ನಿತ್ಯ ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡಿದರೆ, ಸೆಕ್ಸ್ ಡ್ರೈವ್ ಮೇಲೆ ಬೀರುತ್ತೆ ಪರಿಣಾಮ
ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುವ ಪುರುಷರೇ ಎಚ್ಚರವಹಿಸಿ. ಯಾಕೆ ಅಂದ್ರೆ ರಾತ್ರಿ ಶಿಫ್ಟ್‌ನಲ್ಲಿ ಕೆಲಸ ಮಾಡುವವರಿಗೆ ಶಿಫ್ಟ್‌ನಲ್ಲಾಗುವ ಬದಲಾವಣೆಯಿಂದ ಹಲವು ಸಮಸ್ಯೆಗಳು ಕಾಡುತ್ತವೆ. ಹೌದು ಇದರಿಂದ ಸೆಕ್ಸ್ ಡ್ರೈವ್ ಮೇಲೆ ಪರಿಣಾಮ ಹಾಗೂ ತಂದೆಯಾಗುವ ಚಾನ್ಸಸ್ ಮೇಲೆ ಅಡ್ಡ ಪರಿಣಾಮ ಉಂಟಾಗುತ್ತದೆ.
ಸರಿಯಾಗಿ ನಿದ್ರೆ ಮಾಡದೆ ಇದ್ದರೆ ಹಲವು ರೋಗಗಳು ಸಾಲು ಸಾಲಾಗಿ ಬಾಧಿಸುತ್ತವೆ. ಅವುಗಳಲ್ಲಿ ಬೊಜ್ಜು ತುಂಬುವುದು, ಹೃದಯ ಸಂಬಂಧಿ ಕಾಯಿಲೆ, ಸ್ಟ್ರೆಸ್ ಮುಖ್ಯವಾದುವು. ಜೊತೆಗೆ ಇನ್‌ಫರ್ಟಿಲಿಟಿ ಕೂಡ ಇದರಿಂದ ಉಂಟಾಗುವ ಕಾಯಿಲೆಗಳಲ್ಲಿ ಒಂದಾಗಿದೆ.
ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಿಗೆ ರಾತ್ರಿಯ ವೇಳೆ ಕನಿಷ್ಟ ಎಂದರೆ 7 - 8 ಗಂಟೆ ನಿದ್ರೆ ಬೇಕೇ ಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಅಸಮರ್ಪಕ ವರ್ಕ್ ಟೈಮಿಂಗ್ಸ್, ಡೆಡ್‌ಲೈನ್ಸ್ ಹಾಗೂ ಇತರೆ ಕಾರಣಗಳಿಂದಾಗಿ ನಿದ್ರೆಯ ಸಮಯ ಕಡಿಮೆಯಾಗುತ್ತಿದೆ. ಇದರ ನೇರ ಪರಿಣಾಮ ಆರೋಗ್ಯದ ಮೇಲೆ ಬೀಳುತ್ತದೆ.
ಇದಲ್ಲದೆ ಸರಿಯಾಗಿ ನಿದ್ರೆ ಮಾಡದೆ ಇರುವ ವ್ಯಕ್ತಿಗಳಲ್ಲಿ ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಸಮಸ್ಯೆಗಳು, ನಿಮಿರುವಿಕೆ ಸಮಸ್ಯೆಗಳು ಕಂಡು ಬರುತ್ತವೆ.ಇದಕ್ಕೆ ಮುಖ್ಯ ಕಾರಣ ಏನೆಂದರೆ ಬದಲಾಗುತ್ತಿರುವ ಶಿಫ್ಟ್. ಇದರಿಂದಾಗಿ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆಯ ಮೇಲೆ ಪರಿಣಾಮ ಬೀರಿದರೆ ಪುರುಷರಲ್ಲಿ ಟೆಸ್ಟೊಸ್ಟೆರೋನ್ ಹಾರ್ಮೋನ್ ಲೆವೆಲ್ ಪ್ರಮಾಣ ಕಡಿಮೆಯಾಗುತ್ತ ಬರುತ್ತದೆ. ಇದನ್ನ ಮೇಲ್ ಹಾರ್ಮೋನ್ ಎಂದು ಕರೆಯುತ್ತಾರೆ. ಇದು ಕಡಿಮೆಯಾದರೆ ಸೆಕ್ಸ್ ಡ್ರೈವ್ ಅಥವಾ ಫರ್ಟಿಲಿಟಿ ಕಡಿಮೆಯಾಗುತ್ತದೆ.
ಟೆಸ್ಟೋಸ್ಟೆರಾನ್ ಹಾರ್ಮೋನ್ ನಾರ್ಮಲ್ ಆಗಿದ್ದರೆ, ಸೆಕ್ಸ್ ಕ್ಷಮತೆಯನ್ನು ಸರಿಯಾಗಿಡುತ್ತದೆ. ಇದು ಕಡಿಮೆಯಾದರೆ ವೀರ್ಯ ಉತ್ಪಾದನೆ ಮಾಡುವಲ್ಲಿ ಸಮಸ್ಯೆಗಳು ಕಾಣಿಸತೊಡಗುತ್ತವೆ. ಇದರಿಂದಾಗಿ ಪುರುಷರು ತಂದೆಯಾಗುವಲ್ಲಿ ವಿಫಲರಾಗುತ್ತಾರೆ.
