Asianet Suvarna News Asianet Suvarna News

ತೂಕ ಹೆಚ್ಚಳ ಆರೋಗ್ಯಕ್ಕೆ ಅಪಾಯಕಾರಿ: ಗಂಭೀರ ರೋಗಗಳು ಅಟ್ಯಾಕ್ ಆಗುತ್ತೆ ಎಚ್ಚರ

ತೂಕ ಹೆಚ್ಚಳವು ವ್ಯಕ್ತಿಯ  ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ. ಹೃದ್ರೋಗ, ಪಾರ್ಶ್ವವಾಯು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಎದುರಾಗುತ್ತವೆ. ಇಲ್ಲಿದೆ ಡಿಟೇಲ್ಸ್

How dangerous is being overweight
Author
First Published Sep 29, 2022, 5:48 PM IST

ಅತಿಯಾದ ತೂಕವು ಆರೋಗ್ಯಕ್ಕೆ ಒಳ್ಲೆಯದಲ್ಲ. ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ತೂಕ ಹೆಚ್ಚಾಗುತ್ತಿದೆ. ದೇಹದ ತೂಕದ ಹೆಚ್ಚಳವು ಆನುವಂಶಿಕ, ಚಯಾಪಚಯ ಮತ್ತು ಹಾರ್ಮೋನುಗಳ ಪ್ರಭಾವಗಳಿಗೆ ಸಂಬಂಧಿಸಿದೆ. ಅಗತ್ಯಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ಸೇವಿಸುವುದು ಮತ್ತು ಸಾಮಾನ್ಯ ದೈನಂದಿನ ಚಟುವಟಿಕೆಗಳು ಮತ್ತು ವ್ಯಾಯಾಮದ ಮೂಲಕ ಕ್ಯಾಲೊರಿಗಳನ್ನು ಸುಡದಿರುವುದು ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ. ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದ ಸಹ ತೂಕ ಹೆಚ್ಚಲು ಕಾರಣ. ನಾವು ಸೇವಿಸುವ ಆಹಾರದ ಕ್ಯಾಲೋರಿಯ ಬಗ್ಗೆಯು ಗಮನವಹಿಸಬೇಕಾಗುತ್ತದೆ. ಬೊಜ್ಜು ದೇಹವಿದ್ದರೆ ಆಗ ಖಂಡಿತವಾಗಿಯೂ ಅನಾರೋಗ್ಯ ಹಾಗೂ ಅಡ್ಡಪರಿಣಾಮಗಳು ಕಟ್ಟಿಟ್ಟ ಬುತ್ತಿ. ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಅವುಗಳ ಮಾಹಿತಿ ಇಲ್ಲಿದೆ.

ಪಾರ್ಶ್ವವಾಯು ಉಂಟಾಗುವ ಸಾಧ್ಯತೆ:

ಅಧಿಕ ತೂಕವು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಇದರಿಂದ ಪಾರ್ಶ್ವವಾಯು (strock) ಉಂಟಾಗುತ್ತದೆ. ಇನ್ನು ಅಧಿಕ ತೂಕವು ಮೆಟಬಾಲಿಕ್ ಸಿಂಡ್ರೋಮ್’ಗೆ ಕಾರಣವಾಗಿದ್ದು, ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದ ಸಕ್ಕರೆ (Sugar) ಮಟ್ಟವನ್ನು ಹೊಂದಿರುವ ಅಂಶಗಳನ್ನು ಹೊಂದಿದೆ. ಕಾಲಾನಂತರದಲ್ಲಿ ಈ ಮೆಟಬಾಲಿಕ್, ಮೆದುಳು ಮತ್ತು ಹೃದಯದ ರಕ್ತನಾಳಗಳಿಗೆ ಹಾನಿ ಮಾಡುತ್ತದೆ. ಹಾಗೆ ರಕ್ತ ಹೆಪ್ಪುಗಟ್ಟಿ ಮೆದುಳಿಗೆ ಸಂಬಂಧಿಸಿದ ಸಮಸ್ಯೆಯ ಅಪಾಯವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಪಾರ್ಶ್ವವಾಯು ಉಂಟಾಗುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಮೆಟಾಬಾಲಿಕ್ ಸಿಂಡ್ರೋಮ್ ಹೊಂದಿರುವ ವ್ಯಕ್ತಿಗೆ ಹೋಲಿಸಿದಾಗ, ಮೆಟಾಬಾಲಿಕ್ ಸಿಂಡ್ರೋಮ್ ಹೊಂದಿರುವ ವ್ಯಕ್ತಿ ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಮೂರು ಪಟ್ಟು ಹೆಚ್ಚು. ಇನ್ನು ಆರೋಗ್ಯದಿಂದ ಕೂಡಿರುವ ಪುರುಷರಿಗಿಂತ ಬೊಜ್ಜು ಹೊಂದಿರುವ ಯುವ ವಯಸ್ಕ ಪುರುಷರು ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಶೇ.73, ಹಾಗೇ ಆರೋಗ್ಯಕರ ಮಹಿಳೆಗಿಂತ ಬೊಜ್ಜು ಹೊಂದಿರುವ ಯುವ ವಯಸ್ಕ ಮಹಿಳೆಯರು ಶೇ. 46ಕ್ಕಿಂತ ಹೆಚ್ಚು ಪಾರ್ಶ್ವವಾಯುವಿಗೆ ತುತ್ತಾಗುತ್ತಾರೆ.

