Asianet Suvarna News Asianet Suvarna News

ಕತ್ತಲಲ್ಲಿ ಟಿವಿ ನೋಡೋ ಅಭ್ಯಾಸವಿದ್ಯಾ ? ಆರೋಗ್ಯಕ್ಕೆಷ್ಟು ಅಪಾಯವಿದೆ ತಿಳ್ಕೊಳ್ಳಿ

ಹೊತ್ತಿಗೆ ಸರಿಯಾಗಿ ಮಲಗದೆ ರಾತ್ರಿ (Night) ಪೂರ್ತಿ ಎಚ್ಚರವಿದ್ದು ಕತ್ತಲಲ್ಲೇ ಟಿವಿ (Televison) ನೋಡೋದು, ಮೊಬೈಲ್ (Mobile) ಸ್ಕ್ರಾಲ್ ಮಾಡೋದು ಇವತ್ತಿನ ಜನರೇಷನ್‌ನ ಕೆಟ್ಟ ಅಭ್ಯಾಸ. ನೀವು ಕೂಡಾ ಹೀಗೆ ಮಾಡ್ತಿದ್ದೀರಾ ? ಹಾಗಿದ್ರೆ ಇದ್ರಿಂದ ಆರೋಗ್ಯ (Health)ಕ್ಕೆಷ್ಟು ಅಪಾಯವಿದೆ ಮೊದ್ಲು ತಿಳ್ಕೊಳ್ಳಿ. 

How Bad Is It For Your Eyes To Watch Television In The Dark Vin
Author
Bengaluru, First Published Jun 8, 2022, 4:26 PM IST

ಸಮಯ ಕಳೆಯೋಕೆ ಟಿವಿ (Televison) ನೋಡೋದು ಹಲವರ ಫೇವರಿಟ್ ಅಭ್ಯಾಸ. ಇತ್ತೀಚಿನ ಜನರೇಷನ್‌ನ ಹೆಚ್ಚಿನವರು ಮೊಬೈಲ್ ಸ್ಕ್ರಾಲ್ ಮಾಡುತ್ತಾ ಕುಳಿತುಬಿಡುತ್ತಾರೆ. ಇದು ಹಗಲಾದರೆ ಸರಿ, ರಾತ್ರಿಯಾದರೆ (Dark) ಇದ್ರಿಂದ ಕಣ್ಣಿಗೆ ಹಾನಿಯಾಗೋದೆ ಹೆಚ್ಚು. ಟಿವಿಯನ್ನು ನಿಯಮಿತ ದೂರದಿಂದ ನೋಡದೆ ಹೋದರೆ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುಂತೆ ಅಂತ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಆದ್ರೆ ಕತ್ತಲಿನಲ್ಲಿ ಟಿವಿ ನೋಡೋದ್ರಿಂದಾಲೂ ಎದುರಾಗುವ ಆರೋಗ್ಯ ಸಮಸ್ಯೆ (Health problem)ಗಳು ಒಂದೆರಡಲ್ಲ. 

ಕಣ್ಣುಗಳ ದೃಷ್ಟಿಯನ್ನು ತಗ್ಗಿಸುತ್ತದೆ: ಕತ್ತಲೆಯಲ್ಲಿ ಟಿವಿ ನೋಡುತ್ತಾ ಕುಳಿತುಕೊಳ್ಳುವ ಅಭ್ಯಾಸ ನಿಮ್ಮ ಕಣ್ಣುಗಳ (Eyes) ದೃಷ್ಟಿಯನ್ನು ತಗ್ಗಿಸಬಹುದು. ನೀವು ಕತ್ತಲೆಯ ಕೋಣೆಯಲ್ಲಿ ದೂರದರ್ಶನವನ್ನು ವೀಕ್ಷಿಸುತ್ತಿರುವಾಗ, ನಿಮ್ಮ ಕಣ್ಣುಗಳು ನಿರಂತರವಾಗಿ ವಿವಿಧ ಬೆಳಕಿಗೆ ಹೊಂದಿಕೊಳ್ಳಬೇಕು. ಯಾಕೆಂದರೆ ಟಿವಿಯಲ್ಲಿ ದೃಶ್ಯಗಳು ಬದಲಾಗುತ್ತಿರುವಂತೆಯೃ ಬೆಳಕಿನ (Light) ಸಂಯೋಜನೆಯೂ ಹೆಚ್ಚು ಕಡಿಮೆಯಾಗುತ್ತಾ ಹೋಗುತ್ತದೆ.  ಪ್ರತಿ ಬಾರಿ ಪರದೆಯ ಮೇಲಿನ ದೃಶ್ಯಾವಳಿಗಳು ಬದಲಾದಾಗ ಅಥವಾ ದೂರದರ್ಶನ ಕಾರ್ಯಕ್ರಮವು ವಾಣಿಜ್ಯಕ್ಕೆ ಬದಲಾದರೆ, ಪರದೆಯಿಂದ ಹೊರಸೂಸುವ ಬೆಳಕಿನಲ್ಲಿ ದೊಡ್ಡ ಬದಲಾವಣೆಯಾಗಬಹುದು.