ಅತಿಯಾದ ಅಥವಾ ಕಡಿಮೆ ನಿದ್ದೆ ದೇಹದ ಸರ್ಕಾಡಿಯನ್ ಲಯದ ಮೇಲೆ ಪರಿಣಾಮ ಬೀರಬಹುದು. ಸಿರ್ಕಾಡಿಯನ್ ಲಯವು ನಿದ್ರೆಯ ಹಾರ್ಮೋನು ಮೆಲಟೋನಿನ್ ಮತ್ತು ಕಾರ್ಟಿಸಾಲ್‌ನ ಉತ್ಪಾದನೆಯನ್ನು ನಿಯಂತ್ರಿಸುತ್ತದೆ, ಇದು ಒತ್ತಡದ ಹಾರ್ಮೋನು ಆಗಿದೆ. ಶಿಫ್ಟ್ ಕೆಲಸ ಮಾಡುವ ಪುರುಷರು ತಮ್ಮ ಸರ್ಕೇಡಿಯನ್ ಲಯವನ್ನು ನಿರಂತರವಾಗಿ ಬದಲಾಯಿಸುತ್ತಾರೆ, ಇದರಿಂದ ಹಾರ್ಮೋನ್ ಅಸಮತೋಲನ ಉಂಟಾಗುತ್ತದೆ.
ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುವವರಿಗಾಗಿ ಕೆಲವೊಂದು ಟಿಪ್ಸ್‌ಗಳು ಇಲ್ಲಿವೆ...
ನಿರಂತರವಾಗಿ ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುವುದನ್ನು ಅವೈಯ್ಡ್ ಮಾಡಿ. ಜೊತೆಗೆ ಪದೆ ಪದೇ ಶಿಫ್ಟ್ ಬದಲಾಯಿಸುವುದನ್ನು ಕಡಿಮೆ ಮಾಡಿ.
ರಾತ್ರಿ ಕೆಲಸ ಮಾಡುವ ಸಮಯದಲ್ಲಿ ಎಲ್ಲಾ ಲೈಟ್‌ಗಳು ಆನ್ ಆಗಿರಲಿ. ಇದರಿಂದ ನೀವು ಅಲರ್ಟ್ ಆಗಿರಲು ಸಹಾಯವಾಗುತ್ತದೆ. ಇಲ್ಲವಾದರೆ ನಿಮ್ಮ ನಿದ್ರೆ ಅರ್ಧವಾಗಿರುತ್ತದೆ.
ಶಿಫ್ಟ್ ಮುಗಿಸಿ ಮನೆಗೆ ಹೋಗುವ ಸಮಯದಲ್ಲಿ ಲೈಟ್ ಆಫ್ ಆಗಿರುವಂತೆ ನೋಡಿಕೊಳ್ಳಿ. ಇದರಿಂದ ಮನೆಗೆ ಹೋಗಿ ದಿಂಬಿನ ಮೇಲೆ ತಲೆ ಇಟ್ಟ ಕೂಡಲೆ ನಿದ್ರೆ ಬರುತ್ತದೆ.
ನಿದ್ರೆ ಮಾಡುವ ಸಮಯದಲ್ಲಿ ಮನೆಯವರಿಂದ ಯಾವುದೇ ಕಾಲ್ ಬಾರದಂತೆ ಹಾಗೂ ಯಾವ ನೆಂಟರಿಷ್ಟರೂ ಮನೆಗೆ ಬರದಂತೆ ನೋಡಿಕೊಳ್ಳಿ.
ರೂಮ್‌ನ ಕಿಟಕಿಗಳಿಗೆ ದಪ್ಪವಾದ ಕರ್ಟನ್ ಹಾಕಿ. ಇಲ್ಲವಾದರೆ ಬ್ಲೈಂಡ್ ಫೋಲ್ಡ್ ಹಾಕಿ ನಿದ್ರೆ ಮಾಡಿ. ಇದರಿಂದ ಸೂರ್ಯನ ಕಿರಣಗಳು ರೂಮ್ ಒಳಗೆ ಬಂದು ನಿದ್ರೆ ಹಾಳಾಗೋದನ್ನು ತಡೆಯಬಹುದು.
ಮನೆಗೆ ಹೋದ ಮೇಲೆ ಕೆಫೆನ್ ಹೆಚ್ಚು ಇರುವ ಆಹಾರ ಪದಾರ್ಥವನ್ನು ಸೇವನೆ ಮಾಡುವುದನ್ನು ಅವೈಯ್ಡ್ ಮಾಡಿ. ಇದರಿಂದ ನಿದ್ರೆಗೆ ತೊಂದರೆ ಉಂಟಾಗಬಹುದು.