ಎಲೆಲೆ ಎಲೆಯೇ ಎಂದು ಮೂಗು ಮುರಿಯದಿರಿ..
ಗಿಡದಲ್ಲಿ ಬಿಡುವ ಹೂ, ಹಣ್ಣುಗಳು ಮಾತ್ರವಲ್ಲ ಗಿಡಗಳ ಎಲೆಗಳೂ ಬಹು ಉಪಯೋಗಿ. ನಮ್ಮ ಸುತ್ತಮುತ್ತ ಇರುವ ವಿವಿಧ ಎಲೆಗಳು ಒಂದೊಂದು ವಿಶೇಷ ಗುಣಗಳನ್ನು ಹೊಂದಿವೆ. ಕೆಲವು ಎಲೆಗಳು ಕಾಯಿಲೆಗೆ ಮನೆ ಮದ್ದಾಗಿ ಉಪಯೋಗಕ್ಕೆ ಬಂದರೆ ಇನ್ನೂ ಕೆಲವು ಬ್ಯೂಟಿ ಪ್ರಾಡೆಕ್ಟ್‌ಗಳ ಕೆಲಸ ಮಾಡುತ್ತವೆ. ಯಾವ ಎಲೆಯಲ್ಲಿ ಯಾವ ಗುಣ ಇದೆ ಅಂತ ಚಿಕ್ಕ ಪರಿಚಯ ಇಲ್ಲಿದೆ.
ದೊಡ್ಡ ಪತ್ರೆ ಎಲೆಯನ್ನು ಬಿಸಿ ಮಾಡಿ ರಸ ತೆಗೆದು ಜೇನುತುಪ್ಪದ ಜೊತೆ ಸೇವಿಸಿ. ಜ್ವರ, ಶೀತ, ಕೆಮ್ಮು, ಗಂಟಲು ನೋವಿಗೆ ಬೆಸ್ಟ್ ಮನೆಮದ್ದು.
ಬೇವು ಅಥವಾ ಕಹಿ ಬೇವು ಮಧುಮೇಹ, ಚರ್ಮರೋಗಕ್ಕೂ ಒಳ್ಳೆಯದು. ಬೇವಿನ ಎಲೆಯ ಫ್ರೆಶ್ ಫೇಸ್ ಪ್ಯಾಕ್ ಟ್ರೈ ಮಾಡಿ ನೋಡಿ.
ದಿನ ಒಂದು ಬ್ರಾಹ್ಮೀ ಎಲೆ (ಒಂದೋಲಗ) ತಿಂದರೆ ನಿಮ್ ಮೆಮೊರಿ ಕಂಪ್ಯೂಟರ್ ತರ ಆಗೋದು ಗ್ಯಾರಂಟಿ.
ನಿದ್ರಾಹೀನತೆ, ಸುಸ್ತು, ಹೃದಯಬಡಿತದಲ್ಲಿ ತುಂಬ ಏರಿಳಿತ ಎಲ್ಲಾ ಗುಣ ಹೊಂದಿದೆ ನಿಂಬೆ ಎಲೆ.
ಕೊತ್ತಂಬರಿ ಸೊಪ್ಪು ಕೇವಲ ಅಡುಗೆ ರುಚಿ ಅಷ್ಟೇ ಹೆಚ್ಚಿಸೊಲ್ಲ, ಎ, ಬಿ, ಕೆ ವಿಟಮಿನ್ ಮತ್ತು ಲೋಹಾಂಶ ಇರುವ ಇದು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್‌ಗಳನ್ನು ಕಡಿಮೆ ಮಾಡುತ್ತದೆ.
ವಿಳ್ಯೇದೆಲೆ ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತದೆ. ಕೆಮ್ಮು, ನೆಗಡಿಗೂ ರಾಮಬಾಣ.
ಮಲ್ಲಿಗೆ ಎಲೆಯ ರಸ ಸೇರಿಸಿ ತಯಾರಿಸಿದ ಎಣ್ಣೆ ಕೂದಲಿಗೆ ಉತ್ತಮ. ಈ ಎಲೆ ಚರ್ಮದ ಆರೋಗ್ಯಕ್ಕೂ ಬೆಸ್ಟ್.
ಹೆಸರಿನಂತೆ ಅಮೃತ ಇದು. ರೋಗ ನಿರೋಧಕ ಶಕ್ತಿಯನ್ನು ಬೂಸ್ಟ್ ಮಾಡುತ್ತೆ ಅಮೃತ ಬಳ್ಳಿ ಎಲೆಗಳು.
ಬಸಳೆ ದೇಹಕ್ಕೆ ತಂಪು ನೀಡುವುದಲ್ಲದೇ, ಕಬ್ಬಿಣಾಂಶಗಳ ಆಗರವೂ ಹೌದು.
ನ್ಯಾಚರಲ್ ಹೇರ್ ಕಂಡೀಷನರ್ ದಾಸವಾಳದ ಎಲೆ. ಸ್ಫಾಟ್ ಶೈನಿಂಗ್ ಕೂದಲಿಗಾಗಿ ಇದರ ಹೇರ್ ಪ್ಯಾಕ್ ಪ್ರಯತ್ನಿಸಿ.
ಒಗ್ಗರಣೆಗೆ ಮಾತ್ರವಲ್ಲ ಆರೋಗ್ಯಕ್ಕೂ ಬೇಕು ಕರೀಬೇವು.