Asianet Suvarna News Asianet Suvarna News

Health Tips : ಹಾರ್ಟ್ ಗಟ್ಟಿಯಾಗಿರ್ಬೇಕೆಂದ್ರೆ ಇದರ ಬೀಜ ಕಸಕ್ಕೆ ಎಸಿಬೇಡಿ

Health tips in Kannada: ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗ್ತಿದೆ. ಅದ್ರಲ್ಲೂ ಚಿಕ್ಕ ವಯಸ್ಸಿನಲ್ಲಿಯೇ ಜನರು ಹೃದಯಾಘಾತಕ್ಕೊಳಗಾಗ್ತಿದ್ದಾರೆ. ಹೃದಯದ ಆರೋಗ್ಯದ ಜೊತೆಗೆ ದೇಹ ಎಲ್ಲ ರೋಗದಿಂದ ಮುಕ್ತವಾಗಿರಬೇಕೆಂದ್ರೆ ಕುಂಬಳಕಾಯಿ ಬೀಜದ ಸೇವನೆಯನ್ನು ಇಂದಿನಿಂದ್ಲೇ ಶುರು ಮಾಡಿ.
 

Pumpkin Seeds health Benefits explained in Kannada
Author
Bangalore, First Published May 2, 2022, 12:43 PM IST

ಕುಂಬಳಕಾಯಿ (Pumpkin) ಬೀಜ (Seed) ವನ್ನು ಅನೇಕರು ಕಸ (Garbage)ಕ್ಕೆ ಎಸೆಯುತ್ತಾರೆ. ಆದ್ರೆ ಇದೇ ಬೀಜವನ್ನು ಮಾರುಕಟ್ಟೆ (Market)ಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುವ ಜನರು ಕುಂಬಳ ಕಾಯಿ ಬೀಜವನ್ನು ಸಂಗ್ರಹಿಸಿ,ಅದರ ಬೀಜವನ್ನು ಬಳಕೆ ಮಾಡ್ತಾರೆ. ಕುಂಬಳಕಾಯಿ ಬೀಜ ಹೆಚ್ಚು ರುಚಿಯಾಗಿರುತ್ತದೆ. ಅದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಕುಂಬಳಕಾಯಿ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿವೆ. ಸದೃಢ ಹೃದಯ ಬೇಕು ಎನ್ನುವವರು ಕುಂಬಳ ಕಾಯಿ ಬೀಜವನ್ನು ಸೇವಿಸಬೇಕು. ಇಷ್ಟು ದಿನ ಕುಂಬಳ ಕಾಯಿ ಬೀಜವನ್ನು ಕಸಕ್ಕೆ ಹಾಕುವವರಲ್ಲಿ ನೀವೂ ಒಬ್ಬರಾಗಿದ್ದರೆ ಇನ್ಮುಂದೆ ಹಾಗೆ ಮಾಡ್ಬೇಡಿ. ಕುಂಬಳಕಾಯಿ ಬೀಜವನ್ನು ಆಹಾರದಲ್ಲಿ ಸೇರಿಸಿ. ಇದು ಖಂಡಿತವಾಗಿಯೂ ನಿಮಗೆ ಪ್ರಯೋಜನವನ್ನು ನೀಡುತ್ತದೆ. 

ಮಧುಮೇಹಿಗಳಿಗೆ ಕುಂಬಳಕಾಯಿ ಬೀಜಗಳು ಬಹಳ ಪ್ರಯೋಜನಕಾರಿ ಎಂಬುದು  ಬಹುತೇಕ ಎಲ್ಲರಿಗೂ ತಿಳಿದಿದೆ. ಮಧುಮೇಹ, ಹೃದಯ ಸಂಬಂಧಿ ಸಮಸ್ಯೆ ಹೊರತುಪಡಿಸಿ, ಈ ಬೀಜಗಳು ಇನ್ನೂ ಅನೇಕ ಪ್ರಮುಖ ರೋಗಗಳಿಂದ ದೂರವಿರಲು ನಮಗೆ ಸಹಾಯ ಮಾಡುತ್ತದೆ ಎಂಬುದು ನೆನಪಿಡಿ. ಇಂದು ನಾವು ಕುಂಬಳಕಾಯಿ ಬೀಜದಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ಹೇಳ್ತೇವೆ.  

ಕುಂಬಳ ಕಾಯಿ ಬೀಜದ ಸೇವನೆ ಹೇಗೆ? : ಕುಂಬಳ ಕಾಯಿ ಬೀಜವನ್ನು ನೀರಿನಲ್ಲಿ ನೆನೆಸಿ, ಮೊಳಕೆಯೊಡೆದ ನಂತರ ಸಲಾಡ್‌ಗಳು, ಸೂಪ್‌ಗಳು, ಸಿಹಿ ಭಕ್ಷ್ಯಗಳ ರೂಪದಲ್ಲಿ ಸೇವನೆ ಮಾಡ್ಬೇಕು. ಬೀಜವನ್ನು ಹುರಿದು ಪೌಡರ್ ಮಾಡಿಕೊಂಡು ಕೂಡ ಸೇವಿಸಬಹುದು. ಇದು ನಫೈಬರ್, ವಿಟಮಿನ್ ಎ, ಸಿ, ಇ, ಕಬ್ಬಿಣ, ಕಾರ್ಬೋಹೈಡ್ರೇಟ್ ಗಳು, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ನಿಯಾಸಿನ್, ರೈಬೋಫ್ಲಾವಿನ್, ಸತು, ಫೋಲೇಟ್ ಇತ್ಯಾದಿಗಳಲ್ಲಿ ಸಮೃದ್ಧವಾಗಿದೆ. ವಿಟಮಿನ್ ಇ ಸೇವನೆಯು ಚರ್ಮ ಮತ್ತು ಕೂದಲಿಗೆ ಅತ್ಯಗತ್ಯ. ನಾರಿನಂಶವು ಹೊಟ್ಟೆ, ಜೀರ್ಣಕ್ರಿಯೆ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ.  

