ಸಾಸಿವೆ ಎಣ್ಣೆಯಲ್ಲಷ್ಟೇ ಅಲ್ಲ ಸಾಸಿವೆ ಎಲೆಗಳಲ್ಲೂ ಇದೆ ಆರೋಗ್ಯ ಲಾಭ

ಚಳಿಗಾಲದಲ್ಲಿ ಹಣ್ಣು(Fruits), ಸೊಪ್ಪು(Leaves), ತರಕಾರಿಗಳು(Vegetables) ಫ್ರೆಶ್ ಹಾಗೂ ಉತ್ತಮವಾಗಿ ಬೆಳೆಯಲಾಗುತ್ತದೆ. ಈ ಸಾಲಿನಲ್ಲಿ ಸಾಸಿವೆಯ ಸೊಪ್ಪು(Mustered Leaves) ಸಹ ಚಳಿಗಾಲದಲ್ಲಿ ಹೇರಳವಾಗಿ ಬೆಳೆಯಲಾಗುತ್ತದೆ. ಆಯುರ್ವೇದದಲ್ಲೂ(Ayurveda) ಸಾಸಿವೆಯನ್ನು ಔಷಧವಾಗಿ(Medicine) ಬಹಳ ಮಹತ್ವ ಪಡೆದಿದೆ.  ಕೇವಲ ಸಾಸಿವೆ ಅಷ್ಟೇ ಅಲ್ಲದೆ ಅದರ ಸೊಪ್ಪು ಸಹ ಆರೋಗ್ಯಕ್ಕೆ ಬಹಳ ಲಾಭವಿದೆ. ಈ ಚಳಿಗಾಲದಲ್ಲಿ ಸಾಸಿವೆ ಸೊಪ್ಪನ್ನು ಸೇವಿಸಬೇಕು ಏಕೆ? ಅದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.

Here are the benefits Why you should Eat Mustered Leaves in Winter

ಸಾಸಿವೆ(Mustered) ಎಂದಾಕ್ಷಣ ಒಗ್ಗರಣೆ ಡಬ್ಬಿ ನೆನಪಾಗುತ್ತದೆ. ಕೇವಲ ಒಗ್ಗರಣೆಗೆ ಮಾತ್ರವಲ್ಲದೆ ಸಾಸಿವೆ ಎಣ್ಣೆಯೂ(Mustered Oil ಆಯುರ್ವೇದದಲ್ಲಿ ಬಹಳ ಮಹತ್ವ ಪಡೆದಿದೆ. ಚಳಿಗಾಲದಲ್ಲಿ ಹೆಚ್ಚು ಬೆಳೆಯಲ್ಪಡುವ ಸಾಸಿವೆಯು ಅದರ ಸೊಪ್ಪು ಸಹ ಆರೋಗ್ಯಕ್ಕೆ ದಿವ್ಯೌಷಧವಾಗಿದೆ. ಸಾಸಿವೆಯಲ್ಲಿ ಔಷಧೀಯ ಗುಣಗಳನ್ನು ಹೇರಳವಾಗಿದೆ. ಅದರಂತೆ ಸಾಸಿವೆಯ ಎಲೆಗಳಲ್ಲೂ ಹೆಚ್ಚಿನ ಪ್ರಮಾಣದ ಆರೋಗ್ಯ ಲಾಭಗಳಿವೆ. ಸಾಸಿವೆ ಎಲೆಗಳ ಪೇಸ್ಟ್ ಅನ್ನು ಎಡಿಮಾ(Oedema) ಮತ್ತು ಬಾವುಗಳಿಗೆ(Swelling) ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

 ಸಾಸಿವೆಯಲ್ಲಿ Vitamin K, C ಹೇರಳವಾಗಿದೆ. ಸಸ್ಯ ಸಂಯುಕ್ತಗಳಲ್ಲಿ ಅಧಿಕವಾಗಿದೆ ಮತ್ತು ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಮತ್ತು ಕ್ಯಾನ್ಸರ್(Cancer) ವಿರೋಧಿ ಗುಣಗಳನ್ನು ಹೊಂದಿದೆ. ಸಾಸಿವೆ ಸೊಪ್ಪನ್ನು ವಿವಿಧ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಅದು ಕುದಿಸಿ(Boiled), ಹುರಿದ(Frayed) ಅಥವಾ ಆವಿಯಲ್ಲಿ ಬೇಯಿಸಬಹುದು(Cook). ಕಡಿಮೆ ಕ್ಯಾಲೋರಿ(Calorie) ಮತ್ತು ಕೊಬ್ಬಿಣಾಂಶ ಕಡಿಮೆ ಇರುವ ಆಹಾರವು ಚಳಿಗಾಲದಲ್ಲಿ ತೂಕ ನಷ್ಟ(Weight Loss) ಗುರಿಗಳಿಗೆ ಪರಿಪೂರ್ಣವಾಗಿದೆ. ಇದು ಕೊಲೆಸ್ಟಾçಲ್(Cholesterol) ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಹೆಚ್ಚಿನ ಫೈಬರ್(Fiber) ಅನ್ನು ಹೊಂದಿರುತ್ತದೆ.

