Eye Care: ಕಾಂಟ್ಯಾಕ್ಟ್ ಲೆನ್ಸ್ ಹಾಗೂ ಕನ್ನಡಕ.. ಯಾವುದು ಬೆಸ್ಟ್?
ಕನ್ನಡಕ ಕಣ್ಣಿಗೆ ಬರ್ತಿದ್ದಂತೆ ಮುಜುಗರ ಶುರುವಾಗುತ್ತೆ. ಸ್ವಲ್ಪ ದಿನ ಎಲ್ಲರ ಮುಂದೆ ಬರೋಕೆ ಏನೋ ನಾಚಿಕೆ. ದಿನ ಕಳೆದಂತೆ ಸರಿಯಾದ್ರೂ ಅದ್ರಿಂದ ಮುಕ್ತಿ ಪಡೆಯಲು ಜನ ಹೊಸ ವಿಧಾನ ಹುಡುಕ್ತಾರೆ. ಅದೇ ಕಾಂಟ್ಯಾಕ್ಟ್ ಲೆನ್ಸ್. ಆದ್ರೆ ಇದು ಎಷ್ಟು ಸೇಫ್ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳೋದು ಸಹಜ.
ಇಡೀ ಪ್ರಪಂಚದ ಸೌಂದರ್ಯವನ್ನು ಸವಿಯಲು ಕಣ್ಣು ಮುಖ್ಯ. ದೃಷ್ಟಿ ಕಳೆದುಕೊಂಡವರು ಬದುಕಿನಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡ್ಬೇಕಾಗುತ್ತದೆ. 40 ವರ್ಷ ದಾಟಿದ ಮೇಲೆ ಜನರಿಗೆ ದೃಷ್ಟಿ ಸಮಸ್ಯೆಗಳು ಶುರುವಾಗ್ತಿದ್ದ ಕಾಲವೊಂದಿತ್ತು. ಆದ್ರೀಗ ನಾಲ್ಕೈದು ವರ್ಷದ ಮಕ್ಕಳ ಕಣ್ಣಲ್ಲಿ ನಾವು ಕನ್ನಡಕವನ್ನು ನೋಡ್ತಿದ್ದೇವೆ. ಕಣ್ಣಿನ ದೃಷ್ಟಿ ಮಂದವಾಗಲು ಅನೇಕ ಕಾರಣವಿದೆ.
ಅದೇನೇ ಇರಲಿ, ಕಣ್ಣು (Eye) ನಮ್ಮ ಸೌಂದರ್ಯ (Beauty) ವನ್ನು ಹೆಚ್ಚಿಸುತ್ತದೆ. ಕಣ್ಣಿಗೆ ಪಾಯಿಂಟ್ ಗ್ಲಾಸ್ ಹಾಕಿದಾಗ ಸೌಂದರ್ಯ ಹಾಳಾಗುತ್ತದೆ. ಹಾಗಾಗಿಯೇ ಕೆಲವರು ಗ್ಲಾಸ್ (Glass) ಧರಿಸಲು ಹಿಂದೇಟು ಹಾಕ್ತಾರೆ. ಮತ್ತೆ ಕೆಲವರು ಕನ್ನಡಕದ ಬದಲು ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಬಳಸುತ್ತಿದ್ದಾರೆ.