ಮುಖದ ಹೊಳಪಿಗೆ ದುಬಾರಿ ಕ್ರೀಮುಗಳೇಕೆ? ಕೇಸರಿ ಬಳಸಿ ಸಾಕು..

ಪ್ರತಿದಿನ ಸೇವನೆ : ನಿಯಮಿತವಾಗಿ ಕುಂಬಳಕಾಯಿ ಬೀಜಗಳನ್ನು ಸೇವಿಸಿದರೆ  ಕೊಲೆಸ್ಟ್ರಾಲ್ ನಿಯಂತ್ರಿಸಬಹುದು. ಇದು ನಿಮ್ಮ ದೇಹದಲ್ಲಿರುವ ಕೆಟ್ಟ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಆದ್ರೆ ಅತಿಯಾಗಿ ಸೇವನೆ ಮಾಡಬಾರದು. 

ಕುಂಬಳಕಾಯಿ ಬೀಜದ ಪ್ರಯೋಜನ : 

ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣ : ಮಧುಮೇಹದ ಸಮಸ್ಯೆಯನ್ನು ಹೋಗಲಾಡಿಸಲು ಕುಂಬಳಕಾಯಿ ಬೀಜಗಳು ತುಂಬಾ ಪ್ರಯೋಜನಕಾರಿ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಬಹುದು. ಮಧುಮೇಹ ವಿರೋಧಿ ಗುಣಲಕ್ಷಣಗಳು ಕುಂಬಳಕಾಯಿ ಬೀಜಗಳಲ್ಲಿ ಕಂಡುಬರುತ್ತವೆ.  

Covid 4th wave: ಇಂಥಾ ಆರೋಗ್ಯ ಸಮಸ್ಯೆಯಿದ್ದವರಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು

ವೀರ್ಯದ ಸಂಖ್ಯೆ ಹೆಚ್ಚಾಗುತ್ತದೆ : ಕುಂಬಳಕಾಯಿ ಬೀಜಗಳು ವೀರ್ಯದ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ತುಂಬಾ ಉಪಯುಕ್ತವಾಗಿದೆ. ವೀರ್ಯದ ಸಂಖ್ಯೆಯಲ್ಲಿ ಸಮಸ್ಯೆ ಎದುರಿಸುತ್ತಿರುವವರು ಪ್ರತಿದಿನ ಕುಂಬಳಕಾಯಿ ಬೀಜಗಳನ್ನು ಸೇವಿಸಬೇಕು. ಇದು ಬಹಳ ಪ್ರಯೋಜನಕಾರಿಯಾಗಿದೆ. 

ರೋಗ ನಿರೋಧಕ ಶಕ್ತಿ ಹೆಚ್ಚಳ : ಕುಂಬಳ ಕಾಯಿ ಬೀಜದಲ್ಲಿ ಜಿಂಕ್ ಪ್ರಮಾಣ ಹೆಚ್ಚಿರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಹಳ ಪ್ರಯೋಜನಕಾರಿ. ಸೋಂಕು, ನೆಗಡಿ, ಕೆಮ್ಮು ಸೇರಿದಂತೆ ಸಾಂಕ್ರಾಮಿಕ ರೋಗದಿಂದ ದೇಹವನ್ನು ರಕ್ಷಿಸುತ್ತದೆ. ಇದಲ್ಲದೆ ಡಿಪ್ರೆಶನ್ ಕಡಿಮೆ ಮಾಡುವ ಶಕ್ತಿ ಇದಕ್ಕಿದೆ. 

ಪ್ರಾಸ್ಟೇಟ್ ಗ್ರಂಥಿಯ ಆರೋಗ್ಯ ವೃದ್ಧಿ :  ಕುಂಬಳಕಾಯಿ ಬೀಜಗಳು ಪುರುಷರಿಗೆ ಬಹಳ ಒಳ್ಳೆಯದು.ಇದರಲ್ಲಿರುವ ಸತುವಿನ ಪ್ರಮಾಣವು ಪ್ರಾಸ್ಟೇಟ್ ಗ್ರಂಥಿಗೆ ಬಹಳ ಒಳ್ಳೆಯದು.

ಸುಖ ನಿದ್ರೆಗೆ ಒಳ್ಳೆಯದು : ನಿದ್ರಾಹೀನತೆ ಸಮಸ್ಯೆಯಿರುವವರು ಇದನ್ನು ಅವಶ್ಯಕವಾಗಿ ಸೇವನೆ ಮಾಡ್ಬೇಕು. ನಿದ್ರೆಗೆ ಮೊದಲು ಕುಂಬಳ ಕಾಯಿ ಬೀಜವನ್ನು ಸೇವಿಸಬೇಕು. ಯಾವುದಾದ್ರೂ ಹಣ್ಣಿನ ಜೊತೆ ನೀವು ಇದನ್ನು ತಿನ್ನಬಹುದು. ಕುಂಬಳಕಾಯಿ ಬೀಜ ತಿನ್ನುವುದ್ರಿಂದ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ಸುಖ ನಿದ್ರೆ ನಿಮ್ಮದಾಗುತ್ತದೆ.  
 

Follow Us:
Download App:
  • android
  • ios