ಚಳಿಗಾಲದಲ್ಲಿ ಸಾಕಷ್ಟು ಹಸಿರು ಎಲೆಗಳ ಸೊಪ್ಪು ತರಕಾರಿಗಳು ಲಭ್ಯವಿವೆ. ಸಾಸಿವೆಯಂತಹ ತರಕಾರಿಗಳಲ್ಲಿ ಒಂದಾಗಿದ್ದು, ಬಹಳ ಪ್ರಯೋಜನಕಾರಿಯಾಗಿದೆ. ಸಾಸಿವೆಯನ್ನು ಉತ್ತರ(North) ಮತ್ತು ಪೂರ್ವ ಭಾರತದಲ್ಲಿ(East India) ಹೆಚ್ಚಾಗಿ ಬೆಳೆಯಲಾಗುತ್ತದೆ. ಆದರೆ ಈಗ ಎಲ್ಲೆಡೆ ಲಭ್ಯವಿದೆ. ಸಾಸಿವೆಯು ಕ್ಯಾಲೋರಿ ಮತ್ತು ಕೊಬ್ಬುಗಳು ಬಹಳ ಕಡಿಮೆ ಇದೆ. ಇದು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿದ್ದು, ಕರುಳಿನಲ್ಲಿ ಹೀರಿಕೊಳ್ಳುವಿಕೆಯನ್ನು ಅಡ್ಡಿಪಡಿಸುವ ಮೂಲಕ ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

ಹರಿವೆ ಸೊಪ್ಪಿನಿಂದ ಆರೋಗ್ಯಕ್ಕೆ ನೂರಾರು ಉಪಯೋಗ, ಹೇಗೆ ಬಳಸಬಹುದು?

ಸಾಸಿವೆ ಎಲೆಗಳಲ್ಲಿ ಫ್ಲೇವನಾಯ್ಡ(Flavonoids), ಲುಟೀನ್(Lutein), ಬೀಟಾ ಕ್ಯಾರೋಟಿನ್(Beta Carotene), ವಿಟಮಿನ್‌ಗಳಂತಹ(Vitamin) ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. Vitamin A, C, E, K ಇದ್ದು, ವಿಟಮಿನ್ ಕೆ ಮತ್ತು ಕ್ಯಾಲ್ಸಿಯಂ(Calcium) ಅನ್ನು ಹೊಂದಿರುವುದರಿAದ ಮೂಳೆಯ ಆರೋಗ್ಯವನ್ನು(Healthy Bone) ಉತ್ತೇಜಿಸುತ್ತದೆ. ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಇರುವುದರಿಂದ ಕಣ್ಣುಗಳಿಗೆ(Eye) ತುಂಬಾ ಪ್ರಯೋಜನಕಾರಿಯಾಗಿದೆ. ಸಾಸಿವೆ ಎಲೆಯಲ್ಲಿನ ಫೈಟೊಕೆಮಿಕಲ್ಸ್(Phytochemical) ತೂಕ ಹೆಚ್ಚಾಗುವುದನ್ನು(Weight Gain) ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗೂ ಅಸ್ತಮಾ(Asthma), ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ(Immunity Boost). ಚಳಿಗಾಲದಲ್ಲಿ ಮಲಬದ್ಧತೆ(Constipation) ಸಮಸ್ಯೆ ಹೆಚ್ಚಾಗಿದ್ದು, ಸಾಸಿವೆ ಸೊಪ್ಪು ಈ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಕೊಲೆಸ್ಟಾçಲ್ ಮಟ್ಟವನ್ನು ಕಡಿಮೆ ಮಾಡುವುದರ ಜೊತೆಗೆ ಸ್ನಾಯು ನೋವನ್ನು(Muscles Pain) ನಿವಾರಿಸುತ್ತದೆ. ಏಕೆಂದರೆ ಇದರಲ್ಲಿ ಬಹಳಷ್ಟು ಸೂಕ್ಷö್ಮ ಪೋಷಕಾಂಶಗಳು ಮತ್ತು ಫೈಟೊಕೆಮಿಕಲ್‌ಗಳನ್ನು ಹೊಂದಿರುತ್ತದೆ.