ಹೃದಯ ರೋಗ ಬರುವ ಸಾಧ್ಯತೆ ಹೆಚ್ಚು:

ಹೆಚ್ಚು ಬೊಜ್ಜನ್ನು ಹೊಂದಿರುವುದು ಹೃದ್ರೋಗದ ಅಪಾಯವನ್ನು ಮತ್ತು ಅದರ ಅಪಾಯಕಾರಿ ಅಂಶಗಳಾದ ಅಧಿಕ ಕೊಲೆಸ್ಟ್ರಾಲ್’ನ್ನು ಹೆಚ್ಚಿಸುತ್ತದೆ. ಹಾಗೆ  ಹೆಚ್ಚು ಬೊಜ್ಜನಿಂದ ಹೃದಯ (heart) ಸಂಬಂಧಿ ಸಮಸ್ಯೆಗಳು, ಹೃದಯಾಘಾತ, ಹೃದಯ ವೈಫಲ್ಯ  ಅಥವಾ ಅಸಹಜ ಹೃದಯ ಬಡಿತದಂತ ಹೃದಯ ರೋಗವನ್ನು ಎದುರಿಸಬೇಕಾಗುತ್ತದೆ. ಹಾಗೇ ಹೆಚ್ಚಿನ ಬೊಜ್ಜಿನಿಂದ ಅಧಿಕ ರಕ್ತದೊತ್ತಡ, ರಕ್ತದಲ್ಲಿ ಗ್ಲೂಕೋಸ್ (Glucose) ಮಟ್ಟದಲ್ಲಿನ ಹೆಚ್ಚಳವು ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಇನ್ನು ಹೊಂದಿರುವ ತೂಕದ ಶೇ. 5 ರಿಂದ 10 ಪ್ರತಿಶತದಷ್ಟು ತೂಕವನ್ನು ಕಡಿಮೆ ಮಾಡಿಕೊಂಡರೆ  ಹೃದ್ರೋಗವನ್ನು ಅಭಿವೃದ್ಧಿಪಡಿಸುವ  ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡಬಹುದು. ತೂಕ ನಷ್ಟದಿಂದ ಮಾತ್ರ ರಕ್ತದೊತ್ತಡ, ಕೊಲೆಸ್ಟ್ರಾಲ್ ಮಟ್ಟಗಳು ಮತ್ತು ರಕ್ತದ ಹರಿವನ್ನು ಸುಧಾರಿಸಬಹುದು.

ಇದನ್ನೂ ಓದಿ: Weight Loss Tips: ಫಿಗರ್ ಚಿಂತೆ ಇರೋ ಹುಡುಗಿರು ರಾತ್ರಿ 8 ಗಂಟೆ ನಂತ್ರ ಇದನ್ನ ತಿನ್ನಿ

ರಕ್ತದೊತ್ತಡಕ್ಕೆ ಕಾರಣವಾಗುತ್ತದೆ:

ನಿಮ್ಮ ದೇಹದ ತೂಕ ಹೆಚ್ಚಾದಂತೆ, ನಿಮ್ಮ ರಕ್ತದೊತ್ತಡ (blood pressure) ಹೆಚ್ಚಾಗಬಹುದು. ಬೊಜ್ಜು ಅಧಿಕ ರಕ್ತದೊತ್ತಡಕ್ಕೆ  ಅಪಾಯಕಾರಿ ಅಂಶವಾಗಿದ್ದು, ಅಧಿಕ ತೂಕ ಹೊಂದಿರುವಾಗ ದೇಹದಲ್ಲಿ ರಕ್ತವನ್ನು ಪಂಪ್ ಮಾಡಲು ನಮ್ಮ ಹೃದಯವು ಹೆಚ್ಚು ಶ್ರಮಿಸಬೇಕಾಗುತ್ತದೆ. ಆಗ ಅಪಧಮನಿಗಳ ಮೇಲೆ ಒತ್ತಡವನ್ನು ಉಂಟಾಗಿ ರಕ್ತದೊತ್ತಡ ಹೆಚ್ಚಾಗುತ್ತದೆ. ಇನ್ನು ತೂಕವನ್ನು ಕಳೆದುಕೊಳ್ಳುವ ಮೂಲಕ ನಾವು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡಬಹುದಾಗಿದ್ದು, ಸುಮಾರು ಶೇ. 70ರಷ್ಟು ವಯಸ್ಕರು ಅಧಿಕ ತೂಕ ಹೊಂದಿದ್ದಾರೆ.

