ಪುಟ್ಟ ಮಕ್ಕಳ ಆರೋಗ್ಯಕ್ಕೆ ಎಷ್ಟು ಗಂಟೆ ನಿದ್ದೆಯ ಅಗತ್ಯವಿದೆ ?

ಪುಟ್ಟ ಮಕ್ಕಳ ಆರೋಗ್ಯ (Health) ಯಾವಾಗಲೂ ಸೂಕ್ಷ್ಯವಾಗಿರುತ್ತದೆ. ಹೀಗಾಗಿ ಯಾವಾಗಲೂ ಮಕ್ಕಳ (Children) ಚಟುವಟಿಕೆ, ಆಹಾರ, ನಿದ್ದೆಯ ಮೇಲೆ ಹೆಚ್ಚು ಗಮನಹರಿಸಬೇಕು. ಹಾಗಿದ್ದರೆ ಮಕ್ಕಳ ಉತ್ತಮ ಆರೋಗ್ಯಕ್ಕೆ ಎಷ್ಟು ಗಂಟೆ ನಿದ್ದೆ (Sleep)ಯ ಅಗತ್ಯವಿದೆ ತಿಳಿದುಕೊಳ್ಳೋಣ.

How Many Hours Of Sleep Needed For The Health Of Children Vin

ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರಿಗೆ ವಯಸ್ಸಿಗೆ ತಕ್ಕಂತೆ ಗುಣಮಟ್ಟದ ನಿದ್ದೆ (Sleep)ಯಾಗುವುದು ಮುಖ್ಯವಾಗಿದೆ. ಇಲ್ಲವಾದಲ್ಲಿ ಇದು ಒಟ್ಟಾರೆ ಆರೋಗ್ಯ (Health)ದ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ. ಅದರಲ್ಲೂ ಮಕ್ಕಳ ಆರೋಗ್ಯಕ್ಕೆ ಎಷ್ಟು ಗಂಟೆಯ ನಿದ್ದೆಯ ಅಗತ್ಯವಿದೆ. ಸರಿಯಾಗಿ ನಿದ್ದೆ ಮಾಡದಿದ್ದರೆ ಏನೆಲ್ಲಾ ತೊಂದರೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಮಗುವಿನ ಒಟ್ಟಾರೆ ಬೆಳವಣಿಗೆ ಮತ್ತು ಮಾನಸಿಕ (Mental) ಯೋಗಕ್ಷೇಮದ ಮೇಲೆ ನಿದ್ರೆ ಪರಿಣಾಮ ಬೀರುತ್ತದೆ. ಶಿಶುಗಳಿಗೆ ದಿನಕ್ಕೆ 12ರಿಂದ 18 ಗಂಟೆಗಳ ನಿದ್ದೆಯನ್ನು ಶಿಫಾರಸು ಮಾಡಲಾಗುತ್ತದೆ

ನವಜಾತ ಶಿಶುವಿನಿಂದ ಬಾಲ್ಯಕ್ಕೆ ಮತ್ತು ನಂತರ ಪ್ರೌಢಾವಸ್ಥೆಗೆ ಪರಿವರ್ತನೆಯು ಮೆದುಳಿನ ಬೆಳವಣಿಗೆಗೆ ಪ್ರಮುಖ ಅವಧಿಯಾಗಿದೆ ಎಂದು ಬೆಳವಣಿಗೆಯ ಮತ್ತು ನಡವಳಿಕೆಯ ಶಿಶುವೈದ್ಯ ಮತ್ತು ಕಂಟಿನ್ಯುವಾ ಕಿಡ್ಸ್‌ನ ನಿರ್ದೇಶಕ ಮತ್ತು ಸಹ-ಸಂಸ್ಥಾಪಕ ಡಾ.ಹಿಮಾನಿ ನರುಲಾ ಹೇಳುತ್ತಾರೆ. ಈ ಬೆಳವಣಿಗೆಯ ವರ್ಷಗಳಲ್ಲಿ ನಿದ್ರೆಯು ಮೆದುಳಿನ ಪ್ರಾಥಮಿಕ ಚಟುವಟಿಕೆಗಳಲ್ಲಿ ಒಂದಾಗಿದೆ, ಇದು ಅವರ ಆಲೋಚನೆ, ತಾರ್ಕಿಕತೆ, ಸಮಸ್ಯೆ ಪರಿಹರಿಸುವ ಸಾಮರ್ಥ್ಯಗಳು, ಮಾನಸಿಕ ಬೆಳವಣಿಗೆ ಮತ್ತು ಭಾವನಾತ್ಮಕ ನಿಯಂತ್ರಣಕ್ಕೆ ಮಹತ್ವದ್ದಾಗಿದೆ.

