ಯಪ್ಪಾ..ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿದ ಡಾಕ್ಟರ್!
ಇತ್ತೀಚಿಗೆ ಅಸಲಿ ಡಾಕ್ಟರ್‌ಗಳಿಗಿಂತ ನಕಲಿ ಡಾಕ್ಟರ್‌ಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿಯೇ ತಪ್ಪು ತಪ್ಪಾಗಿ ಚಿಕಿತ್ಸೆ ನೀಡಿ ಜನರು ಗಾಬರಿಯಾಗುವಂತೆ ಮಾಡುತ್ತಾರೆ. ಹಾಗೆಯೇ ತೆಲಂಗಾಣದಲ್ಲೊಬ್ಬ ಡಾಕ್ಟರ್ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿರುವ ಘಟನೆ ನಡೆದಿದೆ.
ತೆಲಂಗಾಣ: ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಆಸ್ಪತ್ರೆಗಳಿಂದ ಯಾರು ಅಸಲಿ ವೈದ್ಯರು ಯಾರು ನಕಲಿ ವೈದ್ಯರೆಂದು ಜನರಿಗೆ ಗೊತ್ತಾಗುತ್ತಿಲ್ಲ. ಹೀಗಾಗಿ ಹಳ್ಳಿಯ ಜನರು ಸಾಮಾನ್ಯವಾಗಿ ಕ್ಲಿನಿಕ್ ಎಂಬ ಬೋರ್ಡ್ ಹಾಕಿರುವಲ್ಲಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಹೀಗೆ ಚಿಕಿತ್ಸೆ ಪಡೆಯುವಾಗ ನಕಲಿ ಡಾಕ್ಟರ್‌ಗಳಿದ್ದಲ್ಲಿ ಕೆಲವೊಮ್ಮೆ ತಪ್ಪಾಗಿ ಮಾತ್ರೆ ಕೊಡುವುದು, ಇಂಜೆಕ್ಷನ್ ಕೊಡುವುದು ಮಾಡಿ ಎಡವಟ್ಟು ಮಾಡಿಕೊಳ್ಳುತ್ತಾರೆ. ಇದು ಕೆಲವು ರೋಗಿಯ ಜೀವ ಹೋಗಲು ಸಹ ಕಾರಣವಾಗುತ್ತದೆ. ತೆಲಂಗಾಣದಲ್ಲೊಬ್ಬ ಡಾಕ್ಟರ್ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿರುವ ಘಟನೆ ಎಲ್ಲರ ಆತಂಕಕ್ಕೆ ಕಾರಣವಾಗಿದೆ.
ಇಲ್ಲಿನ ಜೋಗುಲಾಂಬ ಗದ್ವಾಲಾ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದು ಮಗುವಿನ ತಲೆಗೆ ಗಂಭೀರವಾದ ಗಾಯಕ್ಕೆ (Injury) ಚಿಕಿತ್ಸೆ ನೀಡಲು ಫೆವಿಕ್ವಿಕ್ ಅನ್ನು ಬಳಸಿದ್ದು, ಕುಟುಂಬ ಮತ್ತು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ, ರಾಯಚೂರು ಜಿಲ್ಲೆಯ ಲಿಂಗಸೂಗೂರಿನ ವಂಶಿಕೃಷ್ಣ ಮತ್ತು ಸುನೀತಾ ದಂಪತಿಗಳು ತಮ್ಮ ಏಳು ವರ್ಷದ ಮಗ ಪ್ರವೀಣ್ ಚೌಧರಿಯನ್ನು ಆಸ್ಪತ್ರೆಗೆ (Hospital) ಕರೆದುಕೊಂಡು ಬಂದಿದ್ದರು. ಬಾಲಕ ಪ್ರವೀಣ್ ಸಂಬಂಧಿಕರ ಮದುವೆಯ (Marriage) ಸಂದರ್ಭದಲ್ಲಿ ಹೊರಗೆ ಆಟವಾಡುತ್ತಿದ್ದಾಗ ಗಾಯಗೊಂಡಿದ್ದ. ಬಾಲಕನ ಎಡಗಣ್ಣಿನ ಮೇಲೆ ಆಳವಾದ ಗಾಯವಾಗಿತ್ತು. ಹೀಗಾಗಿ ಸ್ಟಿಚಸ್ ಹಾಕಲು ಆಸ್ಪತ್ರೆಗೆ ಬಂದಿದ್ದರು.
Bengaluru: ನಕಲಿ ವೈದ್ಯನ ಇಂಜೆಕ್ಷನ್‌ನಿಂದ ಮಹಿಳೆ ದೇಹದಲ್ಲಿ ಕೊಳೆತ ಮಾಂಸ!