ಮಕ್ಕಳ ಕೈಯಲ್ಲಿ ಮೊಬೈಲ್‌, ಸುಧಾಮೂರ್ತಿಯವರು ಪೋಷಕರಿಗೆ ಹೇಳುವ ಕಿವಿಮಾತೇನು ?

ಡ್ರೈ ಐ ಸಿಂಡ್ರೋಮ್ ಕಾಯಿಲೆ: ನಿರಂತರ ಬದಲಾಗುತ್ತಿರುವ ಬೆಳಕಿನ ಮಟ್ಟವು ನಿಮ್ಮ ಕಣ್ಣುಗಳ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತದೆ, ಇದು ಕಣ್ಣಿನ ಆಯಾಸಕ್ಕೆ ಕಾರಣವಾಗುತ್ತದೆ. ಕಣ್ಣಿನ ಒತ್ತಡವು ಡ್ರೈ ಐ ಸಿಂಡ್ರೋಮ್‌ಗೆ ಕಾರಣವಾಗಬಹುದು, ಇದು ಗ್ಲುಕೋಮಾದ ಬೆಳವಣಿಗೆಗೆ ಕೊಡುಗೆ ನೀಡುವ ಅಂಶವಾಗಿದೆ.

ಕಣ್ಣಿನಲ್ಲಿರುವ ರೆಟಿನಾಗೆ ಹಾನಿ: ಟಿವಿಯಿಂದ ಹೊರಬರುವ ಬೆಳಕಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅತಿನೇರಳೆ ಕಿರಣಗಳು ಇರುವುದರಿಂದ ಕಣ್ಣಿನಲ್ಲಿರುವ ರೆಟೀನಾಗೆ ಹಾನಿಯುಂಟುಮಾಡುತ್ತದೆ. ಕೋಣೆಯಲ್ಲಿ ಲೈಟ್ ಇದ್ದರೆ ಆ ಬೆಳಕಿನ ಕಿರಣಗಳ ಜೊತೆ ಅತಿನೇರಳೆ ಕಿರಣಗಳು ಒಂದಾಗಿ ಕಣ್ಣಿನ ಮೇಲೆ ಬೀಳುವುದಾಗಲಿ, ರೆಟೀನಾಗೆ ಹಾನಿ ಉಂಟು ಮಾಡುವಂತಹ ತೀವ್ರತೆ ಮಾಡುತ್ತದೆ. ಹಗಲಿನಲ್ಲಿ ಆದರೆ ಸೂರ್ಯನ ಕಿರಣಗಳು ಇದ್ದೇ ಇರುತ್ತದೆ.

ಹೀಗಾಗಿ ರಾತ್ರಿ ವೇಳೆಯಲ್ಲಿ ಟಿವಿ ನೋಡುವಾಗ ಕೋಣೆಯಲ್ಲಿ ಲೈಟ್ ಆರಿಸಬಾರದು. ಟಿವಿಯನ್ನು ಕನಿಷ್ಠ ಐದು ಅಡಿಗಳ ದೂರದಿಂದ ನೋಡಬೇಕು. ಟಿವಿಯಲ್ಲಿ ಬೊಂಬೆಗಳು ಕಂಡುಬರುವ ತೆರೆಯ ಒಂದು ಮೂಲೆಯಿಂದ ಅದಕ್ಕೆ ಎದುರಿರುವ ಮೂಲೆ ಅಂದರೆ ಕರ್ಣದ ಹಿಂದೆ ಇರುವ ದೂರವನ್ನು ಆ ಟಿವಿ ಸೈಜ್ ಎಂದು ಗಣನೆಗೆ ತೆಗೆದುಕೊಳ್ಳುತ್ತಾರೆ. ಆ ಸೈಜನ್ನು 4 ರಿಂದ ಭಾಗಿಸಿದರೆ ಬರುವ ಸಂಖ್ಯೆ ನಮ್ಮ ಆ ಟಿವಿಯಿಂದ ಎಷ್ಟು ಅಡಿಗಳಷ್ಟು ದೂರದಲ್ಲಿ ಕೂರಬೇಕು ಎಂಬುದನ್ನು ತಿಳಿಸುತ್ತದೆ.