ಕೃತ್ ಮೇಲೆ ಪರಿಣಾಮ ಬೀರುತ್ತದೆ:

ಯಕೃತ್ (Liver) ನಮ್ಮ ದೇಹದಲ್ಲಿನ ಎರಡನೇ ಅತಿದೊಡ್ಡ ಅಂಗವಾಗಿದೆ. ಹೆಚ್ಚು ತೂಕವನ್ನು ಹೊಂದುವುದರಿಂದ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಯಕೃತ್ತಿನಲ್ಲಿನ ಹೆಚ್ಚಿನ ಕೊಬ್ಬು (fat) ಯಕೃತ್ತಿನ ಉರಿಯೂತವನ್ನು ಉಂಟಾಗಿ ಗಾಯಗಳು ಕಾಣಿಸಿಕೊಳ್ಳುತ್ತದೆ. ಇದರಿಂದ ಯಕೃತ್ ಹಾನಿಗೊಳಗಾಗುತ್ತದೆ. ಇನ್ನು ಯಕೃತ್ ನಮ್ಮ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು, ಶಕ್ತಿಯನ್ನು ಸಂಗ್ರಹಿಸಲು ಮತ್ತು ವಿಷಕಾರಿ ಅಂಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆದರೆ ಅಧಿಕ ಬೊಜ್ಜಿನಿಂದ ಅದರ ಚಟುವಟಿಕೆ ವೈಫಲ್ಯಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: Weight Loss Tips: ಎಷ್ಟೇ ಡಯಟ್ ಮಾಡಿದ್ರೂ ಸಣ್ಣ ಆಗ್ತಿಲ್ವಾ ? ಈ ತಪ್ಪು ಮಾಡಬೇಡಿ

ಸಂಧಿವಾತ ಸಮಸ್ಯೆ ಹೆಚ್ಚಳ:

ಅತಿಯಾದ ಬೊಜ್ಜಿನಿಂದ ಸಂಧಿವಾತದ (Arthritis) ಸಮಸ್ಯೆ ಹೆಚ್ಚಿಸುತ್ತದೆ. ಸಂಧಿವಾತವು ಒಂದು ಅಥವಾ ಹೆಚ್ಚಿನ ಕೀಲುಗಳ (joints) ಮೇಲೆ ಪರಿಣಾಮ ಬೀರುವ ನೋವಿನ ಕ್ಷೀಣಗೊಳ್ಳುವ ಸ್ಥಿತಿಯಾಗಿದೆ. ಇನ್ನು ಬೆನ್ನುಮೂಳೆ, ಸೊಂಟ, ಮೊಣಕಾಲು ಮತ್ತು ಪಾದ ಸೇರಿದಂತೆ ಹೆಚ್ಚು ತೂಕವನ್ನು ಹೊಂದಿರುವ ಕೀಲುಗಳಲ್ಲಿ ಸಂಧಿವಾತ ಕಂಡುಬರುತ್ತದೆ. ಬೊಜ್ಜು ಮುಖ್ಯವಾಗಿ ಮೊಣಕಾಲುಗಳ ಮೇಲೆ ಪರಿಣಾಮ ಬೀರುತ್ತದೆ. ನಡೆಯುವಾಗ ಪ್ರತಿ ಹೆಜ್ಜೆಯೊಂದಿಗೆ, ಒಂದೇ ಕಾಲಿನ ಮೇಲೆ ಭಾರವನ್ನು ಹೊತ್ತುಕೊಳ್ಳುವಾಗ, ದೇಹದ ತೂಕಕ್ಕಿಂತ 3 ರಿಂದ 6 ಪಟ್ಟು ಬಲವು ಮೊಣಕಾಲಿನ ಮೇಲೆ ಬೀಳುತ್ತದೆ. ಆದ್ದರಿಂದ ಬೊಜ್ಜಿನ ಹೆಚ್ಚು ಪರಿಣಾಮ ಮೊಣಕಾಲಿನ ಮೇಲೆ ಗೋಚರವಾಗುತ್ತದೆ.

Follow Us:
Download App:
  • android
  • ios