ಗಾಯಕ್ಕೆ ಫೆವಿಕ್ಷಿಕ್ ಬಳಸಿದ ಆಸ್ಪತ್ರೆಯ ಸಿಬ್ಬಂದಿ
ಸಾಮಾನ್ಯವಾಗಿ ಗಾಯವಾದರೆ ಕ್ಲೀನ್ ಮಾಡಿ ಬ್ಯಾಂಡೇಜ್ ಹಾಕಲಾಗುತ್ತದೆ. ಗಾಯ ಇನ್ನೂ ಸ್ಪಲ್ಪ ಆಳವಾಗಿ ಆಗಿದ್ದರೆ ಸ್ಟಿಚಸ್ ಹಾಕುತ್ತಾರೆ. ಗಾಯವನ್ನು ಗುಣಪಡಿಸಲು ವೈದ್ಯರು ಔಷಧಗಳು (Medicine) ಅಥವಾ ಮುಲಾಮುಗಳನ್ನು ಹಚ್ಚುತ್ತಾರೆ. ಅಥವಾ ಗಾಯ ಇನ್ನೂ ದೊಡ್ಡದು ಎಂದಾದರೆ ಹೊಲಿಗೆ ಹಾಕಬೇಕಾಗುತ್ತದೆ. ಆದರೆ ಈ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಮಾಡಿದ್ದೇ ಬೇರೆ. ಬಾಲಕನಿಗೆ ಆ ಆಸ್ಪತ್ರೆ ನೀಡಿದ ಚಿಕಿತ್ಸೆ (Treatment) ಈಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ತೆಲಂಗಾಣದ ಆಸ್ಪತ್ರೆಯ ಸಿಬ್ಬಂದಿ ಹೊಲಿಗೆಗಳನ್ನು ನೀಡುವ ಬದಲು ಗಾಯಕ್ಕೆ ಚಿಕಿತ್ಸೆ ನೀಡಲು ಫೆವಿಕ್ವಿಕ್ ಬಳಸಿದರು. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಕೂಡಲೇ ಆಸ್ಪತ್ರೆಯ ವೈದ್ಯರನ್ನು ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ವೈದ್ಯರು ಸಹ ಪೋಷಕರಿಗೆ ನಿರ್ಲಕ್ಷ್ಯದ ಉತ್ತರ ನೀಡಿದ್ದಾರೆ. ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ವೈದ್ಯರು ಹಾಗೂ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
Fake Doctor ನಕಲಿ ವೈದ್ಯರ ಐವಿಎಫ್ ಚಿಕಿತ್ಸೆಗೆ ಮಹಿಳೆ ಬಲಿ, 4 ಲಕ್ಷ ರೂ ಪಡೆದು ಟ್ರೀಟ್‌ಮೆಂಟ್!
ಆಸ್ಪತ್ರೆಯ ವೈದ್ಯರನ್ನು ವಶಕ್ಕೆ ಪಡೆದ ಪೊಲೀಸರು
ಪ್ರವೀಣ್ ಅವರ ಗಾಯವನ್ನು ಪರೀಕ್ಷಿಸಿದ ವೈದ್ಯರು ಗಾಯ ಗಂಭೀರವಾಗಿದ್ದು, ಹೊಲಿಗೆ ಹಾಕಬೇಕಾಗಿದೆ ಎಂದು ತಿಳಿಸಿದ್ದರು. ಆದರೆ, ಆಸ್ಪತ್ರೆಯ ಸಿಬ್ಬಂದಿ ಗಾಯಕ್ಕೆ ಹೊಲಿಗೆ ಹಾಕಲು ದಾರದ ಬದಲು ಸಾಮಾನ್ಯವಾಗಿ ಲಭ್ಯವಿರುವ ಫೆವಿಕ್ವಿಕ್ ಬಳಸಿದ್ದಾರೆ ಎಂಬುದು ಆಮೇಲೆ ತಿಳಿದು ಬಂದಿದೆ. ಬಾಲಕನ ತಂದೆ ಇದನ್ನು ಕಂಡು ಕೋಪಗೊಂಡಿದ್ದಾರೆ. ನನ್ನ ಮಗನಿಗೆ ಏನಾದರು ಆದರೆ ನೀವೆ ಜವಾಬ್ಧಾರಿ ನಾನು ಈಗಲೇ ಪೋಲೀಸರಿಗೆ ದೂರು ನೀಡುತ್ತೇನೆ ಎಂದು ಠಾಣೆಗೆ ತೆರಳಿದ್ದಾರೆ.
ಗಾಯದಿಂದಾಗಿ ತನ್ನ ಮಗನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಆಸ್ಪತ್ರೆಯಲ್ಲಿ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿ ಫೆವಿಕ್ವಿಕ್‌ನಿಂದ ಗಾಯವನ್ನು ಮುಚ್ಚಲು ಪ್ರಯತ್ನಿಸಿದರು ಎಂದು ತಂದೆ ದೂರಿನಲ್ಲಿ ಬರೆದಿದ್ದಾರೆ. ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಘಟನೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ರೈನ್‌ಬೋ ಆಸ್ಪತ್ರೆಯನ್ನು ವಶಕ್ಕೆ ಪಡೆದು ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.