ನಿರಂತರವಾಗಿ ಟಿವಿ ನೋಡಿದರೆ ಇಂಥಾ ಆರೋಗ್ಯ ಸಮಸ್ಯೆ ಕಾಡುತ್ತಂತೆ, ಹುಷಾರ್

ಕಣ್ಣಿನ ಒತ್ತಡದ ಲಕ್ಷಣಗಳು
ಕಣ್ಣಿನ ಒತ್ತಡವನ್ನು ಸಾಮಾನ್ಯವಾಗಿ ತಾತ್ಕಾಲಿಕ ಎಂದು ಭಾವಿಸಲಾಗುತ್ತದೆ. ಆದ್ದರಿಂದ, ಹೆಚ್ಚಿನ ಜನರು ತಮ್ಮ ಕಣ್ಣುಗಳು ಸ್ವಲ್ಪ ಸಮಯದವರೆಗೆ ನೋವುಂಟುಮಾಡುತ್ತವೆ ಎಂದು ಭಾವಿಸುತ್ತಾರೆ, ಆದರೆ ಅವರು ವಿಶ್ರಾಂತಿ ಪಡೆದ ನಂತರ, ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಆದರೆ ಇದು ಮುಂದಿನ ದಿನಗಳಲ್ಲಿ ದೀರ್ಘಕಾಲದ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಕಣ್ಣಿನ ಆಯಾಸವು ಗ್ಲುಕೋಮಾ ಮತ್ತು ಅಸ್ಟಿಗ್ಮ್ಯಾಟಿಸಮ್‌ಗೆ ಸಂಬಂಧಿಸಿದೆ. ನೀರು, ಉರಿಯುವ ಕಣ್ಣುಗಳು, ತಲೆನೋವು, ಮಂದ ದೃಷ್ಟಿ, ಬೆಳಕಿಗೆ ಸೂಕ್ಷ್ಮತೆ ಮೊದಲಾದ ಸಮಸ್ಯೆ ಕಂಡು ಬರುತ್ತದೆ. 

ನಿಮ್ಮ ದೃಷ್ಟಿಯನ್ನುಕಾಪಾಡಿಕೊಳ್ಳಲು ಏನು ಮಾಡಬಹುದು ?
ಟೆಲಿವಿಷನ್ ನೋಡುವಾಗ ಮತ್ತು ರಾತ್ರಿಯಲ್ಲಿ ಕಂಪ್ಯೂಟರ್ ಬಳಸುವಾಗ ನಿಮ್ಮ ದೃಷ್ಟಿ ಆರೋಗ್ಯಕರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಉತ್ತಮ ಮಾರ್ಗವೆಂದರೆ ಕನಿಷ್ಠ ಸ್ವಲ್ಪ ಪ್ರಮಾಣದ ಬೆಳಕನ್ನು ಆನ್ ಮಾಡುವುದು. ಬಯಾಸ್ ಲೈಟಿಂಗ್ ನಂತಹ ಕಡಿಮೆ ಮಟ್ಟದ ಬೆಳಕು ಕಣ್ಣಿನ ಆಯಾಸವನ್ನು ಕಡಿಮೆ ಮಾಡುತ್ತದೆ. ಮತ್ತು ಈ ಬೆಳಕು ಟಿವಿ ಪರದೆಗೆ ಬೀಳುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹೀಗೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಕಣ್ಣಿಗೆ ಉಂಟಾಗುವ ಹಾನಿಯ ಪ್ರಮಾಣ ಕಡಿಮೆಯಾಗುತ್ತದೆ. 

Follow Us:
Download App:
  • android
  • ios