ಪ್ರಯೋಜನಗಳು

1. ಸಾಸಿವೆ ಎಲೆಯು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ರೋಗಗಳ ವಿರುದ್ಧ ಹೋರಾಡುವುದಲ್ಲದೆ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ನೈಸರ್ಗಿಕವಾಗಿ ಕಂಡುಬರುವ ಸಸ್ಯ ಸಂಯುಕ್ತಗಳಾಗಿದ್ದು, ಇದು ಹೆಚ್ಚಿನ ಫ್ರೀ ರಾಡಿಕಲ್ಸ್ಗಳಿಂದ(Free Radicals) ಉಂಟಾಗುವ ಆಕ್ಸಿಡೇಟಿವ್ ಒತ್ತಡದಿಂದ(oxidative stress) ರಕ್ಷಿಸಲು ಸಹಾಯ ಮಾಡುತ್ತದೆ. 

ನಾನಾ ಬಗೆಯ ಸಾಸಿವೆ ಎಲೆಗಳಿದ್ದು ತಮ್ಮದೇ ವಿಭಿನ್ನ ಗುಣಗಳನ್ನು ಹೊಂದಿವೆ. ಇವು ನಿರ್ದಿಷ್ಟವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಸಾಮಾನ್ಯವಾಗಿ ಈ ಎಲೆಗಳ ಸೊಪ್ಪುಗಳು ಫ್ಲೇವನಾಯ್ಡ್ಗಳು, ಬೀಟಾ ಕ್ಯಾರೋಟಿನ್, ಲುಟೀನ್ ಮತ್ತು Vitamin C, E ನಂತಹ ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ. ನಿಮ್ಮ ಆಹಾರದಲ್ಲಿ ಸಾಸಿವೆ ಸೊಪ್ಪನ್ನು ಸೇರಿಸುವುದು ಒತ್ತಡಕ್ಕೆ ಸಂಬAಧಿಸಿದ ಕಾಯಿಲೆಗಳಿಂದ ದೂರವಿಡುತ್ತದೆ. ಜೊತೆಗೆ ಹೃದಯ ಸಂಬAಧಿ ಕಾಯಿಲೆ(Heart Disease), ಕ್ಯಾನ್ಸ್(Cancer) ಹಾಗೂ ಟೈಪ್ 2 ಡಯಾಬಿಟಿಸ್‌ಗಳಿಗೆ(Type 2 Diabetes) ರಾಮಬಾಣವಾಗಿದೆ.

ಎಲೆಲೆ ಎಲೆಯೇ ಎಂದು ಮೂಗು ಮುರಿಯದಿರಿ..

2. ಕಚ್ಚಾ ಮತ್ತು ಬೇಯಿಸಿದ ಸಾಸಿವೆ ಸೊಪ್ಪುಗಳೆರಡೂ(Cooked Mustered Leaves) ವಿಟಮಿನ್ K ಯ ಅಸಾಧಾರಣ ಮೂಲವಾಗಿದೆ. ವಿಟಮಿನ್ ಕೆ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಇದು ಹೃದಯ(Heart) ಮತ್ತು ಮೂಳೆಗಳ(Bone) ಆರೋಗ್ಯಕ್ಕೆ ಅತ್ಯಗತ್ಯವಾದ ಅಂಶವನ್ನೂ ಒದಗಿಸುತ್ತದೆ. 

3. ಸಾಸಿವೆ ಸೊಪ್ಪನ್ನು ಪ್ರತೀ ದಿನ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಪ್ರತಿರಕ್ಷಣಾ ವ್ಯವಸ್ಥೆ(Immunity System) ಹೆಚ್ಚಿಸಲು ಸಹಾಯ ಮಾಡುತ್ತದೆ. ಕೇವಲ ಒಂದು ಕಪ್ ಸೊಪ್ಪಿನಲ್ಲಿ 56 ಗ್ರಾಂ ಕಚ್ಚಾ, 140 ಗ್ರಾಂ ಬೇಯಿಸಿದ ಸೊಪ್ಪಿನಲ್ಲಿ ದೈನಂದಿನ ವಿಟಮಿನ್ C ಅಗತ್ಯಗಳಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಒದಗಿಸುತ್ತದೆ.

ವಿಟಮಿನ್ C ನೀರಿನಲ್ಲಿ ಕರಗುವ ವಿಟಮಿನ್ ಆಗಿದ್ದು, ಇದು ಬಲವಾದ ಪ್ರತಿರಕ್ಷಣಾ ವ್ಯವಸ್ಥೆಗೆ ಅವಶ್ಯಕವಾಗಿದೆ. ಆಹಾರದಲ್ಲಿ ಸಾಕಷ್ಟು ವಿಟಮಿನ್ C ಪಡೆಯದಿರುವುದು ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಮತ್ತು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯೂ ಹೆಚ್ಚಿಸುತ್ತದೆ ಎಂದು ಸಂಶೋಧನೆಯಿAದ ತಿಳಿದಿದೆ.

Latest Videos
Follow Us:
Download App:
  • android
  • ios