Asianet Suvarna News Asianet Suvarna News

ಹೃದಯಾಘಾತದ ಲಕ್ಷಣ ಮುಖದ ಮೇಲೂ ಕಾಣಿಸಿಕೊಳ್ಳುತ್ತೆ, ಗಮನವಿರಲಿ !

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಸಮಸ್ಯೆ (Health Problem) ಹೆಚ್ಚಾಗ್ತಿದೆ. ಅದ್ರಲ್ಲೂ ಚಿಕ್ಕ ವಯಸ್ಸಿನಲ್ಲಿಯೇ ಜನರು ಹೃದಯಾಘಾತ (Heartattack)ಕ್ಕೊಳಗಾಗ್ತಿದ್ದಾರೆ. ಹೃದಯಾಘಾತವು ಬರುವ ಮೊದಲೇ ದೇಹವು (Body) ಕೆಲವು ಸಂಕೇತಗಳನ್ನು ನೀಡಲು ಪ್ರಾರಂಭಿಸುತ್ತದೆ. ಅದನ್ನು ತಿಳಿದುಕೊಂಡರೆ ಜೀವಕ್ಕೆ ಅಪಾಯ (Danger)ವಾಗುವುದನ್ನು ತಪ್ಪಿಸಬಹುದು.

Heart Attack Warning Signs That Appear On Your Face Vin
Author
Bengaluru, First Published May 27, 2022, 2:31 PM IST

ಹೃದಯಾಘಾತ (Heart Attack) ಹಾಗೂ ಹೃದ್ರೋಗ ಇತ್ತೀಚಿನ ದಿನಗಳಲ್ಲಿ ಮನುಷ್ಯನನ್ನು (Human) ತನ್ನ ಕಪಿಮುಷ್ಠಿಗೆ ತೆಗೆದುಕೊಳ್ಳುತ್ತಿದೆ. ಏಕಾಏಕಿ ಮನುಷ್ಯನಿಗೆ ಬಂದೆರಗುವ ಹಾರ್ಟ್ ಅಟ್ಯಾಕ್ ವ್ಯಕ್ತಿಯ ಜೀವಕ್ಕೆ (Life) ಕಂಟಕವಾಗಿ ಪರಿಣಮಿಸಿದೆ. ಹೆಚ್ಚಿನ ಸಂದರ್ಭಗಳಲ್ಲಿ ಹೃದಯಾಘಾತ ಮುಚ್ಚಿ ಹೋಗಿರುವ ಅಪಧಮನಿಗಳ ಕಾರಣದಿಂದ ಉಂಟಾಗುತ್ತದೆ. ಅಪಧಮನಿಗಳಲ್ಲಿನ ಅಡಚಣೆ ಸಾಮಾನ್ಯವಾಗಿ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಇತರ ಪದಾರ್ಥಗಳ ಶೇಖರಣೆಯಿಂದ ಉಂಟಾಗುತ್ತದೆ. ಇದು ಅಪಧಮನಿಗಳಿಗೆ ನಿರ್ಬಂಧ ಒಡ್ಡುತ್ತದೆ. ಇದು ರಕ್ತದ ಹರಿವನ್ನು ನಿಧಾನಗೊಳಿಸುತ್ತದೆ. ಹಾಗಾಗಿ ಹೃದಯ ಕಾಯಿಲೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೃದಯ ಸ್ನಾಯುವಿನ ಒಂದು ಭಾಗವು (Part) ಸಾಕಷ್ಟು ರಕ್ತ ಪಡೆಯಲು ಸಾಧ್ಯವಾಗದೇ ಇದ್ದಾಗ ಹೃದಯಾಘಾತ ಸಂಭವಿಸುತ್ತದೆ.

ದಿಢೀರ್ ಎಂದು ಉಂಟಾಗುವ ಸೈಲೆಂಟ್ ಹಾರ್ಟ್‌ ಅಟ್ಯಾಕ್‌ (Silent Heart Attack) ಸೈಲೆಂಟ್ ಕಿಲ್ಲರ್ ಎಂದೇ ಕರೆಯಲ್ಪಡುತ್ತದೆ. ನಿಶ್ಯಬ್ದ ಹೃದಯಾಘಾತವು ಬರುವ ಮೊದಲೇ ದೇಹವು (Body) ಕೆಲವು ಸಂಕೇತಗಳನ್ನು ನೀಡಲು ಪ್ರಾರಂಭಿಸುತ್ತದೆ. ಅದನ್ನು ತಿಳಿದುಕೊಂಡರೆ ಜೀವಕ್ಕೆ ಅಪಾಯ (Danger)ವಾಗುವುದನ್ನು ತಪ್ಪಿಸಬಹುದು. ಅದರಲ್ಲೂ ಮುಖ, ತಲೆ, ಕಿವಿಯಲ್ಲಿ ಉಂಟಾಗುವ ಬದಲಾವಣೆಗಳನ್ನು ನೋಡಿಕೊಂಡು ಹೃದಯಾಘಾತದ ಲಕ್ಷಣಗಳನ್ನು ಗುರುತಿಸಿಕೊಳ್ಳಬಹುದು. ಆ ಬಗ್ಗೆ ತಿಳಿದುಕೊಳ್ಳೋಣ.