ಕಾಂಟ್ಯಾಕ್ಟ್ ಲೆನ್ಸ್ (Contactlenses) ಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ವರದಿಯ ಪ್ರಕಾರ ದೇಶದಲ್ಲಿ ಕಾಂಟ್ಯಾಕ್ಟ್ ಲೆನ್ಸ್ ಗಳ ವಾರ್ಷಿಕ ಬೆಳವಣಿಗೆ ದರ 2019 ರಿಂದ 2025 ರವರೆಗೆ ಶೇಕಡಾ 7.5 ರಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಒಂದ್ಕಡೆ ಕಾಂಟ್ಯಾಕ್ಟ್ ಲೆನ್ಸ್ ಬಗ್ಗೆ ಜನರು ಒಲವು ತೋರುತ್ತಿದ್ರೆ ಇನ್ನೊಂದು ಕಡೆ ಭಯ ಆವರಿಸುತ್ತಿದೆ. ಇತ್ತೀಚೆಗೆ ಅಮೆರಿಕದ ಫ್ಲೋರಿಡಾ (Florida) ದಲ್ಲಿ ಲೆನ್ಸ್ ಧರಿಸಿ ಮಹಿಳೆಯೊಬ್ಬಳು ದೃಷ್ಟಿ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಇದು ಜನರಲ್ಲಿ ಭಯ ಮೂಡಿಸಿದೆ. ಕನ್ನಡಕ ಹಾಗೂ ಕಾಂಟ್ಯಾಕ್ಟ್ ಲೆನ್ಸ್ ಇವುಗಳಲ್ಲಿ ಯಾವುದು ಬೆಸ್ಟ್ ಎನ್ನುವ ಪ್ರಶ್ನೆ ಜನರನ್ನು ಕಾಡಲು ಶುರುವಾಗಿದೆ.
ಮಗುವಿಗೆ 2-3 ವರ್ಷವಾದ್ರೂ ಮಾತನಾಡುತ್ತಿಲ್ವಾ? ತಲೆ ಕೆಡಿಸಿಕೊಳ್ಬೇಡಿ, ಕಾರಣ ಇವಿರಬಹುದು!
ಕಣ್ಣಿನ ತಜ್ಞರು (Experts) ಹೇಳೋದೇನು? : ಕನ್ನಡಕ ಹಾಗೂ ಕಾಂಟ್ಯಾಕ್ಟ್ ಲೆನ್ಸ್ ಎರಡೂ ಕಣ್ಣಿಗೆ ಒಳ್ಳೆಯದು ಎನ್ನುತ್ತಾರೆ ತಜ್ಞರು. ಇದನ್ನು ಬೇರೆ ಬೇರೆ ಸಂದರ್ಭದಲ್ಲಿ ಬಳಕೆ ಮಾಡಲಾಗುತ್ತದೆ. ಕೆಲವರಿಗೆ ಕನ್ನಡ ಧರಿಸುವಂತೆ ಸಲಹೆ ನೀಡಲಾಗುತ್ತದೆ. ಮತ್ತೆ ಕೆಲವರಿಗೆ ಕಾಂಟ್ಯಾಕ್ಟ್ ಲೆನ್ಸ್ ಧರಿಸಲು ಅನುಮತಿ ನೀಡಲಾಗುತ್ತದೆ. ಕನ್ನಡಕ ಹಾಗೂ ಕಾಂಟ್ಯಾಕ್ಟ್ ಲೆನ್ಸ್ ಎರಡರಲ್ಲೂ ಅನುಕೂಲ ಹಾಗೂ ಅನಾನುಕೂಲ ಎರಡೂ ಇದೆ. ಕನ್ನಡಕ ಮುಖದ ಸೌಂದರ್ಯವನ್ನು ಹಾಳ್ಮಾಡಬಹುದು. ಆದ್ರೆ ಕಾಂಟ್ಯಾಕ್ಟ್ ಲೆನ್ಸ್ ಗಿಂತ ಕನ್ನಡಕ ಉತ್ತಮ ಎನ್ನುತ್ತಾರೆ ತಜ್ಞರು,
