾಮ ಮಾಡೋದರಿಂದ ಬ್ರೈನ್  ಚುರುಕಾಗುತ್ತದೆ (active brain). ಈ ವ್ಯಾಯಾಮವನ್ನು ಕೇವಲ 2 ನಿಮಿಷಗಳ ಕಾಲ ಮಾಡಿ, ಮನಸ್ಸು ಕಂಪ್ಯೂಟರ್ ಗಿಂತ (computer) ವೇಗವಾಗಿರುತ್ತದೆ, ಫಲಿತಾಂಶಗಳನ್ನು ನೋಡಿ ನೀವು ಶಾಕ್ ಆಗುತ್ತೀರಿ!!

2 Min read
Suvarna News | Asianet News
Published : Nov 05 2021, 02:52 PM IST| Updated : Nov 05 2021, 03:31 PM IST
Share this Photo Gallery
  • FB
  • TW
  • Linkdin
  • Whatsapp
18

ದೇಹವನ್ನು ಸಂಪೂರ್ಣವಾಗಿ ಸದೃಢಗೊಳಿಸಲು ದೈಹಿಕ ಜೊತೆಗೆ ಮಾನಸಿಕ ಆರೋಗ್ಯವೂ (mental health) ಬಹಳ ಮುಖ್ಯ. ಏಕೆಂದರೆ, ಯಾವುದೇ ಕೆಲಸವನ್ನು ಮಾಡಲು ದೇಹದಷ್ಟೇ ಮುಖ್ಯ ಮನಸ್ಸು. ಮೆದುಳು ಸ್ನಾಯುಗಳಿಗೆ ಸಂಕೇತಗಳನ್ನು ಕಳುಹಿಸಿದಾಗ ಮಾತ್ರ ಸ್ನಾಯುಗಳು ಕೆಲಸ ಮಾಡುತ್ತದೆ. ಆದರೆ ಒತ್ತಡ ಮತ್ತು ಗಡಿಬಿಡಿಯ ಜೀವನಶೈಲಿ ಮೆದುಳಿನ ಸಾಮರ್ಥ್ಯದಲ್ಲಿ ಇಳಿಕೆಗೆ ಕಾರಣವಾಗುತ್ತದೆ. 

28

ಕಂಪ್ಯೂಟರ್ ಗಿಂತ (computer) ಮೆದುಳನ್ನು ವೇಗವಾಗಿ ಮಾಡಲು ಮಾನಸಿಕ ಆರೋಗ್ಯ ತಜ್ಞರು ಪರಿಣಾಮಕಾರಿ 2 ನಿಮಿಷಗಳ ವ್ಯಾಯಾಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಹೌದು ಈ ಸುಲಭ ಎರಡು ನಿಮಿಷದ ವ್ಯಾಯಾಮವನ್ನು ನೀವು ಯಾವುದೇ ಸ್ಥಳದಲ್ಲಿ ಆರಾಮವಾಗಿ ಮಾಡಬಹುದು. ಇದನ್ನು ಪ್ರತಿದಿನ ಮಾಡಿ ಮೆಮೊರಿ ಪವರ್ ಹೆಚ್ಚಿಸಿ. 

 

38

ಮೆದುಳಿಗೆ ವ್ಯಾಯಾಮ (brain exercise): ಮೆದುಳನ್ನು ತೀಕ್ಷ್ಣಗೊಳಿಸುವ ವ್ಯಾಯಾಮಗಳು
ಚಿಕಿತ್ಸಕ ಮತ್ತು ಸಲಹೆಗಾರ ಸರ್ಲಾ ಟೊಟ್ಲಾ ಸಾಮಾಜಿಕ ಮಾಧ್ಯಮದಲ್ಲಿ ಸುಲಭ ವ್ಯಾಯಾಮವನ್ನು ವರದಿ ಮಾಡಿದ್ದಾರೆ. ಇದು ಮಾಡಲು ಕೇವಲ 2 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಇದು ದಿನವಿಡೀ ಪ್ರಯೋಜನ ನೀಡುತ್ತದೆ.

48

ಮೆದುಳನ್ನು ತೀಕ್ಷ್ಣಗೊಳಿಸಲು ಉಸಿರಾಟದ ವ್ಯಾಯಾಮಗಳು (breathing exercises): ಈ ಉಸಿರಾಟದ ವ್ಯಾಯಾಮವನ್ನು ಮಾಡುವುದರಿಂದ  ಒತ್ತಡ ಕಡಿಮೆಯಾಗುತ್ತದೆ ಮತ್ತು ಗಮನವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಸರ್ಲಾ ಟೋಟ್ಲಾ ವಿವರಿಸಿದರು. ಪರಿಣಾಮವನ್ನು ನೋಡಿ ನೀವು ಶಾಕ್ ಆಗುವಿರಿ ಮತ್ತು ಯಾವುದೇ ಕಾರ್ಯನಿರತ ವೇಳಾಪಟ್ಟಿಯಲ್ಲಿ ಮಾಡಬಹುದು. ಮೆದುಳಿಗೆ ಈ ರೀತಿ ಉಸಿರಾಟದ ವ್ಯಾಯಾಮಗಳನ್ನು ಮಾಡಿ.