Health Tips : ಹಾರ್ಟ್ ಗಟ್ಟಿಯಾಗಿರ್ಬೇಕೆಂದ್ರೆ ಇದರ ಬೀಜ ಕಸಕ್ಕೆ ಎಸಿಬೇಡಿ

ಮುಖದ ಮೇಲೂ ಕಾಣಿಸುತ್ತೆ ಹೃದಯಾಘಾತದ ಲಕ್ಷಣ 
ಹೃದಯಾಘಾತದ ಲಕ್ಷಣಗಳು ಎದೆ ನೋವು, ದುರ್ಬಲ ಭಾವನೆ, ದವಡೆ ಮತ್ತು ಕುತ್ತಿಗೆಯಲ್ಲಿ ನೋವು, ಉಸಿರಾಟದ ತೊಂದರೆ ಇತ್ಯಾದಿ ಸಮಸ್ಯೆಗಳನ್ನು ಒಳಗೊಂಡಿರುತ್ತದೆ. ಇದಲ್ಲದೆಯೂ ಹೃದಯಾಘಾತದ ಕೆಲವು ಲಕ್ಷಣಗಳು ಮುಖದಲ್ಲಿ ಕಂಡು ಬರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಈ ರೋಗ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಅರ್ಥ ಮಾಡಿಕೊಂಡರೆ ಹೃದಯಾಘಾತದ ಅಪಾಯವನ್ನು ತಿಳಿಯಬಹುದು. ಮತ್ತು ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯುವ ಮೂಲಕ ಪ್ರಾಣಾಪಾಯದಿಂದ ಪಾರಾಗಬಹುದು. ಆ ಲಕ್ಷಣಗಳು ಯಾವುವೆಲ್ಲಾ ?

ಕಣ್ಣು ರೆಪ್ಪೆಗಳ ಸುತ್ತಲೂ ಕೊಲೆಸ್ಟ್ರಾಲ್ ನಿಕ್ಷೇಪಗಳು
ಕೊಲೆಸ್ಟ್ರಾಲ್ ಕಣ್ಣು ರೆಪ್ಪೆಗಳ ಸುತ್ತಲೂ ಹಳದಿ ಬಣ್ಣ ಉಂಟು ಮಾಡಬಹುದು. ಇದನ್ನು ಕ್ಸಾಂಥೆಲಾಸ್ಮಾ ಎಂದು ಕರೆಯುತ್ತಾರೆ. ಇದು ರಕ್ತದ ಅಸಹಜ ಲಿಪಿಡ್ ಮಟ್ಟಕ್ಕೆ ಸಂಬಂಧಪಟ್ಟಿದೆ. ಇದನ್ನು ಡಿಸ್ಲಿಪಿಡೆಮಿಯಾ ಎಂದು ಕರೆಯುತ್ತಾರೆ. ಡಿಸ್ಲಿಪಿಡೆಮಿಯಾ ಅಪಧಮನಿಗಳ ಗೋಡೆಗಳ ಮೇಲೆ ಕೊಲೆಸ್ಟರಾಲ್ ನಿರ್ಮಾಣ ಅಪಾಯ ಹೆಚ್ಚಿಸುತ್ತದೆ. ಈ ರಚನೆ ಹೃದಯ, ಮೆದುಳು ಮತ್ತು ದೇಹದ ಇತರ ಪ್ರದೇಶಗಳಿಗೆ ರಕ್ತದ ಹರಿವು ನಿರ್ಬಂಧಿಸುತ್ತದೆ. ಹೃದಯಾಘಾತ, ಪಾರ್ಶ್ವವಾಯು ಮತ್ತು ಬಾಹ್ಯ ಅಪಧಮನಿ ಕಾಯಿಲೆಯ ಅಪಾಯ ಹೆಚ್ಚಿಸುತ್ತದೆ.

ಸೈಲೆಂಟ್ ಹಾರ್ಟ್ ಅಟ್ಯಾಕ್ ಕೂಡಾ ಅಪಾಯದ ಸೂಚನೆ ಕೊಡುತ್ತೆ !