Baby Food: ಆರೋಗ್ಯಕರ ಆಹಾರ ಮನೆಯಲ್ಲೇ ತಯಾರಿಸ್ಬೋದು

ನಿದ್ರೆ ಎಂದರೇನು?
ಡಾ.ಹಿಮಾನಿ ನರುಲಾ ಪ್ರಕಾರ, ನಿದ್ದೆಯೆಂಬುದು, 'ಕಡಿಮೆ ದೈಹಿಕ ಚಟುವಟಿಕೆಯೊಂದಿಗೆ ಮತ್ತು ಬಾಹ್ಯ ಪರಿಸರದೊಂದಿಗೆ ಕಡಿಮೆ ಸಂವಹನ ಹೊಂದಿರುವ ಒಂದು ಸ್ಥಿತಿಯಾಗಿದೆ.  ಇದು ಮೂರು ಕ್ರಿಯಾತ್ಮಕ ಸ್ಥಿತಿಗಳನ್ನು ಹೊಂದಿದೆ ಎಂದು ಅವರು ವಿವರಿಸುತ್ತಾರೆ. ಕ್ಷಿಪ್ರ ಕಣ್ಣಿನ ಚಲನೆ ನಿದ್ರೆ (NREM), ಕ್ಷಿಪ್ರ ಕಣ್ಣಿನ ಚಲನೆಯ ನಿದ್ರೆ (REM) ಮತ್ತು ಎಚ್ಚರವಾಗಿರುವುದು. ಈ ಮೂರೂ ಸ್ಥಿತಿಯಲ್ಲಿ ಪ್ರತಿಯೊಂದು ಮಾದರಿಯು ನಿರ್ದಿಷ್ಟ ಮೆದುಳಿನ ವಿದ್ಯುತ್ ಚಟುವಟಿಕೆಯನ್ನು ಹೊಂದಿರುತ್ತದೆ

ನಿದ್ರೆಯ ಅವಧಿ
ಶಿಶುಗಳಿಗೆ ದಿನಕ್ಕೆ ಸರಿಸುಮಾರು 12ರಿಂದ 18 ಗಂಟೆಗಳ ನಿದ್ರೆಯನ್ನು ಡಾ.ಹಿಮಾನಿ ನರುಲಾ ಶಿಫಾರಸು ಮಾಡುತ್ತಾರೆ. ಅಂಬೆಗಾಲಿಡುವ ವರ್ಷದ ಮಕ್ಕಳಿಗೆ ದಿನಕ್ಕೆ ಸುಮಾರು 9ರಿಂದ 16 ಗಂಟೆಗಳ ವರೆಗೆ ಕಡಿಮೆಯಾಗುತ್ತದೆ ಮತ್ತು ಪ್ರಿಸ್ಕೂಲ್ ವರ್ಷಗಳಲ್ಲಿ ಮಗುವಿಗೆ ದಿನಕ್ಕೆ ಕನಿಷ್ಠ 8ರಿಂದ 14 ಗಂಟೆಗಳ ಕಾಲ ಮಲಗಲು ಶಿಫಾರಸು ಮಾಡಲಾಗುತ್ತದೆ.

ಮಕ್ಕಳಿಗೆ ಸಕಾರಾತ್ಮಕ ನಿದ್ರೆಯ ಅಭ್ಯಾಸಗಳು

1. ನಿಯಮಿತ ಮತ್ತು ಸ್ಥಿರವಾದ ಬೆಡ್‌ಟೈಮ್ ದಿನಚರಿ: ಪ್ರತಿ ರಾತ್ರಿ ಮಕ್ಕಳಿಗೆ ಬೆಚ್ಚಗಿನ ನೀರಿನಲ್ಲಿ ಸ್ನಾನ (Bath) ಮಾಡಿಸುವುದು, ಕಥೆಗಳನ್ನು ಓದುವುದು, ಲಾಲಿಗಳನ್ನು ಹಾಡುವುದು ಅಥವಾ ಮೃದುವಾದ ಸಂಗೀತವನ್ನು ಆಲಿಸುವುದು ಮುಂತಾದವು ಸಕಾರಾತ್ಮಕ ನಿದ್ರೆಯ ಅಭ್ಯಾಸಗಳಿವೆ. ವಿಶ್ರಾಂತಿ ಚಟುವಟಿಕೆಗಳು ಉತ್ತಮ ನಿದ್ದೆಯನ್ನು ಪಡೆಯಲು ಸಹಾಯ ಮಾಡುತ್ತದೆ.