ಕಾಂಟ್ಯಾಕ್ಟ್ ಲೆನ್ಸ್ ಹಾಗೂ ಕನ್ನಡಕ : ಕೆಲ ತಜ್ಞರ ಪ್ರಕಾರ, ಕಾಂಟ್ಯಾಕ್ಟ್ ಲೆನ್ಸ್ ಗಿಂತ ಕನ್ನಡಕ ಬೆಸ್ಟ್. ಅದಕ್ಕೆ ಕಾರಣವೇನು ಎಂಬುದನ್ನು ಅವರು ಹೇಳಿದ್ದಾರೆ. ಸಾಮಾನ್ಯವಾಗಿ ಕನ್ನಡಕ ನಮ್ಮ ಕಣ್ಣಿಗೆ ಸ್ಪರ್ಶಿಸುವುದಿಲ್ಲ. ಇದ್ರಿಂದ ಕಣ್ಣಿನ ಸೋಂಕು ನಮ್ಮನ್ನು ಕಾಡುವ ಅಪಾಯ ಬಹಳ ಕಡಿಮೆ. ಅದನ್ನು ಬಳಸುವುದು ಕೂಡ ತುಂಬಾ ಸುಲಭ. ಅದನ್ನು ಆರಾಮವಾಗಿ ತೆಗೆಯಬಹುದು ಹಾಗೆ ಹಾಕಬಹುದು. ಕನ್ನಡಕವನ್ನು ನೀವು ದೀರ್ಘಕಾಲದವರೆಗೆ ಬಳಕೆ ಮಾಡಬಹುದು. ದಿನಕ್ಕೆ ಇಷ್ಟೇ ಸಮಯ ಕನ್ನಡಕ ಧರಿಸಬೇಕು ಎನ್ನುವ ನಿಯಮವಿಲ್ಲ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇದೇ ಕಾರಣಕ್ಕೆ ಕನ್ನಡಕ ಬೆಸ್ಟ್. ಮಾರುಕಟ್ಟೆಯಲ್ಲಿ ಸಾಕಷ್ಟು ವೆರೈಟಿ ಡಿಸೈನ್ ಗಳ ಕನ್ನಡಕ ಲಭ್ಯವಿದೆ. ನೀವು ಸೌಂದರ್ಯ ಹಾಳಾಗುತ್ತೆ ಎನ್ನುವ ಸಂದರ್ಭದಲ್ಲಿ ಸ್ಟೈಲಿಶ್ ಫ್ರೇಮ್ ಬಳಸಬಹುದು.
ಬೊಜ್ಜು ಸೌಂದರ್ಯ ಹಾಳು ಮಾಡೋದು ಮಾತ್ರವಲ್ಲ, ಸಾವನ್ನೂ ಸಮೀಪ ತರುತ್ತೆ!
ಇನ್ನು ನೀವು ಕಾಂಟ್ಯಾಕ್ಟ್ ಲೆನ್ಸ್ ವಿಷ್ಯಕ್ಕೆ ಬಂದ್ರೆ ಅದನ್ನು ಧರಿಸಲು ಕೆಲ ನಿಯಮವಿದೆ. ಅದನ್ನು ನೀವು ಸುಲಭವಾಗಿ ಧರಿಸಲು ಸಾಧ್ಯವಿಲ್ಲ. ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಗರಿಷ್ಠ 8 ರಿಂದ 10 ಗಂಟೆಗಳ ಕಾಲ ಮಾತ್ರ ಬಳಸಬೇಕು. ದೀರ್ಘಕಾಲದವರೆಗೆ ಧರಿಸಿದರೆ, ಸ್ವಚ್ಛತೆಯನ್ನು ನಿರ್ಲಕ್ಷ್ಯ ಮಾಡಿದ್ರೆ ಕಣ್ಣಿಗೆ ಹಾನಿಯಾಗುವ ಸಾಧ್ಯತೆಯಿದೆ. ಲೆನ್ಸ್ ಧರಿಸುವವರು ನೈರ್ಮಲ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲವೆಂದ್ರೆ ಕಣ್ಣಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾಗಳು ಬೆಳೆದು ದೃಷ್ಟಿ ಹೋಗುವ ಸಾಧ್ಯತೆಯಿರುತ್ತದೆ.