ನೆತ್ತಿಯ ಮೇಲೆ ಕೂದಲು ಉದುರುವ ಸಮಸ್ಯೆ
ವಿಶೇಷವಾಗಿ ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಇರುವವರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಿರುತ್ತದೆ. ಬೋಳು ತಲೆ ಹೃದ್ರೋಗದ ಅಪಾಯಕಾರಿ ಸೂಚನೆ ಆಗಿದೆ. ಸಂಶೋಧಕರ ಪ್ರಕಾರ, ಅಧಿಕ ಕೊಲೆಸ್ಟ್ರಾಲ್ ಹೊಂದಿರುವ ಪುರುಷರಿಗೆ ಹೋಲಿಸಿದರೆ ಅಧಿಕ ಕೊಲೆಸ್ಟ್ರಾಲ್ ಮತ್ತು ತಲೆ ಬೋಳು ಹೊಂದಿರುವ ಪುರುಷರು ಹೃದಯ ಕಾಯಿಲೆ ಅಪಾಯ ಸುಮಾರು ಮೂರು ಪಟ್ಟು ಹೆಚ್ಚು ಹೊಂದಿರುತ್ತಾರೆ. ಕೂದಲು ಉದುರುವಿಕೆ ಮತ್ತು ಹೃದ್ರೋಗದ ನಡುವಿನ ಜೈವಿಕ ಸಂಪರ್ಕವು ಪುರುಷ ಹಾರ್ಮೋನುಗಳ ಎತ್ತರದ ಮಟ್ಟವನ್ನು ಒಳಗೊಂಡಿದೆ.

ಕಿವಿಯ ಮಡಿಕೆಗಳು
340 ರೋಗಿಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ಕಿವಿಯ ಮಡಿಕೆಗಳು ವಯಸ್ಸಾದ ಮತ್ತು ಪರಿಧಮನಿಯ ಕಾಯಿಲೆಗೆ (ಸಿಎಡಿ) ಸಂಬಂಧಿಸಿದ ಸಂಕೇತ ಆಗಿದೆ. ರೋಗ ಲಕ್ಷಣ ಇರುವವರಲ್ಲಿ ಕಿವಿಯ ಮಡಿಕೆಗಳು ಕಾಣಿಸುತ್ತವೆ. ಪುರುಷರು ಮತ್ತು ಮಹಿಳೆಯರಲ್ಲಿ ಇಯರ್ಲೋಬ್ ಕ್ರೀಸ್ ಮತ್ತು ಹೃದಯ ರಕ್ತನಾಳದ ನಡುವಿನ ಬಲವಾದ ಸಂಬಂಧವನ್ನು ಒಂದು ವರದಿ ಕಂಡುಕೊಂಡಿದೆ.

ಹೃದಯಾಘಾತಕ್ಕೆ ತುರ್ತು ವೈದ್ಯಕೀಯ ಚಿಕಿತ್ಸೆ
ಹೃದಯಾಘಾತ ಆದ ತಕ್ಷಣ ಮೊದಲು ತುರ್ತು ವೈದ್ಯಕೀಯ ಚಿಕಿತ್ಸೆ ನೀಡಬೇಕು. ಇದು ಪ್ರಾಣಾಪಾಯವನ್ನು ಕಡಿಮೆ ಮಾಡುತ್ತದೆ. ಇಲ್ಲದಿದ್ದರೆ ವ್ಯಕ್ತಿ ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ. ಹೃದಯಾಘಾತಕ್ಕೆ ಸಂಸ್ಕರಿಸಿದ ಹಾಗೂ ಜಂಕ್ ಫುಡ್ ಸೇವನೆ, ಕೆಟ್ಟ ಜೀವನಶೈಲಿ, ವ್ಯಾಯಾಮ ಮಾಡದಿರುವುದು, ಬೊಜ್ಜು ಸೇರಿದಂತೆ ಹಲವು ಕಾರಣಗಳಿಂದ ಉಂಟಾಗುತ್ತದೆ. ಹೀಗಾಗಿ ಕೊಲೆಸ್ಟ್ರಾಲ್ ಮತ್ತು ಇತರ ಕೊಳಕು ವಸ್ತುಗಳು ದೇಹದಲ್ಲಿ ಸಂಗ್ರಹ ಆಗುತ್ತವೆ. ಇದು ನರಗಳಿಗೆ ನಿರ್ಬಂಧ ಒಡ್ಡುತ್ತದೆ. ಮತ್ತು ಇದರಿಂದಾಗಿ ಹೃದಯವು ಆಮ್ಲಜನಕ ಪಡೆಯಲು ಸಾಧ್ಯವಾಗುವುದಿಲ್ಲ. ಮುಂದೆ ಇದು ಹೃದಯಾಘಾತಕ್ಕೆ ಕಾರಣವಾಗಬಹುದು.

Follow Us:
Download App:
  • android
  • ios