Kids Food: ಮಕ್ಕಳಿಗೆ ಪ್ರೋಟೀನ್ ಪೌಡರ್ ಕೊಡೋದು ಒಳ್ಳೇದಾ ?

2. ಸುರಕ್ಷಿತ ಮತ್ತು ಆರಾಮದಾಯಕ ನಿದ್ರೆಯ ವಾತಾವರಣ: ಸದ್ದುಗದ್ದಲವಿಲ್ಲದೆ ವಾತಾವರಣ ಉತ್ತಮವಾಗಿರುವುದರಿಂದ ಉತ್ತಮ ಪ್ರಮಾಣದ ನಿದ್ದೆಯಾಗುತ್ತದೆ. ಇದು ನಿದ್ರೆಯ ಗುಣಮಟ್ಟವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

3. ಸ್ಲೀಪ್ ಆನ್‌ಸೆಟ್: ಪುಟ್ಟ ಮಕ್ಕಳು ಲಾಲಿ ಹಾಡುವುದರಿಂದ ಅಥವಾ ತೂಗುವುದರಿಂದ ತಕ್ಷಣ ಮಲಗುತ್ತಾರೆ. ಆದರೆ ದೊಡ್ಡ ಮಕ್ಕಳಿಗೆ ಸ್ವತಂತ್ರವಾಗಿ ನಿದ್ರಿಸಲು  ಶಿಫಾರಸು ಮಾಡಲಾಗುತ್ತದೆ.

4. ಟಿವಿ, ಮೊಬೈಲ್‌ಗಳ ಬಳಕೆ: ಚಿಕ್ಕ ಮಕ್ಕಳು ಅತಿಯಾಗಿ ಟಿವಿ ನೋಡುವುದು, ಮೊಬೈಲ್‌ (Mobile) ನೋಡುವುದು ಇತ್ತೀಚಿಗೆ ಹೆಚ್ಚಾಗಿದೆ. ಇದು ಅವರ ನಿದ್ರೆಯ ಅವಧಿ ಮತ್ತು ಗುಣಮಟ್ಟದ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. ಸ್ಮಾರ್ಟ್‌ಫೋನ್‌ಗಳು, ಐಪ್ಯಾಡ್‌ಗಳು, ಡೆಸ್ಕ್‌ಟಾಪ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟೆಲಿವಿಷನ್‌ಗಳಂತಹ ಎಲ್ಲಾ ಪರದೆಯ ಸಾಧನಗಳು ನಿದ್ರೆಯ ಪ್ರಾರಂಭಕ್ಕಾಗಿ ಶಾಂತ ಸ್ಥಿತಿಯಲ್ಲಿ ಹಸ್ತಕ್ಷೇಪ ಮಾಡುತ್ತದೆ ಮತ್ತು ಮೆಲಟೋನಿನ್ ಉಲ್ಬಣವನ್ನು ನಿಗ್ರಹಿಸುತ್ತದೆ.

ಒಳ್ಳೆಯ ರಾತ್ರಿಯ ನಿದ್ರೆ ಮತ್ತು ಕೆಲವು ಹಗಲಿನ ನಿದ್ರೆಗಳು ನೇರವಾಗಿ ಮೆಮೊರಿ ಕಾರ್ಯಕ್ಷಮತೆಗೆ ಸಂಬಂಧಿಸಿವೆ. ಅಸಮರ್ಪಕ ನಿದ್ರೆ ಹೆಚ್ಚು ನಕಾರಾತ್ಮಕ ಭಾವನೆಗಳಿಗೆ ಕಾರಣವಾಗುತ್ತದೆ ಎಂದು ಸಂಶೋಧನೆ ಸಾಬೀತುಪಡಿಸಿದೆ. ರಾತ್ರಿ ಕಡಿಮೆ ನಿದ್ದೆ ಮಾಡುವುದು ಮರುದಿನದ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಭಾವನಾತ್ಮಕ ವಿಷಯಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಶಿಶುಗಳು ಮತ್ತು ಅಂಬೆಗಾಲಿಡುವವರಲ್ಲಿ ಸಾಮಾನ್ಯ ಅರಿವಿನ ಮತ್ತು ಭಾಷಾ ಬೆಳವಣಿಗೆಗೆ ನಿದ್ರೆ ಮುಖ್ಯವಾಗಿದೆ. 

Latest Videos
Follow Us:
Download App:
  • android
  • ios