58

ಮೊದಲು ಆರಾಮದಾಯಕ ಸ್ಥಾನದಲ್ಲಿ ಕುಳಿತುಕೊಳ್ಳಿ.
ಈಗ  ಭುಜಗಳನ್ನು (shoulder)  ವಿಶ್ರಾಂತಿ ಗೊಳಿಸಿ ಮತ್ತು ನಿಮ್ಮ ಎದೆಯನ್ನು ಮುಂದಕ್ಕೆ ಮುಖ ಮಾಡಿ.
ಈಗ ನಿಧಾನವಾಗಿ  ದೀರ್ಘ ಉಸಿರನ್ನು ತೆಗೆದುಕೊಳ್ಳಿ.
ಪೂರ್ಣ ಉಸಿರನ್ನು ತೆಗೆದುಕೊಂಡ ನಂತರ ಸ್ವಲ್ಪ ಸಮಯದವರೆಗೆ ಉಸಿರನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿ.

68

ನಂತರ ನಿಧಾನವಾಗಿ ಸಂಪೂರ್ಣವಾಗಿ ಉಸಿರನ್ನು ಹೊರಬಿಡಿ. ತಜ್ಞರು ಈ ಉಸಿರಾಟದ (breathing) ವ್ಯಾಯಾಮವನ್ನು ಕೇವಲ 2 ನಿಮಿಷಗಳ ಕಾಲ ಪುನರಾವರ್ತಿಸಲು ಶಿಫಾರಸುತ್ತಾರೆ. ಇದು ಮೆದುಳನ್ನು ಹೆಚ್ಚು ಚುರುಕುಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಮೆದುಳು ಕಂಪ್ಯೂಟರ್ ನಂತೆ ಕೆಲಸ ಮಾಡುತ್ತದೆ. ಈ ವ್ಯಾಯಾಮವನ್ನು ಪ್ರತಿದಿನ ಮಾಡುವುದರಿಂದ ಮೆದುಳು ಚುರುಕಾಗುತ್ತದೆ. 
 

78

ಮೆದುಳು ಚುರುಕಾಗುವುದರ (active brain) ಜೊತೆಗೆ ಆರೋಗ್ಯಕರ ಮನಸ್ಸುಗಳಿಗೆ ಇತರ ಅಗತ್ಯ ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಅವುಗಳನ್ನು ಪಾಲಿಸುವುದು ಉತ್ತಮ ದೇಹ ಮತ್ತು ಉತ್ತಮ ಮನಸಿಗೆ ಸಹಕಾರಿಯಾಗಿದೆ. ಮನಸ್ಸನ್ನು ಆರೋಗ್ಯವಾಗಿಸಲು ಈ ಉಸಿರಾಟದ ವ್ಯಾಯಾಮದ ಜೊತೆಗೆ ಕೆಲವು ಸಲಹೆಗಳನ್ನು ಪ್ರತಿದಿನವೂ ಪಾಲಿಸುವಂತೆ ಎಂದು ತಜ್ಞರು ಹೇಳುತ್ತಾರೆ.  

88

ಮಲ್ಟಿ ಟಾಸ್ಕಿಂಗ್  (multi tasking)ಮಾಡಬೇಡಿ. ಒಂದೇ ಸಮಯದಲ್ಲಿ ಒಂದೇ ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ. ಇದರಿಂದ ಏಕಾಗ್ರತೆ ಹೆಚ್ಚುತ್ತದೆ. ಮರುದಿನದ ಅಗತ್ಯ ಕಾರ್ಯಗಳಿಗಾಗಿ ಹಿಂದಿನ ರಾತ್ರಿ ಪಟ್ಟಿ ಮಾಡಿ. ಇದರಿಂದ ಮುಂದಿನ ದಿನ ಹೆಚ್ಚು ತಲೆ ಕೆಡಿಸಬೇಕಾಗಿರೋದಿಲ್ಲ. 
ಸಾಕಷ್ಟು ನಿದ್ರೆ ಮಾಡಿ ಮತ್ತು ಸಕಾರಾತ್ಮಕವಾಗಿರಿ. ನಿದ್ರೆ ಮಾಡುವುದರಿಂದ ಮನಸ್ಸು ನಿರಾಳವಾಗಿರುತ್ತದೆ. 

About the Author

SN
Suvarna News
ಜೀವನಶೈಲಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved